September 27, 2026

I ಮಲ್ಲಿಕಾರ್ಜುನ ಖರ್ಗೆಯವರ I ಹಿರಿತನಕ್ಕೆ ಶೋಭೆ ತರುವಂತದ್ದಲ್ಲ I ಶಾಸಕ ಆರಗ ಜ್ಞಾನೇಂದ್ರ I

0
araga
I ಮಲ್ಲಿಕಾರ್ಜುನ ಖರ್ಗೆಯವರ I ಹಿರಿತನಕ್ಕೆ ಶೋಭೆ ತರುವಂತದ್ದಲ್ಲ I ಶಾಸಕ ಆರಗ ಜ್ಞಾನೇಂದ್ರ I
ತೀರ್ಥಹಳ್ಳಿ : ಮಲ್ಲಿಕಾರ್ಜುನ ಖರ್ಗೆಯವರಿಗೆ ವಯಸ್ಸಾಗಿದೆ, ಈ ವಯಸ್ಸಿನ ಕಾರಣದಿಂದ ಅವರ ಮಾನಸಿಕ ಸ್ಥಿತಿ ವ್ಯತ್ಯಾಸ ಆಗಿದೆ. ಒಂದು ನ್ಯಾಷನಲ್ ಪಾರ್ಟಿಯ ಅಧ್ಯಕ್ಷ ಯಾವ ರೀತಿ ಮಾತನಾಡಬೇಕು ಎಂಬ ಸಾಮಾನ್ಯ ಅರಿವು ಇಲ್ಲ.ಅವರ ಬಾಯಿಂದ ಇಂಥ ಮಾತನ್ನು ಕೇಳಿ ತುಂಬಾ ನೋವಾಯಿತು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಮಲ್ಲಿಕಾರ್ಜುನ ಖರ್ಗೆಯವರಿಗೆ ಡೆಸ್ಪಿರೇಟ್ ಆಗಿದೆ ಯಾಕೆಂದರೆ ಇಡೀ ದೇಶದಿಂದ ಕಾಂಗ್ರೆಸ್ ಮಾಯವಾಗಿದೆ  ಅವರು ಕೇವಲ ನಾಮಕವಸ್ಥೆ ಅಧ್ಯಕ್ಷರು. ರಾಹುಲ್ ಗಾಂಧಿ ಸೋನಿಯಾ ಗಾಂಧಿಯವರೇ ಹೈಕಮಾಂಡ್ ಇವರದ್ದು ಏನು ನಡೆಯುವುದಿಲ್ಲ. ದೇಶದಲ್ಲಿ, ರಾಜ್ಯದಲ್ಲಿ ಈ ರೀತಿಯ ಸ್ಟೇಟ್ಮೆಂಟ್ ಕೊಟ್ಟುಕೊಂಡು ನಾವು ಇನ್ನೂ ಅಧಿಕಾರದಲ್ಲಿ ಇದ್ದೇವೆ ಎಂದು ಕೊಂಡಿದ್ದಾರೆ.  ನಾವು ಅವರ ಮಾತನ್ನು ಖಂಡಿಸುತ್ತೇವೆ. ಇದು ಅವರ ಹಿರಿತನಕ್ಕೆ ಶೋಭೆ ತರುವಂತದ್ದಲ್ಲ ಎಂದರು.
ಇನ್ನು ಗೃಹಸಚಿವ ಡಿಜಿ ಪರಮೇಶ್ವರ್ ಅವರು ಏನೋ ತಮಾಷೆ ಮಾಡಲು ಹೋಗಿ ಕೋರ್ಟ್ನಲ್ಲಿ ಸಿಕ್ಕಾಕಿಕೊಂಡಿದ್ದಾರೆ ಒಂದು ಸ್ಥಾನಮಾನದಲ್ಲಿ ಇರುವವರು ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.
Spread the love

Leave a Reply

Your email address will not be published. Required fields are marked *

error: Content is protected !!