Sunday, 1 November 2026 — Suryagagana
04:37 AM
ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I
ಸೂರ್ಯಗಗನ

I ಅ.26ರವರೆಗೆ ಗಾಜನೂರಿನ I ಪವಾಡ ಸದೃಶ್ಯಧಾತೆ I ದೊಣ್ಣೆ ಕೆಂಚಮ್ಮಳ I ದಿವ್ಯ ದರುಶನ ಹಾಗೂ ಶರನ್ನವರಾತ್ರಿ I

I ಅ.26ರವರೆಗೆ ಗಾಜನೂರಿನ I ಪವಾಡ ಸದೃಶ್ಯಧಾತೆ I ದೊಣ್ಣೆ ಕೆಂಚಮ್ಮಳ I ದಿವ್ಯ ದರುಶನ ಹಾಗೂ ಶರನ್ನವರಾತ್ರಿ I ಅನಾದಿ ಕಾಲದಿಂದಲೂ..ಪ್ರತಿಧ್ವನಿಸುತ್ತಿರುವ ದೇವಳವಿದು, ಭಕ್ತರ ಇಷ್ಠಾರ್ಥಗಳ ನೆರವೇರಿಸುವ ಹಲವು ಪವಾಡ ಸದೃಶ್ಯಗಳ ತಾಣ, ಸಂಕಟಹರಿಣಿ, ಮಾತೃಕೆ. ಮೂಲ ಶಂಕರಗುಡ್ಡದ ಆದಿ…

I ಅ.26ರವರೆಗೆ ಗಾಜನೂರಿನ I ಪವಾಡ ಸದೃಶ್ಯಧಾತೆ I ದೊಣ್ಣೆ ಕೆಂಚಮ್ಮಳ I ದಿವ್ಯ ದರುಶನ ಹಾಗೂ ಶರನ್ನವರಾತ್ರಿ I

ಅನಾದಿ ಕಾಲದಿಂದಲೂ..ಪ್ರತಿಧ್ವನಿಸುತ್ತಿರುವ ದೇವಳವಿದು, ಭಕ್ತರ ಇಷ್ಠಾರ್ಥಗಳ ನೆರವೇರಿಸುವ ಹಲವು ಪವಾಡ ಸದೃಶ್ಯಗಳ ತಾಣ, ಸಂಕಟಹರಿಣಿ, ಮಾತೃಕೆ. ಮೂಲ ಶಂಕರಗುಡ್ಡದ ಆದಿ ದೇವತೆ, ಇಲ್ಲಿ ನೆಲೆಸಿಹಳಿದ್ದಾಳೆ ಎನ್ನುವ ಪುರಾಣ ಕಥೆ ಎಂತಹವರಿಗೂ ಭಕ್ತಿಯ ಏಕಾಗ್ರತೆ ಹೆಚ್ಚಿಸಬಲ್ಲದು, ಪ್ರತಿ ನವರಾತ್ರಿ ದಿನಮಾನದಲ್ಲಿ ಪೂರ್ಣ ದರುಶನಧಾತೆಯಾಗಿರುವ ಈ ದೇವತೆಗೆ ಅದಾಗ ವಿಶೇಷವಾಗಿ ಅಲಂಕಾರಗೊಳಿಸಲಾಗುತ್ತದೆ, ಹನ್ನೊಂದು ದಿನಗಳಿಲ್ಲಿ ವಿಶೇಷ ಪೂಜೆಗಳು ನೆರವೇರುತ್ತದೆ, ಕೊನೆ ದಿನ ಎರಡು ಮೊನಚು ಕತ್ತಿಯ ಮೇಲೆ ನಿಂದು ಕಾರ್ಣಿಕ ಹೇಳುವ ಗ್ರಾಮಿಣ ಸೋಗಡಿನ ಪರಂಪರೆ ಇಂದಿಗೂ ಸಾಗಿದೆ.

ಈ ವರುಷದ ಶರನ್ನವರಾತ್ರಿಯ ವೈಭವತೆ ನೆಲದ ಭಕ್ತಿ ಪರಂಪರೆಯನ್ನು ಎತ್ತಿ ಹಿಡಿದಿದೆ, ಇದೀಗ ಅ.೧೬ ರಿಂದ ಶ್ರೀ ಆದಿಶಕ್ತಿ ದೊಣ್ಣೆ ಕೆಂಚಮ್ಮ ತಾಯಿ ಪೂರ್ಣ ಅಲಂಕೃತಳಾಗಿ ಭಕ್ತರಿಗೆ ದರ್ಶಿಸುತ್ತಾಳೆ, ಅ.೨೬ರಂದು ಗಾಜನೂರಿನಲ್ಲಿ ಬನ್ನಿ ಮಂಟಪಕ್ಕೆ ಹೋಗುವುದು, ಕೆಂಚಮ್ಮ ದೇವಿಯ ಉತ್ಸವ, ಈ ಹನ್ನೊಂದು ದಿನಮಾನಗಳ ಕಾಲದವರೆಗೆ ಪ್ರತಿದಿನ ಪ್ರಸಾದ ವಿನಿಯೋಗ, ಹೂವಿನ ಅಲಂಕಾರಗಳು, ಕಾರ್ಣಿಕ ನುಡಿ ನುಡಿಯುವುದು, ಇಂತಹದೊಂದು ಗ್ರಾಮೀಣಾ ಸೊಗಡಿನ ಭಕ್ತಿ ಪರಂಪರೆಯನ್ನು ಮೇಳೈಸಿರುವ ಗಾಜನೂರಿನ ಕೆಂಚಮ್ಮ ತಾಯಿ ಲಕ್ಷಾಂತರ ಭಕ್ತರ ದೈವಿಧಾತೆಯಾಗಿದ್ದಾಳೆ,

ಶ್ರೀ ಆದಿಶಕ್ತಿ ಕೆಂಚಮ್ಮ ತಾಯಿಯು ತನ್ನ ಭಕ್ತರ ನೆರವಿಗೆ, ಆಪತ್ ಕಾಲದಲ್ಲಿ ಹುರೇ ಚೌಡಿಯನ್ನು ಕಳಿಸುತ್ತಾಳೆ ಎನ್ನುವ ಪ್ರತಿತಿ ಇದೆ, ಇದರಂತೆ ಅಲ್ಲೇ ಪಕ್ಕದಲ್ಲಿರುವ ಹುರೇ ಚೌಡಿ ಗೂ ಪೂಜೆ ಸಲ್ಲಿಸುವ ಭಕ್ತರು ಹೇಳಿಕೊಂಡ ಹರಕೆಗಳು ಯಾವ ಅನುಮಾನವೇ ಇಲ್ಲದೇ ಪೂರ್ಣಗೊಳ್ಳುತ್ತದೆ ಎನ್ನುವ ಸಾವಿರಾರು ಭಕ್ತರು. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಇಲ್ಲಿ ಜಮಾವಣೆಯಾಗುತ್ತಾರೆ, ಅಲ್ಲದೇ ತಮ್ಮ ಭಕ್ತಿಯಿಂದ ಬೇಡಿಕೊಂಡು ಮರಳುತ್ತಾರೆ, ಹೀಗೆ ದಯಾಸ್ವರೂಪಳು, ದಯಾದೃಷ್ಟಿಯುಳ್ಳವಳು, ದುಃಖವನ್ನು ನಾಶ ಮಾಡುವವಳು, ಸಮಸ್ತ ಆಪತ್ತುಗಳಿಂದಲೂ ಸಂರಕ್ಷಿಸುವವಳು ಎಂದು ಅಪಾರ ಭಕ್ತ ಸಮೂಹ ಹೇಳುತ್ತದೆ .ಇಂತಹ ವಿಶೇಷ ಭಕ್ತಿಯ ತಾಣ ಶಿವಮೊಗ್ಗದಿಂದ ೯ಕಿ,ಮೀ ಕ್ರಮಿಸಿದರೇ ಸಿಗುವ ಗಾಜನೂರಿನ ತುಂಗಾತಟದಲ್ಲಿರುವುವಳೇ ದೊಣ್ಣೆ ಕೆಂಚಮ್ಮ ಈಕೆಯ ಆದೇಶದ ಪರಿಪಾಲಕಳೇ ಹುರೇ ಚೌಡಿ ದೇವಳ, ಇಲ್ಲಿ ಯಾವುದೇ ಆಡಂಬರವಿಲ್ಲದ ಸರಳ ಪೂಜೆಗಳು ನಿತ್ಯವೂ ಸಾಂಗವಾಗುತ್ತಿದೆ, ಇದು ಹಳೆ ಗಾಜನೂರಿನ ಆದಿ ದೇವತೆಯಾಗಿದ್ದಾಳೆ.

ಒಟ್ಟಾರೆ ಶ್ರೀ ಆದಿಶಕ್ತಿ ದೊಣ್ಣೆ ಕೆಂಚಮ್ಮ ಪವಾಡ ಸದೃಶ್ಯವನ್ನು ಭಕ್ತರಿಗೆ ಅನುಭವಕ್ಕೆ ತಂದು ಕೊಡುತ್ತಾಳೆ, ಕಂಬನಿ ಮಿಡಿದು ಎದೆಯ ಪ್ರಾರ್ಥನೆಗೆ ಆ ಕ್ಷಣವೇ ಸ್ಪಂದಿಸುತ್ತಾಳೆ ಎನ್ನುವ ಭಕ್ತರ ನಂಬಿಕೆಗಳು ಇಂದಿಗೂ ಹುಸಿಯಾಗಿಲ್ಲ ಎನ್ನುವುದು ವಿಶೇಷವಾಗಿದೆ.

Gara

Gara

Leave a comment

error: Content is protected !!