September 22, 2026

I ಆಕೆ ಸಾವನ್ನೇ ಅಪ್ಪಿ ಗೆದ್ದು ಬೀಗಿದ ಬರಹಗಾರ್ತಿ I 

0
IMG_20251211_160851_838

ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಆಕೆ ಸಾವನ್ನೇ ಅಪ್ಪಿ ಗೆದ್ದು ಬೀಗಿದ ಬರಹಗಾರ್ತಿ I 

SURYAGAGANA.COM

ಸಾಧನೆಯ ಹಾದಿ ಬಲು ಕ್ಲಿಷ್ಟಕರ , ಸಾಗುವುದು ಅಷ್ಟು ಸುಲಭ ಸಾಧ್ಯವಲ್ಲ, ಮನೋದೃಡಭಾವ ಆತ್ಮದ ದೀವಿಗೆ ಆಗಿರಬೇಕು, ಸಾಗಲೇಬೇಕು ಎಂದುಕೊಂಡವರು ಇಂತಹ ಹಾದಿಯಲ್ಲಿ ಅನಾಯಾಸವಾಗಿ ಸಾಗಿ ಬಿಡುತ್ತಾರೆ, ಈ ಹಾದಿ ಯಾವ ರೀತಿ ಇರುತ್ತೇ..? ಎಲ್ಲರೂ ಕೂಡ ಸಾಗಬಹುದು …? ಒಂದಿಷ್ಟು ಮನಸುಗಳು ತಾವು ಸಾಧಕರು ಸಾಧಿಸಿ ತೋರಿಸುತ್ತೇನೆ ಎಂದು ತಮ್ಮಷ್ಟಕ್ಕೆ ತಾವು ಮಾತಾಡಿಕೊಳ್ಳುವುದೇ ಹೆಚ್ಚು ಪ್ರಸಿದ್ದಿಗೆ ಬಂದು ಬಿಡುತ್ತೆ, ಫೇಸ್ಬುಕ್ ನಲ್ಲೂ ಇಂತಹ ಸ್ಟೇಟಸ್ ಗಳನ್ನು ಕೆಲವು ಸ್ವಯಂ ಸೆಲಿಬ್ರಟಿಗಳ ಹಾದಿಯಾಗಿಯೂ ಹಾಕಿಕೊಂಡು ಅವರವರ ಬೆನ್ನನ್ನ ಅವರೆ ತಟ್ಟಿಕೊಂಡು ಬೀಗುತ್ತಾರೆ.

ಮಹಾರಾಷ್ತ್ರದ ಅರುಣ್ ಗೌಳಿ ಮಗಳು ಗೀತಾ ಗೌಳಿ ಜೊತೆ ಕಥೆಗಾರ್ತಿ

ಇದು ಎಷ್ಟರ ಮಟ್ಟಿಗೆ ಸರಿಯೆಂದು ಸ್ವಯಂ ವರ್ಚಸ್ಸುಗಳ ತರ್ಕಕ್ಕೆ ಹೋಗದೆ … ತಾನು ಬರೆದಿದ್ದೇ ಶ್ರೇಷ್ಟ-ಅವರದ್ದು ಕನಿಷ್ಟ, ಪದ ಪ್ರಯೋಗವೆಂದೋ..!? ಭಾವ ಬಿತ್ತುವುಕೆ ಎಂದೋ..!? ಶಭ್ದಕೋಶಗಳ ಒಕ್ಕಣಿಕೆಗಳ, ಪದ್ಯ ಸಾಲುಗಳ ಚರ್ಚೆಗೆ ಮುಂದಾಗಿ ಅತೀವ ವಾದ,ತರ್ಕಕ್ಕ ನಿಲ್ಲುವ ಬರಹಗಾರರಿಗೂ ಮನಪೂರ್ವಕ ನಿಮ್ಮ ಪ್ರಬುದ್ದತೆ-ಪ್ರೌಡಿಮೆಗಳಿಗೆ ಅಭಿನಂದನೆಗಳ ತಿಳಿಸಿ, ಮತ್ತೊಮ್ಮೆ ಈ ಕನ್ನಡ -ಬರಹದ‌ ಲೋಕಕ್ಕೆ ಯಾರು ಸಾಧಿಸಲಾರದ ಸಾಧಕಿಯೊರ್ವರ ಒಂದಿಷ್ಟು ಬದುಕಿನ ಹಾದಿಯನ್ನ ಇಲ್ಲಿ ಲಗತ್ತಿಸುತ್ತಿದ್ದೇನೆ.

ಮೂಲತಃ ಬೆಳಗಾವಿಯವರಾದ ಆಕೆ ಬೆಂಗಳೂರಿಗೆ ಬಂದು ಖಾಸಗಿ ಟಿವಿ ಚಾನೆಲ್ ಒಂದರಲ್ಲಿ ಆ್ಯಂಕರ್ ಆಗಿ ವೃತ್ತಿ ಜೀವನ ಆರಂಭಿಸುತ್ತಾರೆ, ಅಲ್ಲಿ ಧಾರವಾಹಿ ನಿರ್ಮಾಪಕರೊಬ್ಬರ ಸ್ನೇಹ ಬೆಸೆದುಕೊಳ್ಳುತ್ತೆ ಸ್ನೇಹ ಪ್ರೀತಿಗೂ ತಿರುಗುತ್ತೆ, ಒಮ್ಮೆ ದೇವಳವೊಂದರಲ್ಲಿ ಮದುವೆಯನ್ನು ಮಾಡಿಕೊಳ್ಳುತ್ತಾರೆ ಹೀಗೊಂದಿಷ್ಟು ತಿಂಗಳ ನಂತರ ಪತಿಯ ಮೇಲಿನ ಅತೀಯಾದ ಪ್ರೀತಿಯಲ್ಲಿ ಮುಳುಗಿದ್ದ ಆಕೆಗೆ ಪತಿದೇವನ ಕಿರುಕುಳ ಶುರುವಾಗುತ್ತೇ ಹಿಂಸಿಸುತ್ತಾನೆ..!

ಕಾಮಟಿ ಪುರದ ವಸ್ತುನಿಷ್ಠ ಲೇಖನಕ್ಕೆ ಖುದ್ದಾಗಿ ತೆರಳಿ ಸಂಗತಿಗಳನ್ನು ಕಲೆ ಹಾಕುತ್ತಿರುವ ಲೇಖಕಿ

ಒಮ್ಮೆಲೆ ಆಕೆ ಪ್ರಜ್ಞಾಹೀನಳಾಗಿ ತನ್ನ ದೇಹದ ಅಸ್ತಿತ್ವವನ್ನೆ ಕಳೆದುಕೊಳ್ಳುವಂತೆ ಮಾರಣಾಂತಿಕ ಹಲ್ಲೆ ಮಾಡುತ್ತಾನೆ ಆಕೆಗೆ ಪ್ರಜ್ಞೆ ಬಂದಾಗ ಯಾವುದೋ ಹಾಸ್ಪೀಟಲ್ ನಲ್ಲಿ ದಾಖಲು ಮಾಡಿ ಪತಿ ಕಣ್ಮರೆಯಾಗಿರುತ್ತಾನೆ,

ಆಕೆ ಸೊಂಟ, ಕಾಲು ತನ್ನ ದೇಹದ ಸ್ವಾದೀನ ಶಕ್ತಿಯನ್ನು ಕಳೆದುಕೊಂಡು ವ್ಹೀಲ್ ಛೇರ್ನಲ್ಲಿ ಬದುಕು ಸಾಗಿಸುವ ಹಂತಕ್ಕೆ ಬಂದಿಳಿಯುತ್ತಾಳೆ.. ಹೀಗೆ ಒಮ್ಮೆ ದೇಹದ ಸ್ಥಿತಿಯೂ ಕ್ಷೀಣಿಸಿ ಹೀಮೋಗ್ಲೋಬಿನ್ 2% ಗೆ ಬಂದಿಳಿಯುತ್ತದೆ, ಚಿಕಿತ್ಸೆ ನೀಡುತ್ತಿದ್ದ ವ್ಯೆದ್ಯರು ಈಕೆ ಬದುಕುಳಿಯುವುದು ಕಷ್ಟ ಹೆಚ್ಚೆಂದರೆ ಎಂಟು ತಿಂಗಳಷ್ಟೆ ಬದುಕಬಹುದೆಂದು ಹೇಳುತ್ತಾರೆ.!? ಇದನ್ನು ಕೇಳಿಸಿಕೊಂಡ ಆಕೆ ತನ್ನೆಲ್ಲಾ ಆತ್ಮವಿಶ್ವಾಸವನ್ನು ಬಾಚಿ ಬಳಿದು ಇರುವಷ್ಟೆ ದಿನಗಳಲ್ಲಾದರೂ ತನಗಿರುವ ಬರಹವನ್ನೇ ಮುಂದುವರೆಸಿ ಹಾಗೇಯೆ ಜಗತ್ತಿಗೆ ವಿದಾಯ ಹೇಳಲು ನಿರ್ಣಯಿಸುತ್ತಾಳೆ.

ಆರಂಭದ ಸಿನಿಮಾ ಚಿತ್ರಗಳಲ್ಲಿ ಹೀರೋ ಆಗಿದ್ದ ರಾಜೆಂದ್ರ ಪ್ರಸಾದ್ ರವರ ಜೊತೆ ಲೇಖಕಿ

ದಿನದ ಒಂದೊಂದು ಕ್ಷಣವನ್ನು ಕೂಡ ಅನಾರೋಗ್ಯದ ಕಡೆ ಗಮನಹರಿಸದೆ ಬರೆದ ಕವಿತೆಗಳು,ಕಥೆಗಳು,ಅನುವಾದ ಕೃತಿಗಳು, ಅದೇ ವ್ಯದ್ಯರು ನೀಡಿದ್ದ ಜೀವದ ಗಡುವಿನ ಹೊತ್ತಿಗೆ 42 ಪುಸ್ತಕಗಳು ಮುದ್ರಣಕ್ಕೆ ಹೋಗಲು ಸಿದ್ದಗೊಳ್ಳುತ್ತವೆ. ಆಚ್ಚರಿಯೆಂದರೆ ಆಕೆ ಬರೆದ ಅಷ್ಟೂ ದಿನಗಳಲ್ಲಿ ಆರೋಗ್ಯವೂ ಚೇತರಿಕೆ ಕಾಣುತ್ತದೆ ವೈದ್ಯ ಲೋಕ ಮೂಕ ವಿಸ್ಮತವಾಗುತ್ತದೆ.

ಆಕೆ ಎಂದಿನಂತೆ ಆರೋಗ್ಯ ಸ್ಥಿತಿಗೆ ಮರಳಿದ್ದು ಚರ್ಚೆಯಾಗುತ್ತದೆ ಇದೀಗ ಆಕೆ ಸಂಪೂರ್ಣವಾಗಿ ಆರೋಗ್ಯವಾಗಿಯೂ ಇದ್ದಾಳೆ… ಆಕೆ ಬರೆಯುತ್ತಲೆ ಸಾಗಿದ 42 ಪುಸ್ತಕಗಳಲ್ಲಿ 2012 ರ ಹೊತ್ತಿಗೆ ತಿಳಿದಿರುವಂತೆ ಮಂಗಳೂರು,ಉಡುಪಿ, ಶಿವಮೊಗ್ಗ.ಬೆಳಗಾವಿಯಲ್ಲಿ ಬಿಡುಗಡೆಯಾಗಿದ್ದು ಸುಮಾರು 28 ಪುಸ್ತಕಗಳು ಎಂದು ತಿಳಿದಿದ್ದೇ ಇದೀಗ ಇನ್ನೆಷ್ಟು ಪುಸ್ತಕಗಳಿಗೆ ಜೀವ ಕಳೆ ಕೊಟ್ಟಿದ್ದಾಳೋ ಗೊತ್ತಿಲ್ಲ..!?

ಇಂತಹ ಸಾಧಕಿಯ ನೆರಳು, ಬದುಕು, ಆಕೆಯ ಹಾರೈಕೆ ನನ್ನಂತವನಿಗೆ ಮನದುಂಬಿದಾಗ ಏನಾದರೂ ಸಾಧಿಸಿಬೇಕೆಂದು ಕೊಂಡೇ‌‌‌.. ಅದು ಇಲ್ಲಿಯವರೆಗೂ ಸಾಧ್ಯವಾಗಲಿಲ್ಲ ಆದರೆ ಸಾಧಿಸುವ ಹಸಿವನ್ನು ಬೆಟ್ಟದಷ್ಟು ಕಟ್ಟಿಕೊಂಡು ಸಾಗುತ್ತಿದ್ದೇನೆ.

ಬರಹಗಾರರಿಗೆ ಸ್ಪೂರ್ತಿದಾಯಕವಾದ ಬದುಕುಗಳು ಮಾದರಿಯಾಗಿರಬೇಕು, ಗೀತಾ ತಕ್ಕೆವಾರಿಯ ಬದುಕು ಕೊನೆಯಾಗಿ ಬಿಡುತಿತ್ತು, ಆದರೆ ಅವರು ಹಿಡಿದ ಮನೋದೃಡತೆಯ ಬರಹ ಮತ್ತೇ ಬದುಕಿಸಿದೆ, ಮರುಜೀವ ನೀಡಿದೆ, ಈ ಲೋಕದಲ್ಲಿರುವವರು ನಿನ್ನಿಂದ ದೂರ ಸರಿದರೂ ಲೋಕವನ್ನೆ ಗೆಲ್ಲುವ ಬರಹ ಮಾತ್ರ ಎಂದಿಗೂ ಕೈ ಬಿಡಲಿಲ್ಲ ಇದೀಗ ಗೀತಾ ತಕ್ಕೆವಾರಿ ಇಂತಿಷ್ಟು ಬರಹದ ಮೇರು ಹಾದಿಯಲ್ಲಿದ್ದರೂ ಆಕೆಗೆ ಯಾವ ವೇದಿಕೆಗಳು ಗುರುತಿಸಲಿಲ್ಲ, ಆಕೆ ವೇದಿಕೆ, ಸಂಘಟನೆಗಳ ಬಳಿ ಕಾಣಿಸಿಕೊಳ್ಳಲು ಚಿತ್ತವರಿಸುವುದು ಇಲ್ಲ, ತಾನಾಯಿತು, ತನ್ನ ಬರಹವಾಯಿತು ಎಂದಿರುವ ಆಕೆಯ ಬದುಕು ನಾಡಿಗೆ ಮತ್ತಷ್ಟು ಶ್ರೇಷ್ಟತೆಯನ್ನು ತಂದುಕೊಡುತ್ತದೆ ಎಂದು ಅಂಬೋಣಿಸುತ್ತಾ ಗೀತಾ ತಕ್ಕವಾರಿಯ ಕುರಿತಾಗಿ ಒಂದಿಷ್ಟು ಪರಿಚಯಿಸಿದ್ದೇನೆ.

Leave a Reply

Your email address will not be published. Required fields are marked *

error: Content is protected !!