Saturday, 19 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಅಂಕಣ

I ಭೂ ಪರಿವರ್ತನೆಯ ಹೆಸರಿನಲ್ಲಿ I ಸರ್ಕಾರಿ ಮೀಸಲು ಭೂಮಿ ಕಬಳಿಕೆಗಳು I ಡಿಸಿಗೆಷ್ಟು ಗೊತ್ತಿದೆ..?I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಭೂ ಪರಿವರ್ತನೆಯ ಹೆಸರಿನಲ್ಲಿ I ಸರ್ಕಾರಿ ಮೀಸಲು ಭೂಮಿ ಕಬಳಿಕೆಗಳು I ಡಿಸಿಗೆಷ್ಟು ಗೊತ್ತಿದೆ..?I ಶಿವಮೊಗ್ಗದಲ್ಲಿ ಭೂ ಪರಿವರ್ತನೆ ಯಾನೆ ಜಿಲ್ಲಾಧಿಕಾರಿ ಭೂ ಪರಿವರ್ತನೆ ಎನ್ನುವ ಕಾನೂನು ಕಟ್ಟಳೆಗಳು ಎಲ್ಲಾ ನಿಯಮಗಳು ಮೀರಿದೆ, ಶಿವಮೊಗ್ಗ ನಗರ ಹಾಗೂ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಭೂ ಪರಿವರ್ತನೆಯ ಹೆಸರಿನಲ್ಲಿ I ಸರ್ಕಾರಿ ಮೀಸಲು ಭೂಮಿ ಕಬಳಿಕೆಗಳು I ಡಿಸಿಗೆಷ್ಟು ಗೊತ್ತಿದೆ..?I

ಶಿವಮೊಗ್ಗದಲ್ಲಿ ಭೂ ಪರಿವರ್ತನೆ ಯಾನೆ ಜಿಲ್ಲಾಧಿಕಾರಿ ಭೂ ಪರಿವರ್ತನೆ ಎನ್ನುವ ಕಾನೂನು ಕಟ್ಟಳೆಗಳು ಎಲ್ಲಾ ನಿಯಮಗಳು ಮೀರಿದೆ, ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಭಾಗದ ಕರೆ ಜಾಗಗಳು, ಗೋಮಾಳಗಳು, ದನಕ್ಕೆ ಮುಪತ್ತಿನ ಜಾಗಗಳು ಇಂದು ಅಕ್ರಮ ಡಿ-ನೋಟಿಪಿಕೇಶನ್‌ನಲ್ಲಿ ವಸತಿ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಯಾವುದೇ ಪರಿಶೀಲನೆ ಇಲ್ಲದೆ ಭೂ ಪರಿವರ್ತನೆ ಆಗುತ್ತಿರುವ ಕಡತಗಳ ಪಟ್ಟಿ ಕೋಟಿ, ಕೋಟಿ ಮೌಲ್ಯವುಳ್ಳವುದ್ದಾಗಿದೆ, ಸರ್ಕಾರಿ ಭೂಮಿಗಳು ಖಾಸಗಿ ಭೂ ಕಬಳಿಕೆದಾರರ ಜಾಲಕ್ಕೆ ಬಲಿಯಾಗುತ್ತಿದೆ, ಅಲ್ಲದೆ ಜಾನುವಾರುಗಳ ಕುಡಿವ ನೀರು, ಮೇವುಗಳ ಮೀಸಲು ಭೂಮಿಗಳು ಪರಿವರ್ತನೆಯ ಹೆಸರಿನಲ್ಲಿ ಲ್ಯಾಂಡ್ ಲಿಟಿಗೇಶನ್ ಎನ್ನುವ ಭೂಗತ ಜಾಲ ಡೇ ಅಂಡ್ ನೈಟ್ ರಾಬರಿ ಮಾಡುತ್ತಿದೆ, ಸಕ್ರೀಯವಾಗಿ ಜಿಲ್ಲಾಧಿಕಾರಿಗಳ ಕಛೇರಿಯ ಕಂದಾಯ ವಿಭಾಗದೊಂದಿಗೆ ಸಂಪೂರ್ಣವಾಗಿ ಶಾಮೀಲಾಗಿರುವುದು ಜಿಲ್ಲಾಧಿಕಾರಿಗಳಾದ ಗುರುದತ್ ಹೆಗಡೆ ಅವರಿಗೆ ಮಾಹಿತಿಗಳಿಲ್ಲವೇ ಎನ್ನುವುದು ಪ್ರಶ್ನಾರ್ಹವಾಗಿದೆ,

ಈ ವಿಭಾಗದ ಅಧಿಕಾರಿ ಲಲಿತ್ ಕಿಶೋರ್ ಈ ಕುರಿತಾಗಿ ಹೇಳುವುದೇನೆಂದರೆ ಅಸಲಿಗೆ ಪರಿಶೀಲನೆ ಮಾಡುವುದು ನಮ್ಮ ಕೆಲಸವಲ್ಲ, ಅದು ತಾಲ್ಲೂಕು ಕಛೇರಿಗೆ ಸಂಬಂಧಿಸಿದ್ದು ಆಗಿದೆ, ಈ ಡಿಸಿ ಅಲಿನೇಷನ್ ವಿಭಾಗಕ್ಕೆ ಬರುವ ಕಡತಗಳಲ್ಲಿ ಪಹಣಿ. ಮ್ಯೂಟೇಶನ್ ನೋಡಿ ಮುಂದಿನ ಎಲ್ಲಾ ದಾಖಲೆಗಳ ಪರಿಶೀಲಿಸುತ್ತೇವೆ, ಈ ದಾಖಲೆಗಳು ಜಾನುವಾರು ಭೂ ಪ್ರದೇಶವನ್ನು ಅತಿಕ್ರಮಿಸಿಕೊಂಡಿದ್ದರೆ ಅದಕ್ಕೆ ಈ ಇಲಾಖೆ ಜವಾಬ್ದಾರರು ಆಗುವುದಿಲ್ಲ ಎಂದು ನೇರವಾಗಿ ಬಡ-ಬಡಾಯಿಸುವ ಅಧಿಕಾರ ನ್ಯೂನ್ಯತೆಗಳತ್ತ ಯಾವುದೇ ಜಿಲ್ಲಾಧಿಕಾರಿಗಳು ಚಿತ್ತವರಿಸಿಲ್ಲ ಎಂದೆನಿಸುತ್ತದೆ, ಇಂತಹದೊಂದು ಹಾರಿಕೆ ಉತ್ತರ ನೀಡಿ ಕಳಿಸುವ ಲಲಿತ್ ಕಿಶೋರ್‌ನೊಂದಿಗೆ ಮತ್ತಷ್ಟು ಅಧಿಕಾರಿಗಳು ಶಾಮೀಲಾಗಿರುವುದು ತನಿಖಾ ತಂಡದಿಂದಲೇ ಬಹಿರಂಗವಾಗಬೇಕಿದೆ,

ಮೋಸ್ಟ್ಲೀ ಈ ವಿಭಾಗದ ಅಧಿಕಾರಿಗಳಿಗೆ, ರೇರಾ ಕಾಯ್ದೆ ಎಂದರೇನು..? ಭೂಮಿ ಅನ್ಯಿಕರಣ ಕಾಯಿದೆಯನ್ನು ಅನುಸರಿಸಲಾಗಿದಿಯಾ..? ಎನ್ನುವ ಕಡತಗಳ ಪರಿಶೀಲನೆಗೈಯದೆ ಕೇವಲ ಪಹಣಿ, ಮ್ಯೂಟೇಶನ್ ಮೇಲೆ ಭೂ-ಪರಿವರ್ತನೆ ಮಾಡುವುದಾದರೆ ಜಿಲ್ಲಾಧಿಕಾರಿಗಳ ಕಚೇರಿ ಬೇಲಿಯೇ ಎದ್ದು ಹೊಲ ಮೇಯ್ದೆಂತೆ ಆಗಲಿಲ್ಲವೇ, ಕೃಷಿ ಜಮೀನು ಸೇರಿದಂತೆ ಮೀಸಲು ಭೂಮಿಗಳು ಭೂ ಪರಿವರ್ತನೆ ಆಗಬೇಕೆಂದರೆ ಸ್ಥಳ ಮಹಜರ್ ನಡೆಸುವ ಅಧಿಕಾರಿಗಳ ವರದಿ ಹಾಗೂ ಮೂಲ ಗ್ರಾಮ ನಕ್ಷೆಗಳನ್ನು ಪರಿಶೀಲಿಸಲೇ ಬೇಕಾಗುತ್ತದೆ, ಈ ಹಿಂದೆ ಡಿ-ನೋಟಿಪಿಕೇಶನ್ ಪ್ರಕರಣದಲ್ಲಿ ಬಿ.ಎಸ್ ಯಡಿಯೂರಪ್ಪನವರು ತಮ್ಮ ಮುಖ್ಯಮಂತ್ರಿಗಳ ಅಧಿಕಾರವನ್ನೇ ಪದಚ್ಯುತಿಗೊಳಿಸಿಕೊಳ್ಳುವ ಹಂತಕ್ಕೆ ಈ ಕಾನೂನು ಸುವ್ಯವಸ್ಥೆನಲ್ಲಿದೆ, ವ್ಯಕ್ತಿ ಸತ್ತರೂ ದಾಖಲೆಗಳು ಸಾಯುವುದಿಲ್ಲ ಎನ್ನುವಂತೆ, ಮೀಸಲು ಭೂಮಿಗೆ ವಸತಿ, ಕೈಗಾರಿಕೆ, ವಾಣಿಜ್ಯ ಉದ್ದೇಶಗಳಿಗೆ ಅನಾಮತ್ತಾಗಿ ಭೂ ಪರಿವರ್ತನೆಗೊಳಿಸಿದ ಪ್ರಕರಣದಲ್ಲಿ ಗುರುದತ್ ಹೆಗಡೆಯವರು ದರ್ಶಿಸಿಕೊಳ್ಳುವ ಮುನ್ನದಿ ಈ ವಿಭಾಗದ ಅಧಿಕಾರಿಗಳ ಅಧಿಕಾರ ವ್ಯಾಪ್ತಿಯ ತನಿಖೆಗೆ ಮುಂದಾಗಲಿ ಎನ್ನುವುದು ಸಾರ್ವಜನಿಕ ಹಾಗೂ ಜಾನುವಾರು ಉಳಿವಿನ ಉದ್ದೇಶವಾಗಿದೆ,

ಎಲ್‌ಕೆಜಿ ಮನಸ್ಥಿತಿ ಭ್ರಷ್ಟರ ಮೊಂಡು ಅಧಿಕಾರದ ದುರುಪಯೋಗಕ್ಕೆ ಉನ್ನತಮಟ್ಟದ ಅಧಿಕಾರಿಗಳು ತಪ್ಪಿತಸ್ಥರಾಗಿ ನಿಲ್ಲಬೇಕಾದ ಅವಸರಗಳು ಶಿವಮೊಗ್ಗದಲ್ಲಿ ದೂರವಿಲ್ಲವಾಗಿದೆ, ಕೃಷಿಯೇತರ ಹಕ್ಕುಗಳಿಗೆ ಕಾನೂನುಬದ್ದವಾಗಿ ಪರಿವರ್ತಿಸುವ ಕಾನೂನು ಇಂದು ಭೂ ಕಬಳಿಕೆದಾರರ ಕಪಿಮುಷ್ಟಿಯಲ್ಲಿದೆ ಎನ್ನುವುದೇ ದುರಂತದ ಪರಮಾವಧಿಯಾಗಿದೆ, ಇದರಿಂದ ಕರ್ನಾಟಕ ಭೂ ಕಂದಾಯ ಕಾಯಿದೆ ೧೯೬೪ ಶಿವಮೊಗ್ಗದ ಜಿಲ್ಲಾಡಳಿತದ ಈ ವಿಭಾಗದಲ್ಲಿ ಉಲ್ಲಂಘನೆಯಾಗಿದೆ ಎನ್ನುವುದಕ್ಕೆ ಕಳೆದ ಹತ್ತು ವರುಷಗಳಿಂದ ನೂರಾರು ಪ್ರಕರಣಗಳಿಗೆ ನೀಡಿರುವ ಭೂ ಪರಿವರ್ತನೆಯ ಅನುಮತಿಯ ಕಡತಗಳನ್ನು ಮತ್ತೊಮ್ಮೆ ಜಿಲ್ಲಾಧಿಕಾರಿಗಳಾದ ಗುರುದತ್ ಹೆಗಡೆಯವರು ಪರಿಶೀಲಿಸಲಿ,

ಈ ಕುರಿತಂತೆ ಮೀಸಲು ಭೂಮಿ ಕಬಳಿಕೆಗಳ ಪ್ರಕರಣಗಳು ಹೊರ ಬೀಳುತ್ತದೆ, ಅಲ್ಲದೆ ಕೋಟ್ಯಾಂತರ ರೂ ಮೌಲ್ಯದ ಸರ್ಕಾರಿ ಭೂಮಿಗಳನ್ನು ಭೂಗತ ಲ್ಯಾಂಡ್ ಲಿಟಿಗೇಶನ್ ಜಾಲಕ್ಕೆ ಹಸ್ತಾಂತರಿಸಿರುವುದು ಗೊತ್ತು ಮಾಡಿಕೊಳ್ಳಬಹುದಾಗಿದೆ, ಇನ್ನೂ ಈ ಭೂ ಪರಿವರ್ತನೆಯ ಅನುಮತಿ ಪಡೆದು ಲ್ಯಾಂಡ್ ಡೆವಲಪರ್‍ಸ್‌ಗಳು ಲೇ-ಔಟ್ ನಿರ್ಮಾಣಕ್ಕೆ ಮುಂದಾಗಿ ಕೋಟಿ ಲೆಕ್ಕದಲ್ಲಿ ರಾಷ್ಟ್ರೀಯ ಬ್ಯಾಂಕುಗಳಲ್ಲಿ, ಮಲ್ಟಿನ್ಯಾಷನಲ್ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯಲು ಮುಂದಾಗುತ್ತಿದ್ದಾರೆ, ಒಂದೆಡೆ ಅಕ್ರಮವಾಗಿ ಸರ್ಕಾರಿ ಭೂಮಿ ಕಬಳಿಕೆ, ಇನ್ನೊಂದೆಡೆ ಲೇ-ಔಟ್ ನಿರ್ಮಾಣದ ಹೆಸರಿನಲ್ಲಿ ಸಾರ್ವಜನಿಕರಿಂದ ನಿವೇಶನ ನೀಡುವುದಾಗಿ ಹಣ ವಸೂಲಿ, ಇಂತಹ ಡೆ-ಲೈಟ್ ರಾಬರಿಗಳು ಕರ್ನಾಟಕ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದರೆ, ಶಿವಮೊಗ್ಗದ ನಕಲಿ ಡೆವಲಪರ್‍ಸ್‌ಗಳು ರೇರಾ ಕಾಯಿದೆಗೆ ಯಾವುದೇ ಕಾಸಿನ ಕಿಮ್ಮತ್ ನೀಡಿಲ್ಲವಾಗಿದೆ,

ಒಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಈ ಕುರಿತಂತೆ ಗಮನವಿತ್ತು, ಶಿವಮೊಗ್ಗದಲ್ಲಿ ಬೀಡು ಬಿಟ್ಟಿರುವ ಬಹುತೇಕ ನಕಲಿ ಲ್ಯಾಂಡ್ ಡೆವಲಪರ್‍ಸ್‌ಗಳ ಭೂಗತ ಚಟುವಟಿಕೆಯನ್ನು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಹತ್ತಿಕ್ಕುವಂತಾಗಲಿ, ಇಂತಿವರಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಡುವ ಜಾಲವನ್ನು ಬೇದಿಸಲಿ, ಎನ್ನುವುದು ಇಂದಿಗೂ ಬರಹಗಳ ಅಭಿವ್ಯಕ್ತಿಗಳು ಅಭಿವ್ಯಕ್ತವಾಗುತ್ತಿದ್ದರೂ ಜಿಲ್ಲಾಧಿಕಾರಿಗಳಾದ ಗುರುದತ್ ಹೆಗಡೆ ಅವರು ಶಿವಮೊಗ್ಗದ ಎಲ್ಲಾ ಲ್ಯಾಂಡ್ ಡೆವಲಪರ್‍ಸ್‌ಗಳ ಕಛೇರಿಯ ಮೇಲೆ ಕಾನೂನು ರಿತ್ಯಾ ದಾಳಿ ನಡೆಸಲಿ, ಅದಾಗ ಮಾತ್ರವೇ ತಮ್ಮ ಭೂ ಪರಿವರ್ತನಾ ವಿಭಾಗದಿಂದ ಅವ್ಯಾಹತವಾಗಿ ಜರುಗುತ್ತಿರುವ ಉಲ್ಲಂಘನೆಗಳು, ಅಧಿಕಾರ ದುರುಪಯೋಗಗಳು ದರ್ಶಿಸಿಕೊಳ್ಳುತ್ತದೆ,

ಈ ಹೆಜ್ಜೆಗಳಿಗೆ ರಾಜಕೀಯ ಒತ್ತಡಗಳು ಸಾಮಾನ್ಯವಾಗಿ ಮೇಲೆರಗುತ್ತದೆ, ಎನ್ನುವುದಿದ್ದರೂ ಜಿಲ್ಲಾಡಳಿತ ಜಾನುವಾರು ಮೀಸಲು ಭೂಮಿಗಳನ್ನು ಉಳಿಸಿ, ತೆರವುಗೊಳಿಸಲು ಹೀಗೊಂದು ತನಿಖೆ ಅತ್ಯಗತ್ಯವಾಗಿದೆ ಹಾಗೂ ತಮ್ಮ ಭೂ ಪರಿವರ್ತನಾ ವಿಭಾಗವಾದ ಕಂದಾಯ ವಿಭಾಗಕ್ಕೂ ಮೇಜರ್ ಸರ್ಜರಿ ಮಾಡಿದಂತಾಗುತ್ತದೆ ಎನ್ನುವುದು ಉದ್ದೇಶವಾಗಿದೆ.

Gara Srinivas

Gara Srinivas

Leave a comment

error: Content is protected !!