Monday, August 3, 2026
HomeಅಂಕಣI ನಗರದಲ್ಲಿ ಕನಾರವೇಯಿಂದ 'ಮಲೆನಾಡು ಉತ್ಸವ' I ಹೊಸತೊಂದು ಮೈಲಿಗಲ್ಲು ಸೃಷ್ಟಿಸಲಿದೆ I ರಾಜ್ಯಾಧ್ಯಕ್ಷ ಪ್ರಸನ್ನಗೌಡ...

I ನಗರದಲ್ಲಿ ಕನಾರವೇಯಿಂದ ‘ಮಲೆನಾಡು ಉತ್ಸವ’ I ಹೊಸತೊಂದು ಮೈಲಿಗಲ್ಲು ಸೃಷ್ಟಿಸಲಿದೆ I ರಾಜ್ಯಾಧ್ಯಕ್ಷ ಪ್ರಸನ್ನಗೌಡ I

ಸೂರ್ಯಗಗನದೊಂದಿಗೆ ಕನಾರವೇ ರಾಜ್ಯಾಧ್ಯಕ್ಷ ಪ್ರಸನ್ನಗೌಡ

I ನಗರದಲ್ಲಿ ಕನಾರವೇಯಿಂದ ‘ಮಲೆನಾಡು ಉತ್ಸವ’ I ಹೊಸತೊಂದು ಮೈಲಿಗಲ್ಲು ಸೃಷ್ಟಿಸಲಿದೆ I ರಾಜ್ಯಾಧ್ಯಕ್ಷ ಪ್ರಸನ್ನಗೌಡ I

ಶಿವಮೊಗ್ಗ ನಗರಿ ಹೀಗೊಂದು ಹೋರಾಟಗಳನ್ನು ಬೆಸೆದುಕೊಂಡ ನೆಲೆ, ಇಲ್ಲಿಂದಲೇ ಶುರುವಾದ ಮಲೆನಾಡು ಎನ್ನುವ ಕಾರಣದಿಂದ ಮಲೆನಾಡಿನ ಹೆಬ್ಬಾಗಿಲು ಎಂದೇ ಬಿಂಬಿತವಾಗಿದೆ, ಸಹ್ಯಾದ್ರಿ ತಪ್ಪಲಿನ ಕಣಿವೆಗಳ ತಪ್ಪಲಿರುವ ತುಂಗಾತೀರದಲ್ಲಿ ಅನೇಕ ಚಳುವಳಿಗಳು ಹುಟ್ಟಿಕೊಂಡವು, ಇದು ರಾಜ್ಯವ್ಯಾಪಿ, ದೇಶವ್ಯಾಪಿ ಗಮನ ಸೆಳೆಯಿತು, ಹೀಗೆ ಸಾಹಿತ್ಯಕ್ಕೂ ಒಂದು ಮೈಲಿಗಲ್ಲು ಎಂದರೆ ಅದು ಈ ಸಿಹಿಮೊಗ್ಗೆ ಜ್ಞಾನಪೀಠ ಪ್ರಶಸ್ತಿ, ಎರಡು ರಾಷ್ಟ್ರಕವಿಗಳನ್ನು ನಾಡಿಗೆ ಸಮರ್ಪಿಸಿದ ಅಕ್ಷರದ ಸೊಗಡಿನ ಮಣ್ಣು, ರಾಜಕೀಯಕ್ಕೂ ಇಂತಹುದೇ ವೇದಿಕೆ ಕಲ್ಪಿಸಿರುವ ಇಲ್ಲಿ ಕರ್ನಾಟಕ ನಾಡು ರಕ್ಷಣಾ ವೇದಿಕೆ ಯನ್ನು ಕನ್ನಡದ ಹಿರಿಮೆಗಾಗಿ ಹುಟ್ಟಿಕೊಂಡಿದ್ದು ಸಂಸ್ಥಾಪಕ ಅಧ್ಯಕ್ಷರಾದ ಪ್ರಸನ್ನಗೌಡರವರ ನೇತೃತ್ವದಲ್ಲಿ, ಅವರಿಗೊಂದು ದೂರು ದೃಷ್ಟಿ ಕನ್ನಡ ಉಳಿಬೇಕು, ಬೆಳೆಸಬೇಕು ಎನ್ನುವ ಖಾಲಿ ಮಾತು, ಚರ್ಚೆಗಳಿಗೆ ಗ್ರಾಸವನ್ನಾಗಿಸದೆ, ಕನ್ನಡದ ಕಟ್ಟಾಳುವಾಗಿ ಒಂದಿಷ್ಟು ಯುವಕರ ಪಡೆ ಕಟ್ಟಿಕೊಂಡು ಕನ್ನಡದ ಕೈಂಕರ್ಯಗಳಿಗೆ ಅಣಿಗೊಳಿಸಬೇಕು ಎನ್ನುವ ನಿರ್ಧಾರಿತ ಮನಸಿನಲ್ಲಿ ಕನಾರವೇ ಗೆ ಜೀವತುಂಬಿದ್ದು ಶ್ಲಾಘನೀಯ.

ಅವರನ್ನು ಸೂರ್ಯಗಗನ ಪತ್ರಿಕೆ ಮಾತಾಡಿಸಿದಾಗ ಅವರು ಹೇಳಿದ್ದಿಷ್ಟು : ಕಳೆದ ಹತ್ತು ವರುಷಗಳ ಗತ ಸಾಲಿನೊಳ ಹೆಜ್ಜೆಗಳಲ್ಲಿ ಕನ್ನಡದ ಕೆಲಸಗಳು, ಯುವಸಮುದಾಯದೊಂದಿಗಿನ ನಂಟುಗಳು, ಶ್ರಮಜೀವಿ ಆಟೋ ಚಾಲಕರ ನಿಲ್ದಾಣಗಳಿಗೆ ಫಲಕಗಳು, ಕರ್ನಾಟಕದಲ್ಲಿ ಪ್ರಾದೇಶಿಕತೆಯ ಉಳಿವುಗಳು, ಭಾಷೆಗಿರುವ ಮಹತ್ವಕ್ಕಾಗಿ ಕಡ್ಡಾಯ ಕನ್ನಡದ ನಾಮಫಲಕಗಳಿಗೆ ಒತ್ತಾಯ, ಕನ್ನಡಿಗರ ಸಾಮಾಜಿಕ ನ್ಯಾಯಕ್ಕಾಗಿ ಮನವಿ, ಹೀಗೆ ಹತ್ತು ಹಲವು ಚಿಂತನೆಗಳಿಗೆ ಮೆರಗು ಕೊಟ್ಟು ಯುವ ಪಡೆಯನ್ನು ಹುರಿದುಂಬಿಸಿ ಮಾತ್ರದಿ ಇಲ್ಲಿಗೆ ಹತ್ತು ವರುಷ ಸಂದಿದೆ ಎಂದು ಕನಾರವೆ ರಾಜ್ಯಾಧ್ಯಕ್ಷರಾದ ಪ್ರಸನ್ನಗೌಡರವರು ಉವಾಚಿಸಿದರು.

ಒಮ್ಮೆಲೆ ಎಲ್ಲಾ ಸಂಘಟಕರು ಹೇಳುವಂತೆ, ಕನ್ನಡ ನಾಡಿನಲ್ಲಿ ಕನ್ನಡ ಉಳಿಸಿ, ಪ್ರಾದೇಶಿಕತೆಗೆ ಮೊದಲ ಪ್ರಾಧಾನ್ಯತೆ ಕೊಡಿ ಎನ್ನುವುದು ಕೂಡ ನಮ್ಮಗಳ ದೌರ್ಬಾಗ್ಯವೆಂದೇ ಭಾವಿಸುತ್ತೇನೆ ಎನ್ನುವುದು ವಾಸ್ತವ ಮಜಲು ಕೂಡ ಇಂದಾಗಿದೆ, ಏಕೆಂದರೆ ನಾಡಿನಲ್ಲಿ ನೆರೆ ರಾಜ್ಯದವರಾದ ಗುಜರಾತಿಗಳು, ರಾಜಸ್ಥಾನಿಗಳು, ತಮಿಳುನಾಡಿನವರು, ಕೆರಳದವರು ಹೀಗೆ ಎಲ್ಲರಿಗೂ ಮುಕ್ತತೆಯಿಂದ ಜೀವನ ಕಟ್ಟಿಕೊಳ್ಳುವುದಕ್ಕೆ ಕನ್ನಡಿಗರಾದ ನಾವುಗಳು ಅವಕಾಶ ಮಾಡಿಕೊಟ್ಟಿದ್ದೇವೆ, ಏಕೆಂದರೆ ಭಾರತದ ಒಕ್ಕೂಟ ವ್ಯವಸ್ಥೆನಲ್ಲಿ ನಾವಿದ್ದೇವೆ, ಈ ಕದಂಬರ ನೆಲದಲ್ಲಿ ಬದುಕು ಕಟ್ಟಿಕೊಂಡಿದ್ದೀರಿ, ಕನ್ನಡ ಕಲಿಯಿರಿ, ಭಾಷೆಗೆ ಗೌರವಿಸಿ ನೀವು ಯಾವ ರಾಜ್ಯದವರೇ ಆಗಲಿ. ದೇಶದವರೇ ಆಗಲಿ ನೀವು ಮೊದಲು ಕನ್ನಡಿಗರಾಗಿ ಈ ನೆಲದ ಮೌಲ್ಯ ಕಾಪಾಡಿ ಎನ್ನುವುದು ಕನಾರವೇ ಒತ್ತಾಯ, ಇದೆಂದಿಗೂ ತಪ್ಪಲ್ಲವಲ್ಲ ಈ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಕನ್ನಡ ಸಾಹಿತ್ಯ ಪರಿಷತ್ ಹುಟ್ಟಿ ಹಾಕಿ ಈ ನೆಲದಲ್ಲಿ ವಾಸಿಸುವ ಯಾರೇ ಆಗಲಿ ಕನ್ನಡ ಭಾಷೆಯನ್ನು ಓದುವುದನ್ನು, ಬರೆಯುವುದನ್ನು ಕಲಿಯಬೇಕು, ಹೀಗಾದರೆ ಅವರಿಗೆ ಕಸಾಪ ಸದಸ್ಯತ್ವ ನೀಡಿ, ಅವರಿಗೆ ಭಾಷೆಯ ಬಗ್ಗೆ ಗೊತ್ತಿಲ್ಲವೆಂದರೆ ಕನ್ನಡ ಭಾಷೆ ಹೇಳಿಕೊಟ್ಟು ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ನೀಡಿ, ಎನ್ನುವ ಬಯ್ಲಾ ನಿಯಮಗಳು ನಾವು ಅಂದರೆ ಸಂಘಟಕರು ಅನ್ಯರಿಗೆ ತಿಳಿ ಹೇಳಬೇಕಾದ ಹೊತ್ತಿದು ಎಂದು ಅವರು ವಿವರಿಸಿ, ಪ್ರತಿಯೊಬ್ಬ ಕನ್ನಡಿಗರು ಕಸಾಪ ಸದಸ್ಯತ್ವ ಹೊಂದಬೇಕು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಚಿಂತನೆಗೆ ಗೌರವಿಸಬೇಕು ಎಂದು ಈ ಮೂಲಕ ಕನ್ನಡಿಗರಿಗೆ ಒತ್ತಾಯಿಸಿದರು.

ಆ ಕಾಲಘಟ್ಟದಲ್ಲಿಯೇ ನಮ್ಮ ನೆಲದ ರಾಷ್ಟ್ರಕವಿ ಕುವೆಂಪುರವರು ತಮ್ಮ ಪದ್ಯದಲ್ಲಿ ಹೇಳುತ್ತಾರೆ, ಸಾಯುತಿದೆ ನಿಮ್ಮನುಡಿ, ಓ ಕನ್ನಡದ ಕಂದರಿರ, ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ..! ರಾಜನುಡಿಯೆಂದೊಂದು, ರಾಷ್ಟ್ರನುಡಿಯೆಂದೊಂದು, ದೇವನುಡಿಯೆಂದೊಂದು ಹತ್ತಿ ಜಗ್ಗಿ, ನಿರಿನಿಟಿಲು ನಿಟಿಲೆಂದು ಮುದಿಮೂಳೆ ಮುರಿಯುತಿದೆ, ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ..! ಕೂಗಿಕೊಳ್ಳಲು ಕೂಡ ಬಲವಿಲ್ಲ, ಮಕ್ಕಳೇ ಬಾಯ್ಮುಚ್ಚಿ ಹಿಡಿದಿಹರು ಕೆಲವರು ನುಗ್ಗಿ..! ಎನ್ನುವ ಸಾಲು ಅಕ್ಷರಶಃ ಇಂದಿಗೂ ಜನಜನಿತವಾಗಿರುವುದನ್ನು ಸೂರ್ಯಗಗನ ಪತ್ರಿಕೆಯು ಪ್ರಸನ್ನ ಗೌಡರವರ ಗಮನಕ್ಕೆ ತಂದಾಗ ಅವರು ಅಷ್ಟೆ ನಮ್ರತೆಯಿಂದ ಹೀಗಾಗಿಯೇ ನಮ್ಮ ಕನಾರವೆ ಸಂಘಟನೆಯಿಂದ ನಮ್ಮ ನಡೆ ಕನ್ನಡದ ಕಡೆ ಎನ್ನುವ ಘೋಷಿತ ವಾಕ್ಯದೊಂದಿಗೆ ರಸಋಷಿ ಕುವೆಂಪುರವರ ೧೨೧ನೇ ಜಯಂತ್ಯೋತ್ಸವದ ನೆನೆವಿನೊಳು ಫೆ. ೨೦ರಂದು ಶಿವಮೊಗ್ಗದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಮಲೆನಾಡು ಉತ್ಸವ ಅದ್ದೂರಿಯಾಗಿ ಆಚರಿಸುತ್ತಿದ್ದೇವೆ, ಸಾಂಸ್ಕೃತಿಕವಾಗಿ ಕನ್ನಡದ ಕಲಾ ಶಾಸನವಾದ ಪುನೀತ್ ರಾಜಕುಮಾರ್ ಹೆಸರಿನಲ್ಲಿ ಕನ್ನಡಕ್ಕಾಗಿ ಶ್ರಮಿಸಿದವರಿಗೆ ಹಾಗೂ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಗುತ್ತದೆ ಎಂದು ಅವರು ನಗರದ ನಾಗರೀಕರಿಗೆ ತಮ್ಮ ಕರೆಯೋಲೆಯ ಕರೆಯನ್ನು ನೀಡಿದರು.

ಕನಾರವೆ ಇನ್ನೂ ಮುಂದೆ ಕಳೆದ ಹತ್ತು ವರುಷಗಳ ಅನುಭವವನ್ನು ಕಾಪಿಟ್ಟುಕೊಂಡು ಕನ್ನಡದ ನೆಲದಲ್ಲಿ ಕನ್ನಡ ಉಳಿಸಿ ಹೋರಾಟ ಇನ್ನೂ ಜೀವಂತ ಯಾಕಿದೆ…? ಗಡಿನಾಡುಗಳಲ್ಲಿ ಇಂದಿಗೂ ಕನ್ನಡಿಗರ ಮೇಲಿನ ದೌರ್ಜನ್ಯ ತಡೆಯೋಕೆ ಸಾದ್ಯವಾಗುತ್ತಿದಿಯಾ..? ಮಹಾದಾಯಿ, ಕಳಸಾ ಬಂಡೂರಿ ಯೋಜನೆಗೆ ಅಡ್ಡಿಯಾದ ಗೋವಾ ಸರಕಾರಕ್ಕೆ ಕೇಂದ್ರದ ನೇರ ಬೆಂಬಲವೇಕೆ..? ಕಾವೇರಿ ನದಿ ನೀರು ಹಂಚಿಕೆಯಲ್ಲಿ ನೆರೆ ರಾಜ್ಯಗಳ ಪರವಾದ ಕೇಂದ್ರದ ಹೆಜ್ಜೆಗಳಿಂದಾಗಿ ಕನ್ನಡನಾಡಿಗೆ ನ್ಯಾಯ ಸಿಗುತ್ತಿದಿಯಾ..? ಯಾವುದೇ ರಾಷ್ಟ್ರೀಯ ಪಕ್ಷಗಳು ಕನ್ನಡನಾಡಿನ ಪರವಾದ ಧ್ವನಿ ಎತ್ತಿರುವ. ಪ್ರಾದೇಶಿಕತೆ ಎತ್ತಿ ಹಿಡಿದಿರುವ ಉದಾಹರಣೆಗಳಿವೆಯಾ..? ಹೀಗೆ ಸೊರುತ್ತಿರುವ ಆಡಳಿತಾತ್ಮಕವಾದ ಹೆಜ್ಜೆಗಳಿಗೆ ಎಚ್ಚರಿಕೆಯನ್ನು ನೀಡಲು ಕಟಿಬದ್ದವಾಗಿ ಸಾಗುತ್ತದೆ ಎಂದು ರಾಜ್ಯಾಧ್ಯಕ್ಷರಾದ ಪ್ರಸನ್ನಗೌಡ ಅವರು ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ತಮ್ಮ ಮುಂದಿನ ಉದ್ದೇಶಿತ ಗುರಿಯನ್ನು ತಿಳಿಸಿದರು.

ಮುಂದುವರೆದಂತೆ ಕರುನಾಡಿನ ಸಮಗ್ರ ಪರಿಹಾರ ಕುರಿತಂತೆ ಪ್ರಾದೇಶೀಕತೆಯ ಅನಿವಾರ್ಯತೆ, ನಾಡಿನ ಜ್ವಲಂತ ಸಮಸ್ಯೆಗಳ ಉಲ್ಭಣತೆಗಳು, ಯುವ ಶಕ್ತಿ, ರೈತ ಶಕ್ತಿಗಳು ದಿನದಿಂದ ದಿನಕ್ಕೆ ಹತಾಶತೆಯ ಕೂಪಕ್ಕೆ ಬಲಿಯಾಗುತ್ತಿರುವುದು ನಾವುಗಳು ನೋಡುತ್ತಿದ್ದೇವೆ ಈ ಎಲ್ಲಾ ಹಿನ್ನಲೆಗಳಲ್ಲಿ ಕನ್ನಡ ಕಟ್ಟುವುದರೊಂದಿಗೆ ಸಾಮಾಜಿಕ ಬದ್ದತೆಯಿಂದ ವಿನೂತನವಾಗಿ ರಾಜ್ಯದಲ್ಲಿ ಸಂಘಟಿತ ಧ್ವನಿಯನ್ನು ಮೊಳಗಿಸಲು ಕನಾರವೇ ಮುಂದಾಗಿರುವುದಲ್ಲದೇ, ಹೋರಾಟದ ಜೊತೆ ಜೊತೆಗೆ ಸಾಹಿತ್ಯ ಕಲೆಗಳಿಗೂ ಒತ್ತು ಕೊಡುವುದರ ಮುಖೇನ ಸಾಹಿತಿಗಳು, ಬರಹಗಾರರು, ಕಲಾವಿದರಗಳನ್ನು ಒಟ್ಟಾಗಿ ಸೇರಿಸಿ ಸಂಘಟಿತಗೊಳಿಸುವ ಅನಿವಾರ್ಯತೆಗಳಿಗೆ ಎಂದು ಅವರು ವಿವರಿಸಿದರು.

ಇನ್ನೂ ಸಿನಿಮಾ ವೇದಿಕೆಗಳಿಗೂ ತಿಳಿಹೇಳಿ, ಚೆಂದನವನವನ್ನು ಇನ್ನಷ್ಟು ಗಟ್ಟಿಗೊಳಿಸಲು ಹಾಗೂ ಚಿತ್ರ ಸಮಾಜ ಯಾವುದೇ ಪೂರ್ವಪರಗಳಿಲ್ಲದೆ ಕನ್ನಡದ ಸಿನಿಮಾ ಉಳಿಸಿ ಬೆಳೆಸಲು ಜಾಗೃತ ಕಾರ್ಯಕ್ರಮಗಳನ್ನು ಕನಾರವೆ ಹಮ್ಮಿಕೊಳ್ಳುತ್ತದೆ, ವಿನಾಃಕಾರಣ ಕನ್ನಡದ ಸಿನಿಮಾಗಳ ಮೇಲೆ, ನಟ-ನಟಿ ಕಲಾವಿದರ ಮೇಲೆ ಜಾತಿ-ಧರ್ಮಗಳ ಬಲೆ ಬೀಸಿ ಅಪಹಾಸ್ಯಗೊಳಿಸುವ ಒಂದು ಸಿನಿಮಾ ಪ್ರಯತ್ನವನ್ನು ನಾಶಗೊಳಿಸುವವರ ವಿರುದ್ದ ಕನಾರವೆ ಕ್ಷಮಿಸುವ ಮಾತೇ ಇಲ್ಲವಾಗಿದೆ, ಏಕೆಂದರೆ ಆ ಕಾಲಘಟ್ಟದಲ್ಲಿದ್ದ ೨೧ ನಾಟಕ ಕಂಪನಿಗಳು ಇಂದು ಮುಗಿದು ಒಂದೇ ಒಂದು ಗುಬ್ಬಿ ಕಂಪನಿ ಉಳಿದುಕೊಂಡಿದೆ,

ಇನ್ನೂ ಚಿತ್ರಮಂದಿರಗಳ ಪರಂಪರೆ ನಾಶವಾಗಿ ಮಾಲ್ ಸಂಪ್ರದಾಯಗಳು ಹುಟ್ಟಿಕೊಂಡಿವೆ, ಇನ್ನೂ ರಾಜ್ಯ ಸರ್ಕಾರದಿಂದ ಕರ್ನಾಟಕದಲ್ಲಿಯೇ ಚಿತ್ರೀಕರಣಗೊಂಡು ಇಲ್ಲಿಯೇ ಪೋಸ್ಟ್ ಪ್ರೋಡಕ್ಷನ್ ಹೊಂದುವ ಕನ್ನಡದ ಚಿತ್ರಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಕೊಡಬೇಕಿದೆ, ಈ ಎಲ್ಲಾ ಬದಲಾವಣೆಯ ದಿಸೆಯಲ್ಲಿ ಕನಾರವೆ ಹೋರಾಟಗಳನ್ನು ರೂಪಿಸುತ್ತಿದೆ, ಇದಕ್ಕೆ ಮೂಲ ಕಾರಣವೇನೆಂದರೆ ಮನರಂಜನೆ ಉಳಿದರೆ ಮಾತ್ರ ಮನುಷ್ಯ ಬದುಕು ಉಳಿಯುತ್ತದೆ, ಹಸನಗೊಳ್ಳುತ್ತದೆ ಆತನ ಮಾನಸೀಕ ಕ್ಷೀಣತೆಯಿಂದ ಪಾರಾಗುವುದಕ್ಕೆ ಮನರಂಜನೆ ಅಗತ್ಯವಾಗಿ ಬೇಕಿದೆ, ಎಂದು ಪ್ರಸನ್ನ ಗೌಡ ಅವರು ಹೇಳಿದರಲ್ಲದೆ ರಾಜ್ಯ ಸರ್ಕಾರಕ್ಕೆ ಮಲೆನಾಡು ಉತ್ಸವದ ವೇದಿಕೆಯಿಂದ ಆಗ್ರಹಪಡಿಸಿ ರಾಜ್ಯದ ಪ್ರತಿ ಹಳ್ಳಿಗಳಲ್ಲಿ ಸಿನಿಮಾ ಮಂದಿರಗಳ ಸ್ಥಾಪನೆಗೆ ಭೂಮಿ ಮೀಸಲಿಡಬೇಕು, ಈ ಮೂಲಕ ಸಿನಿಮಾ ವೀಕ್ಷಕ ಸಮೂಹ ಹೆಚ್ಚಾದರೆ ಜನರಿಗೆ ಮನರಂಜನೆಯು ಲಭ್ಯತೆ ಇರುತ್ತದೆ ಅಲ್ಲದೆ, ಒಂದು ಸಿನಿಮಾ ನಿರ್ಮಾಣದ ಹಿಂದೆ ಸರಿಸುಮಾರು ಮುನ್ನೂರು ಕುಟುಂಬಗಳ ಶ್ರಮ ವ್ಯರ್ಥವಾಗುವುದಿಲ್ಲ ಎನ್ನುವ ಕಾಳಜಿಯಲ್ಲಿ ಒತ್ತಾಯಿಸಲಾಗುವುದು ಎಂದು ಸೂರ್ಯಗಗನ ಪತ್ರಿಕೆಯೊಂದಿಗೆ ಮಾತಾಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I