I ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ I ಶಿವಮೊಗ್ಗ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್, ಸೀಸನ್-3 I ಕುಮರೇಶ್ I
ಶಿವಮೊಗ್ಗ : ಆ.16ರಂದು ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಶಿವಮೊಗ್ಗ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್, ಸೀಸನ್-3 ಜರುಗಲಿದೆ ಎಂದು ಲೀಗ್ ಅಧ್ಯಕ್ಷತೆ ವಹಿಸಿರುವ ಕುಮರೇಶ್ ತಿಳಿಸಿದ್ದಾರೆ,
ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ, ಬ್ಯಾಡ್ಮಿಂಟನ್ ಕ್ರೀಡೆಯು ಮನುಷ್ಯನ ದೇಹದ ಸದೃಡತೆಗೆ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಇದು ಸಹಕಾರಿಯಾಗಿದೆ ಎಂದು ಅವರು ವಿವರಿಸಿದ್ದಾರೆ, ಯುವ ಸಮುದಾಯವನ್ನು ಈ ಕ್ರೀಡೆಯತ್ತ ಸೆಳೆಯುವ ಸದುದ್ದೇಶ ಹೊಂದಿದ್ದು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಈ ಮೂಲಕ ತಿಳಿಸಿದ್ದಾರೆ,
ಆ.16ರ ಬೆಳಿಗ್ಗೆ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಸೀಸನ್-3 ಚಾಲನೆ ನೀಡಲಿದ್ದು ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಿಖಿಲ್.ಬಿ ಆಗಮಿಸಲಿದ್ದಾರೆ, ಹಾಪ್ ಕಾಮ್ಸ್ ನಿರ್ದೇಶಕರಾದ ಶರತ್ ಮರಿಯಪ್ಪ ಉದ್ಘಾಟಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಾಂಜನೇಯ ಇಂಜಿನಿಯರ್ ವರ್ಕ್ಸ್ ಮಾಲೀಕರಾದ ಕುಮರೇಶ್ ವಹಿಸಲಿದ್ದು ಮುಖ್ಯ ಪ್ರಾಯೋಜಕರಾಗಿ ಎಂ.ಡಿ ಪಾಂಡುರಂಗ, ಸೇರಿದಂತೆ ಅತಿಥಿಗಳಾಗಿ ಪರಮೇಶ್ವರ, ರೇಖ್ಯಾನಾಯ್ಕ, ಸುಧಾಕರ್ ಬಿಜ್ಜೂರ್, ಉಮೇಶ್ ಎಂ, ಹರೀಶ್, ಸತೀಶ್, ಡಾ. ನವೀನ್ ನಾಗರಾಜ್ ಆಗಮಿಸಿಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ನಗರದ ಯುವಕರು ಕ್ರೀಡಾಸಕ್ತ ಮನಸುಗಳು ಭಾಗವಹಿಸುವಂತೆ ಕುಮರೇಶ್ ಈ ಮೂಲಕ ಕರೆ ನೀಡಿದ್ದಾರೆ.