Sunday, August 2, 2026
Homeಸೂರ್ಯಗಗನI ಪತ್ರಿಕೋದ್ಯಮ ನಿಂತ ನೀರಲ್ಲ I ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ...

I ಪತ್ರಿಕೋದ್ಯಮ ನಿಂತ ನೀರಲ್ಲ I ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು I

I ಪತ್ರಿಕೋದ್ಯಮ ನಿಂತ ನೀರಲ್ಲ I ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು I

ಬೆಂಗಳೂರು : ಪತ್ರಿಕೋದ್ಯಮ ನಿಂತ ನೀರಾಗಬಾರದು. ಅದು ಲೋಕ ಸತ್ಯಾನ್ವೇಷಣೆಗೆ ನಿರಂತರ ಚಿಲುಮೆಯಾಗಬೇಕು ಎಂದು ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಭಿಪ್ರಾಯಪಟ್ಟರು.

ಶುಕ್ರವಾರಂದು ನಗರದಲ್ಲಿ ನಡೆದ ವಂದೇ ಕರ್ನಾಟಕ ದ್ವಿಭಾಷಿಕ ಮಾಸಪತ್ರಿಕೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಪತ್ರಿಕೋದ್ಯಮದ ಹಸಿವು ! : ಪತ್ರಿಕಾ ಕಸಬು ಎಂದರೆ ಅದು ಹುಡುಗಾಟಿಕೆ ಅಲ್ಲ. ಪತ್ರಿಕೆಗಳನ್ನು ದೀರ್ಘಾವಧಿಗೆ ನಡೆಸುವುದೆಂದರೆ ಅದೊಂದು ಸಾಹಸ. ನೂತನ ವಿಚಾರಗಳನ್ನು ಓದುಗರಿಗೆ ತಲುಪಿಸಲು ಇಂದು ಕೇವಲ ದಿನಪತ್ರಿಕೆಗಳು ಮಾತ್ರ ಸೀಮಿತವಾಗಿಲ್ಲ. ವಾರ, ಪಾಕ್ಷಿಕ ಮತ್ತು ಮಾಸಿಕ ಪತ್ರಿಕೆಗಳೂ ಈ ದಿಶೆಯಲ್ಲಿ ಓದುಗ ಪ್ರಪಂಚಕ್ಕೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಲು ಸಾಧ್ಯವಿದೆ. ಈ ದಿಶೆಯಲ್ಲಿ ನಾಡಿನ ಪ್ರತಿಷ್ಟಿತ ದಿನಪ್ರತಿಕೆಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಲಿಂಗಯ್ಯ ಬಿ. ಕಾಡದೇವರಮಠ ಅವರ ಪತ್ರಿಕೋದ್ಯಮದ ಹಸಿವು ಮೆಚ್ಚುವಂತಹದು. ಇವರ ಸಾರಥ್ಯದಲ್ಲಿ ರೂಪುಗೊಂಡಿರುವ ವಂದೇ ಕರ್ನಾಟಕ ಮಾಸಿಕ ಪತ್ರಿಕೆಯು, ಭವಿಷ್ಯದಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಓದುಗ ಪ್ರಪಂಚದ ಮನಗೆಲ್ಲಲಿ ಎಂದು ತಗಡೂರು ಅವರು ಈ ಸಂಧರ್ಭದಲ್ಲಿ ಅವರು ಹಾರೈಸಿದರು.

ಬರಹದಿಂದ ಸಮಾಜಕ್ಕೆ ಒಳಿತಾಗಲಿ: ರುದ್ರಣ್ಣ ಹರ್ತಿಕೋಟೆ : ರಾಜ್ಯದ ಮಾಹಿತಿ ಹಕ್ಕು ನಿರ್ದೇಶನಾಯಲದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು ಮಾತನಾಡಿ ಸಮಾಜಕ್ಕೆ ಒಳಿತಾಗುವ ಮತ್ತು ಉಪಯುಕ್ತಕರ ವಿಷಯಗಳನ್ನು ಅರ್ಥಪೂರ್ಣ ಲೇಖನ ಮತ್ತು ವಿಶ್ಲೇಷಣೆಗಳನ್ನು ಪ್ರಕಟಿಸುವ ಮೂಲಕ ವಂದೇ ಕರ್ನಾಟಕ ಮಾಸಿಕ ಪತ್ರಿಕೆಯು, ಓದುಗ ಪ್ರಪಂಚದ ಮನೆಮಾತಾಗಿ ಮಾರ್ಧನಿಸಲಿ ಎಂದು ಆಶಿಸಿದರು. ಹಿರಿಯ ಪತ್ರಕರ್ತರಾದ ಆರ್. ಪಿ. ಜಗದೀಶ್ ಅವರು ಮಾತನಾಡಿ ಮಾಸಿಕ ಪತ್ರಿಕೆ ಭವಿಷ್ಯದಲ್ಲಿ ಉತ್ತಮ ಸಂಚಿಕೆಯಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು. ಹಿರಿಯ ಕಾಂಗ್ರೆಸ್ ಮುಖಂಡ ಎಲ್. ಆರ್. ಅನಂತ್ ಅವರೂ ಮಾತನಾಡಿದರು.

ಇದೇ ವೇಳೆ ಮೊದಲನೆಯ ವಾರ್ಷಿಕೋತ್ಸವ ನಿಮಿತ್ತ ವಂದೇ ಕರ್ನಾಟಕ ವಿಶೇಷ ಸಂಚಿಕೆ ಲೋಕಾರ್ಪಣೆಗೊಂಡಿತು. ಲಿಂಗಯ್ಯ ಬಿ. ಕಾಡದೇವರ ಮಠ ಸ್ವಾಗತಿಸಿದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I