September 27, 2026

I ಶಾರದಾದೇವಿ ಅಂಧರ ವಿಕಾಸ ಕೇಂದ್ರ I ಚದುರಂಗ ಸ್ಪರ್ಧೆಯಲ್ಲಿ ಮಕ್ಕಳ ಸಾಧನೆ I

0
1001981261

I ಶಾರದಾದೇವಿ ಅಂಧರ ವಿಕಾಸ ಕೇಂದ್ರ I ಚದುರಂಗ ಸ್ಪರ್ಧೆಯಲ್ಲಿ ಮಕ್ಕಳ ಸಾಧನೆ I

ಶಿವಮೊಗ್ಗ: ಚಿತ್ರದುರ್ಗದ ತೀಕ್ಷ್ಯ ಟ್ರಸ್ಟ್ ಫಾರ್ ಡಿಸೆಬಲ್ಡ್ ಮತ್ತು ರಾಜ್ಯ ಚದುರಂಗ ಸಂಸ್ಥೆ ಸಹಯೋಗದಲ್ಲಿ ಈಚೆಗೆ ನಡೆದ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ  ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರ ಶಾಲೆಯ ಅಂಧ ವಿದ್ಯಾರ್ಥಿಗಳಾದ ತಿಪ್ಪೇಸ್ವಾಮಿ – ಪ್ರಥಮ, ವೇಣುಗೋಪಾಲ್‌ ದ್ವಿತೀಯ, ಸಂಗಮೇಶ್ ತೃತೀಯ, ಮಲ್ಲಿಕಾರ್ಜುನ್ ಚತುರ್ಥ ಹಾಗೂ ಬಾಲಕಿಯರ ವಿಭಾಗದಲ್ಲಿ ಕೀರ್ತಿಕಾ-ದ್ವಿತೀಯ, ಮಹಾಲಕ್ಷ್ಮಿ- ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರಿಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿಯ ಸದಸ್ಯರು, ಆಡಳಿತಾಧಿಕಾರಿಗಳು, ಮುಖ್ಯೋಪಾಧ್ಯಾಯರು ಹಾಗೂ ತರಬೇತುದಾರರಾದ ಕೃಷ್ಣ ಉಡುಪರವರು ಶಾಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ ಎಂದು ಆಡಳಿತಾಧಿಕಾರಿ  ಪ್ರಕಟಣೆಯಲ್ಲಿ ಕೇಂದ್ರದ ತಿಳಿಸಿದ್ದಾರೆ

Spread the love

Leave a Reply

Your email address will not be published. Required fields are marked *

error: Content is protected !!