ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಪಿಡುಗುಗಳ ವಿರುದ್ದ ಕುಮಾರಣ್ಣ I
ಕನ್ನಡದ ನೆಲದ ಮೌಲ್ಯವೆಲ್ಲಿ ಉಳಿತು..?
ಅಧಿಕಾರಕ್ಕಾಗಿ ಸ್ಟಿಂಗ್ ಆಪರೇಶನ್ ಬೇಕಿತ್ತೇ..!
ನೈಸ್ ಹಗರಣಗಳಿಗಾಗಿ ರೈತರೆದೆಗಳ ಸೀಳಬೇಕಿತ್ತೇ..?
ನೀನೆಲ್ಲಿ ದಲಿತ..? ಬಲಿತನೆಂದಿದ್ದು ವಾಸ್ತವವಲ್ಲವೇ,
ಕೊನೆಗೂ ಕುಮಾರಣ್ಣನ ದನಿಯೇ ಬೇಕಿತ್ತು,
ಡಿ.ಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆಗಳೇ,
ವಿವೇಕಗಳಿಲ್ಲದ ಖಾಲಿ ಸೌಧಗಳನ್ನಾಗಿಸದಿರಿ,
ನಾಡಿನ ಮಾನಗಳ ಜಗದ ಜಗಲಿಯಲ್ಲಿರಿಸದಿರಿ,
ಅಭಿವ್ಯಕ್ತಿಗಳ ಸುಡು ಬೆಂಕಿಯದೌತಣಕೆ ದೂಡದಿರಿ,
ಸಾಂವಿಧಾನಿಕತೆಯ ಸಾಲುಗಳ ಕಾಪಿಟ್ಟುಕೊಳ್ಳಿರಿ,
ಯಾರೇ ಆಗಲಿ ಸ್ಟಿಂಗ್ ಪಿನ್ ಬಂಧಿಸಿ ಜೈಲಿಗಟ್ಟಿರಿ..!
ಉಸಿರುಗಟ್ಟಿದರೆ ಇಂದೇ ರಾಜ್ಯದ ಉಸಾಬರಿ ಬಿಟ್ಟುಬಿಡಿ,
ಏನೇ, ಆಗಲಿ ಕನ್ನಡದ ನೆಲದ ಮೌಲ್ಯ ಉಳಿಯಲಿ
ನೈಸ್, ಬಿಡದಿ ಭೂ ಹಗರಣಗಳ ಲಗತ್ತು ಅಳಿಯಲಿ,
ಸ್ಟಿಂಗ್, ಹನಿಟ್ರ್ಯಾಪ್ ಎಂಬಿತ್ಯಾದಿ ಪಿಡುಗುಗಳು ಕೊನೆಗಾಣಲಿ,
ನಡೆ ಕುಮಾರಣ್ಣ, ಈ ಅಕ್ಷರದೊಂದಿಗೆ ನಿಮ್ಮೊಂದಿಗಿದ್ದೇವೆ