I ಕರವೇ ಸ್ವಾಭಿಮಾನಿ ಬಣದ ನೂತನ I ಭದ್ರಾವತಿ ತಾಲೂಕು ಅಧ್ಯಕ್ಷರಾಗಿ I ಪ್ರಭುಗೌಡ ನೇಮಕ I
ಶಿವಮೊಗ್ಗ : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಭದ್ರಾವತಿ ತಾಲೂಕು ಗೌರವಾಧ್ಯಕ್ಷರಾಗಿ ಲಕ್ಷ್ಮಣ್ ರವರನ್ನು ಹಾಗೂ ತಾಲೂಕು ಅಧ್ಯಕ್ಷರನ್ನಾಗಿ ಪ್ರಭು ಗೌಡ ರವರನ್ನು ರಾಜ್ಯಾಧ್ಯಕ್ಷರ ಅನುಮತಿಯೊಂದಿಗೆ ಜಿಲ್ಲಾ ಸಮಿತಿಯು ಆಯ್ಕೆ ಮಾಡಿ ಆದೇಶ ಪತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರು ಮತ್ತು ಗೌರವಧ್ಯಕ್ಷರಿಗೆ ಕನ್ನಡ ನಾಡು ನುಡಿ ನೆಲ ಜಲ ಭಾಷೆ ಮಹಿಳೆಯರ ಪರ ವಿದ್ಯಾರ್ಥಿಗಳ ಪರ ಬಡವರ ಪರ ನಿಲ್ಲುವಂತೆ ಹಾಗೂ ಸಂಘಟನೆಗೆ ನೂತನ ಸದಸ್ಯರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡುವಂತೆ ಅದೇಶಿಸಲಾಯಿತು.
ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಎಚ್.ಎಸ್ ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ಸಿ ಜಿಲ್ಲಾ ಉಪಾಧ್ಯಕ್ಷರಾದ ಸೈಯದ್ ಮುಜಿಬುಲ್ಲ ಗಂಗಾಧರ್, ವಿಜಯಕುಮಾರ್, ಜೈ ಕೃಷ್ಣ ಮಾಧ್ಯಮ ಸಲಹೆಗಾರ ಡಿಪಿ ಅರವಿಂದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್, ಭದ್ರಾವತಿ ಪದಾಧಿಕಾರಿಗಳಾದ ನಾರಾಯಣ್‌ರಾವ್, ಶಶಿಧರ್ ಮೂರ್ತಿ, ಕೃಷ್ಣಪ್ಪ, ಅಶೋಕ್ ಮಂಜುನಾಥ, ಕೃಷ್ಣಮೂರ್ತಿ ಡ್ರೆöವಿಂಗ್ ಸ್ಕೂಲ್, ಜೈರಾಜ್, ಲೋಕೇಶ್, ಮಂಜುನಾಥ್, ಇಮ್ರಾನ್, ಆರ‍್ಮುಗ, ಜಿಲ್ಲಾ ಕಾರ್ಯದರ್ಶಿ ಸಾಧಿಕ್ ಎ ಜಿಲ್ಲಾ ಸಂಘಟನಾ ಸಹ ಕಾರ್ಯದರ್ಶಿ ನೂರುಲ್ಲಾ ನಗರ, ಯುವ ಅಧ್ಯಕ್ಷ ಪ್ರವೀಣ್ ಕುಮಾರ್ ಕರವೇ ಮುಖಂಡರಾದರ ಆನ್ಸರ್ ಅಹ್ಮದ್ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಪದ್ಮ ನಗರ ಪ್ರಧಾನ ಕಾರ್ಯದರ್ಶಿಯಾದ ಅನುಪಮ ಜಿಲ್ಲಾ ಪದಾಧಿಕಾರಿಗಳು ಹಾಗೂ ಭದ್ರಾವತಿ ತಾಲೂಕಿನ ಕಾರ್ಯಕರ್ತರು ಭಾಗವಹಿಸಿದ್ದರು.