September 24, 2026

I ರಾಗಿಗುಡ್ಡದಲ್ಲಿ ಸೌಹಾರ್ದ ಸಂದೇಶ ಜಾಥಾ ಯಶಸ್ವಿ I

0
1001904007 (1)

I ರಾಗಿಗುಡ್ಡದಲ್ಲಿ ಸೌಹಾರ್ದ ಸಂದೇಶ ಜಾಥಾ ಯಶಸ್ವಿ I

ಶಿವಮೊಗ್ಗ: ಶಾಂತಿನಗರ ನಾಗರೀಕ ಹಕ್ಕುಗಳ ವೇದಿಕೆಯಿಂದ ಭಾನುವಾರ ರಾಗಿಗುಡ್ಡದಲ್ಲಿ ಯಶಸ್ವಿ ಸೌಹಾರ್ದ ಸಂದೇಶ ಜಾಥಾ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮೌಲಾನ ಶಾವುಲ್ ಹಮೀದ್ ಮುಸ್ಲಿಯಾರ್, ಶಿವನಾಗ ಪಾರ್ಥ ಅವಧೂತ ಮಹಾರಾಜ್, ಫಾದರ್ ಕ್ಲಿಫರ್ಡ್ ರೋಷನ್ ಪಿಂಟೋ, ಮಧುಸೂದನ್ ಕಟ್ಟೆ ಸ್ವಾಮೀಜಿ ಅವರು ಸೌಹಾರ್ದ ಭಾಷಣ ಮಾಡಿದರು.

ಶಾಂತಿನಗರದ ನೂರಾರು ಜನ ಜಾತ್ಯತೀತವಾಗಿ ಪಾಲ್ಗೊಂಡು ಕೈ ಕೈ ಹಿಡಿದು ಏಕತೆಯನ್ನು ಪ್ರದರ್ಶಿಸಿದರು. ಹೆಚ್ಚುವರಿ ಪೊಲೀಸ್ ಅಧಿಕ್ಷಕ ರಮೇಶ ಕುಮಾರ್, ಗ್ರಾಮಾಂತರ ಇನ್ಸೆಕ್ಟರ್ ಸತ್ಯನಾರಾಯಣ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ಸೈಯದ್ ಮುಜಿಬುಲ್ಲ ವಹಿಸಿದ್ದರು. ಸ್ಥಳೀಯ ಮುಖಾಂಡರಾದ ಶಹಾಬುದ್ದಿನ್ ಬಾಬು, ಸಯ್ಯದ್ ಸಾದಿಕ್, ವಿನೋದ್ ಮೊದಲಿಯ‌ರ್, ನಾಗರಾಜ್, ರಾಮು, ರಾಮಚಂದ್ರಪ್ಪ ವಕೀಲರು, ಭಗೀರತಿ, ಶಾಂತಮ್ಮ, ನಾಗರತ್ನಮ್ಮ, ಬಸವರಾಜ್, ಜಯದೇವಪ್ಪ, ಜೋಸೆಫ್, ಲಾನ್ಸಿ, ಭಾಷಸಾಬ್, ಸಾದಿಕ್ ಪಾಷಾ, ಹಯಾತ್ ಖಾನ್ ನೇತೃತ್ವ ವಹಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!