I ಅವೈಜ್ಞಾನಿಕ ರಾಜ ಕಾಲುವೆ ನಿರ್ಮಾಣ I ಸ್ಥಳ ಪರಿಶೀಲನೆ I
ಶಿವಮೊಗ್ಗ : ನಗರದ ಸಾಗರ ರಸ್ತೆಯ ದ್ವಾರಕ ಕನ್ವೆನ್ಷನ್ ಹಾಲ್ ಸಮೀಪ ನಿರ್ಮಿಸಲಾದ ಅವೈಜ್ಞಾನಿಕ ರಾಜ ಕಾಲುವೆಯ ಪರಿಣಾಮವಾಗಿ, ಗೋಪಾಲಗೌಡ ಬಡಾವಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಗಾಲದ ವೇಳೆ ಕೊಳಚೆ ನೀರು ಸರಾಗವಾಗಿ ಹರಿಯದೇ ಮನೆಗಳಿಗೆ ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಿಂದ ಈ ಸಮಸ್ಯೆಯ ಕುರಿತು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸಂಸದರಾದ ಬಿ ವೈ ರಾಘವೇಂದ್ರ ಅವರೊಂದಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾಲುವೆಯ ತಾಂತ್ರಿಕ ದೋಷಗಳು, ನೀರಿನ ನೈಸರ್ಗಿಕ ಹರಿವು ಅಡ್ಡಿಯಾದ ಸ್ಥಳಗಳು ಹಾಗೂ ನಾಗರಿಕರಿಗೆ ಉಂಟಾಗುತ್ತಿರುವ ತೊಂದರೆಗಳ ಕುರಿತು ಚರ್ಚೆ ನಡೆಸಿ, ಸಂಬಂಧಿತ ಇಲಾಖೆಗೆ ತಕ್ಷಣ ಕ್ರಮ ಕೈಗೊಂಡು ಶಾಶ್ವತ ಪರಿಹಾರ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷರಾದ ಮೋಹನ್ ರೆಡ್ಡಿ, ಪಾಲಿಕೆ ಆಯುಕ್ತಾರಾದ ಮಾಯಣ್ಣ ಗೌಡ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಪಕ್ಷದ ಪ್ರಮುಖರಾದ ಜ್ಞಾನೇಶ್ವರ್ ನಾಗರಾಜ್ ಸೇರಿದಂತೆ ನಿವಾಸಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.


