Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I
ಸೂರ್ಯಗಗನ

I ನಗರದ ಅಕ್ಕಮಹಾದೇವಿ ವೃತ್ತದ ಬಳಿಯಿರುವ I ರಾಜಕಾಲುವೆ ಭಪರ್ ಜೋನ್ ಜಾಗ ಒತ್ತುವರಿ ತೆರವಿಗೆ I ಕರವೇ ಸ್ವಾಭಿಮಾನಿ ಬಣ ಆಗ್ರಹ I

I ನಗರದ ಅಕ್ಕಮಹಾದೇವಿ ವೃತ್ತದ ಬಳಿಯಿರುವ I ರಾಜಕಾಲುವೆ ಭಪರ್ ಜೋನ್ ಜಾಗ ಒತ್ತುವರಿ ತೆರವಿಗೆ I ಕರವೇ ಸ್ವಾಭಿಮಾನಿ ಬಣ ಆಗ್ರಹ I ಶಿವಮೊಗ್ಗ : ನಗರದ ಸವಳಂಗರಸ್ತೆಯ ಅಕ್ಕಮಹಾದೇವಿ ವೃತ್ತದ ಬಳಿಯಿರುವ ರಾಜಕಾಲುವೆಯ ಭಪರ್ ಜೋನ್ ವ್ಯಾಪ್ತಿಯ ೨.೦೦…

I ನಗರದ ಅಕ್ಕಮಹಾದೇವಿ ವೃತ್ತದ ಬಳಿಯಿರುವ I ರಾಜಕಾಲುವೆ ಭಪರ್ ಜೋನ್ ಜಾಗ ಒತ್ತುವರಿ ತೆರವಿಗೆ I ಕರವೇ ಸ್ವಾಭಿಮಾನಿ ಬಣ ಆಗ್ರಹ I

ಶಿವಮೊಗ್ಗ : ನಗರದ ಸವಳಂಗರಸ್ತೆಯ ಅಕ್ಕಮಹಾದೇವಿ ವೃತ್ತದ ಬಳಿಯಿರುವ ರಾಜಕಾಲುವೆಯ ಭಪರ್ ಜೋನ್ ವ್ಯಾಪ್ತಿಯ ೨.೦೦ ಕಿ.ಮೀ ಜಾಗವನ್ನು ಅತಿಕ್ರಮಿಸಿಕೊಂಡಿರುವ ಭಾರಿ ಕಟ್ಟಡಗಳನ್ನು ತೆರವುಗೊಳಿಸುವಂತೆ ಹಾಗೂ ಮಹಾನಗರ ಪಾಲಿಕೆಯ ಕಟ್ಟಡ ಪರವಾನಿಗೆ, ಮೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕ ಹಾಗೂ ಡಿಹೆಚ್‌ಓ ಇಲಾಖೆಯಿಂದ ಕೆಪಿಎಂಇ (ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್) ನಿಯಮಗಳ ಉಲ್ಲಂಘಿಸಿರುವ ಖಾಸಗಿ ನರ್ಸಿಂಗ್ ಹೋಂಗಳ ಪರವಾನಿಗೆಯನ್ನು ರದ್ದು ಪಡಿಸದಿದ್ದರೆ ಕರ್ನಾಟಕ ಲೋಕಾಯುಕ್ತ ತನಿಖೆಗೆ ದೂರು ಅನಿವಾರ್ಯವೆಂದು ಕರವೇ ಸ್ವಾಭಿಮಾನಿ ಬಣದಿಂದ ಆಗ್ರಹಿಸಿ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಿದೆ

ಭಪರ್ ಜೋನ್ ನಿಯಮಗಳು ಪಾಲನೆ ಆಗುತ್ತಿದಿಯಾ..?!

ಕರ್ನಾಟಕ ಸರ್ಕಾರವು ರಾಜ್ಯ ಕಾಲುವೆಗಳ ನಿರ್ವಹಣೆ ಹಾಗೂ ರಕ್ಷಣೆಗಾಗಿ ಕಟ್ಟು ನಿಟ್ಟಿನ ಕಾನೂನು ಕಾಯಿದೆಗಳನ್ನು ರೂಪಿಸಿ ಅದರಂತೆ ಜಾರಿಗೆ ಬರುವಂತೆ ಆಯಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದರೂ ಅಕ್ಷರಶಃ ಈ ನಿಯಮಗಳು ಪಾಲನೆ ಆಗುತ್ತಿದಿಯಾ..?! ಎನ್ನುವ ಪ್ರಶ್ನೆಗಳು ಹಾಗೂ ಕಾಯಿದೆಗಳನ್ನು ನಗರದ ಸವಳಂಗರಸ್ತೆಯ ಅಕ್ಕಮಹಾದೇವಿ ವೃತ್ತದ ಬಳಿಯಿರುವ ರಾಜಕಾಲುವೆಯ ಭಪರ್ ಜೋನ್ ಜಾಗ ಅತಿಕ್ರಮಿಸುವಿಕೆ ಅಣುಕಿಸುವಂತೆ ಮಾಡಿದೆ. ಇದು ನೈಸರ್ಗಿಕವಾದ ಮಳೆನೀರಿನ ಒಳಹರಿವಿಗೆ ಅಡ್ಡಿಯೂ ಆಗಿದೆ ಅಲ್ಲದೆ, ಘನ ತ್ಯಾಜ್ಯ ಹಾಗೂ ಒಳಚರಂಡಿ ನೀರನ್ನು,
ಪೈಪ್‌ಗಳನ್ನು ಕನೆಕ್ಟ್ ಮಾಡಿರುವ ಸುಮಾರು ೨.೦೦ ಕಿ.ಮೀ ವ್ಯಾಪ್ತಿಯ ಈ ರಾಜಕಾಲುವೆಯ ಭಪರ್ ಜೋನ್ ಜಾಗದ ಅತಿಕ್ರಮಣವನ್ನು ತೆರವುಗೊಳಿಸಬೇಕು ಹಾಗೂ ಕೊಟ್ಟಿರುವ ಕಟ್ಟಡ ಪರವಾನಿಗೆಗಳನ್ನು, ಕಂದಾಯ ನಿಗದಿಗಳನ್ನು ರದ್ದುಪಡಿಸಬೇಕೆಂದು ಕರವೆ ಸ್ವಾಭಿಮಾನಿ ಬಣವು ನೀಡಿರುವ ಮನವಿಯಲ್ಲಿ ತಿಳಿಸಿದೆ.

ಚಂದ್ರಗಿರಿ ನರ್ಸಿಂಗ್ ಹೋಂ ತೆರೆಯಲು ಕೆಪಿಎಂಇ ನಿಯಮ ಉಲ್ಲಂಘಿಸಿದಿಯಾ..?!

ಇದೇ ಅಕ್ಕಮಹಾದೇವಿ ವೃತ್ತದ ಬಳಿಯಿರುವ ಖಾಸಗಿ ಕಟ್ಟಡವೊಂದು ರಾಜಕಾಲುವೆಯ ಭಪರ್ ಜೋನ್ ಜಾಗವನ್ನು ಅಕ್ರಮಿಸಿಕೊಂಡಿದ್ದು ಅಲ್ಲದೆ ಶ್ರೀ ಸಾಮಾನ್ಯ ರೋಗಿಗಳಿಗೆ ಹಾಗೂ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ದಾಖಲುಗೊಳ್ಳುವ ಒಳ-ಹೊರ ರೋಗಿಗಳ ಚಿಕಿತ್ಸೆಗೆಂದು ತೆರೆಯಲಾಗಿರುವ ಚಂದ್ರಗಿರಿ ನರ್ಸಿಂಗ್ ಹೋಂ ಅದ್ಯಾಗೆ ಸುರಕ್ಷಿತವಾದ ಕಟ್ಟಡವೆಂದು ಭಾವಿಸಿದೆ..? ಎನ್ನುವುದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಬೇಕಾಗಿದೆ ಎನ್ನುವುದು ಕರವೇ ಸ್ವಾಭಿಮಾನಿ ಬಣ ಹೇಳಿದೆ

ಭಾರಿ ಅಕ್ರಮ ಕಟ್ಟಡದಲ್ಲಿ ಚಂದ್ರಗಿರಿ ನರ್ಸಿಂಗ್ ಹೋಂ..

ಇಂತಹ ಭಾರಿ ನರ್ಸಿಂಗ್ ಹೋಂಗಳ ತೆರೆಯುವಿಕೆಗೆ, ಕೆಪಿಎಂಇ (ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್) ಪ್ರಕಾರ ರೋಗಿಗಳ ಸುರಕ್ಷತೆ ಹಾಗೂ ಹಕ್ಕುಗಳ ರಕ್ಷಣೆ, ಗುಣಮಟ್ಟ ಚಿಕಿತ್ಸೆಗೆ ಆಧ್ಯತೆಯನ್ನು ಕೊಟ್ಟಿದೆ, ಹೀಗಿದ್ದರೂ ಜಿಲ್ಲಾ ಆರೋಗ್ಯಾಧಿಕಾರಿಗಳು ಅದ್ಯಾವ ರಾಜಕೀಯ ಒತ್ತಡಕ್ಕೆ ಮಣಿದು, ಅಥವಾ ನಿರೀಕ್ಷೆಗೆ ಮಣಿದು ನೈಸರ್ಗಿಕ ಮಳೆನೀರಿನ ಒಳಹರಿವಿಗೆ ಅಡ್ಡಿಯಾಗಿರುವ ಹಾಗೂ ರಾಜಕಾಲುವೆಯ ಭಪರ್ ಜೋನ್ ವ್ಯಾಪ್ತಿಯ ಜಾಗವನ್ನು ಅತಿಕ್ರಮಿಸಿಕೊಂಡಿರುವ ಭಾರಿ ಅಕ್ರಮ ಕಟ್ಟಡದಲ್ಲಿ ಚಂದ್ರಗಿರಿ ನರ್ಸಿಂಗ್ ಹೋಂ ತೆರೆಯಲು ಕೆಪಿಎಂಇ ನೊಂದಣಿ ಪ್ರಮಾಣ ಪತ್ರ ನೀಡಿರುವುದು ಸಂಪೂರ್ಣ ನಿಯಮ ಬಾಹಿರ ಆಗಿದ್ದು, ರೋಗಿಗಳಿಗೆ ಅಸುರಕ್ಷಿತವಾಗಿರುವ ಅಕ್ರಮ ಕಟ್ಟಡದಲ್ಲಿ ನರ್ಸಿಂಗ್ ಹೋಂ ತೆರೆಯಲು ನೀಡಿರುವ ಪರವಾನಿಗೆಯನ್ನು ಇದೀಗಲೇ ರದ್ದುಪಡಿಸಿ ಸುರಕ್ಷಿತವಾದ ಕಟ್ಟಡಕ್ಕೆ ರೋಗಿಗಳನ್ನು ಸ್ಥಳಾಂತರಿಸಲು ಕರವೇ ಸ್ವಾಭಿಮಾನಿ ಬಣ ಆಗ್ರಹಿಸಿದೆ.

ಬಡ ಮತ್ತು ಮಧ್ಯಮ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವಿಗೆ ಆಗ್ರಹ..

ಇಂತಹ ನೂರಾರು ಕಟ್ಟಡಗಳು, ಇನ್ನೂ ರಾಜಕಾಲುವೆಯ ಭಪರ್ ಜೋನ್ ಜಾಗವನ್ನು ಅತಿಕ್ರಮಿಸಿಕೊಂಡು ತಲೆ ಎತ್ತುತ್ತಲೇ ಇದ್ದು, ಶಿವಮೊಗ್ಗ ನಗರದ ಮಧ್ಯ ಭಾಗವಾದ ಈ ರಾಜಕಾಲುವೆಯ ಜಾಗದಲ್ಲಿರುವ ಬಡ ಮತ್ತು ಮದ್ಯಮ ನಿವಾಸಿಗಳ ಮನೆಗಳು ಸಂಪೂರ್ಣವಾಗಿ ತೆರೆವಿಗೆ ಒಳಗಾಗುವಂತಿದ್ದರೆ ಅಂತಹ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಟ್ಟು ತೆರವು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆಗೆ ಕರವೇ ಸ್ವಾಭಿಮಾನಿ ಬಣ ಮನವಿ ಮಾಡುತ್ತದೆ. ಇನ್ನೂ ಕಮರ್ಷಿಯಲ್ ಭಾರಿ ಕಟ್ಟಡಗಳು, ಆದಾಯ ತೆರಿಗೆ ಪಾವತಿಸುವ ಭಾರಿ ಕಟ್ಟಡಗಳು, ಶೇಕಡ ಎಂಬತ್ತರಷ್ಟಿದ್ದು ರಾಜಕಾಲುವೆ ಭಪರ್ ನಿಯಮಗಳ ಕಾಯಿದೆಯಂತೆ ಯಾವುದೇ ನೋಟಿಸ್ ನೀಡದೆ ತೆರವುಗೊಳಿಸಲು ಮಹಾನಗರ ಪಾಲಿಕೆಗೆ ಆಧಿಕಾರವಿದ್ದು ಕೂಡಲೇ ಈ ಕಟ್ಟಡಕ್ಕೆ ನಿಯಮ ಬಾಹಿರವಾಗಿ ಕೊಟ್ಟಿರುವ ಕಟ್ಟಡ ಪರವಾನಿಗೆ ಹಾಗೂ ಕಂದಾಯ ನಿಗದಿಗಳನ್ನು ರದ್ದು ಪಡಿಸಿ ತೆರವುಗೊಳಿಸಬೇಕೆಂದು ಈ ಮೂಲಕ ಕರವೇ ಸ್ವಾಭಿಮಾನಿ ಬಣ ಕಟುವಾಗಿ ಖಂಡಿಸಿದೆ.

ವಿದ್ಯುತ್ ಸಂಪರ್ಕ, ಪರವಾನಿಗೆ, ಕಂದಾಯ ನಿಗದಿ ಮಾಡಿರುವುದು ಅಕ್ಷಮ್ಯ ಅಪರಾಧ..

ಮೆಸ್ಕಾಂ ಇಲಾಖೆಯು ಇವ್ಯಾವ ಪರಿವೆಗಳಿಲ್ಲದೆ ವಿದ್ಯುತ್ ಸಂಪರ್ಕ ನೀಡಿರುವುದು ಅಕ್ಷಮ್ಯ ಅಪರಾಧವಾಗಿದ್ದು ಮೊದಲು ಭಾರಿ ಕಟ್ಟಡಗಳು, ಅಕ್ರಮ ಕಾಂಪ್ಲೆಕ್ಸ್‌ಗಳು, ಅಪಾರ್ಟ್‌ಮೆಂಟ್‌ಗಳು, ಕಮರ್ಷಿಯಲ್ ಖಾಸಗಿ ನರ್ಸಿಂಗ್ ಹೋಂಗಳಿಗೆ ನೀಡಿರುವ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿ ಕೊಟ್ಟಿರುವ ನಿಯಮ ಬಾಹಿರ ಪರವಾನಿಗೆ, ಹೆಚ್ಚುವರಿ ವಿದ್ಯುತ್ ಸಂಪರ್ಕಗಳನ್ನು ಕೂಡ ಸ್ಥಗಿತಗೊಳಿಸಿ ರಾಜಕಾಲುವೆಯ ಭಪರ್ ಜೋನ್ ನಿಯಮದ ಪಾಲನೆ ಮಾಡಿ ಸಾಂವಿಧಾನಿಕವಾಗಿ ನಡೆದುಕೊಳ್ಳುವಂತೆ ಈ ಮೂಲಕ ಕರವೇ ಸ್ವಾಭಿಮಾನಿ ಬಣ ಎಚ್ಚರಿಸಿದೆ.

ಲೋಕಾಯುಕ್ತ ತನಿಖೆಗೆ ದೂರು ಸಲ್ಲಿಕೆ ಅನಿವಾರ್ಯ..

ಈ ಮನವಿ ನೀಡಿದ ಏಳು ದಿನಗಳ ಗಡುವಿನೊಳಗೆ ಈ ರಾಜಕಾಲುವೆಯ ಭಪರ್ ಜೋನ್ ಜಾಗವನ್ನು ಅತಿಕ್ರಮಿಸಿಕೊಂಡಿರುವ ಸರಿ ಸುಮಾರು ಸಣ್ಣ ಕಟ್ಟಡ ಹಾಗೂ ಭಾರಿ ಕಟ್ಟಡಗಳ ತೆರವಿಗೆ ಕ್ರಮ ಜರುಗಿಸದಿದ್ದರೆ ಅನಿವಾರ್ಯವಾಗಿ ಪ್ರಸ್ತುತ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆಯ ಆಯುಕ್ತರು, ಜಿಲ್ಲಾ ಆರೋಗ್ಯಾಧಿಕಾರಿಗಳು, ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗಳ ಹೆಸರು ಹಾಗೂ ಹುದ್ದೆಗಳೊಂದಿಗೆ ಪಾರ್ಟಿಗಳನ್ನಾಗಿಸಿ ಘನ ಲೋಕಾಯುಕ್ತರ ಇಲಾಖೆಗೆ ತನಿಖೆಗಾಗಿ ದೂರು ನೀಡಲು ಕರವೇ ಸ್ವಾಭಿಮಾನಿ ಬಣ ಕರವೇ ಸ್ವಾಭಿಮಾನಿ ಬಣ ಮುಂದಾಗುತ್ತದೆ ಎಂದು ವಿವರಿಸಿದೆ, ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕರವೇ ಕಿರಣ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಕವಿತಾ.ಸಿ, ಆರತಿ ತಿವಾರಿ, ಸರಿತಾ, ಸವಿತಾ, ಜಿಲ್ಲಾ ಉಪಾಧ್ಯಕ್ಷರಾದ ಸಯ್ಯದ್ ಮುಜಿಬುಲ್ಲಾ, ವಿಜಯ್ ಕುಮಾರ್, ಮಹಮದ್ ಶಫಿ, ನೂರೂಲ್ಲಾ, ಪ್ರವೀಣ್ ಕುಮಾರ್ ಸಾಧಿಕ್, ಮಂಜುನಾಥ್, ಸತೀಶ್, ಕೇಶವ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

Gara Srinivas

Gara Srinivas

Leave a comment

error: Content is protected !!