Monday, 2 November 2026 — Suryagagana
09:35 AM
ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I
ಸೂರ್ಯಗಗನ

I ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ವಿಜೇತರಾದ ವೈ . ಎಸ್ .ವಿ  ದತ್ತ ರವರಿಗೆ I ಜಿಲ್ಲಾ ಸರ್ವೋದಯ ಮಂಡಲದಿಂದ  ಸನ್ಮಾನ I

I ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ವಿಜೇತರಾದ ವೈ . ಎಸ್ .ವಿ  ದತ್ತ ರವರಿಗೆ I ಜಿಲ್ಲಾ ಸರ್ವೋದಯ ಮಂಡಲದಿಂದ  ಸನ್ಮಾನ I ಶಿವಮೊಗ್ಗ : ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ  ಮಾಜಿ ಶಾಸಕ ಹಾಗೂ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ವಿಜೇತ…

I ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ವಿಜೇತರಾದ ವೈ . ಎಸ್ .ವಿ  ದತ್ತ ರವರಿಗೆ I ಜಿಲ್ಲಾ ಸರ್ವೋದಯ ಮಂಡಲದಿಂದ  ಸನ್ಮಾನ I

ಶಿವಮೊಗ್ಗ : ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ  ಮಾಜಿ ಶಾಸಕ ಹಾಗೂ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ವಿಜೇತ ರಾದ ವೈ ಎಸ್ ವಿ  ದತ್ತ ಅವರಿಗೆ  ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ, ಭದ್ರಾವತಿ ಶಿವಮೊಗ್ಗ  ಆಕಾಶವಾಣಿ ಕೇಳುಗರ ಬಳಗ, ಆರ್ ಜೆ ಬಳಗ, ನನ್ನ ಕನಸಿನ ಶಿವಮೊಗ್ಗ ಸಂಸ್ಥೆಗಳ ವತಿಯಿಂದ  ಆತ್ಮೀಯವಾಗಿ ಸನ್ಮಾನಿಸಿ ಸ್ವಾಗತಿಸಲಾಯಿತು

ಈ ಸಂದರ್ಭದಲ್ಲಿ  ಮಾತನಾಡಿದ ಅವರು ಶಾಂತವೇರಿ ಗೋಪಾಲಗೌಡರು ಈ ನಾಡು ಕಂಡ ಅಪ್ರತಮ ಪ್ರಾಮಾಣಿಕ ರಾಜಕಾರಣಿ. ಕಡು ಬಡತನದಿಂದ ಸಾಲ ಸೂಲ ಮಾಡಿ  ತನ್ನ ಪ್ರಾಮಾಣಿಕ ರಾಜಕಾರಣದಿಂದ ಕಡು ಬಡವರ ಸೇವೆ ಮಾಡಿದವರು ಕಾಗೋಡು ಸತ್ಯಾಗ್ರಹದ ಹೋರಾಟದ ಮೂಲಕ ಪ್ರಸಿದ್ಧರಾಗಿ ಡಾ ರಾಮಮನೋಹರ  ಲೋಹಿಯವರ ಸಮಾಜವಾದಿ ಸಿದ್ಧಾಂತವನ್ನು ಅಪ್ಪಿಕೊಂಡು  ಶಿವಮೊಗ್ಗ ಜಿಲ್ಲೆಯನ್ನು ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು. ಶಾಂತವೇರಿ ಗೋಪಾಲಗೌಡರು ವಿಧಾನಸಭೆಯಲ್ಲಿ ಮಾತನಾಡಲು ನಿಂತರೆ ಇಡೀ ವಿಧಾನಸಭೆ ನಡುಗುತ್ತಿತ್ತು. ಅವರಂತಹ ನಿಷ್ಠಾವಂತ ಪ್ರಾಮಾಣಿಕ ರಾಜಕಾರಣಿ ಮತ್ತೆ ನೋಡಲು ಸಾಧ್ಯವಿಲ್ಲವಾಗಿದೆ. ಸರ್ಕಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಗೋಪಾಲಗೌಡರ ಹೆಸರನ್ನು ಇಟ್ಟಿರುವುದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು. ಅವರು ಬದುಕಿದ್ದರೆ ಅವರಿಗೆ 101 ವರ್ಷ ವಯಸ್ಸು ಆಗುತ್ತಿತ್ತು ಅವರ ಹೆಸರಿನಲ್ಲಿರುವ  ಈ ಪ್ರಶಸ್ತಿ ನನಗೆ ಕೊಟ್ಟಿರುವುದನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇನೆ ಎಂದರು

ಸಂದರ್ಭದಲ್ಲಿ  ಮಾತನಾಡಿದ  ಹಿರಿಯ ಸಾಹಿತಿ ಎಂ ಎನ್ ಸುಂದರ್ ರಾಜ್ ರವರು  ಅವರು ಮೂಲತ ರಾಜಕಾರಣಿಯಾಗಿದ್ದರು ತನ್ನೊಳಗಿನ ಬರಹಗಾರ ಲೇಖಕ ಯಾವಾಗಲೂ ಜಾಗೃತನಾಗಿದ್ದಾನೆ ಇದರಿಂದ ಅವರು ತಮ್ಮ ಪ್ರಾಮಾಣಿಕ ರಾಜಕಾರಣವನ್ನು ಮಾಡಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು

ನಂತರ ಮಾತನಾಡಿದ ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷರಾದ ಆರ್ ಮನೋಹರ್ ರವರು ವೈ ಎಸ್ ವಿ ದತ್ತ ರಂತಹ ನೇರ ನಿಷ್ಟುರ ಪ್ರಾಮಾಣಿಕ ಆದರ್ಶ ರಾಜಕಾರಣವನ್ನು ಮಾಡಿಕೊಂಡು ಬಂದವರು ಸಾಮಾಜಿಕ ರಾಜಕೀಯ ಸೇವೆ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ ರಾಜಕೀಯಕ್ಕೆ ಮೌಲ್ಯವನ್ನು ತುಂಬಿಕೊಟ್ಟವರು ಅವರು ಎಂದು ವಿಶ್ಲೇಷಣೆ ಮಾಡಿದರು

ಇದೇ ಸಂದರ್ಭದಲ್ಲಿ ಮಾತನಾಡಿದ ಸರ್ವೋದಯ ಜಿಲ್ಲಾ ಮಂಡಲದ ಕಾರ್ಯದರ್ಶಿಯಾದ ರೊಟೇರಿಯನ್ ಜಿ ವಿಜಯ್ ಕುಮಾರ್ ಅವರು ವೈ ಎಸ್ ವಿ ದತ್ತ ರವ  ಪ್ರಾಮಾಣಿಕ ರಾಜಕಾರಣ,ಸಾಹಿತ್ಯ,ಲೇಖಕ ಬರಹಗಾರರಾಗಿ ಅವರು ಮಾಡಿದ ಸೇವೆಯನ್ನು ಸ್ಮರಿಸಿದರು. ಈ ಪ್ರತಿಷ್ಠಿತ ಪ್ರಶಸ್ತಿ ಬಂದಿರುವುದು ಅದು ಸಹ ನಮ್ಮ ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ರಾಜಕಾರಣಿ ಹೆಸರಿನ ಈ ಪ್ರಶಸ್ತಿಗೆ ಅವರು ಅರ್ಹ ವ್ಯಕ್ತಿ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ನನ್ನ ಕನಸಿನ ಶಿವಮೊಗ್ಗದ ಎನ್ ಗೋಪಿನಾಥ್ ರವರು ಸುಮಾರು 40 ವರ್ಷದಿಂದ ರಾಜಕಾರಣದಲ್ಲಿದ್ದರು ಸರಳತೆಯಿಂದ ಜೀವಿಸುತ್ತಿದ್ದಾರೆ ಎಂದು ತಿಳಿಸಿದರು

ಇದೆ ಸಂದರ್ಭದಲ್ಲಿ ನನ್ನ ಕನಸಿನ ಶಿವಮೊಗ್ಗ ವೇದಿಕೆಯ ಎನ್ ಗೋಪಿನಾಥ್, ಆಕಾಶವಾಣಿ ಕೇಳುಗರ ಬಳಗದ  ಚಿಕ್ಕಪ್ಪ ರಾಮೇಶ್ವರ, ಆಕಾಶವಾಣಿ  ಆರ್ ಜೆ ಗಳಾದ ಗಣೇಶ್ ಕೆಂಚನ, ಸರ್ವೋದಯ ಮಂಡಲದ ಬಸವರಾಜಪ್ಪ, ರುದ್ರಪ್ಪ ಚೀಲೂರ್ ರುದ್ರಪ್ಪ ಚೀಲು, ಪ್ರೊಫೆಸರ್ ಸತ್ಯನಾರಾಯಣ, ಬಿಂದು ವಿಜಯ ಕುಮಾರ  ಉಪಸ್ಥಿತರಿದ್ದರು

Gara

Gara

Leave a comment

error: Content is protected !!