September 25, 2026

I ದೈವಜ್ಞ ಸೊಸೈಟಿ ಅಧ್ಯಕ್ಷರಾಗಿ I ಎಸ್.ಡಿ.ಕಮಲಾಕ್ಷ ಆಯ್ಕೆ I

0
kamalaksha

I ದೈವಜ್ಞ ಸೊಸೈಟಿ ಅಧ್ಯಕ್ಷರಾಗಿ I ಎಸ್.ಡಿ.ಕಮಲಾಕ್ಷ ಆಯ್ಕೆ I

ಶಿವಮೊಗ್ಗ: ನಗರದ ಪ್ರತಿಷ್ಠಿತ ಸಹಕಾರ ಸಂಸ್ಥೆ ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಎಸ್.ಡಿ.ಕಮಲಾಕ್ಷ, ಉಪಾಧ್ಯಕ್ಷರಾಗಿ ಪ್ರತಿಮಾ ದಿನೇಶ್ ಶೇಟ್ ಹಾಗೂ ಖಜಾಂಚಿಯಾಗಿ ನಾಗರಾಜ ಜಿ.ಶೇಟ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

19ನೇ ವರ್ಷದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಸಹಕಾರ ಸಂಘ ಸ್ವಂತ ಕಟ್ಟಡ ಹೊಂದಿದ್ದು, ವಾರ್ಷಿಕ 95 ಕೋಟಿ ರೂ. ವ್ಯವಹಾರವನ್ನು ಹೊಂದಿದೆ. ಈಗಾಗಲೇ ದಸರಾ ಪ್ರಯುಕ್ತ ವಿಶೇಷ ಠೇವಣಿ ಯೋಜನೆ ಜಾರಿಗೆ ತಂದಿದ್ದು, 37 ತಿಂಗಳ ಅವದಿ ಠೇವಣಿಗಳಿಗೆ ಶೇ. 10 ಬಡ್ಡಿ ನೀಡಲಾಗುತ್ತಿದೆ. ಸಹಕಾರಿ ಸಂಘದ ಸದಸ್ಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ನೂತನ ಅಧ್ಯಕ್ಷ ಎಸ್.ಡಿ.ಕಮಲಾಕ್ಷ ತಿಳಿಸಿದ್ದಾರೆ.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ನಿರ್ದೇಶಕ ಬಿಳಿಕಿ ಕೃಷ್ಣಮೂರ್ತಿ, ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ ಪಿ.ರಾಯ್ಕರ್, ಎಸ್.ಪಾಂಡುರಂಗ ಶೇಟ್, ಗುರುರಾಜ್ ಎಂ.ಶೇಟ್, ಸುಧಾಕರ ವಿ.ಶೇಟ್, ಅಚ್ಯುತ ಶ್ರೀಧರ್ ಶೇಟ್ ಉಪಸ್ಥಿತರಿದ್ದರು. ಚುನಾವಣೆಗೆ ರಿಟರ್ನಿಂಗ್ ಅಧಿಕಾರಿಯಾಗಿ ಇಲಾಖೆಯ ಸುಮಾ ಭಾಗವಹಿಸಿದ್ದರು

Spread the love

Leave a Reply

Your email address will not be published. Required fields are marked *

error: Content is protected !!