Monday, August 3, 2026
Homeಸೂರ್ಯಗಗನI ಕ್ಯಾಚ್ ಟೂ ನಕಲಿ ಮುನ್ಸಿಪಲ್ ಫೈಲ್ಸ್ I ವಿಷಯ ನಿರ್ವಾಹಕ ವಿಜಯ್‌ಕುಮಾರನಿಗೆಷ್ಟು ಗೊತ್ತು..I

I ಕ್ಯಾಚ್ ಟೂ ನಕಲಿ ಮುನ್ಸಿಪಲ್ ಫೈಲ್ಸ್ I ವಿಷಯ ನಿರ್ವಾಹಕ ವಿಜಯ್‌ಕುಮಾರನಿಗೆಷ್ಟು ಗೊತ್ತು..I

I ಕ್ಯಾಚ್ ಟೂ ನಕಲಿ ಮುನ್ಸಿಪಲ್ ಫೈಲ್ಸ್ I ವಿಷಯ ನಿರ್ವಾಹಕ ವಿಜಯ್‌ಕುಮಾರನಿಗೆಷ್ಟು ಗೊತ್ತು..I

ಶಿವಮೊಗ್ಗ : ಮಹಾನಗರ ಪಾಲಿಕೆಯ ಆಡಳಿತದೊಳು ಕೆಲವರು ಅಧಿಕಾರದ ಹಪಾಹಪಿಗೆ ಬಿದ್ದು ಅಕ್ರಮ ಎಂಟ್ರಿ ಮಾಡಿರುವ ಕುರಿತಾಗಿ ಉನ್ನತ ಮಟ್ಟದ ಅಧಿಕಾರಿಗಳು ತನಿಖಿಸುವ ಜರೂರತ್ತಿದೆ, ಇಂತಹದೊಂದು ಘಟಿತ ಘಟಾನುವಳಿಗಳಲ್ಲಿ ನೈಜ ವಾರಸುದಾರರು ಅಕ್ರಮ ಖಾತೆಗಳನ್ನು ರದ್ದು ಪಡಿಸಿ, ಅಧಿಕಾರ ದುರುಪಯೋಗಪಡಿಸಿಕೊಂಡ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಸರ್ಕಾರಿ ವಿಚಾರಣೆ ನಡೆಸಲು ಮದಾರಿ ಪಾಳ್ಯದ ದಾದನ್ ಸಾಬ್ ಅವರ ಮಗ ಮೊಹಮ್ಮದ್ ಹುಸೇನ್ ಅವರು ಪಾಲಿಕೆಗೆ ಅವಲತ್ತುಕೊಂಡಿರುವ ಕಡತವೀಗ ಸೂರ್ಯಗಗನಕ್ಕೆ ಲಭಿಸಿದೆ,

ಅಸಲಿಗೆ ಪಾಲಿಕೆಯ ವ್ಯಾಪ್ತಿಯಲ್ಲಿರುವ ಸೂಳೆಬೈಲು ವಾರ್ಡ್ ನಂಬರ್ ೧೫ರಲ್ಲಿರುವ ಸರ್ವೇ ನಂಬರ್ ೩೩೨ ಜೈನಾಬಿ ಅವರ ಹೆಸರಿನಲ್ಲಿದೆ, ಇವರಿಂದ ಯಾವ ಕ್ರಯಾದಿಗಳ ಪತ್ರ ಲಗತ್ತಾಗಿಲ್ಲದಿದ್ದರು ರಾಜಸ್ಥಾನಿ ಮಾರ್ವಾಡಿಗಳಾದ ಸಂಜಯ್ ಜೈನ್, ಹಾಗೂ ಸ್ನೇಹ, ಖಾತೆ ಸಂಖ್ಯೆ ೮೯೪/೧೧, ಪಿಐಡಿ ೧೧೪೧೮ರಂತೆ ೫೫*೪೦ ಅಡಿ ವಿಸ್ತಿರ್ಣ, ೮೯೫/೧೨, ಪಿಐಡಿ ೧೧೪೪೩ ರಂತೆ ೫೫*೨೫ ಅಡಿ ವಿಸ್ತಿರ್ಣ, ೮೯೬/೮೬೭/೧೩, ಪಿಐಡಿ ೧೧೪೫೬ರಂತೆ ೫೫*೪೦ ಅಡಿ ವಿಸ್ತಿರ್ಣ, ಈ ಸ್ವತ್ತಿನ ಒಟ್ಟು ಮೌಲ್ಯ ಈ ಹೊತ್ತಿನ ಮಾರುಕಟ್ಟೆ ದರದಂತೆ ಕನಿಷ್ಟ ಒಂದೂವರೆ ಕೋಟಿಗೂ ಮೌಲ್ಯವುಳ್ಳದ್ದಾಗಿದೆ ಎನ್ನುವುದು ಗೊತ್ತು ಮಾಡಿಕೊಳ್ಳಬಹುದಾಗಿದೆ,

ಇಂತಹದೊಂದು ಲ್ಯಾಂಡ್ ರೇಟ್ ಶಿವಮೊಗ್ಗ ನಗರಿಯಲ್ಲಿದೆ, ಲ್ಯಾಂಡ್ ಲಿಟಿಗೇಶನ್‌ಗಳು ಕೂಡ ಹೆಗ್ಗಿಲ್ಲದೆ ಸಾಗುತ್ತಿದೆ, ಅತೀ ದುರ್ಬಲ ವರ್ಗದವರಿಗೆ ಒಕ್ಕಲೆಬ್ಬಿಸಲು ಲಿಟಿಗೇಶನ್ ಮಂದಿಗಳಿಗೆ ಸುಳ್ಳು ದಾಖಲೆಗಳ ಮುಖೇನ ಸಕ್ಷಮ ಪ್ರಾಧಿಕಾರದ ಮೇಲೆ ಬುತ್ತಿ ಕಟ್ಟಿ ಕಂದಾಯ ಅಧಿಕಾರಿಗಳ ಆದೇಶದನ್ವಯವೇ ಖಾತೆ ಮಾಡಿಕೊಡಲಾಗಿದೆ ಎಂದು ಮಹಾನಗರ ಪಾಲಿಕೆಯ ವಿಷಯ ನಿರ್ವಾಹಕ ವಿಜಯ್‌ಕುಮಾರ್ ಅಕ್ರಮ ಎಂಟ್ರಿ ಮಾಡಿರುವುದು ಕಂಡು ಬಂದಿದೆ, ಇಲ್ಲಿ ಈತನೇ ದೂರುದಾರರಿಗೆ ಕೊಟ್ಟಿರುವ ಹಿಂಬರಹದ ಪತ್ರದಲ್ಲಿ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ದಿ ಕೋಶ ಇವರ ಪತ್ರ, ದೂರುದಾರರ ಅರ್ಜಿ ಸಂಖ್ಯೆಗಳನ್ನು ಉಲ್ಲೇಖಿಸಿ ಇದೇ ಮಾರ್ವಾಡಿಗಳಿಗೆ ಪೂರಕವಾಗುವಂತೆ ಷರಾ ಲಗತ್ತಿಸಿ ಇದೊಂದು ೧೯೮೮ರಲ್ಲಿ ಸ್ಕ್ರೀನಿಂಗ್ ಕಮಿಟಿಯಲ್ಲಿ ನಡೆದ ಸಭಾ ನಡವಳಿಗಳ ರಿತ್ಯಾವೇ ಫಲಾನುಭವಿಗಳಿಗೆ ನೀಡಲಾಗಿರುತ್ತದೆ ಎಂದು ಉಲ್ಲೇಖಿಸಿರುವ ವಿಷಯ ನಿರ್ವಾಹಕ ವಿಜಯ್‌ಕುಮಾರ್ ನಿಜಕ್ಕೂ ಈ ದಾಖಲಾತಿಗಳನ್ನು ಪರಿಶೀಲಿಸಲಿಸಿಲ್ಲ ಎಂದು ಪ್ರಾಥಮಿಕ ಹಂತದಲ್ಲಿಯೇ ತಿಳಿದು ಬರುತ್ತದೆ,

ಏಕೆಂದರೆ ಪಾಲಿಕೆಯಲ್ಲಿರುವ ದಾಖಲೆಗಳಂತೆ ಈತನೋರ್ವ ಪೌರಕಾರ್ಮಿಕ ನೌಕರಾಗಿದ್ದು ಬಡ್ತಿ ನಿಯಮಗಳ ಉಲ್ಲಂಘಿಸಿ ಎರಡು ಭಾರಿ ಮೇಲ್ಬಡ್ತಿ ಹೊಂದಿದ್ದು ಇದೀಗ ವಿಷಯ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ರೆವೆನ್ಯೂ ದಾಖಲೆಗಳ ಕಡತ ಮೌಲ್ಯವನ್ನು ತಿಳಿಯಲಾಗಿಲ್ಲ, ಈ ಮಾತ್ರದ ಕಾರಣದಿಂದಲೇ ಕಾನೂನು ಬದ್ದವಾಗಿಯೇ ೧೯೯೫-೯೬ರಲ್ಲಿ ಇಂತಿವರುಗಳ ಹೆಸರಿಗೆ ಮತ್ತೂರು ಮಂಡಲ್ ಪಂಚಾಯ್ತಿಯಲ್ಲಿ ಕಳೆದ ಮೂವತ್ತು ವರ್ಷಗಳ ಹಿಂದೆಯೇ ಖಾತೆ ದಾಖಲಾಗಿದೆ ಎಂದು ಉಲ್ಲೇಖಿಸಿ ಅಕ್ರಮವನ್ನು ಮುಚ್ಚುವುದಕ್ಕೆ ಸ್ವಯಂ ಮುಂದಾಗಿರುವುದು ಈ ಹಿಂಬರಹದ ಪತ್ರವೇ ತಿಳಿಸುತ್ತದೆ.

ಪ್ರಸ್ತುತ ಆಯುಕ್ತರಾದ ಮಾಯಣ್ಣ ಗೌಡರವರು ಈತನಿಗೆ ಕಛೇರಿಗೆ ಕರೆಯಿಸಿ ರೆವಿನ್ಯೂ ನಿಯಮಗಳ ಪಾಲನೆಗೆ ತಿಳಿ ಹೇಳಿ ಅಮಾನತ್ತುಗೊಳಿಸಲಿ ಎನ್ನುವುದು ಈ ವರದಿಯ ಉದ್ದೇಶವಾಗಿದೆ, ಇನ್ನೂ ವಿಷಯ ನಿರ್ವಾಹಕ ವಿಜಯ್‌ಕುಮಾರ್ ಹಿಂಬರಹದಲ್ಲಿ ಹೇಳಿದಂತೆ ೧೯೮೮ರಲ್ಲಿ ಸ್ಕ್ರೀನಿಂಗ್ ಕಮಿಟಿಯಲ್ಲಿ ನಡೆದ ಸಭಾ ನಡವಳಿ ಹಾಗೂ ಮತ್ತೂರು ಮಂಡಲ್ ಪಂಚಾಯ್ತಿಯ ದಾಖಲೆಗಳು ಅಸಲಿಯೋ..? ನಕಲಿಯೋ..? ಅಕ್ರಮ ಎಂಟ್ರಿಯೋ..? ಎಂದು ಮೊದಲು ದೃಡಪಡಿಸಿಕೊಳ್ಳಲಿ, ಇಂದಿಗೂ ಇಂತಹ ದಾಖಲೆಗಳ ಎಂಟ್ರಿ ಅಂದಿನ ಜಿಲ್ಲಾಧಿಕಾರಿಗಳ ಪತ್ರ ಸಂಖ್ಯೆಯ ಆದೇಶದಲ್ಲಿ ಹೆಸರು ಸೇರ್ಪಡೆ ಆಗುತ್ತಲೇ ಇದೆ, ಇನ್ನೂ ನಕಲಿ ಹಕ್ಕುಪತ್ರಗಳು ದಾಖಲಾಗುತ್ತಲೇ ಇದೆ, ಹಳೆಯದಾದ ಕಡತ ಪುಸ್ತಕಗಳಲ್ಲಿ ಎಂಟ್ರಿ ಪಡೆದು ಜೀವ ಪಡೆದುಕೊಂಡರೆ ಇದೊಂದು ಅಕ್ರಮ ಎಂಟ್ರಿಗಳ ಸ್ಕ್ಯಾಮ್ ಎನ್ನುವುದು ಗೊತ್ತು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದ ವಿಷಯ ನಿರ್ವಾಹಕ ವಿಜಯ್‌ಕುಮಾರ್ ಅಸಲಿ ದಾಖಲೆಗಳೆಂಬಂತೆ ಹಾಗೂ ಲೋಕಾಯುಕ್ತರು ಒಮ್ಮೆಲೆ ಗಿರಕಿ ಹೊಡೆದುಕೊಂಡು ನೆಲಕ್ಕೆ ಬೀಳುವಂತೆ ಅರ್ಜಿದಾರರಾದ ಮೊಹಮ್ಮದ್ ಹುಸೇನ್ ಎನ್ನುವವರಿಗೆ ಹಿಂಬರಹ ನೀಡಿ ರಾಜಸ್ಥಾನಿ ಮಾರ್ವಾಡಿಗಳಾದ ಸಂಜಯ್ ಜೈನ್, ಹಾಗೂ ಸ್ನೇಹ ಎಂಬುವವರನ್ನು ಇಲ್ಲಿ ಅಕ್ರಮ ಖಾತೆಗಳಿಂದ ರಕ್ಷಿಸಿರುವುದು ಈ ಅಂಶಗಳಿಂದಲೇ ಧೃಡಪಡುತ್ತದೆ.

ಪಾಲಿಕೆಯ ಆಯುಕ್ತರು ೧೯೮೮ರಲ್ಲಿ ಸ್ಕ್ರೀನಿಂಗ್ ಕಮಿಟಿಯ ಆದೇಶದ ಪ್ರತಿ ಸೂಳೆಬೈಲಿನ ಎಲ್ಲಾ ಸರ್ವೇ ನಂಬರ್‌ಗಳಿಗೂ ಲಗತ್ತಾಗುತ್ತದೆಯೇ..? ಕಳೆದ ಮೂವತ್ತು ವರ್ಷಗಳ ಹಿಂದ ಖಾಸಗಿ ವ್ಯಕ್ತಿ ಸರ್ವೇ ನಂಬರ್ ೩೩೨ ಜೈನಾಬಿ ವಾರಸುದಾರರ ಸ್ವತ್ತಿನಲ್ಲಿ ಮತ್ತೂರು ಮಂಡಲ್ ಪಂಚಾಯ್ತಿಯವರು ಅದ್ಯಾಗೆ ಅನ್ಯರಿಗೆ ಹಕ್ಕುಪತ್ರ ನೀಡುತ್ತದೆ, ಇದಲ್ಲದೆ ೧೯೯೫-೯೬ರಲ್ಲಿ ಮಂಡಲ್ ಪಂಚಾಯ್ತಿಗಳು ನಗರಸಭೆ ವ್ಯಾಪ್ತಿಗೆ ಬಂದ ನಂತರ ಪುಸ್ತಕದಲ್ಲಿ ಅದ್ಯಾಗೆ ಎಂಟ್ರಿ ಪಡೆಯುತ್ತದೆ, ಈ ಮಾರ್ವಾಡಿ ಸಂಜಯ್ ಜೈನ್, ಹಾಗೂ ಸ್ನೇಹ ಎನ್ನುವವರಿಗೆ ಸರಿ ಸುಮಾರು ಈ ಹೊತ್ತಿನ ಮಾರುಕಟ್ಟೆ ದರದಂತೆ ಒಂದೂವರೆ ಕೋಟಿಗೂ ಅಧಿಕ ಆಸ್ತಿಯ ದಾಖಲಾತಿ ಸಿದ್ದಪಡಿಸಲಾಗುತ್ತದೆ ಎನ್ನುವುದು ಸಾರ್ವಜನಿಕವಾಗಿ ತಿಳಿಸಲಿ ಅಥವಾ ಸರ್ಕಾರಿ ವಿಚಾರಣೆಗೊಳಪಡಿಸಿ ವಿಷಯ ನಿರ್ವಾಹಕ ಹಾಗೂ ರೆಕಾರ್ಡ್ ರೂಂ ಅಧಿಕಾರಿಗಳನ್ನು ಅಮಾನತ್ತಿಲ್ಲಿಟ್ಟು ಜೈನಾಭಿ ಎನ್ನುವವರ ಖಾಸಗಿ ಸ್ವತ್ತು ಕಬಳಿಕೆಗೆ ಮುಂದಾಗಿರುವ ಅಕ್ರಮ ಖಾತೆಗಳನ್ನು ರದ್ದು ಪಡಿಸಿ, ಪಿಐಡಿ ಸಂಖ್ಯೆ ಮತ್ತೊಂದು ಗಿರಾಚಾರ್‌ಗೆ ಕಾರಣವಾಗದಂತೆ ಬ್ಲಾಕ್ ಮಾಡಿ, ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ನಾಗರೀಕ ಆಸ್ತಿ ರಕ್ಷಣೆ ಕಾಯ್ದೆಯನ್ನು ಕಾಪಾಡಲಿ ಎನ್ನುವುದು ಈ ಕ್ಯಾಚ್ ಟೂ ನಕಲಿ ಮುನ್ಸಿಪಲ್ ಫೈಲ್ಸ್ ವರದಿಯ ಉದ್ದೇಶವಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I