September 24, 2026

I ಅಂತರ್ ಜಿಲ್ಲಾ I ಚೆಸ್ ಪಂದ್ಯಾವಳಿಯಲ್ಲಿ I ಚಿರಂತ್ ಸಾಧನೆ I

0
WhatsApp Image 2025-08-18 at 12.06.33

I ಅಂತರ್ ಜಿಲ್ಲಾ I ಚೆಸ್ ಪಂದ್ಯಾವಳಿಯಲ್ಲಿ I ಚಿರಂತ್ ಸಾಧನೆ I

ಶಿವಮೊಗ್ಗ:  ಅಪ್ಪು ಚೆಸ್ ಅಸೋಸಿಯಷನ್ ವತಿಯಿಂದ ದಾವಣಗೆರೆಯಲ್ಲಿ ಆಯೋಜಿಸಿದ್ದ ಅಂತರ್ ಜಿಲ್ಲಾ ರ್ಯಾಪಿಡ್ ಚೆಸ್ ಟೂರ್ನಮೆಂಟ್ ನಲ್ಲಿ ಶಿವಮೊಗ್ಗದ ಚಿರಂತ್ ಎಂ.ಡಿ ಗೆಲುವು ಸಾಧಿಸಿದ್ದಾರೆ. ಒಟ್ಟು ಎಂಟು ಸುತ್ತುಗಳ ಪಂದ್ಯದಲ್ಲಿ 7.5 ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನವನ್ನು ಚಿರಂತ್ ತಮ್ಮದಾಗಿಸಿಕೊಂಡಿದ್ದಾರೆ. ನಗದು ಬಹುಮಾನ ಹಾಗೂ ಟೂರ್ನಮೆಂಟ್ ವಿನ್ನರ್ ಎಂಬ ಬಿರುದು ಪಡೆದಿದ್ದಾರೆ. ಈ ಟೂರ್ನಮೆಂಟ್ ನಲ್ಲಿ 200ಕ್ಕೂ ಅಧಿಕ ಮಂದಿ ಆಟಗಾರರು ರಾಜ್ಯದ ವಿವಿದೆಡೆಯಿಂದ ಆಗಮಿಸಿದ್ದರು. ನಿವೃತ್ತ ಬ್ಯಾಂಕ್ ಉದ್ಯೋಗಿ ದೀಪಕ್ ಎಂ.ಎಸ್ ಹಾಗೂ ಸುಧಾ ದಂಪತಿ ಪುತ್ರ ಚಿರಂತ್, ಸದ್ಯ ವಿನೋಬನಗರದ ನಿವಾಸಿಯಾಗಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!