Saturday, 19 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಸೂರ್ಯಗಗನ

I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ಟಿ ತನಿಖೆಗೆ ಆದೇಶ I ಮೊದಲ ಯಶಸ್ವಿ ದೂರುದಾರರಾದ ಮಂಜುನಾಥ್. ಎಂ I

I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ಟಿ ತನಿಖೆಗೆ ಆದೇಶ I ಮೊದಲ ಯಶಸ್ವಿ I ದೂರುದಾರರಾದ ಮಂಜುನಾಥ್. ಎಂ I ಬೆಂಗಳೂರು :  ಪರಿಸರ,…

I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ಟಿ ತನಿಖೆಗೆ ಆದೇಶ I ಮೊದಲ ಯಶಸ್ವಿ I ದೂರುದಾರರಾದ ಮಂಜುನಾಥ್. ಎಂ I

ಬೆಂಗಳೂರು :  ಪರಿಸರ, ಕೆರೆ ಮತ್ತು ರಾಜಕಾಲುವೆಗಳನ್ನು ಉಳಿಸಲು ಒಬ್ಬ ಸಾಮಾಜಿಕ ಹೋರಾಟಗಾರರಾಗಿ ಹಾಗೂ ದೂರುದಾರರಾಗಿ ನಡೆಸುತ್ತಿರುವ ಕಾನೂನು ಹೋರಾಟದ ಬೆತ್ತಲ ಸತ್ಯವನ್ನು ಕರ್ನಾಟಕ ಕದಂಬ ಪಡೆಯ ಸಂಸ್ಥಾಪಕರಾದ ಮಂಜುನಾಥ್ .ಎಂ, ಅವರು ಸಾರ್ವಜನಿಕವಾಗಿ ತೆರೆದಿಟ್ಟಿದ್ದಾರೆ,

ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಬೃಹತ್ ಸರ್ಕಾರಿ ಭೂಮಿ ಮತ್ತು ರಾಜಕಾಲುವೆ ಒತ್ತುವರಿ ಹಗರಣದ ವಿರುದ್ಧ ಇಂತಿವರು ಸುದೀರ್ಘ ಕಾಲದಿಂದ ಹಲವು ಜೀವ ಬೆದರಿಕೆಗೆ ಕುಗ್ಗದೆ ಏಕಾಂಗಿಯಾಗಿಯೇ ಕಾನೂನಾತ್ಮಕವಾದ ಹೋರಾಟಕ್ಕೆ ಅಣಿಯಾಗಿದ್ದಾರೆ. ಈ ಇಡೀ ಹಗರಣದ ವಿರುದ್ಧ ಸರ್ಕಾರ ಇದೀಗ ಕಣ್ತೆರೆದು ಸಮಗ್ರ ತನಿಖೆಗೆ ಎಸ್ಐಟಿ ರಚಿಸಿ ಆದೇಶಿಸಿದೆ,

 ಈ ಪ್ರಕರಣದಲ್ಲಿ ಯಾರು ಆರೋಪಿಗಳು..? ಏನಿದು ಅಕ್ರಮ..? ಮುಖ್ಯ ಆರೋಪಿತರಾರು ಎನ್ನುವುದನ್ನು ಪರಿಶೀಲಿಸಿದಾಗ ಅದಾಗ,  ಆರ್ಟ್ ಆಫ್ ಲಿವಿಂಗ್ ಒಡೆತನ ಎನ್ನಲಾದ “ಸುಮೇರು ರಿಯಾಲಿಟಿ ಪ್ರೈವೇಟ್ ಲಿಮಿಟೆಡ್” ಮತ್ತು ವೇದವಿಜ್ಞಾನ ಮಹಾವಿದ್ಯಾಪೀಠದ ಪ್ರಮುಖ ಪದಾಧಿಕಾರಿಗಳಾದ ಭಾನುಮತಿ ಹಾಗೂ  ರಘು ಗೊತ್ತು ಮಾಡಿಕೊಳ್ಳಲಾಗಿದೆ,

ಇನ್ನೂ ಈ ಪ್ರಕರಣದ ಸ್ವರೂಪ ಹೀಗಿದೆ,  ಕಗ್ಗಲೀಪುರ ಮತ್ತು ಉಡಿಪಾಳ್ಯ ಗ್ರಾಮದ ಸರ್ವೆ ನಂಬರ್ 160, 164/1, 164/2, 164/3, 161/7, ರಲ್ಲಿ ಹಾದು ಹೋಗುವ ಸಾರ್ವಜನಿಕ ‘ರಾಜಕಾಲುವೆಗಳು’ (ಮಳೆನೀರು ಚರಂಡಿ) ಮತ್ತು ಸರ್ಕಾರಿ ಕೆರೆ ಜಾಗವನ್ನು ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಅನಧಿಕೃತ ಬೃಹತ್ ಕಟ್ಟಡಗಳು, ನೈಸರ್ಗಿಕ ನೀರಿನ ಹರಿವನ್ನು ಸಂಪೂರ್ಣ ಬಂದ್ ಮಾಡಿ, ಅದೇ ಒತ್ತುವರಿ ಜಾಗದಲ್ಲಿ ‘ಸೌದಾಮಿನಿ ಅಪಾರ್ಟ್‌ಮೆಂಟ್’ (Block I, II, III) ಮತ್ತು ‘ಬ್ಯಾಂಡಿಂಗ್ಟನ್ ಕೋರ್ಟ್’ ಎಂಬ ಬೃಹತ್ ಸಂಕೀರ್ಣಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ.

ಹೋರಾಟದ ಪುರಾವೆಗಳು, ಇವರು ದಾಖಲಿಸಿದ ಕ್ರಿಮಿನಲ್ ಮೊಕದ್ದಮೆ (LGC 23/2024): ಈ ಮಹಾ ಒತ್ತುವರಿಯ ವಿರುದ್ಧ ಇವರು ದೂರುದಾರರಾಗಿ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಹೂಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಯಾಲಯವು ಆರೋಪಿ ಸಂಸ್ಥೆ “ಸುಮೇರು ರಿಯಾಲಿಟಿ ಪ್ರೈ.ಲಿ” ಹಾಗೂ ಪದಾಧಿಕಾರಿಗಳಾದ  ಭಾನುಮತಿ ಮತ್ತು  ರಘು ಅವರಿಗೆ ಈಗಾಗಲೇ ಅಧಿಕೃತ ಸಮನ್ಸ್ ಮತ್ತು ನೋಟೀಸ್ ಜಾರಿ ಮಾಡಿದೆ.

ಕಂದಾಯ ಇಲಾಖೆಯ ಅಧಿಕೃತ ಜಂಟಿ ನಕ್ಷೆ : ಹೋರಾಟದ ಫಲವಾಗಿ ನ್ಯಾಯಾಲಯದ ಆದೇಶದಂತೆ ಕಂದಾಯ ಇಲಾಖೆ ನಡೆಸಿದ ಅಧಿಕೃತ ಜಂಟಿ ಸರ್ವೆಯಲ್ಲಿ, ಸರ್ವೆ ಸಂಖ್ಯೆ 164/2 ರಲ್ಲಿ 0-8¼ (ಎಂಟು ಕಾಲು)ಹಾಗೂ 15 ಗುಂಟೆಯಷ್ಟು ರಾಜಕಾಲುವೆ ಜಾಗವನ್ನು ಸುಮೇರು ರಿಯಾಲಿಟಿ ಪ್ರೈ.ಲಿ, ಸಂಸ್ಥೆಯು ನೇರವಾಗಿ ಅತಿಕ್ರಮಣ ಮಾಡಿರುವುದು ನಕ್ಷೆಯಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಗುರುತುಗಳ ಮೂಲಕ ಸಾಬೀತಾಗಿದೆ!

ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ, ರಾಜ್ಯ ಉಚ್ಚ ನ್ಯಾಯಾಲಯವು ಸಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ವಿಲೇವಾರಿ ಮಾಡುವಾಗ ಕಂದಾಯ ಇಲಾಖೆ, ಬೆಂಗಳೂರು ಡಿಸಿ ಮತ್ತು ತಹಶೀಲ್ದಾರ್ ಅವರಿಗೆ ಕಾನೂನಿನ ಪ್ರಕಾರ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ದೇಶಿಸಿದೆ.

ಇದೀಗ ಎಚ್ಚೆತ್ತುಕೊಂಡ ಸರ್ಕಾರ : ಇವರ ಹೋರಾಟಕ್ಕೆ ಸಿಕ್ಕ ಮೊದಲ ಜಯ ಇದಾಗಿದ್ದು ನಿರಂತರ ಹೋರಾಟ ಮತ್ತು ಹೈಕೋರ್ಟ್ ನಿರ್ದೇಶನಗಳ ತೀವ್ರತೆಯ ಬೆನ್ನಲ್ಲೇ, ಕರ್ನಾಟಕ ಸರ್ಕಾರವು ಈಗ ಕಣ್ಣು ಬಿಟ್ಟು ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ 11 ಸದಸ್ಯರ ‘ವಿಶೇಷ ತನಿಖಾ ದಳ’ (SIT) ರಚಿಸಿ ಆದೇಶಿಸಿದೆ. ಈ ಉನ್ನತ ಮಟ್ಟದ ತಂಡವು ಈಗ ಆರ್ಟ್ ಆಫ್ ಲಿವಿಂಗ್ ಮತ್ತು ಅದರ ಅಂಗಸಂಸ್ಥೆಗಳ ಒಡೆತನದ ಭೂ ದಾಖಲೆಗಳು ಹಾಗೂ ರಾಜಕಾಲುವೆ ಒತ್ತುವರಿಯ ಸಮಗ್ರ ತನಿಖೆ ನಡೆಸುತ್ತಿದೆ. ಇದು ನಮ್ಮ ಸುದೀರ್ಘ ಹೋರಾಟಕ್ಕೆ ಸಿಕ್ಕ ಮೊದಲ ಮೈಲಿಗಲ್ಲು! ಎಂದು ಕರ್ನಾಟಕ ಕದಂಬ ಪಡೆಯ ಸಂಸ್ಥಾಪಕರಾದ ಮಂಜುನಾಥ್ ತಿಳಿಸಿದ್ದಾರೆ

Gara Srinivas

Gara Srinivas

Leave a comment

error: Content is protected !!