Saturday, August 1, 2026
Homeಸೂರ್ಯಗಗನI ನೂತನ ಅಧ್ಯಕ್ಷರಾಗಿ ಮುನ್ನೂರು ಮೋಹನ್ ಶೆಟ್ಟಿ I ಪ್ರಧಾನ ಕಾರ್ಯದರ್ಶಿಯಾಗಿ ಮುರುಘರಾಜ್ ಆಯ್ಕೆ I

I ನೂತನ ಅಧ್ಯಕ್ಷರಾಗಿ ಮುನ್ನೂರು ಮೋಹನ್ ಶೆಟ್ಟಿ I ಪ್ರಧಾನ ಕಾರ್ಯದರ್ಶಿಯಾಗಿ ಮುರುಘರಾಜ್ ಆಯ್ಕೆ I

I ಕೆಯುಡಬ್ಲ್ಯೂಜೆ ತೀರ್ಥಹಳ್ಳಿ ತಾಲ್ಲೂಕು ಘಟಕದ I ನೂತನ ಅಧ್ಯಕ್ಷರಾಗಿ ಮುನ್ನೂರು ಮೋಹನ್ ಶೆಟ್ಟಿ I ಪ್ರಧಾನ ಕಾರ್ಯದರ್ಶಿಯಾಗಿ ಮುರುಘರಾಜ್ ಆಯ್ಕೆ I

ತೀರ್ಥಹಳ್ಳಿ: ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ತೀರ್ಥಹಳ್ಳಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಮುನ್ನೂರು ಮೋಹನ್ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಯಾಗಿ ಮುರುಘರಾಜ್ ಅವರು ಮರು ಆಯ್ಕೆ ಆಗಿದ್ದಾರೆ.

ತೀರ್ಥಹಳ್ಳಿ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸರ್ವ ಸದಸ್ಯರ ಸಭೆ ಮತ್ತು ಆಯ್ಕೆ ಸಭೆ ಶಿವಮೊಗ್ಗ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವೈದ್ಯನಾಥ್, ರಾಜ್ಯ ಚುನಾವಣಾಧಿಕಾರಿ ಟೆಲೆಕ್ಸ್ ರವಿಕುಮಾರ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ, ತೀರ್ಥಹಳ್ಳಿ ಉಸ್ತುವಾರಿ ರಾಘು ಶೆಟ್ಟಿ, ಜಿಲ್ಲಾ ಖಜಾಂಚಿ ರೋಹಿತ್, ಉಪಾಧ್ಯಕ್ಷರಾದ ಹುಚ್ಚುರಾಯಪ್ಪ, ಸತ್ಯನಾರಾಯಣ ಈ ಸಂದರ್ಭದಲ್ಲಿ ಇದ್ದರು.
ಸಭೆಯಲ್ಲಿ ತೀರ್ಥಹಳ್ಳಿ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ರಮೇಶ್ ಶೆಟ್ಟಿ, ಡಾನ್ ರಾಮಣ್ಣ ಶೆಟ್ಟಿ, ಪತ್ರಕರ್ತರಾದ ಛಲಗಾರ ನಿಶಾಂತ್, ವಿಧಾತ ಅನಿಲ್, ಹಿರಿಯ ಪತ್ರಕರ್ತರಾದ ಶಿವಾನಂದ್ ಕರ್ಕಿ, ಸತ್ಯನಾರಾಯಣ್, ಜಗದೀಶ್, ರಾಘವೇಂದ್ರ ಎಂ. ಕೆ, ಕೃಷ್ಣಮೂರ್ತಿ ಹನಸ, ರಾಮಚಂದ್ರ ಕೊಪ್ಪಲು, ಪತ್ರಕರ್ತರಾದ ಮನುಕುಮಾರ್, ಗಾಯತ್ರಿ ಶೇಷಗಿರಿ, ಶ್ರೀಕಾಂತ್ ನಾಯಕ್, ಸಂತೋಷ್ ಕುಮಾರ್, ರಾಘವೇಂದ್ರ ನಮ್ಮೂರ್ ಎಕ್ಸ್ ಪ್ರೆಸ್, ನಿರಂಜನ್ ಪ್ರಸನ್ನ ಹೊಳ್ಳ, ಕವೀಶ್, ಸಂದೀಪ್, ಪಾರ್ಥ ಸಾರಥಿ, ಅಕ್ಷಯ್, ನಿರಂಜನ್, ಕೃಷ್ಣಮೂರ್ತಿ, ಶಿವು ಹೊಸ ಕೊಪ್ಪ, ಅಗ್ನಿ ಮಿತ್ರ ಸೇರಿ ಎಲ್ಲಾ ಸದಸ್ಯರು ಹಾಜರಿದ್ದರು. ಹಿರಿಯ ಪತ್ರಕರ್ತರು ಎಲ್ಲರೂ ಅಭಿಪ್ರಾಯ ಹಂಚಿಕೊಂಡರು.

ಮಾದರಿ ತಾಲೂಕು ಸಂಘಟನೆ ತೀರ್ಥಹಳ್ಳಿ : ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವೈದ್ಯ ಮಾತನಾಡಿ, ಜಿಲ್ಲಾ ಸಂಘದ ನೂತನ ಸದಸ್ಯರು ಡಿ. 20ರಂದು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಎಲ್ಲಾ ತಾಲೂಕು ಪತ್ರಕರ್ತರ ಸಂಘ ಆಯ್ಕೆ ಆಗಿದೆ. ಎಲ್ಲಾ ತಾಲೂಕು. ಕೇಂದ್ರ ಹಾಗೂ ಜಿಲ್ಲಾ ಕೇಂದ್ರದಲ್ಲಿ ಅವಿರೋಧ ಆಯ್ಕೆ ಆಗಿದೆ. ಪತ್ರಕರ್ತರ ಮುಂದೆ ಹತ್ತಾರು ಸವಾಲುಗಳಿವೆ. ಸಂಘಕ್ಕೆ ಎಲ್ಲಾ ಪತ್ರಕರ್ತರಿಗೆ ನ್ಯಾಯ, ಹಕ್ಕು ಒದಗಿಸುವ ಜವಾಬ್ದಾರಿ ಇದೆ. ಜಿಲ್ಲೆಯಲ್ಲಿ 300 ಪತ್ರಕರ್ತರು ಇದ್ದಾರೆ. ಅವರಿಗೆ ನ್ಯಾಯ ಒದಗಿಸಬೇಕು ಎಂಬ ಕನಸಿದೆ. ಮಾತು ಮುಖ್ಯ ಆಗಬಾರದು. ಕೆಲಸ ಆಗಬೇಕು, ನಾವೆಲ್ಲರೂ ಸೇರಿ ಸದೃಢ ಸಮಾಜ ಕಟ್ಟೋಣ. ಪತ್ರಕರ್ತರ ಹಿತ ಕಾಪಾಡೋದು ನಮ್ಮೆಲ್ಲರ ಜವಾಬ್ದಾರಿ. ಎಲ್ಲಾ ಪತ್ರಕರ್ತರು ಸೇರಿ ಸೇವೆ ಮಾಡೋಣ. ಪತ್ರಕರ್ತರು ಬಹುತೇಕರು ಕಷ್ಟದಲ್ಲಿ ಸಂಸ್ಥೆ ಹಾಗೂ ಬದುಕು ನಡೆಸುತ್ತಿದ್ದಾರೆ. ಅವರಿಗೆಲ್ಲರಿಗೂ ಭದ್ರತೆ ಒದಗಿಸಬೇಕಿದೆ ಎಂದರು.

ರಾಜ್ಯದಲ್ಲಿ ತೀರ್ಥಹಳ್ಳಿ ಪತ್ರಕರ್ತರ ಕೊಡುಗೆ ಅಪಾರ : ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ ಮಾತನಾಡಿ, ಪ್ರಿಂಟ್, ಡಿಜಿಟಲ್, ಇಲೆಕ್ಟ್ರಾನಿಕ್ ಮೀಡಿಯಾ ಕ್ಷೇತ್ರದಲ್ಲಿ ಆತಂಕ ಇದೆ. ಎಲ್ಲರೂ ಕಷ್ಟದಲ್ಲಿದ್ದಾರೆ. ಸಂಘಟಿತರಾಗಿ ಎಲ್ಲರೂ ವೃತ್ತಿ ಧರ್ಮ ಮೆರೆಯೋಣ ಎಂದರು.

ತೀರ್ಥಹಳ್ಳಿ ಪತ್ರಕರ್ತರಿಗೆ ನಿವೇಶನ ಸಿಗಬೇಕು : ರಾಜ್ಯ ಪ್ರತಿನಿಧಿ ಟೆಲೆಕ್ಸ್ ರವಿಕುಮಾರ್ ಮಾತನಾಡಿ, ಜಿಲ್ಲಾ ಪತ್ರಕರ್ತರ ಸಂಘಟನೆಗೆ ತೀರ್ಥಹಳ್ಳಿ ಪತ್ರಕರ್ತರ ಕೊಡುಗೆ ಅಪಾರ. ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆ ಹಾಗೂ ತೀರ್ಥಹಳ್ಳಿ ಪತ್ರಕರ್ತರ ಸೇವೆ ಅಪಾರ. ಪತ್ರಕರ್ತರು ಸಮಾಜದ ಬೆನ್ನೆಲುಬು. ತೀರ್ಥಹಳ್ಳಿ ಪತ್ರಕರ್ತರಿಗೆ ನಿವೇಶನ ಸಿಗಬೇಕು. ರಾಜ್ಯದಲ್ಲಿ ಪತ್ರಕರ್ತರ ಸಂಘಟನೆ ಬಲ ಗೊಳ್ಳುತ್ತಿದೆ. 10,500ಕ್ಕೂ ಹೆಚ್ಚು ನೋಂದಾಯಿತ ಸದಸ್ಯರು ಇದ್ದಾರೆ. ಎಲ್ಲರೂ ಅಸಂಘಟಿತ ಕಾರ್ಮಿಕರಾಗಿದ್ದಾರೆ. ಎಲ್ಲರಿಗೂ ನ್ಯಾಯ ನೀಡಲು ಸಂಘ ಕೆಲಸ ಮಾಡುತ್ತಿದೆ. ಋಣಾತ್ಮಕವಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ಸೇರಿ ಸಮಾಜ ಕಟ್ಟುವ ಕೆಲಸ ಮಾಡೋಣ. ಯುವ ಪತ್ರಕರ್ತರು ಮುಂದೆ ಬರಬೇಕು ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I