Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I
ಸೂರ್ಯಗಗನ

I ವಾರ್ಷಿಕ ಕೆಯುಡಬ್ಲ್ಯೂಜೆ ಪ್ರಶಸ್ತಿಗೆ I ಭಾಜನರಾದ ಮೂವರು ಪತ್ರಕರ್ತರು I

I ವಾರ್ಷಿಕ ಕೆಯುಡಬ್ಲ್ಯೂಜೆ ಪ್ರಶಸ್ತಿಗೆ I ಭಾಜನರಾದ ಮೂವರು ಪತ್ರಕರ್ತರು I ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಪತ್ರಕರ್ತರಾದ ಶರತ್‌ಕುಮಾರ್ ಎಸ್ ಮತ್ತು ಸಾಗರದ ಮಹೇಶ್ ಹೆಗಡೆ ಹಾಗೂ ಅರುಣ್‍ ಕುಮಾರ್ ಅವರಿಗೆ ಪ್ರತಿಷ್ಠಿತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದ ( ಕೆಯುಡಬ್ಲ್ಯೂಜೆ…

I ವಾರ್ಷಿಕ ಕೆಯುಡಬ್ಲ್ಯೂಜೆ ಪ್ರಶಸ್ತಿಗೆ I ಭಾಜನರಾದ ಮೂವರು ಪತ್ರಕರ್ತರು I

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಪತ್ರಕರ್ತರಾದ ಶರತ್‌ಕುಮಾರ್ ಎಸ್ ಮತ್ತು ಸಾಗರದ ಮಹೇಶ್ ಹೆಗಡೆ ಹಾಗೂ ಅರುಣ್‍ ಕುಮಾರ್ ಅವರಿಗೆ ಪ್ರತಿಷ್ಠಿತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದ ( ಕೆಯುಡಬ್ಲ್ಯೂಜೆ ) 2024 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸಂದಿದ್ದು, ಜಿಲ್ಲೆಯ ಪತ್ರಿಕೋದ್ಯಮಕ್ಕೆ ಇನ್ನಷ್ಟು ಮರೆಗು ತಂದಿದೆ.

ಆರ್ಥಿಕ ದುರ್ಬಲ ವರ್ಗದವರ ಕುರಿತ ಅತ್ಯುತ್ತಮ ವರದಿಗಾಗಿ ನೀಡುವ “ಬಿ.ಜಿ ತಿಮ್ಮಪ್ಪಯ್ಯ ಪ್ರಶಸ್ತಿ” ಗೆ ಶಿವಮೊಗ್ಗದ ಉದಯವಾಣಿ ಪತ್ರಿಕೆ ಹಿರಿಯ ವರದಿಗಾರರಾದ ಶರತ್ ಕುಮಾರ್ ಎಸ್ ಅವರು ಆಯ್ಕೆಯಾಗಿದ್ದಾರೆ. ಉದಯವಾಣಿ ಪತ್ರಿಕೆಯಲ್ಲಿ ‘ಅರಣ್ಯ ಇಲಾಖೆಯಿಂದ ವಕ್ಫ್ ಬೋರ್ಡು ಮಾದರಿ ಕಾರ್ಯಾಚರಣೆ’ ಶೀರ್ಷಿಕೆಯಡಿ ತುಂಗಾ ಜಲಾಶಯ ಮುಳುಗಡೆ ಸಂತ್ರಸ್ತರ ಕುರಿತು ಬರೆದ ಸರಣಿ ವರದಿಗೆ ಈ ಪ್ರಶಸ್ತಿ ಸಂದಿದೆ.

ಶರತ್ ಕುಮಾರ್ : ಭದ್ರಾವತಿಯ ಸಿದ್ದಲಿಂಗಪ್ಪ ಮತ್ತು ಶ್ರೀಮತಿ ಗಿರಿಜಮ್ಮ ಅವರ ಪುತ್ರರಾದ ಶರತ್ ಕುಮಾರ್ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಜನಶ್ರೀ ನ್ಯೂಸ್ ಚಾನಲ್, ಪ್ರಜಾವಾಣಿ, ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಸಿದ್ದಾರೆ . ಪ್ರಸ್ತುತ ಉದಯವಾಣಿ ಪತ್ರಿಕೆಯ ಶಿವಮೊಗ್ಗ ಮುಖ್ಯವರದಿಗಾರರಾಗಿದ್ದಾರೆ.

ಎರಡು ದಶಕಗಳಿಂದ ಪತ್ರಿಕೋದ್ಯಮದಲ್ಲಿ ವೃತ್ತಿ ನೈಫುಣ್ಯತೆ ಮತ್ತು ವೃತ್ತಿಪರತೆಯನ್ನು ಕಾಯ್ದುಕೊಂಡಿರುವ ಸಂವೇದನಾಶೀಲ ಗುಣದ ಶರತ್‌ಕುಮಾರ್ ಅವರ ಮಾನವೀಯ ವರದಿಗಳು ಓದುಗರ , ಸರ್ಕಾರದ ಗಮನಸೆಳೆದಿವೆ.

ಶಿವಮೊಗ್ಗ ಜಿಲ್ಲೆಯ ಸಾಗರದ ಸಂಯುಕ್ತ ಕರ್ನಾಟಕ ಪತ್ರಿಕೆಯ ವರಿದಿಗಾರ ಮಹೇಶ್ ಹೆಗಡೆ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ( ಕೆಯುಡಬ್ಲ್ಯೂಜೆ ) ನೀಡುವ ಸಮಗ್ರ ವಿಭಾಗದಲ್ಲಿ “ಅಭಿಮಾನಿ ಪ್ರಕಾಶನ ಪ್ರಶಸ್ತಿ” ಗೆ ಭಾಜನರಾಗಿದ್ದಾರೆ.

ಸಾಗರ ತಾಲ್ಲೂಕಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಕಬಳಿಕೆ ಕುರಿತು ಸಂಯುಕ್ತ ಕರ್ನಾಟಕದಲ್ಲಿ ಸರಣಿ ವರದಿ ಮಾಡಿದ್ದು, ಅದರ ಪರಿಣಾಮ ಲೋಕಾಯುಕ್ತ ತನಿಖೆ ಕೂಡ ನಡೆದು ಸರ್ಕಾರದ ಗಮನ ಸೆಳೆದಿತ್ತು.

ಈ ವರದಿಯನ್ನು ಅತ್ಯುತ್ತಮ ವರದಿಯನ್ನಾಗಿ ಪರಿಗಣಿಸಿ 2024 ನೇ ಸಾಲಿನ “ಅಭಿಮಾನಿ ಪ್ರಕಾಶನ ಪ್ರಶಸ್ತಿಗೆ” ಅಯ್ಕೆ ಮಾಡಲಾಗಿದೆ. ಸಾಗರದ ಗಣೇಶ್ ಹೆಗಡೆ ಮತ್ತು  ಪಾರ್ವತಿ ಅವರ ಪುತ್ರರಾಗಿರುವ ಮಹೇಶ್ ಹೆಗಡೆ ಕಳೆದ 27 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ವೃತ್ತಿಪರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಪ್ರಸ್ತುತ ಸಂಯುಕ್ತ ಕರ್ನಾಟಕ’ ಪತ್ರಿಕೆಯ ಸಾಗರ ವರದಿಗಾರರಾಗಿದ್ದಾರೆ.

ತನಿಖಾ ವರದಿಗಳನ್ನು ಬರೆಯುವಲ್ಲಿ ಸಿದ್ದಹಸ್ತರಾಗಿರುವ ಮಹೇಶ್ ಹೆಗಡೆ ಅವರು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಬರೆದ ತನಿಖಾವರದಿಗಳು ತೀರ್ಪುಗಾರರ ಮೆಚ್ಚುಗೆ ಗಳಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಸಮಗ್ರ ವಿಭಾಗದಲ್ಲಿ ಅತ್ಯುತ್ತಮ ವರದಿಗೆ ನೀಡುವ 2024 ನೇ ಸಾಲಿನ ಅಭಿಮಾನಿ ಪ್ರಕಾಶನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಿಟಿ ಹೈಲೈಟ್ಸ್ ಇಂಗ್ಲಿಷ್ ಪತ್ರಿಕೆಯ ಶಿವಮೊಗ್ಗ ವರದಿಗಾರ ಎಂ.ಪಿ.ಅರುಣ್ ಕುಮಾರ್ ಅವರಿಗೆ ಗಣೇಶ್.ಜಿ. ದತ್ತಿ ಪ್ರಶಸ್ತಿ ದೊರಕಿದೆ.

ಅರುಣ್ ಕುಮಾರ್ : ಮೂಲತಃ ಹೊನ್ನಾಳಿ ತಾಲೂಕು ಮಾಸಡಿಯವರಾದ ಎಂ.ಪಿ.ಅರುಣಕುಮಾರ್ ಕಳೆದ ಕಳೆದ ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಇದ್ದಾರೆ. ಪ್ರಸ್ತುತ ಸಿಟಿ ಹೈಲೈಟ್ಸ್ ಪತ್ರಿಕೆ ಶಿವಮೊಗ್ಗ ಮುಖ್ಯಸ್ಥರಾಗಿದ್ದಾರೆ.

ಈ ಮುಂಚೆ, ‘ಪೊಲೀಸ್ ವರ್ಲ್ಡ್’, ‘ಕರ್ನಾಟಕ ದೂತ’ ‘ಹಾಯ್ ಬೆಂಗಳೂರು’ ಈ ಟಿವಿಯಲ್ಲಿ ಕೆಲಸ ಮಾಡಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಇಂಗ್ಲೀಷ್ ದಿನಪತ್ರಿಕೆ ‘ಸಿಟಿ ಹೈಲೈಟ್ಸ್’ನ ಶಿವಮೊಗ್ಗ ಆವೃತ್ತಿಯ ಬ್ಯೂರೋ ಛೀಪ್ ಆಗಿ ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಲ್ಲದೆ, ರಾಜ್ಯಮಟ್ಟದ ‘ಉದಯ ಕರ್ನಾಟಕ’ ಪಾಕ್ಷಿಕ ಪತ್ರಿಕೆಯ ಸಂಪಾದಕರೂ ಆಗಿದ್ದಾರೆ. ಈ ಪ್ರಶಸ್ತಿ ಅವರ ವೃತ್ತಿ ಬದ್ದತೆ ಮತ್ತು ಕೌಶಲ್ಯಕ್ಕೆ ಸಂದ ಗೌರವವಾಗಿದೆ.

ಪ್ರಶಸ್ತಿಪ್ರದಾನ ಏಪ್ರಿಲ್ 11 ಮತ್ತು 12 ರಂದು ಬೀದರ್ ನಲ್ಲಿ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ, ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಪ್ರಶಸ್ತಿಗೆ ಭಾಜನರಾದ ಶರತ್‌ಕುಮಾರ್ ಎಸ್. ಮತ್ತು ಮಹೇಶ್‌ಹೆಗಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನಕಾರ್ಯದರ್ಶಿ ಜಿ.ಸಿ ಲೋಕೇಶ್ ತಿಳಿಸಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾಗಿರುವ ಶಿವಮೊಗ್ಗ ಜಿಲ್ಲೆಯ ಈ ಮೂವರು ಪತ್ರಕರ್ತರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ ಅಭಿನಂದಿಸುತ್ತದೆ.

Gara Srinivas

Gara Srinivas

Leave a comment

error: Content is protected !!