ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಭಾರತಿ ಕಾಲೋನಿಯ ಕುಳ್ಳಿ ಕಿರಣನದ್ದು I ಟೋಟಲ್ ಡ್ರಾಯಿಂಗ್ ಮರ್ಡರ್ I
ಶಿವಮೊಗ್ಗ ಎಂಬುವ ಹೋರಾಟದ ನಗರಿ ಈ ಒಂದು ದಶಕದಿಂದ ತನ್ನ ಹೀನಾಯ ರಕ್ತಚರಿತ್ರೆ ಬರೆದುಕೊಳ್ಳುತ್ತಿರುವುದು ದುರಂತದ ಪರಮಾವಧಿಯಾಗಿದೆ, ಇನ್ನೂ ಕೊತ್ವಾಲನ ಕಾಲಮಾನದಿಂದಲೂ ರೌಡಿಸಂ ಪಹರೆಗಳಿದ್ದವು, ಧ್ವೇಷದ ಅನಾಹುತಕಾರಿ ಸೇಡಿನ ಹತ್ಯೆಗಳಿರಲಿಲ್ಲ, ಇಂತಹದೊಂದು ಸೂಕ್ಷ್ಮತೆ ಶಿವಮೊಗ್ಗದ ಹೈಗ್ರೌಂಡ್ ಪೊಲೀಸರು ಒಂದಷ್ಟು ಹೋಮ್ ವರ್ಕ್ ಮಾಡಿಕೊಳ್ಳಬೇಕಾದ ಸಾಂದರ್ಭಿಕತೆಯ ಜರೂರಿಗಳಿದೆ, ಹೀಗೊಂದು ಟಿಪ್ಪಣಿಯೊಂದಿಗೆ ಮೊನ್ನೆ ಭಾನುವಾರ ಮುಸ್ಸಂಜೆ ಮೂಡುವ ಮೊದಲೇ ನಗರದ ಹೊರವಲಯದ ರಾಮಿನಕೊಪ್ಪದಲ್ಲಿ ಸೂತಕದ ಛಾಯೇ ಮೊಹರೊತ್ತು ಬಿಟ್ಟಿದ ಕಥಾನಕದ ಒಳಹೂರಣದ ಅಸಲಿ ವರಾತಗಳತ್ತ ಚಿತ್ತವರಿಸೋಣ,
ಹೌದು ಭಾರತಿ ಕಾಲೋನಿಯ ಕುಳ್ಳಿ ಕಿರಣ ರೌಡಿಶೀಟರ್ ಆಗಿದ್ದ ಆದರೆ ನಾಗರೀಕ ವಲಯದ ನಟೋರಿಯಸ್ ಆಗಿರಲಿಲ್ಲ, ಬೇರೆಲ್ಲೂ ಲ್ಯಾಂಡ್ ಲಿಟಿಗೇಶನ್ ಎನ್ನುವ ಬೇಲಿಸುತ್ತಿ ಬೆದರಿಸುತ್ತಿರುವ ಭಯೋತ್ಪಾದಕರ ಗ್ಯಾಂಗ್ಗಳೊಂದಿಗೆ ಸಂಪರ್ಕವೂ ಇರಲಿಲ್ಲ, ಇನ್ನೂ ಲ್ಯಾಂಡ್ ಡೆವಲಪರ್ಸ್ ಹೆಸರಿನಲ್ಲಿ ಕೋಟಿ, ಕೋಟಿ ಕಂತೆಗಳ ಹವಾಲ ದಂಧೆಗಳಲ್ಲಿ ಕಾಣಿಸಿಕೊಂಡಿರಲಿಲ್ಲ ಬದಲಿಗೆ ಆತನೋರ್ವ ಸಂಘಪರಿವಾರದ ಬಿಜೆಪಿಯ ಸದಸ್ಯನಾಗಿದ್ದ, ಭೂಗತ ಡಾನ್ ಹೆಬ್ಬೆಟ್ಟು ಮಂಜನ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದ ಅಲ್ಲದೆ ವಿನೋಬಾನಗರದಲ್ಲಿ ಹತನಾಗಿದ್ದ ಹಂದಿ ಅಣ್ಣಿಯೊಂದಿಗೆ ಸಂಪರ್ಕವಿಟ್ಟುಕೊಂಡಿದ್ದ, ಮನು ಎಂಬಾತನೊಂದಿಗೆ ಗಲಾಟೆಯಾಗಿ ಆತ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ, ಈ ಪ್ರಕರಣದಲ್ಲಿ ಜೈಲುಹಕ್ಕಿಯಾಗಿದ್ದ ಕುಳ್ಳಿ ಕಿರಣ, ಖುಲಾಸೆಯಾಗಿ ಓಡಾಡಿಕೊಂಡಿದ್ದ ಈ ನಂತರ ಹಂದಿಅಣ್ಣಿಯ ಮರ್ಡರ್ ಆರೋಪಿಗಳಲ್ಲಿ ಒಂದಿಬ್ಬರು ಶಿವಮೊಗ್ಗ ಕೋರ್ಟಿಗೆ ಬಂದು ಹಿಂತಿರುಗುತ್ತಿದ್ದ ಎಲ್ಲಾ ಬ್ಯಾಕ್ ಡಿಟೈಲ್ಸ್ ನೀಡಿದ್ದ ಈ ಕಾರಣಕ್ಕೆ ದಾವಣಗೆರೆ ಜಿಲ್ಲೆಯ ಚೀಲೂರು ಬಳಿ ಡಬಲ್ ಮರ್ಡರ್ ಅಟ್ಯಾಕ್ ನಡೆದಿತ್ತು, ಈ ಪ್ರಕರಣದಲ್ಲಿಯು ಕುಳ್ಳಿ ಕಿರಣನನ್ನು ಆರೋಪಿಯಾಗಿಸಿದ್ದರು ಹೊನ್ನಾಳಿ ಪೊಲೀಸರು,
ಹೀಗೆ ತನ್ನ ಅಧ್ಯಾಯವನ್ನು ಬರೆದುಕೊಂಡಿದ್ದ ಕುಳ್ಳಿ ಕಿರಣ ಸೋಷಿಯಲ್ ಮಿಡಿಯಾದಲ್ಲಿ ವೈಭವಿಕರಿಸಿಕೊಂಡಿದ್ದನು, ತಾನು ಡಾನ್ ಎನ್ನುವಂತೆ ಬಿಂಬಿತವಾಗಿದ್ದನು, ಇದು ಎದುರಿನ ಗ್ಯಾಂಗ್ಗಳಿಗೆ ಕಣ್ಣು ಕುಕ್ಕುವಂತೆ ಮಾಡಿತ್ತು, ಹೇಗೋ ಹೆಸರು ಇದೆ ಕಾಸು ಮಾಡಿಕೊಂಡು ದುಂಡುಗಾಗುವ ಆತುರತೆಯಲ್ಲಿದ್ದ ಕುಳ್ಳಿ ಕಿರಣ ಮೆಲ್ಲನೆ ಇಸ್ಪೀಟ್ ದಂಧೆ ಶುರುಮಾಡಿಕೊಂಡಿದ್ದ, ಅಲ್ಲಲ್ಲಿ ಅಕ್ರಮ ಇಸ್ಪೀಟ್ ದಂಧೆ ಜಾರಿಯಲ್ಲಿಟ್ಟಿದ್ದ, ಹುಂಬುತನದ ಕನವರಿಕೆಯೂ ಹೆಚ್ಚಾಗಿತ್ತು, ಯಾವಾಗ ಗಾಂಧಿಬಜಾರ್ನಲ್ಲಿ ಹಂದಿಅಣ್ಣಿಯ ಕೇಸಿನಲ್ಲಿದ್ದ ಕಾಡಾ ಕಾರ್ತಿಕನೊಂದಿಗೆ ಗುರುತಿಸಿಕೊಂಡಿದ್ದ ಇಸ್ಪೀಟ್ ನರಸಿಂಹನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಘಟನೆ ಶಿವಮೊಗ್ಗ ನಗರಿಗೆ ಲಗತ್ತಿಸಿತ್ತೋ, ಆದಾಗ ಕಾಡಾ ಕಾರ್ತಿಕನ ಆಡಿಯೋ ರೀಲೀಸ್ ಆಗಿತ್ತು, ಈ ಕುರಿತಂತೆ ಅಂದೇ ಈತನ ಹೆಡೆಮುರಿ ಕಟ್ಟಿದಿದ್ದರೆ ನಿಜಕ್ಕೂ ಇಂದು ಕುಳ್ಳಿ ಕಿರಣ ಕೊಲೆಯಾಗುತ್ತಿರಲಿಲ್ಲ, ಆದರೆ ಪೊಲೀಸರು ಕಾಡಾ ಕಾರ್ತಿಕನನ್ನು ಬಂಧಿಸಿ ವಿಚಾರಿಸುವಲ್ಲಿ ಎಡವಟ್ಟು ಮಾಡಿಕೊಂಡಿದ್ದರು ಇದಕ್ಕೆ ಅಸಲಿ ಕಾರಣವೇ ಭದ್ರಾವತಿಯ ಸೋಕಾಲ್ಡ್ ರಿಪಬ್ಲಿಕ್ ದೊರೆ, ಹೀಗಾಗಿ ಕಾಡಾ ಕಾರ್ತಿಕನ ವಿಚಾರಕ್ಕೆ ಪೊಲೀಸರು ಹೋಗಿರಲಿಲ್ಲ ಇಂದಿಗೂ ಹೋಗುವುದಕ್ಕೆ ಸಾಧ್ಯವೂ ಇಲ್ಲ, ಎಕೆಂದರೆ ಭದ್ರಾವತಿಯ ಬಸವ ಅಡ್ಡಲಾಗುತ್ತಾನೆ ಎನ್ನುವ ಅಸಲಿಯ್ತತಿಗಾಗಿ ಎನ್ನುವುದು ಭೂಗತ ವಲಯಕ್ಕೆ ಗೊತ್ತಿರುವ ಸಂಗತಿಯಾಗಿದೆ,
ಆದರೆ ರೀವೆಂಜ್ ಆಡಿಯೋದಂತೆ ಪಾತಕಿ ಕಾಡಾ ಕಾರ್ತಿಕ ದಿಲ್ ದರ್ಬಾರ್ನಲ್ಲಿದ್ದಾನೆ, ಏಕೆಂದರೆ ಇಸ್ಪೀಟ್ ನರಸಿಂಹನ ಮರ್ಡರ್ ನಂತರ ಬಂದ ಮಾಹಿತಿಯಂತೆ, ಶಿವಮೊಗ್ಗದ ಮೂರು ಜನರ ಮೇಲೆ ಟಾರ್ಗೆಟ್ಗಳಿದ್ದವು ಎನ್ನುವ ವದಂತಿಗಳು ನಗರದ ಸಂತೆನಲ್ಲಿ ಈ ಹುಡುಗರ ಹೆಸರು ಎದುರಿನ ಗ್ಯಾಂಗ್ನಲ್ಲಿ ಬಡ್ತಿ ಪಡೆದಿದ್ದವು ಇದು ಶಿವಮೊಗ್ಗ ಪೊಲೀಸರಿಗೂ ತಿಳಿದಿತ್ತು, ಹೀಗಾಗಿಯೇ ದೊಡ್ಡಪೇಟೆ ಸರಹದ್ದಿನ ಪೊಲೀಸ್ ಇನ್ಸ್ಪೆಕ್ಟರ್ ಸತ್ಯನಾರಾಯಣ್ ಕರೆದು ಎಚ್ಚರಿಸಿದ್ದರು, ಹೀಗಿದ್ದರೂ ಕುಳ್ಳಿ ಕಿರಣ ಹುಂಬುತನದಿ ಯಾಮಾರಿ ಯಮನೂರಿಗೆ ಹೋಗಿ ಗೋರಿಕಟ್ಟಿಕೊಂಡಿದ್ದಾನೆ, ಇದು ಕೇವಲ ಐವತ್ತು ಸಾವಿರ ರೂಪಾಯಿಗಳಿಗಾಗಲಿ ಅಥವಾ ಕುಳ್ಳಿ ಕಿರಣ ಹಾಗೂ ಹೊಸಕೊಪ್ಪ ಉಮೇಶ್ ಇನ್ನೀತರರ ನಡುವಿನ ಸಣ್ಣ-ಪುಟ್ಟ ಮನಸ್ತಾಪಗಳು ಗಲಾಟೆಗಳು ಕಾರಣವಾಗಲಿ ಅಲ್ಲವಾಗಿದೆ, ಅಸಲಿಗೆ ಈ ಕಾರಣಗಳು ನೆಪಮಾತ್ರವಾಗಿದೆ, ಪೊಲೀಸರು ಈ ಪ್ರಕರಣಕ್ಕೆ ಈ ಸಂಗತಿಯೇ ಕುಳ್ಳಿ ಕಿರಣನ ಕೊಲೆಗೆ ಕಾರಣ ಎಂದು ಕೇಸು ಮುಗಿಸಿದರು, ಈ ಅಧ್ಯಾಯ ಭೂಗತ ಲೋಕದಲ್ಲಿ ಮತ್ತೊಂದು ಲೆವೆಲ್ ಪಡೆದುಕೊಂಡಿದೆ ,
ಅಂದು ಭಾನುವಾರ ಸಂಜೆಗಳಿಯುವ ಹೊತ್ತು, ಸಣ್ಣ-ಪುಟ್ಟ ಕಿರಿಕ್ಗಳನ್ನು ಮುಂದುಮಾಡಿಕೊಂಡು ಹೊಸಕೊಪ್ಪದ ಉಮೇಶ, ಬಾಬು ರಾಜೇಂದ್ರ ಪ್ರಸಾದ್, ಸುನೀಲ, ಮನೋಜ, ಹಾಗೂ ಭುವನ್ ಯಾನೆ ಬುಲ್ಲಿ, ಇಂತಿವರುಗಳು ಪೂರ್ವ ಸ್ಕೆಚ್ನಂತೆಯೇ ಅರಾಮಾಗಿ ಭಾರತಿ ಕಾಲೋನಿಯ ಮನೆಯಲ್ಲಿ ಮಲಗಿದ್ದ ಕುಳ್ಳಿ ಕಿರಣನನ್ನು ಮಾತಾಡಬೇಕು ಎಂದು ಪೋನಾಯಿಸಿ ಕರೆಯಿಸಿಕೊಂಡಿದ್ದರು, ಕುಳ್ಳಿ ಕಿರಣನು ಇನ್ನಾವ ಪರಿವೆಗಳಿಲ್ಲದೆ ರಾಮಿನಕೊಪ್ಪದಲ್ಲಿ ತಾನೇ ಕಟ್ಟಿಕೊಂಡಿದ್ದ ರಾಮಿನಕೊಪ್ಪದ ಇಸ್ಪೀಟ್ ಅಡ್ಡೆಗೆ ಕಾಸು ನೋಡಿಕೊಂಡು ಒಂದೆರೆಡು ಎಲೆಗಳನ್ನು ಎಳೆದು ಬರೋಣ ಎಂದು ಹೋಗಿದ್ದಾನೆ, ಹೀಗೆ ಹೋಗಿದ್ದ ಕುಳ್ಳಿ ಕಿರಣ ಮಾತಾಡಿಸಿದ್ದಾನೆ ಬಾ ನೀನು ಕುತ್ಕೋ ಎಂದಿದ್ದನಂತೆ, ಆದರೆ ಉಮೇಶ ನಾನು ಆಟ ಆಡುವುದಕ್ಕೆ ಬಂದಿಲ್ಲ, ಕಾಯೋಕೆ ಬಂದಿದ್ದೇನೆ ಎಂದು ತಿಳಿಸಿದ್ದಾನೆ, ಅಸಲಿಗೆ ಈ ಅಡ್ಡೆ ಉಮೇಶನದ್ದು ಆತ ತೂರೋಬಿಲ್ಲೆ ನಡೆಸುತ್ತಿದ್ದ, ಕೆಲವೇ ವಾರದೊಳಗೆ ಇವೆಲ್ಲವೂ ತನ್ನ ಹತೋಟಿಗೆ ತೆಗೆದುಕೊಂಡಿದ್ದ ಕುಳ್ಳಿ ಕಿರಣನ ಸ್ಪೀಡ್ಗೆ ಉಮೇಶ ಬಹಳ ದಿನಗಳಿಂದಲೇ ಕೈಮುರಿದುಕೊಳ್ಳುತ್ತಿದ್ದ, ಹೀಗಾಗಿಯೇ ಕುಳ್ಳಿಗೆ ಕರೆಯಿಸಿ ಮುಗಿಸುವುದಕ್ಕೆ ಸರಿಯಾದ ಮಹೂರ್ತ ಪಿಕ್ಸ್ ಮಾಡಿದ್ದೇ ಕಾಡಾ ಕಾರ್ತಿಕ ಎಂಬುವ ನಿಖರ ದನಿಗಳು ಪಾತಕ ಫಿಲ್ಡ್ನಲ್ಲಿದೆ,
ಇಂತಹ ಯಾವ ಸುಳಿವೇ ಇಲ್ಲದೆ ಕುಳ್ಳಿ ಆಡುತ್ತಿದ್ದ ಹಿಂಬದಿ ಈ ಹಂತಕರು ನಿಂತಿದ್ದಾರೆ, ಆದಾಗಲೂ ಕುಳ್ಳಿ ಎಚ್ಚರತಪ್ಪಿದ್ದಾನೆ, ಮತ್ತೊಂದು ಕಡೆ ಕೂತಾಗಲು ಇದೇ ಹಂತಕರ ಪಡೆ ಹಿಂದೆಯೇ ಹೋಗಿ ನಿಂತಿದ್ದಾರೆ, ಇನ್ನೂ ಇವನಂತಹ ಮೂರ್ಖ ಇನ್ನೋಬ್ಬನಿಲ್ಲ, ಹುಂಬುತನ ಮನುಷ್ಯನಿಗೆ ನೆತ್ತಿಗೇರಿದ ಮ್ಯಾಲೆ ಕಣ್ಣಿಗೆ ಎಲ್ಲವೂ ಕ್ಷುಲ್ಲಕವಾಗಿ ಬಿಡುತ್ತದೆ ಇಲ್ಲಿಯೂ ಅದೇ ಆಗಿ ಹೋಗಿದೆ, ಹೀಗೆ ಸತತ ಎರಡು ಗಂಟೆಗಳ ಕಾಲ ಹೊಂಚು ಹಾಕಿದ ನಂತರ ಅವರಿಗೆ ಲೀಡ್ ಮಾಡುತ್ತಿದ್ದ ಗ್ಯಾಂಗ್ ಒತ್ತಡವಿಟ್ಟಿದೆ, ಇನ್ನೂ ಅನ್ಯದಾರಿಗಾಣದೇ ಹೊಸಕೊಪ್ಪ ಉಮೇಶನ ಗುಂಪು ಅಟ್ಯಾಕ್ ಮಾಡಿದೆ, ಇದೇನು ಎಂದು ತಿರುಗುತ್ತಿದ್ದಂತೆಯೇ ಮಾರಕಾಸ್ತ್ರಗಳ ಒಡೆತಕ್ಕೆ ಸಿಲುಕಿ ನೆಲಕ್ಕುರುಳಿ ಬಿದ್ದಿದ್ದಾನೆ,
ಈ ಅಟ್ಯಾಕ್ನಲ್ಲಿರುವ ಭುವನ್ ಯಾನೆ ಬುಲ್ಲಿ ಇನ್ನೂ ಮೀಸೆ ಮೂಡದವನು ಈತನಿಗೆ ಭೂಗತ ಲೋಕದಲ್ಲಿ ಡಾನ್ ಆಗಬೇಕೆನ್ನುವ ಕಯ್ಯಾಲಿಯಂತೆ ಹೀಗಾಗಿಯೇ ದೊಡ್ಡದೊಂದು ವಿಕೇಟ್ ಮುಗಿಸುವ ಸ್ಕೆಚ್ನಲ್ಲಿದ್ದು ಜೈಲು ಸೇರಿ ಫಿಲ್ಡ್ ಮಾಡಬೇಕಂತೆ, ಹೀಗಾಗಿಯೇ ಕುಳ್ಳಿ ಕಿರಣ ನೆತ್ತರು ಬಸಿದು ಮೊದಲ ಒಡೆತಗಳಿಗೆ ಸಿಲುಕಿ ನೆಲಕ್ಕುರುಳಿ ಬಿದ್ದಿದ್ದನೋ ಅದಾಗಲೇ ಈ ಭುವನ್ ಯಾನೆ ಬುಲ್ಲಿ ಕುಳ್ಳಿಯ ಎದೆಯ ಮೇಲೆ ಕುಳಿತು ರಚ್ಚಿಗೆ ಬಂದಂತೆ ತನ್ನಲ್ಲಿದ್ದ ಭರ್ಚಿಯಿಂದ ಎದೆಗೆ ಚುಚ್ಚಿದ್ದಾನೆ, ಆತನ ಚುಚ್ಚುವ ರಭಸಕ್ಕೆ ನೆತ್ತರು ಚಿಮ್ಮಿದೆ ಎಂದು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸುತ್ತಾರೆ, ಈತ ಯಾರೆಂದು ವಿಚಾರಿಸಿದಾಗ ಬುಲ್ಲಿಯ ಹೆಸರು ಈ ಪ್ರಕರಣದಲ್ಲಿ ಪೋಸ್ಟರ್ ಆಗಿದೆ,
ಇನ್ನೂ ಸ್ಪಾಟ್ನಲ್ಲಿ ಜೀವ ಹೋಗದೆ ಉಸಿರಾಡಿಕೊಂಡಿದ್ದ ಕುಳ್ಳಿ ಕಿರಣನ ಕೈಯಲ್ಲಿದ್ದ ಬಂಗಾರದ ಉಂಗುರಗಳು, ಬಳೆ, ಕೊರಳ ಚೈನ್ ಕೂಡ ಬಿಡದೆ ಯಾವ ಮಾನವೀಯತೆ ಇಲ್ಲದೆ ಹೊತ್ತು ಹೋಗಿರುವ ಆರೋಪಿಗಳು ಪ್ಲಾನ್ ಆಗಿಯೇ ಬಂದಿದ್ದರು, ಆದರೆ ಮಚ್ಚು, ಭರ್ಚಿಗಳ ಒಡೆತಕ್ಕೆ ಸಿಲುಕಿ ನಲುಗಿದ್ದ ಕುಳ್ಳಿ ಕಿರಣ ನಾರಾಯಾಣ ಹೃದಯಾಲಯಕ್ಕೆ ಕೊಂಡೋಯ್ಯುವ ಮಾರ್ಗಮಧ್ಯೆದಲ್ಲಿಯೇ ತನ್ನ ಕೊನೆ ಉಸಿರು ಚೆಲ್ಲಿದ್ದಾನೆ,
ಇಂತಹ ಅಸಲಿ ಸಂಗತಿಗಳಿದ್ದರು, ಕೇವಲ ಐವತ್ತು ಸಾವಿರ ರೂಪಾಯಿಗಳಿಗೆ ಕುಳ್ಳಿ ಕಿರಣನ ಮುಗಿಸಲಾಗಿದೆ ಎಂದು ಪ್ರಕರಣಕ್ಕೆ ತೆರೆ ಎಳೆಯದೆ ಈ ಹಂತಕರ ಹಿಂದಿರುವ ಅಸಲು ವರಾತಗಳನ್ನು ಮುಚ್ಚಿಡದೆ ಬಿಚ್ಚಿಡುವ ಕೆಲಸ ಮಾಡಿದರೆ ಇನ್ನೊಂದು ಪ್ರಕರಣ ಶಿವಮೊಗ್ಗದಲ್ಲಿ ಬೀಕರತೆ ಪಡೆಯದಿರಲಿ ಎಂಬುದು ಈ ವರದಿಯ ಉದ್ದೇಶವಾಗಿದೆ,
ಶ್ಲಾಘನೀಯ ವಿಚಾರವೆಂದರೆ ತುಂಗಾನಗರ ಠಾಣಾ ಪೊಲೀಸರು ಹಾಗೂ ಗುರುರಾಜ್ ಕರ್ಕಿ ಅವರ ದಿಟ್ಟ ಕರ್ತವ್ಯದಿಂದ ಕೊಲೆ ಮಾಡಿದ ಆರೋಪಿಗಳು ಬಂಧಿತರಾಗಿದ್ದಾರೆ, ಆದರೆ ಕುಳ್ಳಿ ಕಿರಣನ ಹಸಿ ನೆತ್ತರ ಹಿಂದೆ ಕಾಡಾ ಕಾರ್ತಿಕನ ನೆರಳು, ಪೂರ್ವ ಭಾವಿ ಸ್ಕೆಚ್, ಬೆಂಗಳೂರಿನ ಹುಡುಗರು ಮಾಡಿದ ಎಸ್ಕಾರ್ಟ್ ಎಲ್ಲವೂ ಮುಚ್ಚಿ ಹೋಗದಿರಲಿ ಎನ್ನುವ ಈ ಅಸಲು ಸುದ್ದಿಯ ಇರಾದೆಯಾಗಿದೆ, ಈ ನಿಟ್ಟಿನಲ್ಲಿ ಪೊಲೀಸರು ಕೆಲಸ ಮಾಡದಿದ್ದರೂ ಸುದ್ದಿಯ ನಿಖರತೆಗಳು ಯಾವುದೇ ಮುಲಾಜಿಲ್ಲದೆ ಬಿತ್ತರಗೊಳ್ಳುತ್ತದೆ, ಎಕೆಂದರೆ ಕುಳ್ಳಿ ಕಿರಣನ ಅಕ್ರಮ ಇಸ್ಪೀಟ್ ದಂಧೆಯ ಕಯ್ಯಾಲಿಯಲ್ಲಿ ಇತ್ತೀಚೆಗೆ ಇದೇ ಕಾಡಾ ಕಾರ್ತಿಕನ ರೈಡ್ ಗ್ಯಾಂಗ್ನಲ್ಲಿ ಗುರುತಿಸಿಕೊಂಡಿರುವ ತುಂಗಾನಗರದ ನಿವಾಸಿ ಬಾಡಿ ಬಿಲ್ಡರ್ ಮುಬಾರಕ್ ಗುಂಪು ಮಾರಕಾಸ್ತ್ರಗಳಿಂದ ಗಾಜನೂರಿನ ಸಕ್ರೇಬೈಲ್ ಸಮೀಪದಲ್ಲಿ ಅಟ್ಯಾಕ್ ಮಾಡಿತ್ತು, ಆದರೆ ಅಂದು ಅದೃಷ್ಟವಶಾತ್ ಕುಳ್ಳಿ ಕಿರಣ ತುಂಗಾನದಿಗೆ ಬಿದ್ದು ಪರಾರಿಯಾಗಿದ್ದನು, ಈ ಸುದ್ದಿ ಕೂಡ ಹಿಂದೆಯೇ ಇತ್ಯಾದಿ ಪತ್ರಿಕೆ ವರದಿ ಮಾಡಿತ್ತು, ಪತ್ರಿಕೆಗಳು ಸುದ್ದಿಮೂಲವಿಡಿದು ಸುದ್ದಿ ಮಾಡುತ್ತದೆ, ಖಾಕಿ ಕೆಲಸ ಮಾಡಬೇಕಷ್ಟೆ ಮಾಡದಿದ್ದರೆ ಇಂತಹ ರಕ್ತಚರಿತ್ರೆಗಳ ಅಧ್ಯಾಯದ ಪುಟಗಳು ತೆರೆಯುತ್ತಲೇ ಇರುತ್ತದೆ, ಇನ್ನೂ ಅಕ್ರಮ ಇಸ್ಪೀಟ್ ರೈಡ್ ಗ್ಯಾಂಗ್ನಲ್ಲಿರುವ ಬಾಡಿ ಬಿಲ್ಡರ್ ಮುಬಾರಕ್ಗೆ ರಂಗನಾಥ ಬಡಾವಣೆಯಲ್ಲಿರುವ ಸೋಕಾಲ್ಡ್ ಪುಡಿ ರೌಡಿಗಳ ಬರ್ತಡೆ ಆಸಾಮಿ ಯಾವಾಗಲು ಎಸ್ಕಾರ್ಟ್ ಆಗಿಯೇ ಇರುತ್ತಾನೆ ಈಗಾಗಲೇ ಈತನನ್ನು ಬೆಂಬಲಿಸಿ ತುಂಗಾನಗರ ಪೊಲೀಸ್ ಠಾಣೆಗೆ ಬೇಟಿ ಕೊಟ್ಟು ರಾಜಿ ಬ್ಯುಸಿನೆಸ್ ಇಟ್ಟುಕೊಂಡಿರುವುದು ಗುಟ್ಟಾಗೇನು ಉಳಿದಿಲ್ಲ,


