September 25, 2026

I ನೀರಿನ ಬಾಟಲಿಯ ಮೇಲೆ ರಾಷ್ಟ್ರಧ್ವಜ ಚಿತ್ರಿಸಿ ಮಾರಾಟ I ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಪ್ರತಿಭಟನೆ I

0
WhatsApp Image 2025-08-14 at 2.43.34 PM (1)

I ನೀರಿನ ಬಾಟಲಿಯ ಮೇಲೆ ರಾಷ್ಟ್ರಧ್ವಜ ಚಿತ್ರಿಸಿ ಮಾರಾಟ I ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಪ್ರತಿಭಟನೆ I

ಶಿವಮೊಗ್ಗ : ರಿಲಯನ್ಸ್ ಕ್ಯಾಂಪ್ ನವರು ಕುಡಿಯುವ ನೀರಿನ ಬಾಟಲಿಯ ಮೇಲೆ ರಾಷ್ಟ್ರಧ್ವಜವಂತೆ ಕಾಣುವ ಚಿತ್ರವನ್ನು ಮುದ್ರಿಸಿ ಮಾರಾಟ ಮಾಡುವುದನ್ನು ಈ ಕೂಡಲೇ ನಿಷೇಧಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು

ರಿಲಯನ್ಸ್ ಕಂಪನಿ ಸಹ ಬಾಗಿತ್ವದಲ್ಲಿ ಕುಡಿಯುವ ನೀರಿನ ಬಾಟಲಿಯ ಮೇಲೆ ಪ್ಲಾಸ್ಟಿಕ್ ನಲ್ಲಿ ರಾಷ್ಟ್ರಧ್ವಜವಂತೆ ಕಾಣುವ ಚಿತ್ರವನ್ನು ಮುದ್ರಿಸಿ, ಮಾರಾಟ ಮಾಡಲು ಮುಂದಾಗಿರುತ್ತಾರೆ ಈ ಬಾಟಲಿಯು ಜನರು ಕುಡಿದ ಮೇಲೆ ಎಲ್ಲಿಂದಲ್ಲಿ ಎಸೆಯುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಅಲ್ಲದೇ ಆ ಬಾಟಲಿಯನ್ನು ಎಲ್ಲರೂ ತುಳಿದುಕೊಂಡು ಓಡಾಡುವ ಸಂದರ್ಭ ಇರುತ್ತದೆ. ಈ ಬಾಟಲಿಯ ಮೇಲೆ ನಮ್ಮ ರಾಷ್ಟ್ರಧ್ವಜ ಹೋಲುವ ಚಿತ್ರವನ್ನು ಮುದ್ರಿಸುವುದರಿಂದ ಅದನ್ನು ತುಳಿಯುವುದು ಎಸೆಯುವುದು ಅ ಗೌರವ ತೋರಿದಂತಾಗುತ್ತದೆ ಹಾಗಾಗಿ ಈ ಕೂಡಲೇ ಆ ಬಾಟಲಿಯ ಮೇಲೆ ಇರುವ ಚಿತ್ರವನ್ನು ನಿಷೇಧಿಸುವಂತೆ ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಮಾಡಲಾಗಿದೆ,

ಈ ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಎಚ್ಎಸ್ ನಗರಾಧ್ಯಕ್ಷರಾದ ಜೀವನ್ ಡಿ ಜಿಲ್ಲಾ ಕಾರ್ಯದರ್ಶಿ ರಾಮು, ನಗರ ಕಾರ್ಯದರ್ಶಿ, ಯುವ ಅಧ್ಯಕ್ಷ ಸಂತೋಷ್ ಪದಾಧಿಕಾರಿಗಳು ಹಾಜರಿದ್ದರು

Spread the love

Leave a Reply

Your email address will not be published. Required fields are marked *

error: Content is protected !!