I ಇಂದು ಕರವೇ ಜನಮನ I ರಾಜ್ಯ ಸಂಘಟನೆಯ I ಲಾಂಛನ ಬಿಡುಗಡೆ I
I ಇಂದು ಕರವೇ ಜನಮನ I ರಾಜ್ಯ ಸಂಘಟನೆಯ I ಲಾಂಛನ ಬಿಡುಗಡೆ I
ಶಿವಮೊಗ್ಗ : ಕನ್ನಡ ರಕ್ಷಣಾ ವೇದಿಕೆ ಜನಮನ ರಾಜ್ಯ ಸಂಘಟನೆಯ ಲಾಂಛನ ಬಿಡುಗಡೆಗೊಳಿಸಲಾಯಿತು, ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಕೆ ಜನಾರ್ಧನ್ ಸಾಲಿಯನ್ ರವರು, ಲಾಂಛನವು ಶಾಂತಿ ಮತ್ತು ಧೈರ್ಯದ ಸಂಕೇತವಾಗಿದ್ದು, ಈ ನೆಲದಲ್ಲಿ ಹೋರಾಟಗಳಿಗೆ ಮನ್ನಣೆ ನೀಡಿ ಕನ್ನಡದ ನ್ಯಾಯಕ್ಕಾಗಿ ಸದಾ ಕಟ್ಟಾಳುಗಳಾಗಿರುತ್ತೇವೆ ಎಂದರು,
ಈ ನಡುವೆ ನಾಡಿನ ಜನತೆಗೆ ಶುಭಾಶಯ ತಿಳಿಸಿ, ಮುಂದಿನ ಭಾಗವಾದ ಹೋರಾಟದ ವಿಷಯವಾಗಿ ರಾಜ್ಯಾದ್ಯಂತ
ಕಲಬೆರಕೆ ನಿಷೇಧಿತ ಬಣ್ಣ ರುಚಿಕರ ರಾಸಾಯನಿಕ ಕೆಮಿಕಲ್ ಬೆರೆಸಿ ವಿಷಪೂರಿತ ಆಹಾರ ಪದಾರ್ಥಗಳನ್ನು ತಯಾರಿಸಿ ಮುಗ್ಧ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಸರಬರಾಜು ಮಾಡಿ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಸಂಗತಿಗಳಿಗೆ ಸಂಬಂಧಿಸಿದ ಇಲಾಖೆಗಳು ಕಡಿವಾಣ ಹಾಕಬೇಕಿದೆ,
ಅಲ್ಲದೆ ಕ್ಯಾಂಟೀನ್ ಗೂಡಂಗಡಿಗಳು ಹಾಗೂ ಚಾಟ್ಸ್ ಕೇಂದ್ರಗಳು, ಹೋಟೆಲ್ ಗಳಲ್ಲಿ ನಿತ್ಯ ಮಿಶ್ರಣ ನಡೆಯುತ್ತಲೇ ಇದೆ, ಇದನ್ನು ಪತ್ತೆ ಹಚ್ಚಬೇಕಾದ “ಅಹಾರ ನಿಯಂತ್ರಣ ಇಲಾಖೆ” ನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು ಅತೀವ ಮೌನವಹಿಸಿರುವುದು, ತುಂಬಾ ಖೇದಕರ ಸಂಗತಿಯಾಗಿದೆ ಇದರ ವಿರುದ್ಧ ರಾಜ್ಯಾದ್ಯಂತ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತೆಯನ್ನು ಖಂಡಿಸುತ್ತೇವೆ ಹಾಗೂ ಕಳಪೆ ಆಹಾರಗಳನ್ನು ತಯಾರಿಸಿ ಮಾರಾಟ ಮಾಡುವವರ ವಿರುದ್ಧವೂ ಕ್ಷಿಪ್ರವಾಗಿ ಕಾರ್ಯಚರಣೆ ನಡೆಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕರವೇ ಜನಮನ ಸಂಘಟನೆಯಿಂದ ಹೋರಾಟವನ್ನು ನಡೆಸುವುದಾಗಿ ವಿವರಿಸಿದರು, ಮತ್ತು ಈ ರೀತಿಯ ವಿಷಪೂರಿತ ರಾಸಾಯನಿಕಗಳನ್ನು ತಯಾರು ಮಾಡುವ ಕೇಂದ್ರಗಳನ್ನು ಮುಚ್ಚಿಸಿ ಮತ್ತು ಇವುಗಳನ್ನು ಸರಬರಾಜು ಮಾಡುವ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು,
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್ ,ಮಾಲತೇಶ್, ಖಜಾಂಚಿಗಳಾದ ಸಿದ್ದಣ್ಣಯ್ಯ, ಜಿಲ್ಲಾ ಪ್ರಮುಖರಾದ ಕಿರಣ್ ಕೆ, ಮಲ್ಲಯ್ಯ ಹಿರೇಮಠ, ವೀಣಾ ಹೆಚ್, ಶೋಭಾ, ವಿ ರಾಮು, ರಾಮಣ್ಣ ರಾಗಿಗುಡ್ಡ, ಅಶೋಕ್, ಮತ್ತಿತರರು ಭಾಗವಹಿಸಿದ್ದರು.
