September 22, 2026

I ಡಿಸೆಂಬರ್ ಎಂಡಿಂಗ್ I ಶಿವಮೊಗ್ಗದ ರೌಡಿಗಳಿಗೆ ಡೇಂಜರ್ ಜೋನ್ I

0
Lekana 15

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಡಿಸೆಂಬರ್ ಎಂಡಿಂಗ್ I ಶಿವಮೊಗ್ಗದ ರೌಡಿಗಳಿಗೆ ಡೇಂಜರ್ ಜೋನ್ I

ಮಲೆನಾಡಿನ ನಗರಿ ಚಳುವಳಿಗಳು ಕಟ್ಟಿಕೊಂಡಿತ್ತು, ರಾಜ್ಯಕ್ಕೆ ಇಲ್ಲಿನ ಚಳುವಳಿಗಳು, ಹೋರಾಟಗಳಿಗೆ ಮನ್ನಣೆಯಿತ್ತು, ಹಾಗೆಯೇ ಸಾಂಸ್ಕೃತಿಕ, ಸಾಹಿತ್ಯದ ಹೊನಲಿನ ಹೊಗಳಿಕೆಯಿತ್ತು, ಇಂತಹ ಶ್ಲಾಘನೀಯ ಸಾಂಗತ್ಯಗಳು ಬೆಸೆದುಕೊಂಡ ಕಾಲಘಟ್ಟಗಳಿಗೆ ಮೊದಲು ಸುಡುಬೆಂಕಿ ಇಟ್ಟಿದ್ದು ವೈಟ್ ಕಾಲರ್‌ನ ಕರಿನೆರಳು ಎಂಬುದು ಅದಷ್ಟೆ ಸತ್ಯಗಥೆಗಳು ಸುತ್ತಿಕೊಂಡಿದೆ, ಇಂತಹದೊಂದು ನಗರಿಯ ವೈಭವತೆ ಬರ ಬರುತ್ತ ಸೊರಗಿ, ಮಚ್ಚು,ಕಂದಲಿಗಳಿಗೆ ನೆತ್ತರು ಲೇಪಿಸುವ ಯುವ ಮನಸುಗಳು ಇಂದು ಬದಲಗೊಂಡಿದೆ, ಇನ್ನೂ ಸುಮ್ಮನೇ ಕೂತರೇ ತಾವು ಮುಗಿದೇ ಹೋಗುತ್ತೇವೆ ಎನ್ನುವುದರ ನಿಖರತೆಯಲ್ಲಿ ಮತ್ತೊಂದಿಷ್ಟು ಗುಂಪುಗಳ ಸಿಂಡಿಕೇಟ್‌ಗಳು ತಲೆಎತ್ತಿದೆ, ಆದರೂ ಹೋರಾಟಗಳ ವ್ಯಾಪಕತೆಯ ಭರಾಟೆಗಳು ದೀಪದ ಬುಡದ ಬೆಳಕಿನಂತಿದ್ದರು ಒಂದಷ್ಟು ಬೆಳಕಿನ ದನಿಯಂತೆ ಪ್ರತಿಧ್ವನಿಸುತ್ತಲೇ ಇದೆ,

ಇಂತಹದೊಂದು ಸೂಕ್ಷ್ಮತೆಯನ್ನು ಗ್ರಹಿಸುವ ಹಾಗೂ ಜನಪ್ರತಿನಿಧಿಗಳಾಗಲು ತರಾತುರಿಯಲ್ಲಿ ದರ್ಶಿಸಿಕೊಳ್ಳುವ ಮಂದಿಗಳ ಕುರಿತಾಗಿ ತರ್ಕಿಸಿಕೊಳ್ಳುವ ಜರೂರಿಯಿದೆ, ಈ ತರ್ಕ, ತುಲನೆಗಳು ನಾಗರೀಕ ವಲಯ ಮಾಡದೇ ಹೋದರೆ ಖಂಡಿತವಾಗಿಯು ಮಲೆನಾಡಿನ ಹೆಬ್ಬಾಗಿಲಿನ ನಗರಿಗೆ ಬಳಿಯುತ್ತಿರುವ ಬಿಸಿರಕ್ತದ ಬಣ್ಣಕ್ಕೆ ಕೊನೆಯಿಲ್ಲದಂತಾಗುತ್ತದೆ, ಹೌದು ಈ ಟಿಪ್ಪಣಿಯೊಂದಿಗೆ ಶಿವಮೊಗ್ಗದಲ್ಲಿ ಡಿಸೆಂಬರ್ ಎಂಡಿಂಗ್ ರೌಡಿಗಳಿಗೆ ಡೇಂಜರ್ ಜೋನ್ ಎನ್ನುವ ತಲೆಬರಹವನ್ನು ವಿಸ್ತೃತಗೊಳಿಸುತ್ತೇನೆ,

ಹೌದು ಹೀಗೊಂದು ಆತಂಕದ ವಾತಾವರಣ, ಹೊಸ ವರುಷದ ಹಿಂದಿನ ದಿನಮಾನಗಳು ಶಿವಮೊಗ್ಗದ ರೌಡಿ ಎಲಿಮೆಂಟ್‌ಗಳಿಗೆ ಎಂಡಿಂಗ್ ಡೇ, ಕ್ಷಣಗಳು ಎಲ್ಲಿ ಎದುರುಗೊಳ್ಳುವುದೋ..?! ಎನ್ನುವ ಭೂಗತ ಲೆಕ್ಕಚಾರಗಳಲ್ಲಿಯೇ ಅಮರಿಕೊಳ್ಳುವ ಹೊತ್ತು ಇದಾಗಿದೆ, ಇದಕ್ಕೆ ಸಾಕಷ್ಟು ಕಾರಣಗಳು ಎಡತಾಕುತ್ತವೆ, ಈಗಾಗಲೇ ಶಿವಮೊಗ್ಗದಲ್ಲಿ ಶುರುವಾಗಿರುವ ಸಿಂಡಿಕೇಟ್‌ಗಳು ಇದಕ್ಕಾಗಿಯೇ ಸ್ಕೆಚ್ ರೂಪಿಸಿಕೊಂಡು ಮತ್ತೊಂದು ಕ್ರೌರ್ಯಕ್ಕೆ ಕಾದು ಕುಳಿತ ಬಕಪಕ್ಷಿಯಂತೆ ಹಾಸು ಹೊಕ್ಕು ನಿಂದಿವೆ ಎನ್ನುವ ಮಾತುಗಳು ಅಕ್ಷರಶಃ ಈ ಫೀಲ್ಡ್‌ನಲ್ಲಿ ಇಂದಿಗೆ ಸಾಮಾನ್ಯವಾಗಿದೆ, ಇದೀಗಲೂ ೨೦೨೫ರ ಸಾಲು ಮುಗಿಸುವ ಹೊತ್ತಿನಲ್ಲಿ ಎಲ್ಲಿ ತಮ್ಮಗಳ ಜೀವದ ಅಧ್ಯಾಯವೇ ಮುಗಿಸಿ ಬಿಡುತ್ತಾರೋ ಎನ್ನುವ ಚರ್ಚೆಗಳು ಅವರವರೇ ಮಾತಾಡಿಕೊಂಡು ಹುಷಾರು, ಹುಷಾರು, ಪಕ್ಕಾ ವಿರೋದವಿರುವ ಸಿಂಡಿಕೇಟ್ ಗುಂಪಿನ ಮೇಲೆ ನಿಗಾ ಇರಲಿ ಎಂದು ಪರಸ್ಪರ ಕೇರ್ ಬಯಸಿಕೊಳ್ಳುವ ಹಾಟ್ ಬಾತ್‌ನಲ್ಲಿ ಜಳಕ ಮಾಡಿಕೊಳ್ಳುವ ಪರಿ ಹೇಳತೀರದು, ಅಷ್ಟಕ್ಕೂ ಈ ಗುಮಾನಿಗಳು ಹೆಚ್ಚಾಗುವುದಕ್ಕೆ, ಆತಂಕಗಳು ಮಡುಗಟ್ಟುವುದಕ್ಕೆ, ಈ ಚರ್ಚೆಗಳು ನಿಖರಗೊಳಿಸಿದ ಅಸಲಿ ಕಾರಣಗಳೇನು ಗೊತ್ತೇ..?

ಅಂದು ಡಿಸೆಂಬರ್, ೩೧.೨೦೧೨ರ ಸಂಜೆಗಳಿದು ರಾತ್ರಿ ಮಡುಗಟ್ಟುವ ೮ ಗಂಟೆಯ ಹೊತ್ತಿಗೆ, ಹೊಸವರುಷದ ಸಂಭ್ರಮಾಚರಣೆಯ ನೇವದಲ್ಲಿ ಸಮಾ ಕುಡಿದು ಸವಳಂಗ ರಸ್ತೆಯಲ್ಲಿರುವ ವಂದನಾ ಬೇಕರಿಯಲ್ಲಿ ಸ್ನೇಹಿತರೊಬ್ಬರು ಕೊಟ್ಟಿದ್ದ ನಾನೂರು ರೂಪಾಯಿ ಕರೆನ್ಸಿಯಲ್ಲಿ ಕೇಕ್ ತೆಗೆದುಕೊಂಡು ಮನೆಯ ಹಾದಿ ಹಿಡಿದಿದ್ದ ಮೋಹನ ಯಾನೇ ನವುಲೇ ಮೋಹನ ಒಂದಿಷ್ಟು ಸಮಯದಲ್ಲಿಯೇ ಬೀಕರವಾಗಿ ಕೊಲೆಯಗಿ ಬೀದಿ ಹೆಣವಾಗಿ ಬಿಡುತ್ತೆನೆನ್ನುವ ಕೊಂಚ ಗುಮಾನಿಯಿಲ್ಲದೆ ನವುಲೆ ಏರಿಯಾದತ್ತ ತೂರಾಡಿಕೊಂಡೆ ತನ್ನ ಸಹಚರನೊಂದಿಗೆ ಬೈಕ್ನಲ್ಲಿ ಕುಳಿತು ಧಾವಿಸಿ ಬಂದಿದ್ದಾನೆ.

ಆ ಹೊತ್ತಿಗಾಗಲೆ ಜವರಾಯನು ಕೂಡ ನವುಲೆ ಚಾನೆಲ್ ಬಳಿ ಕಾದು ಕುಳಿತಿರಬೇಕು. ಪೂರ್ವ ಸ್ಕೆಚ್‌ನಂತೆಯೇ ನವುಲೇ ಮೋಹನನ ನೆತ್ತರು ಬಸಿಯಲು ನಾಲ್ಕು ಜನ ಹುಡುಗರ ಗುಂಪೊಂದು ಮಾರಕಾಸ್ತ್ರಗಳನ್ನು ಹಿಡಿದು ಎದುರಾಗಿದಷ್ಟೆ. ಬೈಕ್ ಓಡಿಸುತ್ತಿದ್ದವ ಬೈಕ್ ಬಿಟ್ಟು ಒಂದೆಡೆ ಪೇರಿ ಕಿತ್ತರೆ, ಅವರನ್ನು ಬೆನ್ನಟ್ಟಿಕೊಂಡು ಹೋದ ಒಂದಿಬ್ಬರು ವಾಪಾಸ್ಸಾಗುವುದರೊಳಗೆ, ನವುಲೇ ಮೋಹನನ ಮೇಲೆ ಅಟ್ಯಾಕ್ ಮಾಡಿದ ಮತ್ತಿಬ್ಬರು ಒಂದೆರಡು ಭಾರಿ ಮಚ್ಚು ಬೀಸಿದ್ದಾರೆ. ಆ ಬೀಸುವ ರಭಸಕ್ಕೆ ಓಡಿ ಹೋಗುವ ಅವಸರದಲ್ಲಿದ್ದ ನವುಲೆ ಮೋಹನನ ಬುಜಕ್ಕೆ ತಾಗಿ ಒಮ್ಮೆಲೆ ರಕ್ತ ಚಿಮ್ಮಿದೆ. ಆದರೂ ನವುಲೆ ಮೋಹನ ಗಟ್ಟಿ ಮನಸ್ಸು ಮಾಡಿ ಚಾನೆಲ್ ಇಕ್ಕೆಲದ ರಸ್ತೆಯ ಬದಿಯಲ್ಲಿದ್ದ ಕುರಿ ಕೊಟ್ಟಿಗೆಯ ತೆಂಗಿನ ಮರದ ರಟ್ಟೆಯ ದಿಂಡನ್ನು ಹಿಡಿದು ಬೀಸಿದ್ದಾನೆ.

ಆದರೆ ಈ ಮೊದಲೇ ತನ್ನ ಬುಜಕ್ಕೆ ಮಚ್ಚಿನೇಟು ಬಿದ್ದು ತನ್ನ ಸ್ವಾದೀನ ಕಳೆದುಕೊಂಡಿದ್ದ ನವುಲೆ ಮೋಹನ ಇನ್ನೇನು ಬೀಕರವಾಗಿ ಹತ್ಯೆ ಮಾಡಿ ಬಿಡುತ್ತಾರೆ ಎಂದು ಕೊಳ್ಳುವಷ್ಟರೊಳಗೆ, ನಾಲ್ಕು ಹುಡುಗರ ಅಮಲು ನೆತ್ತಿಗೇರಿದ್ದರಿಂದ ಅವರ ಬಳಿಯಿದ್ದ ಲಾಂಗ್‌ಗಳು ನವುಲೇ ಮೋಹನನ ತಲೆಯನ್ನು ಸೀಳಿ ಹಾಕಿದೆ. ಹೀಗೆ ಮಾರಕಾಸ್ತ್ರಗಳಿಂದ ಮನಸ್ಸೊ ಇಚ್ಚೆ ಕೊಚ್ಚಿ ಹಾಕಿದ ಹಂತಕರು ಇನ್ನೇನು ನವುಲೆ ಮೋಹನ ಬದುಕುಳಿದಿಲ್ಲವೆಂದು ದೃಡಪಟ್ಟಿದ ಮೇಲೆಯೇ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಏಕೆಂದರೆ ಆತ ಹೇಗೋ ಬದುಕುಳಿದರೆ ಹಲ್ಲೆ ಮಾಡಿದವರು ಊರು ಬಿಟ್ಟು ಅಡಗಿ ಕುಳಿತುಕೊಳ್ಳಬೇಕು. ಅಲ್ಲದೆ ನವುಲೆ ಮೋಹನನ ಅಟ್ಯಾಕ್‌ಗೆ ಜೀವ ಕಳೆದುಕೊಂಡು ಸಮಾದಿಯಾಗಬೇಕಿತ್ತು. ಇದನ್ನೇ ಅರಿತಿದ್ದರಿಂದ ನಾಲ್ಕು ಹುಡುಗರ ಗುಂಪು ಲೆಕ್ಕಮಾಡಿ ಕೊಟ್ಟ ಸುಮಾರು ೧೨ ಹೊಡೆತಗಳಿಗೂ ಅಧಿಕ ಹೊಡೆತಗಳಿಂದ ಮೋಹನನ ತಲೆಯನ್ನು ಸೀಳಿ ನಜ್ಜುಗುಜ್ಜಾಗಿಸಿ ಪರಾರಿಯಾಗಿದ್ದರು,

ಹೀಗೆ ಬೀಕರವಾಗಿ ಹತ್ಯೆಯಾದ ರೌಡಿ ನವುಲೆ ಮೋಹನನ ಮೃತದೇಹ ರಕ್ತದ ಮಡುವಿನಲ್ಲಿ ಅನಾಥವಾಗಿ ಬಿದಿಯಲ್ಲಿ ಬಿದ್ದಿತ್ತು. ಕೊಲೆಗೈದ ಹಂತಕರು ಪರಾರಿಯಾಗಿದ್ದರು. ಈ ಸುದ್ದಿ ಉರೆಲ್ಲಾ ಹರಡಿ ನವುಲೆ ಚಾನೆಲ್ ಬಳಿ ದೌಡಾಯಿಸಿ ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ರೌಡಿ ಎಲಿಮೆಂಟ್ ನವುಲೆ ಮೋಹನನ ಹೀನಾಯ ಸ್ಥಿತಿಯನ್ನು ನೋಡಿ ಒಮ್ಮೆಲೆ ಅವಕ್ಕಾದ್ರು. ರೌಡಿಗಳ ಬದುಕು ಹೀಗೇನೇ..? ಎಂದು ಮಾತನಾಡಿಕೊಳ್ಳುತ್ತಿದ್ದರು. ಅಲ್ಲಿಗೆ ರಾತ್ರಿ ಒಂಬತ್ತರ ಸಮಯ. ಬಿದಿನಾಯಿಗಳು ವಾಸನೆಗೆ ನವುಲೆ ಮೋಹನನ ಶವವನ್ನು ಮೂಸುವಂತಾಗಿತ್ತು. ಆದಾಗ ತುಸು ಹೊತ್ತಿನಲ್ಲಿ ತಿಳಿದವರಂತೆ ಒಮ್ಮೆಲೆ ರಾತ್ರಿಗಸ್ತಿನ ಪೊಲೀಸ್ ಸಿಬ್ಬಂದಿಗಳು ಅಲ್ಲಿಗೆ ಬಂದ ಹತ್ತೆ ನಿಮಿಷದಲ್ಲಿ ಡಿವೈಎಸ್ಪಿ ರಾಮಾನಾಯ್ಕ ಹಾಗೂ ಉಳಿದಂತೆ ಎಲ್ಲಾ ಠಾಣಾಧಿಕಾರಿಗಳು ಕ್ರೈಂ ಸಿಬ್ಬಂದಿಗಳು ಬಂದಿದ್ದರು, ಈ ಹತ್ಯೆ ಹೇಗಾಯ್ತು..?! ಯಾವ ಸಮಯದಲ್ಲಾಯ್ತು ಎಂದು ಎದುರಾಗಿದ್ದ ಮನೆಯಾಕೆಯನ್ನು ಪ್ರಶ್ನಿಸಿದ್ದರು, ಅಷ್ಟರೊಳಗೆ ನೂರಾರು ಜನರು ಕಿಕ್ಕಿರಿದಿದ್ದರು, ಶ್ವಾನದಳದ ತನಿಖೆ ಆರಂಭವಾಗಿತ್ತು, ಪೊಲೀಸರು ಸ್ಥಳ ಮಹಜರ್ ನಡೆಸಿ ರೌಡಿ ನವುಲೆ ಮೋಹನನ ಶವವನ್ನು ಶವಗಾರಕ್ಕೆ ಆಂಬುಲೆನ್ಸ್‌ನಲ್ಲಿ ಹೊತ್ತಾಕಿ ಕಳುಹಿಸಿದ್ದರು,

ಇದಾಗಿ ಮತ್ತೊಂದು ಡಿಸೆಂಬರ್ ನಲ್ಲಿ ನಡೆದಿದ್ದು ಹ್ಯಾಪಿ ನ್ಯೂ ಇಯರ್ ಬ್ಯಾಕ್ ಡೇಸ್, ಕಥಾನಕದ ಘಟನೆ, ಮುಂದೆ ಇದೇ ಘಟನೆಯ ದಿನಮಾನ ಭೂಗತ ವಲಯದಲ್ಲಿ ಮೊಹರೊತ್ತಿ ಬಿಟ್ಟಿದೆ, ಈ ಘಟನೆಯ ನಂತರ ಇದೇ ಡಿಸೆಂಬರ್‌ನಲ್ಲಿ ನಡೆದಿದ್ದು ಬಸವನಗುಡಿನಲ್ಲಿ ನಟೋರಿಯಸ್ ಲ್ಯಾಂಡ್ ಲಿಟಿಗೇಟರ್ ನವುಲೆ ಆನಂದನ ಸ್ಕೆಚ್‌ಗೆ ಬ್ಲೂ ಕ್ಯಾಸೆಟ್ ವ್ಯಾಪಾರಿ ರಾಘು ಶೆಟ್ಟಿ ಮರ್ಡರ್ ಪ್ರಕರಣ, ಈ ಘಟನೆ ಘಟಿಸಿದ ಬಳಿಕ ಶಿವಮೊಗ್ಗದಲ್ಲಿ ಮಾತು ಎದ್ದಿತ್ತು, ಡಿಸೆಂಬರ್ ತಿಂಗಳು ಹುಷಾರಾಗಿ ಇರಬೇಕು, ಹ್ಯಾಪಿ ನ್ಯೂ ಇಯರ್ ತಾವೇ ಎಂಡ್ ಆಗಬಹುದು ಎನ್ನುವ ಗುಮಾನಿಗೆ ಗ್ರಾಸವಾಗಲು ಮೊಹರೊತ್ತಿ ಬಿಟ್ಟಿತ್ತು, ಇನ್ನೇನು ಅದಾಗ ನಡೆದಿದ್ದು  ಡಿಸೆಂಬರ್ ತಿಂಗಳು ಆತಂಕವಿಲ್ಲ ಎಂದುಕೊಂಡ ಎಲಿಮೆಂಟ್ ಸಿಂಡಿಕೇಟ್‌ಗಳ ಇರಾದೆ ಹುಸಿಗೊಳಿಸುವ ಬೀಕರ ಹತ್ಯೆ ೨೦೧೮ರ ಡಿಸೆಂಬರ್ ನಲ್ಲಿ ಮತ್ತೊಂದು ಮರ್ಡರ್ ನಡೆದೇ ಹೋಗಿತ್ತು, ಶಿವಮೊಗ್ಗದ ಹುಡುಗರನ್ನು ಬೆಂಗಳೂರಿನ ಪಾತಕ ಲೋಕಕ್ಕೆ ಪರಿಚಯಿಸುತ್ತಿದ್ದ ಗುತ್ತಿಗೆ ರೌಡಿ ಯಾನೇ ಬಂಕ್ ಬಾಲು ಅಂದು ಬಿಹೆಚ್ ರಸ್ತೆಯ ಹಾತಿನಗರದ ಮುಂಭಾಗದ ಶುಗರ್ ಫ್ಯಾಕ್ಟರಿ ಜಮೀನಿನಲ್ಲಿ ಅನಾಥ ಹೆಣವಾದ ಕಥೆ ಅಷ್ಟೆ ರೋಚಕವಾಗಿದೆ,

ಅಷ್ಟಕ್ಕೂ ಬಂಕ್ ಬಾಲು ಕೊನೆಯಾಗಬೇಕಾದ ಅತೀ ಜರೂರತ್ತು ಅಂದಿನ ಓಸಿ ಮಾಫಿಯಾಕ್ಕೆ ಇತ್ತು, ಅಲ್ಲದೆ ಖಾಕಿ ಕೂಡ ಸುಫಾರಿ ಪಡೆದಂತೆ ಮುಗಿಬಿದ್ದಿತ್ತು, ಏನೇ ಆಗಲಿ ಶಿವಮೊಗ್ಗದಲ್ಲಿ ಬಂಕ್ ಬಾಲು ಉಳಿಸಬಾರದು ಇಲ್ಲದಿದ್ದೊಡೆ ಇಲ್ಲಿನ ಪಡ್ಡೆ-ಪೋಕರಿ ಹುಡುಗರಿಗೆ ಬೆಂಗಳೂರಿನ ಪಾತಕ ಲೋಕವನ್ನು ಪರಿಚಯಿಸಿ ಮತ್ತೊಂದು ಭೂಗತ ಪಹರೆಯನ್ನು ಶಿವಮೊಗ್ಗಕ್ಕೆ ಹಾಕಿ ಬಿಡುತ್ತಿರುವುದನ್ನು ತಪ್ಪಿಸಬೇಕಿತ್ತು, ವೈಟ್ ಕಾಲರ್ ಮನಸ್ಥಿತಿನೂ ಹಾಗೆಯೇ ಇತ್ತು, ಇಲ್ಲಿ ಅಸೆಂಬ್ಲಿ ಗೆಲ್ಲಬೇಕು ಹಾಗೂ ಬೆಂಗಳೂರಿನ ಯಾವುದೇ ಭೂಗತ ಲೋಕಕ್ಕೆ ಪರಿಚಿತನಾಗುವವರನ್ನು ಮುಗಿಸದಿದ್ದರೆ ತಾನು ಇಲ್ಲಿ ನೆಮ್ಮದಿಯಾಗಿರಲು ಸಾಧ್ಯವಿಲ್ಲ ಅಂದುಕೊಂಡಿದ್ದ, ಈ ಆಸಾಮಿ ಜೀವನ ಪೂರ್ತಿ ಎಡವಟ್ಟು ಮಾಡಿಕೊಂಡಿಯೇ ಬಂದಿದ್ದು ಇತಿಹಾಸದ ಪುಟಗಳು ಸಗಟುಗಳಾಗಿದೆ, ಈ ತಪ್ಪು ಗ್ರಹಿಕೆಗಳನ್ನು ಗ್ರಹಿಸಿಕೊಳ್ಳದ ಬಂಕ್ ಬಾಲು ಸಹಚರರು ತಮಗೆ ಸಂಬಂಧವೇ ಇಲ್ಲದ ಹಾಗೂ ವೈಷಮ್ಯವೂ ಇಲ್ಲದಿದ್ದ ಹಂದಿ ಅಣ್ಣಿ ಮರ್ಡರ್‌ಗೆ ಎತ್ತಿ ಕಟ್ಟಿರುವುದು ಬಹುಷ್ಯಃ ಅವರಿಗೆ ಇಂದಿಗೂ ಗೊತ್ತು ಮಾಡಿಕೊಳ್ಳದಿದ್ದರೆ ಮುಂದೊಂದು ದಿನಮಾನ ಅಪಾಯ ತಪ್ಪಿದ್ದಲ್ಲವಾಗಿದೆ, ಇಂತಹದೊಂದು ಸೂಕ್ಷ್ಮ ಸಂಗತಿಗಳನ್ನು ಈಗಾಗಲೇ ಬರೆಯುತ್ತಿರುವ ಶಿವಮೊಗ್ಗ ಅಂಡರ್ ವರ್ಲ್ಡ್ನಲ್ಲಿ ವಿವರಿಸುವೆ.

ಏನೀದು ಡಿಸೆಂಬರ್ ಎನ್ನುವ ಮಾಯೇ, ಕರಿನೆರಳಿನ ಛಾಯೇ ಅಂದುಕೊಂಡ ಮನಸ್ಥಿತಿಗಳಿಗೆ ಖಾತ್ರಿ ಆಗಿ ಹೋಗಿದೆ, ಇನ್ನೂ ಈ ತಿಂಗಳ ದಿನಮಾನ ಎಚ್ಚೆತ್ತುಕೊಂಡಿಯೇ ಇರಬೇಕು ಎನ್ನುವ ತೀರ್ಮಾನಕ್ಕೆ ಬಂದಿರುವ ಡಿಸೆಂಬರ್ ನಲ್ಲಿ ಯಾರ ಹೆಣ ಬೀಳುತ್ತದೋ..? ಎನ್ನುವ ಪಕ್ಕಾ ಲೆಕ್ಕದಲ್ಲಿಯೇ ತೊಡಗಿಸಿಕೊಂಡ ಎಲಿಮೆಂಟರಿಗಳ ದುನಿಯಾಕ್ಕೆ ಮುಂದಿನ ೨೦೨೪ ಅಂದರೆ ಕಳೆದ ವರುಷ ನವೆಂಬರ್ ೩೦ ಸಂಜೆಗಳಿದು ಡಿಸೆಂಬರ್ ಮಾಹೇ ಶುರುವಾಗುವ ಹೊತ್ತಿಗೆ ನಗರದ ಬೊಮ್ಮನಕಟ್ಟೆಯಲ್ಲಿ ತಣ್ಣಗೆ ಕುಳಿತು, ತಂಪು ಪಾನೀಯ ಹೀರುತ್ತಿದ್ದ ಲ್ಯಾಂಡ್ ಲಿಟಿಗೇಟರ್ ನವುಲೆ ಆನಂದನ ಸಹಚರ ರೌಡಿ ಶೀಟರ್ ಕಪಡಾ ರಾಜೇಶ ಯಾನೇ ರಾಜೇಶ್ ಶೆಟ್ಟಿಯನ್ನು ನಡುಬೀದಿಯಲ್ಲಿ ಹಾಡುಹಗಲೇ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿದ್ದಲ್ಲದೆ ಹಿಂಬದಿ ಮುಕುಳಿ ಹರ್ದು ಹನ್ನೆರೆಡು ಮಾಡಿದ್ದ ಗುಂಪು ಮತ್ತೊಬ್ಬನನ್ನು ಹುಡುಕಿ ಹೋಗಿತ್ತು, ಅಲ್ಲೊಂದು ಹೆಣ ಬಿದ್ದಿದ್ದರೆ ಡಬಲ್ ಮರ್ಡರ್ ಪ್ರಕರಣ ಇದಾಗುತಿತ್ತು,

ಹೀಗೆ ಡಿಸೆಂಬರ್ ಮಾಹೇ ತಂದಿಟ್ಟ ಆತಂಕ, ಶಿವಮೊಗ್ಗದ ಭೂಗತ ಲೋಕವನ್ನೇ ಬೆಚ್ಚಿ ಬೀಳಿಸಿದೆ, ಇನ್ನೂ ಈ ಡಿಸೆಂಬರ್ ಮಾಹೇ ಹ್ಯಾಪಿ ನ್ಯೂ ಡೇ ಆಚರಣೆಗೆ ಸನ್ನದ್ದಗೊಳ್ಳುತ್ತಿದೆ, ಅದೇ ಆತಂಕವು ಮಡುಗಟ್ಟಿ ಈ ಮಾಗಿ ಚಳಿಗೆ ಕಂಬಳಿ ಹೊದ್ದು ಇಣುಕಿ ನೋಡುವಂತಾಗಿದೆ, ಯಾವ ಮಚ್ಚು ಬೀಸಿ ಬರುತ್ತದೋ..? ಅಥವಾ ಕಂಟ್ರಿವೈಡ್ ಗನ್‌ನಿಂದ ಬುಲೆಟ್ ತೂರಿ ಎದೆ ಸೀಳಿ ಹೋಗುತ್ತದೋ ಎನ್ನುವ ಗುಮಾನಿಗಳ ಮೇಲೆ ಗೋರಿ ಸೌಧ ಕಟ್ಟಿಕೊಳ್ಳುತ್ತಿರುವ ಸಿಂಡಿಕೇಟ್‌ಗಳ ನಡುವೆ ಈ ವರುಷ ಲ್ಯಾಂಡ್ ಲಿಟಿಗೇಶನ್ ಆಸಾಮಿಗಳ ಹೆಸರುಗಳು ಸುಳಿದು ಸರಿಯುತ್ತಿದೆ, ಅದರಲ್ಲಿ ಮುಖ್ಯವಾಗಿ ಸೋಗಾನೆಯ ಬಗರ್ ಹುಕುಂ ಜಮೀನಿಗೆ ಖಾತೆ-ಪಹಣಿ, ಅಲಿನೇಶನ್ ಮಾಡಿಕೊಂಡು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳದೆ ಕೋಟಿ ಕಂತೆಗಳ ಮುಂಗಡ ಹಣ ಪಡೆದು ಬೋಗಸ್ ಕರಾರುಗಳನ್ನು ಮಾಡಿಕೊಂಡಿರುವ ಮೋಸಸ್ ಇದೀಗ ಮುಂಗಡ ಹಣ ವಾಪಸ್ಸು ನೀಡಲಾಗದೆ, ತನ್ನ ಹೆಸರಿಗೆ ಬೋಗಸ್ ಖಾತೆ ಪಹಣಿ ವರ್ಗಾಯಿಸಿಕೊಳ್ಳಲಾಗದೆ,

     ಸುಮಾರು ಈ ಹೊತ್ತಿನ ಮಾರುಕಟ್ಟೆಯ ದರದಂತೆ ಸರಿ ಸುಮಾರು ೨೪ ಕೋಟಿ ಮೌಲ್ಯದ ಜಮೀನು ನಿವೇಶನಗಳನ್ನಾಗಿ ವಿಂಗಡಿಸಿಕೊಂಡಿರುವ ಸ್ವತ್ತಿನ ಮೇಲೆ ಹೂಡಿಕೆ ಮಾಡಿರುವ ದೂರದ ತುಮಕೂರಿನಿಂದ, ಚಿಕ್ಕಮಗಳೂರಿನಿಂದ, ಇರುವ ಕರಾರು, ಅಲ್ಲದೆ ಸ್ಥಳೀಯ ಶಿಕ್ಷಕರ ಗುಂಪು ನೀಡಿರುವ ಮೂರು ಕೋಟಿ ಹಣ ವಾಪಾಸ್ಸು ಕೊಡಿರೆಂದು ಕಳೆದ ಎರಡು ವರ್ಷಗಳಿಂದ ಅಲೆದಾಡುವುದೇ ಆಗಿದೆ, ಈ ಕುರಿತಂತೆ ವೈಟ್ ಕಾಲರ್ ಫಲಾನುಭವಿಗಳೊಬ್ಬರು ರಾಜಿ-ಸಂದಾನ ನಡೆಸುತ್ತಿದ್ದರು, ವಿಫಲವಾಗುತ್ತಿರುವುದರಿಂದ ಈ ಪ್ರಕರಣ ಯಾವ ಹ್ಯಾಪಿ ನ್ಯೂ ಇಯರ್‌ನಂತೆ ಎಂಡ್ ಆಗುತ್ತದೋ ಎನ್ನುವ ಗುಮಾನಿ ಚರ್ಚೆಗಳು ಅತೀವಗೊಂಡಿದೆ ಸಾಲದಕ್ಕೆ ಇತ್ತೀಚೆಗೆ ಈತನ ಮೇಲೆ ಹಲ್ಲೆ ನಡೆಸುವ ಸ್ಕೆಚ್ ಪ್ರಕರಣವು, ತಿರುವಿ ಹಾಕಿಕೊಳ್ಳುತ್ತಿರುವುದು ಈ ಡಿಸೆಂಬರ್ ದಿನಮಾನದ ಕಥಾನಕವಾಗಿದೆ.

Leave a Reply

Your email address will not be published. Required fields are marked *

error: Content is protected !!