ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಸಾಮಾಜಿಕ ಜಾಲತಾಣದ ಕಿಡಿಗೇಡಿಗಳ ವಿರುದ್ದ I ವಿಜಯಲಕ್ಷ್ಮಿ ದರ್ಶನ್ ದೂರು I
ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಥಮ ವರ್ತಮಾನ ವರದಿ
ಬೆಂಗಳೂರು : ಹುಬ್ಬಳ್ಳಿಯ ಮಾರ್ಕ್ ಚಿತ್ರದ ಪ್ರಮೋಷನ್ ವೇಳೆ ನಟ ಕಿಚ್ಚ ಸುದೀಪ್‌ರವರ ಅಡ್ಡ ಗೋಡೆಯ ಮ್ಯಾಲೆ ದೀಪವಿಟ್ಟಂತೆ ಯುದ್ದದ ಹೇಳಿಕೆ ನೀಡುವ ಭರದಲ್ಲಿ ನಾವು ಯುದ್ದಕ್ಕೆ ಸಿದ್ದ ಯಾಕಂದ್ರೇ ನಾವು ಮಾತಿಗೆ ಬದ್ದ, ಒಂದು ಮಾತು ಹೇಳಿದರೆ ಇಡೀ ಕರ್ನಾಟಕಕ್ಕೆ ತಟ್ಟುತ್ತೇ ಅದೇಗೆ ತಟ್ಟುತ್ತೋ ಹಾಗೇ ತಟ್ಟುತ್ತೇ, ಇದೇ ಡಿಸೆಂಬರ್‌ನಲ್ಲಿ ಒಂದು ಚಿತ್ರ ಬಿಡುಗಡೆ ಆಗುತ್ತೆ, ಆದರೆ ಹೊರಗೆ ಮತ್ತೊಂದು ಪಡೆ ಯುದ್ದಕ್ಕೆ ರೆಡಿ ಆಗಿದೆ, ಕೆಲವೊಮ್ಮೆ ಸೈಲೆಂಟ್ ಆಗಿರೋದು ಒಳ್ಳೆದು ಕೆಟ್ಟದ್ದಕ್ಕೂ ಗೊತ್ತಿಲ್ಲ, ಕಲ್ಲಿನ ತೋರಾಟ ತಡಿಯೋತನಕ ತಡೀರಿ, ಮಾತಾಡೋ ಸಂದರ್ಭದಲ್ಲಿ ಮಾತಾಡಿ ಎಂದು ಹೇಳಿರುವ ಹೇಳಿಕೆ ಇಡೀ ರಾಜ್ಯದಲ್ಲಿ ಸ್ಟಾರ್ ವಾರ್ ಅಥವಾ ನೇರ ವಾರ್ನಿಂಗ್ ಕೊಟ್ಟಿರುವ ಬೆನ್ನಲ್ಲೆ ದೊಡ್ಡದೊಂದು ಚಿತ್ರದ ಆತಂಕ ಶುರುವಾಗಿದೆ, ಫ್ಯಾನ್ ವಾರ್‌ನಲ್ಲಿ ಅಶ್ಲೀಲವಾಗಿ ನಟ ದರ್ಶನ್ ಕುಟುಂಬದ ಮೇಲೆ ಹರಿಹಾಯುವಂತಾಗಿದೆ, ಸೋಷಿಯಲ್ ಮೀಡಿಯಾದಲ್ಲಿ ನೇರವಾಗಿ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರುಗಳ ಮೇಲೆ ಕಟ್ಟದಾಗೆ ಕಮೆಂಟ್‌ಗಳು ಶುರುವಿಗೆ ಕಾರಣವಾಗಿರುವುದು ಪ್ರಾಥಮಿಕ ಹಂತದಲ್ಲಿ ದರ್ಶಿಸಿಕೊಂಡಿದೆ,
ಈ ಸ್ಟೇಟ್ಮೆಂಟ್‌ನಿಂದ ಆಗುತ್ತಿರುವ ದುಷ್ಟರಿಣಾಮಗಳಿಂದ ಎಚ್ಚೆತ್ತುಕೊಂಡ ನಟ ಕಿಚ್ಚ ಸುದೀಪ್‌ರವರು ತಕ್ಷಣವೇ ಸೋಷಿಯಲ್ ಮೀಡಿಯಾದಲ್ಲಿ ನಾನು ಹೇಳಿರುವುದು ಸಿನಿಮಾ ಬಿಡುಗಡೆ ಆಗುತ್ತಿದೆ, ಇದರ ಹಿಂದೆಯೇ ಫೈರಸಿ ಕೂಡ ದಟ್ಟವಾಗಿ ಬೇರೂರಿ ಬಿಡುತ್ತದೆ, ಅದಕ್ಕಾಗಿ ಫೈರಸಿ ವಿರುದ್ದ ಯುದ್ದವೆಂದಿದ್ದೇನೆಯೇ ಹೊರತು ಇನ್ನೋರ್ವ ನಟನ ಮೇಲಲ್ಲ, ಎಂದು ಸ್ಪಷ್ಟೀಕರಣ ನೀಡಿರುವುದು ಒಂದು ಹಂತದ ಸಾವಧಾನ ಸಂಗತಿ ಆದರೂ ನಟ ಸುದೀಪ್ ಹುಬ್ಬಳ್ಳಿನಲ್ಲಿ ನೀಡಿದ ಹೇಳಿಕೆ ಅಲ್ಲಿಯೇ ಸ್ಪಷ್ಟೀಕರಣ ಕೊಟ್ಟಿದ್ದರೆ, ಹಾಗೂ ಅಡ್ಡ ಗೋಡೆಯ ಮ್ಯಾಲೆ ದೀಪವಿಟ್ಟಂತೆ ಹೇಳದೆ ಇದ್ದಿದ್ದರೆ ರಾಜ್ಯದಲ್ಲಿ ಹೀಗೊಂದು ಕೆಟ್ಟ ವಾತಾವರಣ ಸೃಷ್ಟಿಯೇ ಆಗುತ್ತಿರಲಿಲ್ಲ ಎನ್ನುವುದು ಬಹುತೇಕರ ಅಭಿಪ್ರಾಯವೂ ಆಗಿದೆ, ಖಂಡನೆಯು ಆಗಿದೆ, ಹೇಳಿಕೆ ನೀಡುವುದು, ಆ ಬಗ್ಗೆ ಮತ್ತೊಮ್ಮೆ ಸ್ಪಷ್ಟೀಕರಣ ಕೊಡುವುದು ನೋಡಿದರೆ ಇದೊಂದು ಚಿತ್ರ ಪ್ರಮೋಷನ್ ಗಿಮಿಕ್ಕೆ ಅಲ್ಲದೆ ಮತ್ತೇನು ಇಲ್ಲವಾದರು, ಫ್ಯಾನ್ ವಾರ್ ಸೋಷಿಯಲ್ ಮೀಡಿಯಾದಲ್ಲಿನ ಅಶ್ಲೀಲ ಕಮೆಂಟ್‌ಗಳು, ಬಡಿದಾಟಗಳಿಗೆ ಕಾರಣವಾಗಿ ಪ್ರಮೋಷನ್ ಮಾಡುವುದು ಈ ಹೊತ್ತಿನ ತರವಲ್ಲ ಎಂಬುದಾಗಿದೆ, ಈಗಾಗಲೇ ಸ್ಯಾಂಡಲ್ ವುಡ್ ಸೊರಗುತ್ತಿರುವುದರಿಂದ ಇದಕ್ಕೆ ಕಡಿವಾಣ ಹಾಕುವ ಯಾವ ಸ್ಟಾರ್ ಹಿರಿಯ ನಟ ಇಲ್ಲವಾಗಿರುವುದರಿಂದ ಕನ್ನಡನಾಡಿನಲ್ಲಿ ಹೀಗೊಂದು ವಾತಾವರಣ ಏರ್ಪಟ್ಟಿರುವುದು ದುರುಂತದ ಪರಮಾವಧಿಯಾಗಿದೆ,
ಈ ಸ್ಟೇಟ್ಮೆಂಟ್ ನಂತರದಿ ದಾವಣಗೆರೆಯಲ್ಲಿ ಡೆವಿಲ್ ಸಿನಿಮಾ ಪ್ರಮೋಷನ್‌ಗೆ ಮುಂದಾಗಿದ್ದ ವಿಜಯಲಕ್ಷ್ಮೀ ದರ್ಶನ್ ಹಾಗೂ ಸಹನಟಿಯರು, ಮಾತಾಡಿದ್ದರು ಈ ಸಂದರ್ಭದಲ್ಲಿ ವಿಜಯಲಕ್ಷ್ಮೀ ದರ್ಶನ್ ರವರು ಮಾತನಾಡಿ ದರ್ಶನ್ ಹೇಳುತ್ತಲೇ ಇರುತ್ತಾರೆ, ಯಾರು ಏನೇ ಮಾತಾಡಿದರು ಅದಕ್ಕೆ ಅಭಿಮಾನಿಗಳು ಪ್ರತಿಕ್ರಿಯೇ ಕೊಡಬಾರದು, ಇದರಂತೆ ಅಭಿಮಾನಿಗಳು ನಡೆಯಿರಿ, ಎಂದಿರುವ ಮಾತಿಗೆ ತಿರುಗಿ ಬಿದ್ದವರು ಪ್ಹೇಕ್ ಐಡಿಗಳನ್ನು ಕ್ರಿಯೇಟ್ ಮಾಡಿ ದರ್ಶನ್ ವಿರುದ್ದ ಹಾಗೂ ವಿಜಯಲಕ್ಷ್ಮಿ ದರ್ಶನ್ ವಿರುದ್ದ ಅತೀ ಕೆಟ್ಟದಾಗಿ ಕಮೆಂಟಿಸಿರುವುದು ಸಮಂಜಸವಾದುದ್ದಲ್ಲವಾಗಿದೆ, ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುತ್ತದೆ, ಈ ಕುರಿತಾಗಿ ಅವರು ಬೆಂಗಳೂರಿನ ನಗರ ಪೊಲೀಸ್ ಠಾಣೆಗೆ ಧಾವಿಸಿ ಬಂದು ದೂರು ನೀಡಿದ್ದು, ಕೂಲಂಕುಷವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಕೋರಿದ್ದು ಪೊಲೀಸರು ಪ್ರಥಮ ವರ್ತಮಾನ ವರದಿ ದಾಖಲಿಸಿದಂತೆ

Section 67 – Publishing or transmitting, obscene material in electronic form, -Section 66(C) – Identity theft, -Section 351(3) – Criminal intimidation ,-Section 352 – Intentional insult with, intent to provoke breach of peace, -Section 75(3) – Sexual harrassment, -Section 351(2) – Criminal intimidation, -Section 79 read with Section 3(5) ಬಿಎನ್‌ಎಸ್ ರಿತ್ಯಾ ಸೆಕ್ಷನ್‌ಗಳ ಸುರಿಮಳೆಗೈದು ಆರೋಪಿಗಳ ಪತ್ತೆಗೆ ವಿಶೇಷ ಟೆಕ್ನಿಕಲ್ ಜಾಲ ಬೀಸಲಾಗಿದೆ ಎಂದು ಸಧ್ಯದ ಬೆಳವಣಿಗೆಯಾಗಿದೆ,
ಏನೇ ಆಗಲಿ ಸಿನಿಮಾ ಮಾಡುವುದು, ಸ್ಟಾರ್ ನಟನಾಗಿ ಪ್ರಬುದ್ದತೆ ಮೆರೆಯಬೇಕಾದ ಹಾಗೂ ಸರಿ-ತಪ್ಪುಗಳನ್ನು ತಿದ್ದಿ ತೀಡಬೇಕಾದ ಕಲಾ ವೈಮನಸ್ಸುಗಳು ಹೀನಾಡಿ ವಿಪರೀತವಾಗಿರಬಾರದು ಎನ್ನುವುದಕ್ಕೆ ಸ್ಟಾರ್ ನಟ ಸುದೀಪ್‌ರವರು ನೀಡಿದ ಅಡ್ಡಗೋಡೆಯ ಮ್ಯಾಲಿನ ದೀಪವಿಟ್ಟ ಹೇಳಿಕೆ ಕಾರಣವಾಗಿದೆ,
ಒಟ್ಟಾರೆಯಾಗಿ ನಟ ದರ್ಶನ್ ತೂಗುದೀಪರವರು ಈಗಾಗಲೇ ಜೈಲಿನಲ್ಲಿದ್ದು ಅವರ ಡೆವಿಲ್ ಚಿತ್ರ ಬಿಡುಗಡೆಯಾಗಿ ಶರವೇಗವಿಟ್ಟು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದುಕೊಳ್ಳುತ್ತಿರುವುದು ಸಹಿಸಿಕೊಳ್ಳದ ಮನಸುಗಳು ಅವರ ಅಭಿಮಾನಿಗಳ ಬರಪೂರತೆಯ ಹರಿಯುವಿಕೆಯನ್ನು ತಡೆಯುವ ಹುನ್ನಾರ ನಡೆದಿರುವುದು ಅಕ್ಷರಶಃ ಕಿಚ್ಚ ಸುದೀಪ್‌ರವರ ಹೇಳಿಕೆಯಿಂದಲೋ ಅಥವಾ ಈ ಹೇಳಿಕೆಯನ್ನು ತಿರುಚಿ, ತಿರುಚಿ ಪ್ರಚುರ ಪಡಿಸುತ್ತಿರುವ ಕೆಲ ಗೋದಿ ಮೀಡಿಯಾ ಮನಸುಗಳಿಂದಲೋ ಏನೋ ಕನ್ನಡ ಚಿತ್ರರಂಗ ಅನಾರೋಗ್ಯದತ್ತ ದಾಪುಗಾಲಿಟ್ಟಿದೆ ಎನ್ನುವುದಂತ ದಿಟವಾಗಿದೆ.
ಪತಿ ಜೈಲಿನಲ್ಲಿದ್ದು ನೋವಿನಲ್ಲಿರುವ ವಿಜಯಲಕ್ಷ್ಮಿ ದರ್ಶನ್ ಮೇಲಿನ ಹಾಗೂ ಅವರ ಕುಟುಂಬದ ಮೇಲಿನ ಅಶ್ಲೀಲ ಪದಗಳ ಕಮೆಂಟಿನ ದಾಳಿ ಯಾರು ಸಹಿಸಲಾಗದು, ಇಂತಹ ಕಿಡಿಗೇಡಿಗಳಿಗೆ ಕಾನೂನು ತಕ್ಕ ಉತ್ತರ ನೀಡಲಿ ಎನ್ನುವುದು ಈ ಅಕ್ಷರದ ಒತ್ತಾಯವೂ ಆಗಿದೆ.




