I ಸಹಕಾರ ಕ್ಷೇತ್ರದ ಆಸಕ್ತಿ ರೂಢಿಸಿಕೊಳ್ಳಿ I ಜಿಲ್ಲಾಉಪವಿಭಾಗ ಸಹಾಯಕ ನಿಬಂಧಕರಾದ ಟಿ.ವಿ.ಶ್ರೀನಿವಾಸ್ I
I ಸಹಕಾರ ಕ್ಷೇತ್ರದ ಆಸಕ್ತಿ ರೂಢಿಸಿಕೊಳ್ಳಿ I ಜಿಲ್ಲಾಉಪವಿಭಾಗ ಸಹಾಯಕ ನಿಬಂಧಕರಾದ ಟಿ.ವಿ.ಶ್ರೀನಿವಾಸ್ I
ಶಿವಮೊಗ್ಗ: ವಿದ್ಯಾರ್ಥಿಗಳು ಪಠ್ಯದ ಜೊತೆ ಸಹಕಾರದ ಕುರಿತು ಆಸಕ್ತಿ ವಹಿಸಿ ಹೆಚ್ಚು ಆಳವಾಗಿ ಅಧ್ಯಯನ ಮಾಡಿದಾಗ, ಸಹಕಾರ ಚಳುವಳಿ ಕುರಿತು, ತತ್ವಗಳ ಕುರಿತು ಅರಿತಾಗ ಸಹಕಾರ ಕ್ಷೇತ್ರದ ಬಗ್ಗೆ ಬೆಳವಣಿಗೆಯ ಬಗ್ಗೆ ಹೆಚ್ಚು ಒಲವು ಮೂಡುತ್ತದೆ ಎಂದು ಸಹಕಾರ ಸಂಘಗಳ ಜಿಲ್ಲಾಉಪವಿಭಾಗ ಸಹಾಯಕ ನಿಬಂಧಕರಾದ ಟಿ.ವಿ.ಶ್ರೀನಿವಾಸ್ ಹೇಳಿದರು.
ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಜಿಲ್ಲಾ ಶಾಖೆ, ಸಹಕಾರ ಇಲಾಖೆ ವತಿಯಿಂದ ನಗರದ ಡಿ.ವಿ.ಎಸ್.ಕಾಲೇಜು ಆವರಣದಲ್ಲಿ ಬುಧವಾರ ಆಯೋಜಿಸಿದ್ದ 2025-2026ನೇ ಸಾಲಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದಲ್ಲಿ ಪ್ರಬಂಧ ಸ್ಪರ್ಧೆಯನ್ನು ಹಾಗೂ ಜಿಲ್ಲೆಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಮಾತನಾಡಿದರು.
ಸಹಕಾರ ಕ್ಷೇತ್ರದ ಬಲ ಸಂವರ್ಧನೆಗೆ ಪೂರಕವಾದಂತಹ ಮಾಹಿತಿಯನ್ನು ಪಡೆದು ಸಹಕಾರ ಕ್ಷೇತ್ರದಲ್ಲಿ ಯುವ ಪೀಳಿಗೆ ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ತಿಳಿಸಿದರು. ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರಾಚಾರ್ಯ ಡಾ. ಎಂ.ವಿಶ್ವೇಶ್ವರಯ್ಯ ಮಾತನಾಡಿ,’ ಸಹಕಾರ ಕ್ಷೇತ್ರ ಸಾಗರವಿದ್ದಂತೆ ಎಷ್ಟು ತಿಳಿದುಕೊಂಡರು ಇನ್ನಷ್ಟು ತಿಳಿದುಕೊಳ್ಳುವ ವಿಷಯಗಳು ಹೆಚ್ಚು ಇರುತ್ತದೆ ಈ ಹಿನ್ನಲೆಯಲ್ಲಿ ವಿದ್ಯಾರ್ಥಿ ದಿಸೆಯಿಂದ ಸಹಕಾರ ಕ್ಷೇತ್ರದ ಬಗ್ಗೆ ಒಲವು ಮೂಡಿಸಿಕೊಂಡು ಸಹಕಾರ ಕ್ಷೇತ್ರ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಉಪನ್ಯಾಸಕರಾದ ಕೆ.ಸೌಮ್ಯ ಮಾತನಾಡಿ,’ಯಾವುದೇ ಒಂದು ವಿಷಯವನ್ನು ಸಮಗ್ರವಾಗಿ ಅಭ್ಯಾಸ ಮಾಡಿ ತಿಳಿದಾಗ ಮಾತ್ರ ಹೆಚ್ಚಿನ ಜ್ಞಾನ ಗಳಿಸಲು ಸಾಧ್ಯ ಮತ್ತು ಇಂತಹ ಚರ್ಚಾ ಸ್ಪರ್ಧೆಯಲ್ಲಿ ಆಸಕ್ತಿವಹಿಸಿ ಭಾಗವಹಿಸಿ ಇನ್ನು ಹೆಚ್ಚಿನ ಜ್ಞಾನ ತಿಳಿಯುವಂತಾಗಲಿ ಎಂದು ಸಲಹೆ ನೀಡಿದರು.
ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರಾದ ನರಸಿಂಹ ಸಿ.ಗಂಧದಮನೆ ಮಾತನಾಡಿ,’ಸಹಕಾರ ತತ್ವ ಮತ್ತು ಸಿದ್ಧಾಂತಗಳ ನಂಬಿಕೆ ಇಟ್ಟು ಕೆಲಸ ಮಾಡಿದರು ಪ್ರತಿಯೊಂದು ಕೆಲಸಗಳಲ್ಲಿಯು ಜಯವನ್ನು ಸಾಧಿಸಲು ಸಾಧ್ಯ ಅದರಂತೆ ಸಹಕಾರಿ ಕಾಯಿದೆ. ಕಾನೂನು ಅರಿತು ಕೆಲಸ ಮಾಡಿದರು ಸಹಕಾರ ಸಂಸ್ಥೆಗಳು ಆರೋಗ್ಯಪೂರ್ಣವಾಗಿ ಬೆಳೆಯಲು ಸಾಧ್ಯಾಯಿಲ್ಲದೆ ಸಹಕಾರ ಸಂಘಗಳ ಮೂಲಕ ದೇಶದ ಅಭಿವೃದ್ಧಿ ಸಾಧ್ಯ ಹಾಗೂ ಸಾಮಾಜದ ಕೊನೆಯ ವ್ಯಕ್ತಿಯನ್ನು ಸಮಾಜಮುಖಿಯನ್ನಾಗಿ ಮಾಡಲು ಸಹಕಾರ ಕ್ಷೇತ್ರ ಹಗಲಿರುಳು ಶ್ರಮಿಸುತ್ತಿದೆ ಆದುದರಿಂದ ಯುವನ್ನು ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವಂತಾಗಲಿ ಸಹಕಾರ ಕ್ಷೇತ್ರವನ್ನು ಇನ್ನೂ ಹೆಚ್ಚು ಬಲಿಷ್ಟಗೊಳಿಸುವಂತಾಗಲಿ ಶೋಷಿತ, ಅಬಲವರ್ಗದವರ, ನಿರಾಶ್ರಿತರ ಮಹಿಳೆಯರಿಗೆ ಸಹಕಾರ ಕ್ಷೇತ್ರ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರುಗಳ ಕಣ್ಣಿರುವರೆಸುವ ಕಾರ್ಯವನ್ನು ಸಹಕಾರ ಕ್ಷೇತ್ರ ಮಾಡುತ್ತಿದೆ ಎಲ್ಲರೂ ಕೈಜೋಡಿಸಿ ಮುನ್ನಡೆದರೆ ಇನ್ನು ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಸದರಿ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಶ್ರೀ ಟಿ.ವಿ.ಶ್ರೀನಿವಾಸ, ಸಹಕಾರ ಸಂಘಗಳ ಸಹಾಯಕ ನಿಬಂಧಕರು. ಶಿವಮೊಗ್ಗ ಉಪವಿಭಾಗ, ಶಿವಮೊಗ್ಗ ಶ್ರೀಮತಿ ಕೆ.ಸೌಮ್ಯ, ಉಪನ್ಯಾಸಕರು, ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಶಿವಮೊಗ್ಗ, ಶ್ರೀಮತಿ ರಶ್ಮಿ ಎಂ.. ಉಪನ್ಯಾಸಕರು, ಡಿ.ವಿ.ಎಸ್.ಕಾಲೇಜು, ವಿನೋಬನಗರ, ಶಿವಮೊಗ್ಗ ಇವರುಗಳು ಭಾಗವಹಿಸಿ ಚರ್ಚಾಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.