Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I ಸೂರ್ಯಗಗನ I ಶಿವಮೊಗ್ಗದಲ್ಲಿ ರೌಡಿ ಆಸಾಮಿಗಳ ಮನೆಗಳ ಮೇಲೆ ಪೊಲೀಸರ ದಾಳಿ I ಪರಿಶೀಲನೆ I ಸೂರ್ಯಗಗನ I ಶಿವಮೊಗ್ಗ ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಪೊಲೀಸ್ ಠಾಣೆಗೆ I ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I ಸೂರ್ಯಗಗನ I ಶಿವಮೊಗ್ಗದಲ್ಲಿ ರೌಡಿ ಆಸಾಮಿಗಳ ಮನೆಗಳ ಮೇಲೆ ಪೊಲೀಸರ ದಾಳಿ I ಪರಿಶೀಲನೆ I ಸೂರ್ಯಗಗನ I ಶಿವಮೊಗ್ಗ ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಪೊಲೀಸ್ ಠಾಣೆಗೆ I ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ I
ಸೂರ್ಯಗಗನ

I ಖಾಲಿ ಜೇಬು I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಖಾಲಿ ಜೇಬು I ಹೊತ್ತಾರೆ ಬರೆಗಳ ನೋವು, ಕಡು ಕತ್ತಲ ನಿದುರೆಗಳ ಕಾವು, ಕಂಗಳ ಹೊರಳಿಸುತಲಿ ಕೂತೇ, ನಾಳೆಯ ಹೆಜ್ಜೆಗಳು ಕುದಿತಿತ್ತು, ಯಾರ ಮೇಲೂ ಆರೋಪವಿತ್ತಿಲ್ಲ, ಎದೆ ನಂಬಿಕೆಗಳೂ ಹುಸಿಯಾಗಿಲ್ಲ, ಈ ಅರಿವಿನೊಳಗೆ ಬಲದಿ ಗುರುವಿದ್ದಾನೆ, ಕುದಿವ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಖಾಲಿ ಜೇಬು I

ಹೊತ್ತಾರೆ ಬರೆಗಳ ನೋವು,
ಕಡು ಕತ್ತಲ ನಿದುರೆಗಳ ಕಾವು,
ಕಂಗಳ ಹೊರಳಿಸುತಲಿ ಕೂತೇ,
ನಾಳೆಯ ಹೆಜ್ಜೆಗಳು ಕುದಿತಿತ್ತು,

ಯಾರ ಮೇಲೂ ಆರೋಪವಿತ್ತಿಲ್ಲ,
ಎದೆ ನಂಬಿಕೆಗಳೂ ಹುಸಿಯಾಗಿಲ್ಲ,
ಈ ಅರಿವಿನೊಳಗೆ ಬಲದಿ ಗುರುವಿದ್ದಾನೆ,
ಕುದಿವ ಹೆಜ್ಜೆಗಳ ಮುಂದಿಡಿಸುತ್ತಿದ್ದಾನೆ
ನೋವುಗಳ ತಣಿಸುತ್ತಿದ್ದಾನೆ,

ಇನ್ನಷ್ಟು ನಿಂದಿಸುವವರು ನಿಂದಿಸಲಿ
ಅಡ್ಡಿಯಾಗುವವರು ಅಡ್ಡಿಯಾಗಲಿ,
ಕುತ್ಸಿತ ವಿಕೃತಿಗಳು ಪಾನಮತ್ತದಿ ನರ್ತಿಸಲಿ,
ನಾನೆಂದಿಗೂ ಸೊಲ್ಲೆತ್ತುವುದಿಲ್ಲ,
ಮೌನದಿ ಗುರುವಿನ ದೀವಿಗೆ ಹಿಡಿಯುತ್ತೇನೆ,

ಕೋಟೆ ಕಟ್ಟಿ ಆಳಿದವರೇನು, ಅಳಿಯಲಿಲ್ಲವೇ,
ಅಧಿಕಾರದಂದಣದಿ ಮೆರೆದವರು ಬಸವಳಿದಿಲ್ಲವೇ,
ಕ್ಷುದ್ರಾವಸ್ಥೆಯೊಳು ಮುಗಿಬಿದ್ದವರು ಕೊನೆಯಾಗಲಿಲ್ಲವೇ..?!
ಇನ್ನೂ ಇವರು ಯಾವ ಲೆಕ್ಕದಿ ಇದ್ದಾರು..!?

ಹಸನ್ಮುಖಿಯಾಗಿಯೇ ಇದ್ದೇನೆ,
ನೋವುಗಳು ಸಹಿಸುವುದನು ಕಲಿಸಿದ್ದಾನೆ,
ಬೊಬ್ಬೆಗಳ ಹೆಜ್ಜೆಗಳು ಸಾಗುತ್ತಲೇ ಇದೆ,
ಕ್ರಮಿಸುವ ಕಾಲದಿ ಎಲ್ಲವೂ ನಿರುಮ್ಮಳವಾಗಿದೆ,

ನಾನೀಗ ಹೊಸತೊಂದು ದಿಕ್ಕಿನೆಡೆಗೆ,
ನಡೆದಿದ್ದೇನೆ, ನಡೆದಿದ್ದೇನೆ, ತುಸು ಕಾಲದಿ,
ಧ್ವೇಷಿಗಳು, ಅಸೂಯೇ ಚಿತ್ತಗಳು,
ಚಪ್ಪಾಳೆಗಳು ತಟ್ಟಲಿದೆ, ಗುಣಗಾನಿಸಲಿದೆ,

ಹೇ ಗುರುವೇ ಧನ್ಯವಾದಗಳು
ನೀ ಈ ಪಾಮರನೊಳಗೆ ಶಾಶ್ವತವಾಗಿದ್ದಕ್ಕೆ,
ಕ್ಲಿಷ್ಟಕರಗಳಲಿ ನಡೆಸುತ್ತಿರುವುದಕ್ಕೆ,
ಅಲೌಕಿಕತೆಯ ಕಟ್ಟಿ ಕೊಟ್ಟಿದ್ದಕ್ಕೆ
ಮತ್ತೊಮ್ಮೆ, ಮಗದೊಮ್ಮೆ ಧನ್ಯವಾದಗಳು.

Gara Srinivas

Gara Srinivas

Leave a comment

error: Content is protected !!