Sunday, August 2, 2026
HomeಅಂಕಣI ಡಾ.ರಾಜ್‌ಕುಮಾರ್ ಸಮಾಧಿ ಕುರಿತು I ಚೇತನ ಅಹಿಂಸಾ ಎಂಬಾತ I ಸೃಷ್ಟಿಸಿದ ಹೊಸತೊಂದು ವಿವಾದ...

I ಡಾ.ರಾಜ್‌ಕುಮಾರ್ ಸಮಾಧಿ ಕುರಿತು I ಚೇತನ ಅಹಿಂಸಾ ಎಂಬಾತ I ಸೃಷ್ಟಿಸಿದ ಹೊಸತೊಂದು ವಿವಾದ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಡಾ.ರಾಜ್‌ಕುಮಾರ್ ಸಮಾಧಿ ಕುರಿತು I ಚೇತನ ಅಹಿಂಸಾ ಎಂಬಾತ I ಸೃಷ್ಟಿಸಿದ ಹೊಸತೊಂದು ವಿವಾದ I

“ಸಾಂದರ್ಭಿಕವಾದ ಹೇಳಿಕೆಗಳು ಭಯೋತ್ಪಾದಕತೆಯ ಮೂಲ” ಎನ್ನುವ ಅತೀಸೂಕ್ಷ್ಮತೆ ಚೇತನ್ ಅಹಿಂಸಾ ಎಂಬಾತನಿಗೆ ಅರಿವಿಗಿಲ್ಲದಾಗಿದೆ, ಈತನ ಹೇಳಿಕೆಗಳು, ಸೃಷ್ಟಿಸುತ್ತಿರುವ ವಿವಾದಗಳು ಎಲ್ಲವೂ ಆಯಾ ಘಟಿತ ಘಟನೆಗಳಿಗೆ, ವೇದಿಕೆಗಳ ಸ್ಪರ್ಶ ಜ್ಞಾನದಾಹದಿಂದಲೇ ಉಗಮವಾಗುತ್ತಿದಿಯೋ..? ಅಥವಾ ಇದರ ಹಿಂದೆ ಮತ್ಯಾವ ಉದ್ದೇಶಿತವಾಗಿ ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕುವ ಸ್ಥಿತ್ಯಂತರಗಳ ಪೂರ್ವ ಯೋಜಿತವೋ..? ಎನ್ನುವುದು ಪೊಲೀಸರು ತನಿಖಿಸಬೇಕಾದ ಅತೀ ಜರೂರತ್ತಿದೆ.

ಒಮ್ಮೆಲೆ ಭಾರತೀಯ ಪರಂಪರೆಗಳ ವಿರುದ್ದ ದನಿ ಎತ್ತುವನೀತ, ಇನ್ನೊಮ್ಮೆ ಬಲಪಂಥಿಯವಾದದ ವಿರುದ್ದ ಸಂಪೂರ್ಣ ಸೋಶಿಯಲ್ ಮೀಡಿಯಾದೊಳು ಮಾನಸೀಕ ಬೆತ್ತಲಾಗಿ ಬಿಡುತ್ತಾನೆ, ಮೊದಲು ಮನುಷ್ಯನಾಗಿ ಮಾನವತಾವಾದಿಯಾಗಬೇಕೆ ವಿನಃ ಪಂಥೀಯ ವಾದಗಳ ಕೊನೆತುದಿಯ ಸಮಾದಿಯ ಹೆಡೆ ಆಗಬಾರದು,
ಹೌದು ದೇಶದಲ್ಲಿ ರಾಜಕೀಯದ ಜಾತಿಯತೆ, ಧರ್ಮಾಂದತೆಗಳ ವಿಷವರ್ತುಲಗಳಿದೆ, ಇದು ಹದ್ದು ಮೀರಿದಾಗ ದೇಶಿಯ ಸಂವಿಧಾನದ ಹಕ್ಕುಗಳು ಪ್ರಶ್ನಿಸುತ್ತದೆ, ಕಾನೂನು ತನ್ನ ಕೆಲಸ ಮಾಡುತ್ತದೆ, ಆಂತರಿಕ ಭದ್ರತೆ, ಜನಾಂಗಿಯ ದೊಂಬಿಗಳು, ಸಮಾನತೆಯ ಹಕ್ಕುಗಳ ಚ್ಯುತಿ ಆಗುವ ಪ್ರತಿ ಸನ್ನಿವೇಶಗಳಲ್ಲಿ ಕಾನೂನು ಕೆಲಸ ಮಾಡಿದೆ, ಮಾಡದೆ ದುರುಪಯೋಗವಾಗುತ್ತಿದ್ದರೆ ಪ್ರತಿಭಟಿಸುವ ಮನಸುಗಳಿಂದ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿದೆ. ಯಾವುದೇ ಕಾಲಮಾನದಲ್ಲಿಯೂ ನಾಲ್ಕು ಅವಿಭಾಜ್ಯ ಅಂಗಗಳಿಂದ ಕಣ್ತಪ್ಪಿಸಿಕೊಂಡು ಅರಾಜಕತೆ ಸೃಷ್ಟಿಯೇ ಆಗಿಲ್ಲ, ಎಂದ ಮೇಲೆ ಈ ಚೇತನ್ ಎಂಬಾತ ಅರೆಬೆಂದನೋರ್ವ ಸಮಾಜದಲ್ಲಿ ಆಗಾಗ್ಗೆ ಅರಾಜಕತೆ ಸೃಷ್ಟಿಸಲು ವಿವಾದಗೈಯುತ್ತಿರುವುದು ಉದ್ದೇಶಪೂರಿತವಾಗಿಯೇ ಇದೆ.

ಹೀಗಾಗಿಯೇ ನಿನ್ನೆಯ ದಿನದಂದು ಈತನ ಪೇಸ್ಬುಕ್ ಸೋಶಿಯಲ್ ಮೀಡಿಯಾದ ಗೋಡೆನಲ್ಲಿ ಡಾ.ರಾಜ್ ಸಮಾಧಿಗೆ ೨.೫ ಎಕರೆ ಭೂಮಿ ಕೊಟ್ಟಿದ್ದು ತಿಳುವಳಿಕೆಯ ಕೊರತೆ ಎಂದು ಬರೆದುಕೊಂಡಿದ್ದಾನೆ, ಅಲ್ಲದೆ ೨೧ನೇ ಶತಮಾನದಲ್ಲಿ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ ಆಗಿದೆ, ಇದು ಮತಗಳ ಲಾಭ, ಅವಕಾಶವಾದಿ ಉದ್ದೇಶದಿಂದಲ್ಲ ಎನ್ನುವ ಈತನು ತಾನೇನು ಮೊಹರೊತ್ತಿದ್ದೇನೆ ಎನ್ನುವ ಸಣ್ಣದೊಂದು ಅರಿವು, ತಿಳುವಳಿಕೆ, ವಿವೇಕವನ್ನೇ ನಷ್ಟ ಮಾಡಿಕೊಂಡಿರುವುದನ್ನು ತಿಳಿಸದೇ ಮಾಧ್ಯಮಿಗಳು ಕೂಡ ಈತನ ಸೋಶಿಯಲ್ ಮೀಡಿಯಾದೊಳಗಿನ ಹೇಳಿಕೆಯನ್ನು ಈ ಹೊತ್ತಿನ ಹಾಟ್ ಬ್ರೇಕಿಂಗ್ ಸುದ್ದಿ ಮಾಡಿಕೊಂಡಿರುವುದು ಬಹುದೊಡ್ಡ ದುರಂತವಾಗಿದೆ,

ಅಸಲಿಗೆ ಇದನ್ನು ಸುದ್ದಿಗೆ ಗ್ರಾಸವಾಗಲು ಬಿಡದೆ ಆತನ ಮೇಲೆ ಬಿಎನ್‌ಎಸ್ ಕಾಯ್ದೆ ಅನ್ವಯವೇ ದೂರು ದಾಖಲಿಸಿ ತನಿಖಿಸುವಂತೆ ಆಗ್ರಹಿಸಬೇಕಷ್ಟೆ, ಏಕೆಂದರೆ ಈತ ಒಂದೇ ಮಾನಸೀಕತೆಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡುವಲು ಹವಣಿಸುವ ಘಾತುಕ, ಎನ್ನುವುದು ಪ್ರಸ್ತುತ ಸಮಾಜ ಗೊತ್ತು ಮಾಡಿಕೊಂಡಿದೆ.
ಆದರೂ ಸುದ್ದಿಯಾಗಿದೆ, ಈತನಿಗೆ ಬೇಕಾಗಿದ್ದು ಪ್ರಚುರತೆ ಅದು ಇಂತಹ ಅವಿವೇಕಿ, ಕಿಡಿಗೇಡಿತನದ ಹೇಳಿಕೆಯಿಂದ ಸಿಕ್ಕೂ ಆಗಿದೆ, ಹೀಗೆ ಕಲಾರಂಗದ ಮೇಲೆ, ಕಲಾಶಾಸನಗಳ ಮೇಲೆ ದಾಳಿ ಮಾಡಿದರೆ ಇದೊಂದು ಅಪಚಾರವೇ ಸರಿ, ಕಲಾರಂಗವಿಲ್ಲದಿದ್ದೊಡೆ ಮನುಷ್ಯ ಬದುಕು ಸಾಧ್ಯವಿಲ್ಲ, ಖಾಲಿ ಔಷದೋಪಚಾರಗಳಿಂದಾಗಲಿ, ಇಂತಹ ಅವಿವೇಕಿತನದ ಪರಮಾವಧಿಯಲ್ಲಿರುವ ಚೇತನ್ ಅಹಿಂಸಾನ ಒಣ ಹೇಳಿಕೆಗಳಿಂದಾಗಲಿ ಮನುಷ್ಯ ಬದುಕು ಹಸನಗೊಳ್ಳುವುದಿಲ್ಲ, ಎಲ್ಲಿ ಕಲಾ ಸಾಂಸ್ಕೃತಿಕ ಹೆಜ್ಜೆಗಳು ಮೇಳೈಸಿಕೊಳ್ಳುತ್ತದೋ ಅಲ್ಲಿ ಆರೋಗ್ಯಕರ ಸಮಾಜ, ಸೌಹಾರ್ದತೆ, ಸಹಭಾಳ್ವೆ ತೆರೆದುಕೊಳ್ಳುತ್ತದೆ, ಈ ಕಾರಣಗಳಿಂದಾಗಿಯೇ ಕನ್ನಡದ ಸಾಂಸ್ಕೃತಿಕ ಲೋಕದ ರಾಯಭಾರಿ ಎಂದೇ ಕನ್ನಡಿಗರ ನೆಲೆಮಾನಸದೊಳಗೆ ಶಾಶ್ವತವಾಗಿರುವ ಡಾ.ರಾಜಣ್ಣ ನೆನೆವಿಗಾಗಿ ಅವರ ಸಮಾಧಿ ನಿರ್ಮಾಣಕ್ಕಾಗಿ ೨.೫ಎಕರೆ ಭೂಮಿ ಕೊಟ್ಟಿದ್ದು ತಪ್ಪಾಗಿದ್ದರೆ..? ಇದು ಅನಾಗರೀಕವಾದುದ್ದು ಎನ್ನುವುದಾಗಿದ್ದರೆ, ಕೇವಲ ಮತಗಳಿಕೆಯ ಉದ್ದೇಶಪೂರಿತವಾಗಿದ್ದರೆ ಯಾಕೆ ಕರ್ನಾಟಕದಲ್ಲಿ ಅವ್ಯಾಹತವಾಗಿರುವ ಲ್ಯಾಂಡ್ ಲಿಟಿಗೇಶನ್ ಮಾಫಿಯಾ ಕುರಿತಾಗಿ ದನಿ ಎತ್ತಲಿಲ್ಲ, ಜಾನವಾರುಗಳಿಗಾಗಿ ಮೀಸಲಾಗಿದ್ದ ಲಕ್ಷಾಂತರ ಹೆಕ್ಟರ್ ಗೋಮಾಳಗಳು, ಕುಡಿಯುವ ನೀರಿಗಾಗಿ ಇದ್ದ ಕೆರೆ ಕಟ್ಟೆಗಳು, ಇಂದು ಭೂ ಮಾಫಿಯಾ ಕಬ್ಜಾ ಮಾಡಿಕೊಂಡಿರುವುದರ ವಿರುದ್ದ ಹೋರಾಟಕ್ಕಿಳಿಯಲಿಲ್ಲ ಯಾಕೆ..?! ಇಲ್ಲಿ ದನಿ ಎತ್ತಲು ಎದೆಗಾರಿಕೆ ಬೇಕು ಅಲ್ಲವೇ..?

ಮಾಫಿಯಾದವರ ಬಳಿ ಗನ್‌ಗಳಿವೆ, ಮಚ್ಚು, ಲಾಂಗ್‌ಗಳಿವೆ, ಎಲಿಮೆಂಟರಿಗಳ ಗುಂಪುಗಳಿವೆ, ಜೀವ ಬಾಯಲ್ಲಿ ಬರುತ್ತದೆ ಎನ್ನುವ ಅಸಲಿ ಕಾರಣಕ್ಕಾಗಿಯೇ ಲ್ಯಾಂಡ್ ಲಿಟಿಗೇಶನ್ ಮಾಫಿಯಾ ಯಾನೇ ಭೂ ಕಬಳಿಕೆಯತ್ತ ಚಿತ್ತವರಿಸದೇ ಜಾಣಕುರುಡುತನ ಪ್ರದರ್ಶಿಸುವ ಈತನ ಹೊಣೆಗೇಡಿತನಕ್ಕೆ ಇಂದು ಕನ್ನಡಿಗರು ಛೀಮಾರಿ ಹಾಕಿ ಉಗಿದಿದ್ದಾರೆ, ಡಾ.ರಾಜಣ್ಣ ಕೇವಲ ನಟರಲ್ಲ, ಅವರೊಂದು ಈ ನೆಲದ ಶಾಸನ ಎನ್ನುವುದು ಮರೆಯಕೂಡದು ಎಂದಿದ್ದಾರೆ,

ಇಂತಹ ಮಾನವಂತರ ಮಡಿವಂತಿಕೆಯ ಹೋರಾಟಗಳಿಂದ, ಪ್ರಚುರದ ಹಪಾಹಪಿತನದಿಂದ ರಾಜ್ಯದಲ್ಲಿಂದು ಜಾನವಾರುಗಳು ಬೀದಿ, ಬೀದಿಯಲ್ಲಿ ಕಸದ ರಾಶಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು ಬಿಡಾಡಿಗಳಾಗಿ ಮಲಗಿ ವಿಶ್ರಾಂತಿಸುತ್ತಿವೆ, ಇದು ಅನೇಕ ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ, ಘನ ತ್ಯಾಜ್ಯ ತಿಂದ ಜಾನುವಾರುಗಳು ಹೊಟ್ಟೆ ಉಬ್ಬರದ ರೋಗಕ್ಕೆ ಒಳಗಾಗಿ ನರಳುತ್ತಿದೆ, ಇವುಗಳಿಗೆ ಮೀಸಲಿದ್ದ ಲಕ್ಷಾಂತರ ಹೆಕ್ಟರ್ ಭೂಮಿಗಳು ಲ್ಯಾಂಡ್ ಮಾಫಿಯಾ ಪೋರ್ಜರಿ ದಾಖಲೆಗಳಿಂದ ಕಬ್ಜಾ ಮಾಡಿಕೊಂಡು ಕುಡಿಯುವ ನೀರು, ಮೇವುಗಳಿಗೆ ಕೊರತೆಯಾಗುತ್ತಿರುವುದು ಈತನಿಗೆ ದರ್ಶಿಸಿಲ್ಲವೇ..?!

ಮಗ್ಗಲು ಬದಲಿಸಿ ಮಲಗಿಕೊಂಡವನಿಗೆ ಇದ್ದಕ್ಕಿದ್ದಂತೆ ಅದು ಡಾ.ರಾಜಣ್ಣನವರ ಹುಟ್ಟು ಹಬ್ಬದ ಸಂಭ್ರಮದಲ್ಲಿಯೇ ರಾತ್ರಿ ಕುಡಿದ ಮತ್ತು ಇಳಿದಿಲ್ಲದಂತೆ ಹೊತ್ತಿನಲ್ಲಿ ಇಂತಹದೊಂದು ಹೇಳಿಕೆಯನ್ನು ಹರಿಬಿಟ್ಟು ನಂತರ ಜ್ಞಾನೋದಯವಾದಂತೆ ಕ್ಷಮಿಸಿ ಎಂದು ಕನ್ನಡಿಗರಲ್ಲಿ ಕನ್ನಡದ ಸಂಘಟಕರಲ್ಲಿ, ರಾಜಕುಮಾರ್ ಅಭಿಮಾನಿಗಳಲ್ಲಿ ಅವಲತ್ತುಕೊಂಡಿದ್ದರು ಈತನ ಮೇಲೆ ಕಾನೂನು ತನ್ನ ಕರ್ತವ್ಯ ನಿರ್ವಹಿಸಲಿ ಎನ್ನುವುದು ಈ ಅಕ್ಷರದ ಆಗ್ರಹವಾಗಿದೆ, ಡಾ.ರಾಜಣ್ಣ ಈ ನೆಲದ ಅಸ್ಮಿತೆ, ಇದನ್ನು ಈ ಕಿಡಿಗೇಡಿ ಚೇತನ್ ಅಹಿಂಸಾ ಮರೆಯಕೂಡದು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I