I ಏ.21 ರಂದು I ನಗರ ಉಪವಿಭಾಗ-1ರ ಹಲವಡೆ I ವಿದ್ಯುತ್ ವ್ಯತ್ಯಯ I
ಶಿವಮೊಗ್ಗ : ಏ.21ರಂದು 220 ಕೆವಿ. ಎಂಆರ್ಎಸ್ ವಿವಿ ಕೇಂದ್ರ ಮುಖ್ಯ ಸ್ವೀಕರಣಾ ಕೇಂದ್ರದ 66 ಕೆ.ವಿ ಬಸ್ ತ್ರೈ ಮಾಸಿಕ ನಿರ್ವಹಣಾ ಕೆಲಸದ ನಿಮಿತ್ತವಾಗಿ ತಾವರೆ ಚಟ್ನಹಳ್ಳಿ ವಿವಿ ಕೇಂದ್ರದಿಂದ ಸರಬರಾಜು ಆಗುವ ಸ್ಥಳಗಳಲ್ಲಿ ಏ.21ರ ಬೆಳಿಗ್ಗೆ9.30 ರಿಂದ ಸಂಜೆ 6 ಗಂಟೆವರೆಗೆ ಈ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಲು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ರವರ ಕಛೇರಿ ನಗರ ಉಪವಿಭಾಗ-1 ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯುತ್ ವ್ಯತ್ಯಯ ಎಲೆಲ್ಲಿ..? : ಶಿವ ಬಸವ ನಗರ, ಇಂದಿರಾ ಗಾಂಧಿ ಬಡಾವಣೆ, ಕುವೆಂಪು ನಗರ, ಸೂಡಾ ಲೇ ಔಟ್, ತ್ರಿಮೂರ್ತಿ ನಗರ, ನವುಲೆ, ಮಾರುತಿ ಬಡಾವಣೆ, ಸರ್ಜಿ ಕನ್ವೆನ್ಷನ್ ಹಾಲ್, ಎಲ್.ಬಿ.ಎಸ್ ನಗರ, ಅಶ್ವತ್ ನಗರ, ಕೀರ್ತಿ ನಗರ, ದೇವಂಗಿ ೧ನೇ ಹಂತ, ಬಸವೇಶ್ವರ ನಗರ, ಡಾಲರ್ಸ್ ಕಾಲೋನಿ, ಪವನ ಶ್ರೀ ಬಡಾವಣೆ, ಕೃಷಿ ನಗರ ೧ನೇ ಹಂತ, ೨ನೇ ಮುಖ್ಯರಸ್ತೆ, ರಾಯಲ್ ಬಡಾವಣೆ, ಅನೂಪ್ ಪಟೇಲ್ ಬಡಾವಣೆ, ಪೆಬಲ್ಸ್ ಅಪಾರ್ಟ್ಮೆಂಟ್, ಶಾಂತಿನಗರ ರಾಗಿಗುಡ್ಡ, ಪಾಪ್ಯೂಲರ್ ರೈಸ್ ಮಿಲ್, ಪೇಸ್ ಕಾಲೇಜು, ತರಳಬಾಳು ಬಡಾವಣೆ, ಈಶ್ವರ್ ರೈಸ್ಮಿಲ್, ಸೇವಲಾಲ್ ನಗರ, ವಡ್ಡರಹಟ್ಟಿ, ವಿಜಯಲಕ್ಷ್ಮಿ ರೈಸ್ ಮಿಲ್, ದೇವಂಗಿ ತೋಟ, ತಾವರೆ ಚಟ್ನಳ್ಳಿ ಯೂಜಿಡಿ ಪ್ಲಾಂಟ್, ಗುಂಡಪ್ಪ ಶೆಡ್ ಯೂಜಿಡಿ ಪ್ಲಾಂಟ್, ಶಾದ್ ನಗರ, ಮಲ್ಲಿಕಾರ್ಜುನ ನಗರ, ರೆಡ್ಡಿ ಲೇ ಔಟ್, ಜೆಎಸ್ಸಿಸಿ ಇಂಜಿನಿಯರಿಂಗ್ ಕಾಲೇಜು, ಸೇರಿದಂತೆ ಸುತ್ತಮತ್ತಲಿನ ಪ್ರದೇಶಗಳಾಗಿವೆ ಎಂದು ಮೆಸ್ಕಾಂ ಇಲಾಖಾಧಿಕಾರಿಗಳು ತಿಳಿಸಿದೆ.