Saturday, 19 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಸೂರ್ಯಗಗನ

I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..?

I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? ಶಿವಮೊಗ್ಗ : ನಗರದಲ್ಲಿ ಭೂಗಳ್ಳರ ಹಾವಳಿ, ರೌಡಿ ಎಲಿಮೆಂಟ್‌ಗಳಿಂದ ಬೇಲಿ ಸುತ್ತುವಿಕೆ, ದುಂಡಾವರ್ತನೆಗಳು, ಕೋಟಿ ಕೋಟಿ ಮೌಲ್ಯದ ಸರ್ಕಾರಿ ಸ್ವತ್ತುಗಳು, ಕೆರೆ ಖರಾಬುಗಳು, ದುರ್ಬಲ ಜನನಿವಾಸಿಗಳನ್ನು ಒಕ್ಕಲೆಬ್ಬಿಸುವಿಕೆ, ಘನ…

I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..?

ಶಿವಮೊಗ್ಗ : ನಗರದಲ್ಲಿ ಭೂಗಳ್ಳರ ಹಾವಳಿ, ರೌಡಿ ಎಲಿಮೆಂಟ್‌ಗಳಿಂದ ಬೇಲಿ ಸುತ್ತುವಿಕೆ, ದುಂಡಾವರ್ತನೆಗಳು, ಕೋಟಿ ಕೋಟಿ ಮೌಲ್ಯದ ಸರ್ಕಾರಿ ಸ್ವತ್ತುಗಳು, ಕೆರೆ ಖರಾಬುಗಳು, ದುರ್ಬಲ ಜನನಿವಾಸಿಗಳನ್ನು ಒಕ್ಕಲೆಬ್ಬಿಸುವಿಕೆ, ಘನ ನ್ಯಾಯಾಲಯದ ಆದೇಶದನ್ವಯ ನೇಮಿಸುವ ಕೋರ್ಟ್ ಕಮಿಷನ್‌ಗಳ ಉಲ್ಲಂಘಿತ ವರದಿ, ಭೂ ನಕ್ಷೆಗಳಿಂದ ನ್ಯಾಯಾಲಯಕ್ಕೂ ವಂಚಿಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರು ಜಿಲ್ಲಾಡಳಿತ ಮೌನ, ಅಧಿಕಾರಿಗಳು ಮೌನ, ಹಾಗೂ ಈ ಹಿಂದಿನ ಐಪಿಸಿ ಸೆಕ್ಷನ್ ಇಂದಿನ ಬಿಎನ್‌ಎಸ್ ಕಾಯ್ದೆಗಳು ಸಂಪೂರ್ಣ ಮೌನವಾಗಿರುವುದರಿಂದಲೇ ಶಿವಮೊಗ್ಗದಲ್ಲಿ ಹಾಡು ಹಗಲೇ ಭೂ ಕಬಳಿಕೆಗಳು ಸಾಮಾನ್ಯವಾಗಿದೆ,

ಇಂತಹ ವಿಷಮ ಸ್ಥಿತಿಗಳ ವಿರುದ್ದ ಜನಪ್ರತಿನಿಧಿಗಳು ಸೊಲ್ಲೆತ್ತದೆ ಇರುವುದರಿಂದ ಸಂಘಟಿತನ ಮನೋಭಾವಿಗಳು ಹಾಗೂ ಸಂಘಟನೆಗಳು ಈ ಕುರಿತಾಗಿ ದಾಖಲಾತಿ ಸಹಿತ ದೂರುಗಳು ಸಲ್ಲಿಸಿ ಉನ್ನತಮಟ್ಟದ ಗಮನಕ್ಕೆ ತರಲಾಗುತ್ತಿದ್ದರು ಪ್ರಯೋಜನವಿಲ್ಲವಾಗಿದೆ, ತನಿಖಾ ಸಂಸ್ಥೆಗಳಾದ ಲೋಕಾಯುಕ್ತ ಇಲಾಖೆಗಳು ಕೂಡ ಅತೀವ ಮೌನ ವಹಿಸಿದೆ, ಇಂತಹ ವಿದ್ಯಮಾನಗಳನ್ನು ಅಭಿವ್ಯಕ್ತಿ ಅಡಿಯಲ್ಲಿ ಈಗಾಗಲೇ ಸಲ್ಲಿಸಲಾಗುತ್ತಿರುವ ದೂರುಗಳನ್ನು ಪರಾಂಭರಿಸಿ ಸುದ್ದಿಗಳ ರೂಪದಲ್ಲಿ ಸಾರ್ವಜನಿಕ ವಲಯದ ಮುಂದಿಡುವ ಪ್ರಯತ್ನ ಇದಾಗಿದೆ,

ಇನ್ನಾದರೂ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾರಕ್ಷಣಾಧಿಕಾರಿಗಳು ಈ ಕುರಿತಾಗಿ ಟಾಸ್ಕ್‌ಪೋರ್ಸ್ ರಚಿಸಲಿ ಎನ್ನುವುದು ಪತ್ರಿಕೆಯ ಆಶಯವಾಗಿದೆ, ಎನ್ನುವ ಟಿಪ್ಪಣಿಯೊಂದಿಗೆ ಇತ್ತೀಚೆಗೆ ಅಂದರೆ ಮೇ.4ರಂದು ಶಿವಮೊಗ್ಗದ ಸಾಮಾಜಿಕ ಹೋರಾಟಗಾರರಾದ ಎನ್.ಎಂ ಸಿಬ್ಗತ್‌ಉಲ್ಲಾ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದ ದೂರು ಅರ್ಜಿಯ ಅಸಲಿ ಸಂಗತಿಗಳು ಹೀಗಿದೆ,

ನಗರದ ಶಂಕರಾಚಾರ್ಯರ ಲೇ ಔಟ್ ಬಳಿ ಇರುವ ಅಂದಿನ ಆಲ್ಕೋಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಸರ್ವೇ ನಂಬರ್ ೧೦ರಲ್ಲಿನ ೧ ಎಕರೆ ೨ ಗುಂಟೆ ಕೆರೆ ಎಂದಿರುವ ಪಹಣಿಯ ದಾಖಲೆ ಇರುವಂತೆ ವಿಸ್ತೀರ್ಣದ ಜಾಗ ಇದೀಗ ಸಂಪೂರ್ಣ ಭೂಕಬಳಿಕೆಯಾಗಿದ್ದು, ಈ ಸರ್ಕಾರಿ ಕೆರೆಯನ್ನು ಹುಡುಕಿಕೊಡಿ ಎಂದು ತಿಳಿಸಿದ್ದಾರೆ, ಈ ಸರ್ಕಾರಿ ಕೆರೆಗೆ ಕೋರೋನಾ ಕಾಲದ ಸಾಂಕ್ರಮಿಕ ದಿನಮಾನದಲ್ಲಿ ಎಂ.ಆರ್ ನಂಬರ್ ಟಿ೮೨/೨೦೨೦-೨೧, ದಾಖಲೆ ಸೃಷ್ಟಿಯಾಗಿದ್ದು ಖಾಸಗಿಯವರಿಗೆ ಅನಾಮತ್ತಾಗಿ ಏಕಾಎಕಿ ವರ್ಗಾವಣೆ ಮಾಡಿದ್ದಾರೆ, ಇದಕ್ಕೆ ಒರಿಜಿನಲ್ ಟಿಪ್ಫಣಿ ಹಾಗೂ ಪಕ್ಕಾ ಬುಕ್‌ನಲ್ಲಿ ಇದು ಸರ್ಕಾರಿ ಕೆರೆ ಎನ್ನುವ ಪುರಾವೆಗಳಿದೆ, ಈ ಕೆರೆ ಜಾಗವನ್ನು ಅಧಿಕಾರಿಗಳು ಶಾಮೀಲಾಗಿ ಸುಳ್ಳು ದಾಖಲೆಗಳ ಮೂಲಕ ವರ್ಗಾಯಿಸಿದ್ದಲ್ಲದೆ, ನ್ಯಾಯಾಲಯಕ್ಕೆ ವಂಚಿಸಿದ್ದಾರೆ, ಇದು ಮುಂದುವರೆದಂತೆ ಸರ್ವೇ ಅಧಿಕಾರಿಗಳು ಖಾಸಗಿ ಒಡೆತನದ ಸ್ವತ್ತು ಎಂದು ನಕಲಿ ಓರಲ್ ಭೂ ನಕ್ಷೆ ತಯಾರಿಸಿ ಕೊಟ್ಟಿರುವುದರಿಂದ ಇದು ಭೂಕಬಳಿಕೆಯಲ್ಲಿದೆ ಎಂದು ದಾಖಲೆ ಸಹಿತ ವಿವರಿಸಿದ್ದರು, ಜಿಲ್ಲಾಡಳಿತಕ್ಕೆ ಇಚ್ಚಾಶಕ್ತಿ ಇಲ್ಲದಿರುವುದರಿಂದ ಇನ್ನೂ ಖಾಲಿ ಅಧಿಕಾರದ ನಶೆನಲ್ಲಿ ಇರುವುದು ಕಂಡು ಬಂದಿದೆ,

ವ್ಯಕ್ತಿ ಸಾಯಬಹುದು ಆದರೆ ದಾಖಲೆಗಳು ಸಾಯುವುದಿಲ್ಲ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷೀಯಾಗಿದೆ, ಹೀಗೆ ಸಂಪೂರ್ಣವಾಗಿ ಭೂ ಕಬಳಿಕೆಯಲ್ಲಿರುವ ಸರ್ಕಾರಿ ಕೆರೆಯನ್ನು ಸೀಮೆಂಟ್ ಕಾಂಪೋಂಡ್ ನಿರ್ಮಿಸಿ ದೊಡ್ಡದಾದ ಗೇಟ್ ಅಳವಡಿಸಿ ಭೂ ಕಬ್ಜಾ ಮಾಡಿಕೊಂಡಿರುವುದು ಇದರಿಂದಲೇ ಗೊತ್ತು ಮಾಡಿಕೊಳ್ಳಬಹುದಾಗಿದೆ, ಅಸಲಿಗೆ ಈ ಸ್ವತ್ತು ಇದೀಗ ಪ್ರಸ್ತುತ ಮಾರುಕಟ್ಟೆಯ ದರದಂತೆ ೧೩ ಕೋಟಿಗೂ ಅಧಿಕವಾಗಿದೆ ಎನ್ನುವುದು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಬೇಕಾದ ಅತೀ ಜರೂರತ್ತಿದೆ,

ಇನ್ನೂ ಇದಕ್ಕೆ ಸುಳ್ಳು ದಾಖಲೆ ಸೃಷ್ಟಿಸಿದ ಅಧಿಕಾರಿಗಳು, ಕೋರ್ಟ್ ಕಮಿಷನ್ ಆದೇಶದಲ್ಲಿ ನೇಮಕಗೊಂಡ ಅಧಿಕಾರಿಗಳು ಇಲ್ಲಿ ಎಲ್ಲಾ ಕಾಯ್ದೆಗಳಿಗೆ ನಿಯಮಗಳಿಗೆ ಎಳ್ಳು-ನೀರು ಬಿಟ್ಟಿದ್ದು ಸಂಪೂರ್ಣವಾಗಿ ಉಲ್ಲಂಘಿಸಿರುವ ಪ್ರಕರಣ ಇದಾಗಿದೆ,

ಕೋರ್ಟ್ ಕಮಿಷನ್ ನೇಮಕವಾದ ಅಧಿಕಾರಿಗಳು ನಿಯಮ ಉಲ್ಲಂಘಿಸಿದರೆ, ನ್ಯಾಯಾಲಯಕ್ಕೆ ವಂಚಿಸಿದರೆ ಇರುವ ಶಿಕ್ಷೆಗಳೇನು ಗೊತ್ತೆ..? ನ್ಯಾಯಾಲಯವು ಆದೇಶಿಸಿದ ಕೋರ್ಟ್ ಕಮಿಷನ್ ಪ್ರಕ್ರಿಯೆಯಲ್ಲಿ ಯಾರಾದರೂ ವಂಚನೆ, ಸುಳ್ಳು ವರದಿ ಸಲ್ಲಿಕೆ ಅಥವಾ ದುರುಪಯೋಗ ಎಸಗಿದರೆ ಭಾರತೀಯ ಕಾನೂನಿನಲ್ಲಿ ತೀವ್ರ ಸ್ವರೂಪದ ಕಠಿಣ ಕ್ರಮಗಳು ಮತ್ತು ಶಿಕ್ಷೆಗಳಿವೆ. ಕೋರ್ಟ್ ಕಮಿಷನರ್ ಆಗಿ ನೇಮಕಗೊಂಡವರು ಸಾರ್ವಜನಿಕ ನೌಕರರ ವ್ಯಾಪ್ತಿಗೆ ಬರುವುದರಿಂದ, ಅವರ ವಂಚನೆಯನ್ನು ನ್ಯಾಯಾಲಯದ ಘನತೆಗೆ ಧಕ್ಕೆ ತರುವ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಅಂತಹ ವಂಚನೆಗೆ ಅನ್ವಯವಾಗುವ ಪ್ರಮುಖ ಕಾನೂನು ನಿಯಮಗಳು ಮತ್ತು ಸೆಕ್ಷನ್‌ಗಳು

ಕ್ರಿಮಿನಲ್ ಕಾನೂನು ಕ್ರಮಗಳು ( BNS, ಅಡಿಯಲ್ಲಿ)ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ (BNS ,2023) ಮತ್ತು ಹಳೆಯ ಭಾರತೀಯ ದಂಡ ಸಂಹಿತೆ (IPC) ಪ್ರಕಾರ ಈ ಕೆಳಗಿನ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಬಹುದು, ಸುಳ್ಳು ಸಾಕ್ಷ್ಯ ಮತ್ತು ವರದಿ ಸಲ್ಲಿಕೆ (BNS 229 / IPC 193), ಕೋರ್ಟ್ ಕಮಿಷನರ್ ಉದ್ದೇಶಪೂರ್ವಕವಾಗಿ ಸುಳ್ಳು ವರದಿ ನೀಡಿದರೆ ಅಥವಾ ಸ್ಥಳ ಪರಿಶೀಲನೆಯ ನೈಜ ಸತ್ಯಗಳನ್ನು ಮರೆಮಾಚಿದರೆ, ಅದು ನ್ಯಾಯಾಲಯಕ್ಕೆ ಸುಳ್ಳು ಸಾಕ್ಷ್ಯ ನೀಡಿದಂತಾಗುತ್ತದೆ. ಇದಕ್ಕೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು ಎಂದು ಕಾನೂನು ಕಡತದಲ್ಲಿದೆ, ಹೀಗಿದ್ದರು ಕರೆನ್ಸಿ ಅಮಲಿಗೆ ಬಿದ್ದು ಉಲ್ಲಂಘಿತವಾಗಿರುವ ಹಾಗೂ ಮಾಡುತ್ತಿರುವ ಘಟನೆಗಳು ಶಿವಮೊಗ್ಗದಲ್ಲಿ ಹೆಪ್ಪುಗಟ್ಟಿದೆ. ಇದಕ್ಕೇನು ಗತಿ ಎನ್ನುವುದನ್ನು ಸಾರ್ವಜನಿಕವಾಗಿರುವ ಪ್ರಶ್ನೆಯಾಗಿದೆ.

Gara Srinivas

Gara Srinivas

Leave a comment

error: Content is protected !!