I ಪೌರಕಾರ್ಮಿಕರ ವಿಶ್ರಾಂತಿ ಭವನಕ್ಕೆ ಶಾಸಕ ಚೆನ್ನಬಸಪ್ಪನವರ ಭೇಟಿ I
ಶಿವಮೊಗ್ಗ ; ಮಹಾನಗರ ಪಾಲಿಕೆಯ ವತಿಯಿಂದ ವಾರ್ಡ್ ಸಂಖ್ಯೆ 29ರಲ್ಲಿ ನಿರ್ಮಾಣಗೊಂಡಿರುವ ‘ಮಹಿಳಾ ಬಜಾರ್’ ಸಾರ್ವಜನಿಕರ ಉಪಯೋಗಕ್ಕೆ ಇನ್ನೂ ಸಮರ್ಪಕವಾಗಿ ಬಳಕೆಗೆ ಬಂದಿರದ ಹಿನ್ನೆಲೆಯಲ್ಲಿ, ಇಂದು ಸ್ಥಳಕ್ಕೆ ಪಾಲಿಕೆಯ ಆಯುಕ್ತರಾದ ಮಾಯಣ್ಣ ಗೌಡ ಅವರೊಂದಿಗೆ ಶಾಸಕ ಚೆನ್ನಬಸಪ್ಪನವರು ಭೇಟಿ ನೀಡಿ ಪರಿಶೀಲನೆ ನಡೆಸಿದರು
ಸಾರ್ವಜನಿಕ ಬಳಕೆಗೆ ಬಾರದಿರುವುದರಿಂದ ಹಾಗೂ ಕಿಡಿಗೇಡಿಗಳ ದುಶ್ಚಟಗಳಿಂದಾಗಿ ಬಜಾರ್ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿರುವ ಕುರಿತು ಸ್ಥಳದಲ್ಲೇ ಚರ್ಚೆ ನಡೆಸಿ, ಅಂಗಡಿಗಳ ಹಸ್ತಾಂತರ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ, ಮಹಿಳಾ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.
ಭೇಟಿಯ ವೇಳೆ ಪೌರಕಾರ್ಮಿಕರ ವಿಶ್ರಾಂತಿ ಭವನಕ್ಕೆ ಭೇಟಿ ನೀಡಿ, ಅದರ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಜ್ಞಾನೇಶ್ವರ್, ನಾಗರಾಜ್, ನಗರಾಧ್ಯಕ್ಷರಾದ ಮೋಹನ್ ರೆಡ್ಡಿ, ಪಾಲಿಕೆಯ ಮಾಜಿ ಸದಸ್ಯರಾದ, ಪ್ರಭಾಕರ್ ಪಿ, ಸುನಿತಾ ಅಣ್ಣಪ್ಪ, ಪ್ರಮುಖರಾದ ಕೆ ವಿ ಅಣ್ಣಪ್ಪ, ನಗರ ಪ್ರಧಾನ ಕಾರ್ಯದರ್ಶಿಗಳಾದ, ನವಲೆ ಮಂಜು ಸೇರಿದಂತೆ ವಾರ್ಡಿನ ಪದಾಧಿಕಾರಿಗಳು ಮತ್ತು ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.
