Saturday, August 1, 2026
HomeಅಂಕಣI ಆಯಾ ರಾಜ್ಯ ಸರ್ಕಾರಗಳ I ಸಾಂದರ್ಭಿಕ ಸಂತಾಪ I ಯಾರಿಗೆ ಬೇಕಾಗಿದೆ..? I

I ಆಯಾ ರಾಜ್ಯ ಸರ್ಕಾರಗಳ I ಸಾಂದರ್ಭಿಕ ಸಂತಾಪ I ಯಾರಿಗೆ ಬೇಕಾಗಿದೆ..? I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಆಯಾ ರಾಜ್ಯ ಸರ್ಕಾರಗಳ I ಸಾಂದರ್ಭಿಕ ಸಂತಾಪ I ಯಾರಿಗೆ ಬೇಕಾಗಿದೆ..? I

ಪಾಟೀಲ್ ಪುಟ್ಟಪ್ಪನವರ ಸಾವು ಯಾರಿಗೆ ನಷ್ಠವಾಗಿದೆ. ? ಎನ್ನುವುದರ ಕುರಿತು ಒಂದಿಷ್ಟು ಅವಲೋಕನ ಮಾಡಿಕೊಳ್ಳಬೇಕಿದೆ, ಹೌದು ಇದು ವಾಸ್ತವ ಕೂಡ ಸುಧೀರ್ಘ ಸಾರ್ಥಕ ಬದುಕಿನ ಹಾದಿಯಲ್ಲಿ ೧೦೦ ನೂರು ವರುಷ ಪೂರೈಸಿ ಬಾಹ್ಯಮುಖಿಯಾಗಿ ವಿದಾಯ ಹೇಳಿದರು, ದಿವಂಗತ ಪಾಟೀಲ್ ಪುಟ್ಟಪ್ಪ (ಪಾಪು) ಇತ್ತೀಚೆಗೆ ಕಿಮ್ಸ್ ಆಸ್ಪತ್ರೆಯ ಹುಬ್ಬಳ್ಳಿಯಲ್ಲಿ ಮಾರ್ಚ್-೧೬ ರಂದು ತಮ್ಮದೇ ಬದುಕಿನ ಶಾಸನದ ಬರಹ ನಿಲ್ಲಿಸಿದ ದಿನಮಾನವದು,ಇದೊಂದು ಪರಿಪೂರ್ಣತೆಯ ಸಾವು ಎಂದೇ ನಾವುಗಳು ಉವಾಚಿಸಬೇಕು, ಸಾವಿಗೂ ಒಂದು ಗರ್ವವದು, ಅಂದು ಪಾಟೀಲ್ ಪುಟ್ಟಪ್ಪನವರನ್ನು ಗೌರವವಾಗಿಯೇ ಇಹಲೋಕವನ್ನು ತ್ಯಜಿಸುವಂತೆ ಮಾಡಿತು,

ಈ ಸಾವಿಗೆ ಗರ್ವ ಪಡಬೇಕೆ ಹೊರತು, ಮುಖವಾಡವಿಟ್ಟುಕೊಂಡು ಸಾಂದರ್ಭಿಕವಾಗಿ ಸಂತಾಪ ಸೂಚಿಸುವುದಲ್ಲ, ಒಮ್ಮೆಲೆ ಅವರನ್ನು ಕುರಿತು ನಿರ್ಲಿಪ್ತತೆಯಿಂದ, ಅವಕಾಶವಾದಿತನದಿ ಮೊಸುಳೆ ಕಣ್ಣೀರಿಡುವುದೇ ಆದರೆ ನಿಮ್ಮ ಡ್ರಾಮಿಸ್ಟ್ ವರ್ತನೆ ಬಿತ್ತುವುದನ್ನು ಇಂದೇ ನಿಲ್ಲಿಸಿ, ನೀವುಗಳು ಇನ್ನ ಮೇಲೆ ಯಾವ ವೇದಿಕೆಯಲ್ಲಿಯೂ ಪಾಟೀಲ್ ಪುಟ್ಟಪ್ಪನವರ ಹೆಸರು ಹೇಳುವುದಕ್ಕೂ ನಾಲಾಯಕ್ ಆಗಿದ್ದೀರಿ ಎನ್ನುವುದನ್ನು ನಿಮ್ಮಗಳ ಆತ್ಮವಂಚನೆ ಇಲ್ಲದೆ ತಿಳಿದರೆ ಒಳಿತು,

ಯಾಕೇ ಇಂತಹದೊಂದು ವ್ಯಾಖ್ಯಾನ ಅಗತ್ಯವಿತ್ತೇ ಎಂದು ನೀವುಗಳು ಕೇಳುವುದೇ ಆದರೆ ಹೌದು ಅದಕ್ಕೆ ನಿಖರ ಕಾರಣಗಳಿವೆ, ವಾಸ್ತವದ ಬಹುತೇಕಗಳಿವೆ, ಮೊನ್ನೆಯ ಅವರ ಸಾವಿನ ದಿನದಲ್ಲಿ ತಕ್ಷಣವೇ ಪಾಟೀಲ್ ಪುಟ್ಟಪ್ಪನವರ ಸಾವು ಸಾರಸ್ವತಾ ಲೋಕಕ್ಕೆ ಹಾಗೂ ಪತ್ರಿಕಾ ಲೋಕಕ್ಕೆ ನಷ್ಠವಾಗಿದೆ, ಎಂದು ಗೋಗರೆದು ಪುಂಕಾನುಪುಂಕವಾಗಿ ಅವರ ಇತಿಹಾಸವನ್ನು ಓದಿಕೊಂಡು ಭಾಷಣ ಮಾಡಿ ಶ್ರದ್ದಾಂಜಿಲಿ ಅರ್ಪಿಸಿದ್ದನ್ನು ನೋಡಿದ್ದೇವೆ, ಸಾಹಿತ್ಯ ಹಾಗೂ ಸುದ್ದಿ ಲೋಕದಲ್ಲಿ ನಿತ್ಯ ಶೋಷಣೆಗಳ ಬಿತ್ತಿ, ಅವಕಾಶವಾದಿತನದಿ ವಿಕೃತವಾಗಿ ನಡೆದುಕೊಂಡ ಮಹನೀಯರೆಲ್ಲಾ ಸಂತಾಪ ಸೂಚಿಸುತ್ತಿದ್ದನ್ನು ನೋಡಿದರೆ ಪಾಟೀಲ್ ಪುಟ್ಟಪ್ಪನವರ ನಿಲುವುಗಳನ್ನು ಶೇಕಡವಾರು ಎಷ್ಟರಮಟ್ಟಿಗೆ ತಮ್ಮಗಳ ಜೀವತಾವಧಿಯಲ್ಲಿ ಪ್ರತಿಪಾದಿಸಿದ್ದರು ಎನ್ನುವುದು ಗೊತ್ತು ಮಾಡಿಕೊಳ್ಳಬೇಕಿತ್ತು ಎಂದೆನಿಸಿತ್ತು.

ಹೋರಾಟಗಳಲ್ಲಿ (ಪಾಪು) ಪ್ರಾಮಾಣಿಕತೆಯನ್ನು ಜೀವದುಂಬಿದ್ದರು, ಪತ್ರಿಕಾ ಸಂಘಟನೆಗೆ ಕಾಯಕಲ್ಪ ನೀಡಿದರು, ಹಾಗೆಯೇ ಪತ್ರಿಕಾ ಧರ್ಮದಿ ಮುನ್ನಡೆದಿದ್ದರು, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದರು, ಕನ್ನಡ ಭಾಷಾ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದರು, ಬೆಳಗಾವಿಯಲ್ಲಿ ನಡೆದ ೭೦ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು, ರಾಜ್ಯಸಭಾ ಸದಸ್ಯರಾಗಿದ್ದರು.ಈ ಎಲ್ಲಾ ಮಜಲುಗಳಲ್ಲಿಯೂ ಅದರದೇ ಆದ ಮೌಲ್ಯವನ್ನು ಉಳಿಸಿದ್ದರು, ಸಮಾನತೆಯನ್ನು ಎತ್ತಿ ಹಿಡಿವ ಎದೆಭಾವಗಳು ಅವರಲ್ಲಿ ಗೂಡು ಮಾಡಿತ್ತು,

ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಪಾಟೀಲ್ ಪುಟ್ಟಪ್ಪ (ಪಾಫು) ಎಂದಿಗೂ ಪತ್ರಕರ್ತರಾಗಿ ಪತ್ರಕರ್ತರನ್ನು ತುಳಿದವರಲ್ಲ, ಜಾತಿಗಳ ಕಾರಣಕ್ಕೆ ವಿಭಾಗಿಸಿದವರಲ್ಲ, ರಾಜಕೀಯ ಕಾರಣಕ್ಕಾಗಿ ತಮ್ಮ ನಿಲುವುಗಳನ್ನು ಸಡಿಲಿಸಲಿಲ್ಲ, ಹೇಳಿ ಅವರನ್ನು ಕುರಿತು ಮಾತನಾಡಿರುವ ನೀವುಗಳು ಯಾವ ಒಂದಂಶವನ್ನು ಪಾಲಿಸುತ್ತಿದ್ದೀರಿ, ಹೇಳಿ ಹೈ-ಪ್ರೋಪೈಲ್ ಬೂಟು ನೆಕ್ಕುವ ಘೋಮುಖಿಗಳೇ ಹೇಳಿ..? ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೋ …ಆ ಪಕ್ಷದ ಗುಲಾಮರಾಗುವ ನೀವುಗಳು ಯಾವ ನೈತಿಕತೆಯನ್ನು ಪ್ರತಿಪಾದಿಸಿದ್ದೀರಿ ಹೇಳಿ..? ಸಂಘಟನೆಯ ಮೂಲೋದ್ದೇಶಗಳನ್ನು ಎತ್ತಿ ಹಿಡಿದಿದ್ದೀನಿ ಎಂದು ಹೇಳುತ್ತಿರಾ..? ಕನ್ನಡದ ಪತ್ರಿಕೆಗಳು ಕರ್ನಾಟಕದಲ್ಲಿ ಮರಣ ಶಾಸನ ಬರೆದುಕೊಳ್ಳುತ್ತಿದ್ದರೂ ಸಹ ಯಾವುದೇ ಚಕಾರೆತ್ತದೆ ಮೌನವಹಿಸಿ ಹೈ-ಪ್ರೋಪೈಲ್ ಬೂಟುಗಳನ್ನು ಮೂಸುತ್ತಿದ್ದೀರಿ ಎನ್ನುವುದೇ ಅಸಹ್ಯಗತಿ ಅಲ್ಲವೇ..? ನಿಮ್ಮಗಳ ಆತ್ಮದ ಸದ್ದಿಗಾದರೂ ನಿರ್ವಂಚನೆ ಇಲ್ಲದೆ ಸಾಗಬೇಕಲ್ಲವೇ..? ಹೇಳಿ ಪತ್ರಿಕಾ ಸಂಘಟಕರೆ ನೀವು ಯಾವ ಮೌಲ್ಯಗಳನ್ನು ಉಳಿಸಿದ್ದಿರಿ ಎದೆಗಾರಿಕೆಯಿಂದ ಇಂದು ಸಾರಿಬಿಡಿ,

ಯಾವ ಪತ್ರಕರ್ತ-ಪತ್ರಿಕೆಯ ಏಳಿಗೆಯನ್ನು ಸಹಿಸಿದ್ದೀರಿ..? ನೀವುಗಳೇ ಅಂತಹ ಸಲ್ಲದವರ ಮೇಲೆ ಅದೆಷ್ಟು ಮೂಕರ್ಜಿಗಳನ್ನು ಹಾಕಿ ಹಿಂಸಿಸಿಲ್ಲ, ಒಂದೆಜ್ಜೆ ಮುಂದೆ ಹೋಗಿ ಅವರ ಬದುಕುಗಳನ್ನು ನಾಶಪಡಿಸಿಲ್ಲ, ಹೇಳಿ..? ನೀವು ಮೊನ್ನೆ ಪಾಟೀಲ್ ಪುಟ್ಟಪ್ಪನಂತಹವರ ಸಾರ್ಥಕ ಬದುಕಿನ ಎಳೆ-ಎಳೆಯನ್ನು ಬಿಡಿಸಿ ಹೇಳುತ್ತಿದ್ದ ನಿಮ್ಮಗಳಿಗೆ ಯಾವ ಪ್ರಶಸ್ತಿ ಕೊಡಿಸಬೇಕೋ ಎಂದೆನಿಸಿತ್ತು, ಅಲ್ಲದೇ ಯಾವ ರಂಗನಾಟಕದ ಪಾತ್ರದಾರಿಗೂ ಕಡಿಮೆ ಇಲ್ಲದಂತೆ ಮುಖಭಾವ, ಭಾಷಣದ ಏರಿಳಿತ ದನಿಗಳನ್ನು ಕೇಳಿ ಎಂತಹ ಅಪರಿಮಿತವಾದ ಪತ್ರಕರ್ತ-ಪತ್ರಿಕಾ ಸಂಘಟಕನೆಂದು ಚಪ್ಪಾಳೆ ತಟ್ಟಿಬಿಡಬೇಕು ಎಂದೆನಿಸಿ ಬಿಡಬೇಕು, ಅಂತಹ ಡ್ರಾಮಿಸ್ಟ್ ಪಾತ್ರವನ್ನು ಬಿತ್ತುವ ಕಲೆ(ಕೊಲೆ)ಗಾರಿಕೆ ನಿಮ್ಮಗಳಲ್ಲದೆ ಬೇರಾರಿಗೂ ಇಲ್ಲ ಎನ್ನುವುದನ್ನು ದೃಡಪಡಿಸಿಬಿಟ್ರಿ.

       ನೋಡಿ ಸ್ವಾಮಿಗಳೇ (ಪೆನ್ನಿಗರೇ) ಪಾಟೀಲ್ ಪುಟ್ಟಪ್ಪ (ಪಾಪು) ರವರ ಸಾವು ಎಂದಿಗೂ ಈ ಕನ್ನಡದ ನೆಲಕ್ಕೆ ನಷ್ಟವಾಗಿಲ್ಲ, ಅವರು ಬಾಹ್ಯಮುಖಿಯಾಗಿ ಇಲ್ಲದೇ ಹೋದರು ಅವರ ಬದುಕಿನ ಶಾಸನಗಳಲ್ಲಿ ನಮ್ಮೊಂದಿಗೆ ಸದಾ ಇದ್ದೇ ಇರುತ್ತಾರೆ ನೀವುಗಳು ಬದುಕಿದ್ದಾಗಲೇ ಸತ್ತರು, ಅವರು ಅಜರಾಮರಾಗಿಯೇ ಈ ಕನ್ನಡದೆದೆಗಳಲ್ಲಿ ಉಳಿದು ಹೋಗಿದ್ದಾರೆ, ಸಾಧ್ಯವಾದರೆ ಬನ್ನಿ ನಾವುಗಳೆಲ್ಲಾ ಸೇರಿಯೇ ಅವರ ನೈತಿಕ-ಮೌಲ್ಯಗಳನ್ನು ಯಾವ ಜಾತಿ-ಮತ-ಪಂಥ ರಾಜಕೀಯದ ಹೈ-ಪ್ರೋಪೈಲ್ ಬೂಟಿನ ಸೇವೆಗಳ ಅಡ್ಡಬೇಲಿಗಳಿಲ್ಲದೆ ಉಳಿಸೋಣ,

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I