Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I
ಸೂರ್ಯಗಗನ

 I ಮೃತ ಪತ್ರಕರ್ತ ಅನಿಲ್ ನಾಯ್ಕ ಕುಟುಂಬಕ್ಕೆ I ಆರ್ಥಿಕ ನೆರವಿಗಾಗಿ ಮನವಿ I ತಲುಪದಿದ್ದರೆ ಅಕ್ಷರದ ಹೋರಾಟ ಅನಿವಾರ್ಯ I

 I ಮೃತ ಪತ್ರಕರ್ತ ಅನಿಲ್ ನಾಯ್ಕ ಕುಟುಂಬಕ್ಕೆ I ಆರ್ಥಿಕ ನೆರವಿಗಾಗಿ ಮನವಿ I ತಲುಪದಿದ್ದರೆ ಅಕ್ಷರದ ಹೋರಾಟ ಅನಿವಾರ್ಯ I ಶಿವಮೊಗ್ಗ : ಪತ್ರಕರ್ತರಿಗೆ ಜೀವನ ಭದ್ರತೆ ಇದಿಯಾ..? ಎನ್ನುವಂತಹ ಪ್ರಶ್ನೆ ಇದೀಗ ದೃಶ್ಯ ಮಾಧ್ಯಮದ ಪತ್ರಕರ್ತ, ಮೃತ ಅನಿಲ್…

 I ಮೃತ ಪತ್ರಕರ್ತ ಅನಿಲ್ ನಾಯ್ಕ ಕುಟುಂಬಕ್ಕೆ I ಆರ್ಥಿಕ ನೆರವಿಗಾಗಿ ಮನವಿ I ತಲುಪದಿದ್ದರೆ ಅಕ್ಷರದ ಹೋರಾಟ ಅನಿವಾರ್ಯ I

ಶಿವಮೊಗ್ಗ : ಪತ್ರಕರ್ತರಿಗೆ ಜೀವನ ಭದ್ರತೆ ಇದಿಯಾ..? ಎನ್ನುವಂತಹ ಪ್ರಶ್ನೆ ಇದೀಗ ದೃಶ್ಯ ಮಾಧ್ಯಮದ ಪತ್ರಕರ್ತ, ಮೃತ ಅನಿಲ್ ನಾಯ್ಕ ಅವರ ಮನೆ ಜಗಲಿಗೆ ತಲುಪಿ ಅಣಕವಿಟ್ಟಿದೆ, ಹೌದು ಪತ್ರಕರ್ತನ ಸಾವಿಗೆ ಖಾಲಿ ಸಂತಾಪಗಳು ಸಾಂದರ್ಭಿಕವಾಗಿದೆ, ಇನ್ನೂ ಶಿವಮೊಗ್ಗದ ಜಿಲ್ಲಾಧಿಕಾರಿಗಳು ಮಾಧ್ಯಮ ಸಮಿತಿ ಅಧ್ಯಕ್ಷರು ಜಿಲ್ಲಾರಕ್ಷಣಾಧಿಕಾರಿಗಳು ಉಪಾಧ್ಯಕ್ಷರು, ವಾರ್ತಾಧಿಕಾರಿಗಳು ಕಾರ್ಯದರ್ಶಿಯಾಗಿರುವ ಈ ಸಮಿತಿಯಿಂದ ಸೌಜನ್ಯಕ್ಕಾದರು ಸಂತಾಪದ ಸಂದೇಶ ಸಾವಿನ ಸೂತಕದ ಪತ್ರಕರ್ತನ ಮನೆಗೆ ತಲುಪಲಿಲ್ಲ, ಶಿವಮೊಗ್ಗದಲ್ಲಿರುವ ವಿವಿಧ ಪತ್ರಿಕಾ ಸಂಘಟನೆಗಳಲ್ಲೂ ಅರ್ಥಿಕ ನೆರವಿನ ಪ್ರಸ್ತಾಪಗಳಿಲ್ಲ,

ಆಚ್ಚರಿ ಎಂದರೆ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ ಜನಪ್ರತಿನಿಧಿಗಳಿಗೂ ಆರ್ಥಿಕ ನೆರವಿನ ಹೆಜ್ಜೆಗಳಿಲ್ಲ, ಎಸ್.ಎನ್ ಚೆನ್ನಬಸಪ್ಪನವರ ಶಾಸಕ ನಿಧಿ, ಬಿ.ವೈ ರಾಘವೇಂದ್ರರವರ ಸಂಸದ ನಿಧಿ, ಹಾಗೂ
ಉಸ್ತುವಾರಿ ಮಂತ್ರಿಗಳಾದ ಮಧು ಬಂಗಾರಪ್ಪನವರ ವಿವೇಚನಾ ನಿಧಿಗಳಿಗೆ ಬರವಿರಲಿಲ್ಲ, ಶಿವಮೊಗ್ಗ ಮಹಾನಗರ ಪಾಲಿಕೆಯ ಬಜೆಟ್‌ನಲ್ಲಿ ಮೀಸಲಿರಿಸಿರುವ ಕ್ಷೇಮನಿಧಿ ಹಾಗೆಯೇ ಮೌನವಹಿಸಿದೆ, ಇದಕ್ಕೆ ಅಸಲಿ ಕಾರಣಗಳೇನು ಗೊತ್ತೇ..? ಜಿಲ್ಲಾಡಳಿತದ ತಾತ್ಸಾರತೆ, ಕೆಲ ಪತ್ರಕರ್ತರೇ ಪತ್ರಕರ್ತರನ್ನು ಶೋಷಣೆಗೈಯುವ ಈ ಹೊತ್ತಿನಲ್ಲಿ ದುರಂತಕ್ಕೀಡಾಗಿ ಮೃತನಾದ ಪತ್ರಕರ್ತ ಅನಿಲ್ ನಾಯ್ಕನ ಕುಟುಂಬಕ್ಕೆ ಸೋಷಿಯಲ್ ಮೀಡಿಯಾ ಮುಖೇನ ಅನಿಲ್ ನಾಯ್ಕನ ಭಾವಚಿತ್ರ ಹಾಕಿಕೊಂಡು ಸಂತಾಪ ಸೂಚಿಸಿ ಕೈತೊಳೆದುಕೊಂಡ ಜನಪ್ರತಿನಿಧಿಗಳು ಕೋಮುಗಲಭೆಯಂತಹ ಘಟನಾವಳಿಗಳಲ್ಲಿ ಜೀವ ಕಳೆದುಕೊಂಡವರ ಮನೆಗೆ ಲಕ್ಷೆಪಲಕ್ಷ ಹಣದ ಚೆಕ್ ಹೆಣದ ಮುಂದಡಿಯೇ ಇಡುತ್ತಾರೆ, ಜಿಲ್ಲಾಡಳಿತ ತಕ್ಷಣವೇ ತಮ್ಮ ಆರ್ಥಿಕ ಹೆಡ್‌ನಿಂದ ಚೆಕ್ ಬಿಡುಗಡೆ ಮಾಡುತ್ತದೆ, ಪತ್ರಕರ್ತರ ವಲಯದಲ್ಲಿ ಏನಾಗಿದೆ ನೋಡಿ..?

ಇದೊಂದು ಪಕ್ಷಪಾತವಲ್ಲದೆ ಮತ್ತೇನು..? ಇಂತಹದೊಂದು ನಿಲುವು ಸಮಂಜಸವಾದುದ್ದಲ್ಲವಾಗಿದೆ, ಪುಗುಸೊಟ್ಟೆ ಸಂತಾಪಗಳು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಮಗ್ಗಲು ಬದಲಿಸಿರುವ ರಾಜಕಾರಣಿಗಳು ಈ ಕೂಡಲೇ ತಮ್ಮ ಪೋಸ್ಟಿಂಗ್ ಸಾಧ್ಯವಾದರೆ ಡಿಲೀಟ್ ಮಾಡಿಕೊಳ್ಳಲಿ, ಅಥವಾ ಸಂತಾಪ ಸೂಚಿಸುವ ಮಾನವೀಯ ಗುಣಗಳು, ಓರ್ವ ಪತ್ರಕರ್ತನ ಕುಟುಂಬದ ಮೇಲಿದ್ದರೆ ಇಂದೇ ಪತ್ರಕರ್ತ ಅನಿಲ್ ನಾಯ್ಕನ ಮನೆಗೆ ಹೋಗಿ ಆರ್ಥಿಕ ನೆರವು ನೀಡಿ ಸಂತಾಪಕ್ಕೊಂದು ನಿಜವಾದ ಅರ್ಥ ತಂದುಕೊಡಲಿ ಎನ್ನುವುದಾಗಿದೆ, ಏಕೆಂದರೆ ಪತ್ರಕರ್ತನೋರ್ವ ಯಾವ ಸಮಯದ ಪರಿಮಿತಿಗಳಿಲ್ಲದೆ, ಬದುಕಿನ ಆರ್ಥಿಕ ಹಾಗೂ ಜೀವ ಭದ್ರತೆಗಳಿಲ್ಲದೆ ರಾಷ್ಟ್ರ ಸಂವಿಧಾನವಾದ ನಾಲ್ಕನೆ ಅವಿಭಾಜ್ಯ ಅಂಗವಾದ ಪತ್ರಿಕಾಂಗದ ಅಭಿವ್ಯಕ್ತಿ ಅಡಿಯಲ್ಲಿ ಸಾಮಾಜಿಕವಾಗಿ ಶ್ರಮಿಸಿರುತ್ತಾನೆ ಎನ್ನುವ ಮೂಲಭೂತವಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಈ ಕೂಡಲೇ ಪತ್ರಕರ್ತ ಎಸ್. ಅನಿಲ್ ನಾಯ್ಕನ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಿ ಎನ್ನುವುದು ಸೂರ್ಯಗಗನ ಪತ್ರಿಕೆಯ ಆಗ್ರಹವಾಗಿದೆ.

ಮೃತ ಎಸ್.ಅನಿಲ್ ನಾಯ್ಕ ಮೂರುವರೆ ವರ್ಷದ ಗಂಡು ಮಗು ಹಾಗೂ ಓರ್ವ ಮಗಳು, ಪತ್ನಿಯನ್ನು ಅಗಲಿದ್ದು, ಆತನಿಲ್ಲದ ಪತ್ರಕರ್ತ ಮನೆ ಇದೀಗ ಅನಾಥವಾಗಿದೆ, ಸಂತಾಪಗಳು ಸುದ್ದಿಗಾಗಿ, ಅನುಕಂಪವಾಗಿ ಬಳಕೆಯಾಗದೆ ಅನ್ಯ ಸಂಗತಿಗಳಿಗೆ ರಾಜಕೀಯ ಲಾಭ-ಲೋಭಕ್ಕಾಗಿ ಬಳಕೆಯಾಗುವ ಆರ್ಥಿಕ ಅನುಕುಂಪಗಳು, ಕಳೆದ ಇಪ್ಪತ್ತು ವರುಷದಿಂದ ಶಿವಮೊಗ್ಗದ ವಾಯ್ಸ್ ಆಫ್ ಶಿವಮೊಗ್ಗ ದಿನಪತ್ರಿಕೆಯ ಮೂಲಕ ವೃತ್ತಿಜೀವನ ಆರಂಭಿಸಿದ್ದ ಅನಿಲ್ ನಾಯ್ಕ ಟಿವಿ.೯ ಚಿಕ್ಕಮಗಳೂರು ಜಿಲ್ಲಾ ಕ್ಯಾಮೆರಾಮನ್ ಆಗಿ ಸೇವೆ ಸಲ್ಲಿಸಿ ನಂತರ ಬಿಟಿವಿ ಶಿವಮೊಗ್ಗದ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು ಆದರೆ ದುರಂತದ ಅಪಘಾತದಲ್ಲಿ ಮೃತರಾಗಿ ಯಾವುದೇ ಜೀವನ ಭದ್ರತೆಯನ್ನು ಕುಟುಂಬಕ್ಕೆ ಮಾಡಿ ಕೊಡದೆ, ಬಾರದ ಊರಿಗೆ ಪಯಣಿಸಿರುವ ಬಿ.ಟಿವಿ ವರದಿಗಾರ ಅನಿಲ್ ಕುಟುಂಬಕ್ಕೆ ಸಾಮಾಜಿಕ ನ್ಯಾಯದ ದಿಸೆಯಲ್ಲಿ ಆರ್ಥಿಕ ನೆರವು ಅಗತ್ಯವಾಗಿದೆ.

ಈ ಕೂಡಲೇ ಪತ್ರಕರ್ತ ಅನಿಲ್ ನಾಯ್ಕನ ಕುಟುಂಬಕ್ಕೆ ಜಿಲ್ಲಾಡಳಿತ ಹಾಗೂ ಆಡಳಿತರೂಢ ಜನಪ್ರತಿನಿಧಿಗಳ ಅನುದಾನಗಳ ನಿಧಿಯಿಂದ ಆರ್ಥಿಕ ನೆರವು ನೀಡಲು ಮುಂದಾಗದಿದ್ದರೆ ಅಕ್ಷರದ ಹೋರಾಟ ಅನಿವಾರ್ಯ ಎಂದು ಸೂರ್ಯಗಗನ ಕನ್ನಡ ಪತ್ರಿಕೆ ತಿಳಿಸುತ್ತದೆ.

Gara Srinivas

Gara Srinivas

Leave a comment

error: Content is protected !!