Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden
ಸೂರ್ಯಗಗನ

I ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ I ನೂತನ ಪದಾಧಿಕಾರಿಗಳ I ಪದಗ್ರಹಣ ಕಾರ್ಯಕ್ರಮ I

I ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ I ನೂತನ ಪದಾಧಿಕಾರಿಗಳ I ಪದಗ್ರಹಣ ಕಾರ್ಯಕ್ರಮ I ಶಿವಮೊಗ್ಗ : ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ 2026-27 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ…

I ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ I ನೂತನ ಪದಾಧಿಕಾರಿಗಳ I ಪದಗ್ರಹಣ ಕಾರ್ಯಕ್ರಮ I

ಶಿವಮೊಗ್ಗ : ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ 2026-27 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಪಿಡಿಸಿ ಹಾಗೂ ಎಫ್ಎಪಿಐ ಶಿವಮೊಗ್ಗದ  ಅಧ್ಯಕ್ಷರಾದ ಭಾರತೀ ಚಂದ್ರಶೇಖರ್ ಹಾಗೂ ಮಾಜಿ ಅಧ್ಯಕ್ಷೆ ಲತಾ ಎಂ. ರಮೇಶ್ ಅವರು ನೂತನ ಅಧ್ಯಕ್ಷೆ  ಸುನೀತಾ ಮೋಹನ್, ಕಾರ್ಯದರ್ಶಿ ಸುಮಲತಾ ರವಿ ಪಾಟೀಲ್, ಖಜಾಂಚಿ ಶ್ರುತಿ ರಾಕೇಶ್, ಐಎಸ್ಓ ಶ್ವೇತಾ ಗಿರೀಶ್ ಮತ್ತು ಎಡಿಟರ್ ಸೋಮಿಯ ರವರಿಗೆ ನೂತನ ಪದಗ್ರಹಣ ನೆರವೇರಿಸಿ ಅಧಿಕಾರ ಹಸ್ತಾಂತರ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೆಂಟರ್ ಅಡ್ಮಿನಿಸ್ಟ್ರೇಷನ್ ಒನ್ ಸ್ಟಾಪ್ ಸೆಂಟರ್ (ಸಖಿ) ಅಕ್ಷತಾ ಹೆಚ್.ಪಿ ಇವರು ಮಹಿಳಾ ಮತ್ತು ಮಕ್ಕಳ ಸಬಲೀಕರಣ, ದೌರ್ಜನ್ಯ ಮುಕ್ತ ಶಿವಮೊಗ್ಗ ಹಾಗೂ ಇತರ ಸಮಾಜ ಸೇವೆಯ ಮಹತ್ವಗಳನ್ನು ಒತ್ತಿ ಹೇಳಿ ಇನ್ನರ್ ವೀಲ್ ಸಂಸ್ಥೆಯ ಸೇವ ಕಾರ್ಯಗಳನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಸುನೀತಾ ಮೋಹನ್ ಮಾತನಾಡಿ, ತಮ್ಮ ಅಧಿಕಾರವಾಧಿಯಲ್ಲಿ ಮಾಡಬೇಕಾದ ಸಮಾಜಮುಖಿ ಚಟುವಟಿಗಳ ಬಗ್ಗೆ ತಿಳಿಸಿದರು.

ಪದಗ್ರಹಣದ ಸಮಾರಂಭದ ಅಂಗವಾಗಿ ಕ್ಲಬ್ ವತಿಯಿಂದ ಸೇವಾ ಯೋಜನೆ ಕೈಗೊಳ್ಳಲಾಯಿತು. ಲಕ್ಷ್ಮಿ ಯವರ ಪುತ್ರನ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯಧನವನ್ನು ನೀಡಲಾಯಿತು.
ನೇತ್ರಾವತಿ ಯವರ ಪುತ್ರನಿಗೆ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಪದಾಧಿಕಾರಿಗಳು, ವಿವಿಧ ಇನ್ನರ್ ವೀಲ್ ಕ್ಲಬ್ ಗಳ ಸದಸ್ಯೆಯರು, ಪಿಡಿಸಿ ಗಳು, ರೋಟರಿ ಕ್ಲಬ್ ಶಿವಮೊಗ್ಗ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ಕ್ಲಬ್ ಬುಲೆಟಿನ್ ಬಿಡುಗಡೆ ಮಾಡಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷೆ ಲತಾ ಎಂ. ರಮೇಶ್ ಸ್ವಾಗತಿಸಿದರು, ಶ್ರೀರಂಜಿನಿ ದತ್ತಾತ್ರಿ ನಿರೂಪಣೆ ಹಾಗೂ ಸೀಮಾ ಸದಾನಂದ್ ವಂದನಾರ್ಪಣೆ ಸಲ್ಲಿಸಿದರು.

Gara Srinivas

Gara Srinivas

Leave a comment

error: Content is protected !!