Saturday, 31 October 2026 — Suryagagana
07:40 AM
ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I ಸೂರ್ಯಗಗನ I ಮಾಂಜಾ ದಾರದಿಂದ ಅಮಾಯಕರ ಜೀವಹಾನಿ ಸಹಿಸಲಾಗದು I ಕಠಿಣ ಕಾನೂನು ಕ್ರಮಕ್ಕೆ ಸರ್ಕಾರ ಬದ್ಧ I ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I ಸೂರ್ಯಗಗನ I ಮಾಂಜಾ ದಾರದಿಂದ ಅಮಾಯಕರ ಜೀವಹಾನಿ ಸಹಿಸಲಾಗದು I ಕಠಿಣ ಕಾನೂನು ಕ್ರಮಕ್ಕೆ ಸರ್ಕಾರ ಬದ್ಧ I ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ I
ಸೂರ್ಯಗಗನ

I ಸರ್ಕಾರಿ ಯೋಜನೆಗೆ I ಬಂಗಾರಪ್ಪ ಹೆಸರಿಡಲು ಮನವಿ I

I ಸರ್ಕಾರಿ ಯೋಜನೆಗೆ I ಬಂಗಾರಪ್ಪ ಹೆಸರಿಡಲು ಮನವಿ I ಶಿವಮೊಗ್ಗ: ಜನಪ್ರಿಯ ರಾಜಕಾರಣಿ, ವರ್ಣರಂಜಿತ ವ್ಯಕ್ತಿತ್ವದ ಬಡವರ ಬಂಧು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರನ್ನು ಸರ್ಕಾರಿ ಯೋಜನೆಗೆ ನಾಮಕಾರಣ ಮಾಡಬೇಕೆಂದು ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಂಘ ಮುಖ್ಯಮಂತ್ರಿಗೆ…

I ಸರ್ಕಾರಿ ಯೋಜನೆಗೆ I ಬಂಗಾರಪ್ಪ ಹೆಸರಿಡಲು ಮನವಿ I

ಶಿವಮೊಗ್ಗ: ಜನಪ್ರಿಯ ರಾಜಕಾರಣಿ, ವರ್ಣರಂಜಿತ ವ್ಯಕ್ತಿತ್ವದ ಬಡವರ ಬಂಧು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರನ್ನು ಸರ್ಕಾರಿ ಯೋಜನೆಗೆ ನಾಮಕಾರಣ ಮಾಡಬೇಕೆಂದು ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಂಘ ಮುಖ್ಯಮಂತ್ರಿಗೆ ಮನವಿ ಮಾಡಿದೆ.

ಈ ಸಂಬಂಧ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿರುವ ಸಂಘದ ಅಧ್ಯಕ್ಷ ಶ್ರೀಧರ್‌ ಆರ್‌ ಹುಲ್ತಿಕೊಪ್ಪ ಅವರು, ತಮ್ಮ ಜನಪರ ಆಡಳಿತದ ಮೂಲಕ ಬಂಗಾರಪ್ಪ ಅವರು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನೇಕ ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅವುಗಳಲ್ಲಿ ಆಶ್ರಯ, ಆರಾಧನಾ, ವಿಶ್ವ ಯೋಜನೆ ಇಂದಿಗೂ ಜಾರಿಯಲ್ಲಿವೆ. ರೈತರ ಪಂಪ್‌ಸೆಟ್‌ಗಳಿಂದ 10 ಹೆಚ್.ಪಿ ವರೆಗೆ ಉಚಿತ ವಿದ್ಯುತ್‌ ನೀಡುವ ಯೋಜನೆಯಿಂದ ಇಡೀ ರೈತ ಸಂಕುಲ ಬಂಗಾರಪ್ಪರ ಹೆಸರನ್ನು ಸದಾ ಸ್ಮರಿಸುತ್ತಿವೆ. ಈ ಯೋಜನೆ ಕೃಷಿ ಕ್ಷೇತ್ರದ ಶಕ್ತಿಯಾಗಿದೆ.

ಇಂತಹ ಯೋಜನೆಗಳನ್ನು ನೀಡಿರುವ ಜನಾನುರಾಗಿ ಬಂಗಾರಪ್ಪ ಅವರನ್ನು ಈ ಹಿಂದೆ ಆಳಿದ ಸರ್ಕಾರಗಳು ನಿರ್ಲಕ್ಷ್ಯ ಮಾಡಿವೆ ಎಂದು ಈಡಿಗರ ಸಂಘ ವಿಷಾದ ವ್ಯಕ್ತಪಡಿಸಿದೆ. ಸಾಮಾಜಿಕ ನ್ಯಾಯದಲ್ಲಿ ಬದ್ಧತೆಯುಳ್ಳ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮತ್ತೊಬ್ಬ ಹಿಂದುಳಿದ ವರ್ಗದ ನೇತಾರರಾಗಿದ್ದ ಬಂಗಾರಪ್ಪ ಅವರ ಹೆಸರನ್ನು ಅಜರಾಮರವಾಗಿಸಬೇಕು.

ಅ.26 ರಂದು ಬಂಗಾರಪ್ಪರ 93 ನೇ ಜನ್ಮದಿನವಿದೆ. ಈ ಸಂದರ್ಭದಲ್ಲಿ ಸರ್ಕಾರಿ ಯೋಜನೆಗೆ ಅವರ ಹೆಸರನ್ನು ನಾಮಕರಣ ಮಾಡಿದರೆ ಅವರಿಗೆ ಆ ಮೂಲಕ ಇಡೀ ಹಿಂದುಳಿದ ಸಮುದಾಯಕ್ಕೆ ಗೌರವ ಸಲ್ಲಿಸಿದಂತಾಗುತ್ತಿದೆ. ಬಂಗಾರಪ್ಪ ಅವರು ಪ್ರತಿನಿಧಿಸುವ ಶಿವಮೊಗ್ಗ ಜಿಲ್ಲೆಯಲ್ಲಿಯೂ ಅವರ ಹೆಸರನ್ನು ಶಾಶ್ವತವಾಗಿ ಉಳಿಸಲು ಅವರ ಹೆಸರನ್ನು ಸರ್ಕಲ್‌ ಅಥವಾ ಸರ್ಕಾರಿ ಭವನಕ್ಕೆ ನಾಮಕರಣ ಮಾಡಬೇಕು ಎಂದು ಶ್ರೀಧರ್‌ ಅವರು ಮನವಿ ಮಾಡಿದ್ದಾರೆ.

Gara

Gara

Leave a comment

error: Content is protected !!