September 25, 2026

I ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ I ಆರ್ಥಿಕ ವಲಯದಲ್ಲಿ ಬಲಗಾಲಿಟ್ಟ I ಎಂ.ಶ್ರೀಕಾಂತ್ I

0
srk 2

I ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ I ಆರ್ಥಿಕ ವಲಯದಲ್ಲಿ ಬಲಗಾಲಿಟ್ಟ I ಎಂ.ಶ್ರೀಕಾಂತ್ I

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಆರ್ಥಿಕ ವಲಯದಲ್ಲಿ ಅಗ್ರಮುಖಿಯಾಗಿರುವ ಡಿಸಿಸಿ ಬ್ಯಾಂಕ್ ಪ್ರತಿಷ್ಠಿತ ಸಹಕಾರಿ ಕ್ಷೇತ್ರವಾಗಿದ್ದು ಇಲ್ಲಿ ಸ್ಪರ್ಧಾತ್ಮಕತೆ ಹಾಗೂ ಸವಾಲುಗಳು ಸಾಮಾನ್ಯವಾಗಿದ್ದರು ಅದೆಂತಹುದೇ ಕ್ಲಿಷ್ಟಕರ ಸಂದರ್ಭದಲ್ಲಿಯು ಆರ್.ಎಂ ಮಂಜುನಾಥ ಗೌಡರವರನ್ನು ಎಂದಿಗೂ ಕೈ ಬಿಡದೆ ಇರುವುದು ಡಿಸಿಸಿ ಆಡಳಿತ ಮಂಡಳಿಯ ವಿಶೇಷತೆಯಾಗಿದೆ,

ನೂರಾರು ಕೋಟಿ ವಹಿವಾಟು, ಇಪ್ಪತ್ತಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವ ಈ ಡಿಸಿಸಿ ಬ್ಯಾಂಕ್ ರೈತಾಪಿ ವರ್ಗದವರಿಗೆ ಹಾಗೂ ಹಲವು ಸಹಕಾರಿ ಸಂಸ್ಥೆಗಳಿಗೆ ಮದರ್ ಸಂಸ್ಥೆಯಾಗಿದೆ, ಕಳೆದ ಚುನಾವಣೆಯಲ್ಲಿ ಅತೀವ ಪೈಪೋಟಿ ದರ್ಶಿಸಿಕೊಂಡಿದ್ದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿದ್ದ ಎಂ.ಶ್ರೀಕಾಂತ್‌ರವರು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದರು,

ಹಿಂಪಡೆದ ಕಾರಣದ ಬಗ್ಗೆ ಹಾಗೆಯೇ ಗೌಪ್ಯವಾಗಿತ್ತು, ಇದೀಗ ಇದು ಸತ್ಯವಾಗಿದೆ, ಎರಡು ದಶಕಗಳಿಂದ ಸಾಮಾಜಿಕ ವಲಯಲದಲ್ಲಿ ಸೇವೆ ಸಲ್ಲಿಸಿರುವ ಎಂ.ಶ್ರೀಕಾಂತ್ ರವರು ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ನಡೆದಿದ್ದರು, ಅವರಿಗೆ ಸಹಕಾರಿ ವಲಯದಲ್ಲಿ ಸೇವೆ ಸಲ್ಲಿಸುವ ಮನಸು ಇರುವ ಕಾರಣಕ್ಕಾಗಿಯೇ ಕಳೆದ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದರು,

ಎಲ್ಲವಕ್ಕೂ ಕಾಲವೇ ಉತ್ತರ ನೀಡುತ್ತದೆ ಎನ್ನುವ ಮಾತಿಗೆ ತಕ್ಕಂತೆ, ಎಂ.ಶ್ರೀಕಾಂತ್‌ರವರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಆರ್.ಎಂ ಮಂಜುನಾಥ್ ಗೌಡರವರ ನೇತೃತ್ವದಲ್ಲಿ ಸಹಕಾರಿ ಕ್ಷೇತ್ರಕ್ಕೆ ಬಲಗಾಲಿಟ್ಟಿದ್ದಾರೆ, ಇದಕ್ಕೆ ಕಾಂಗ್ರೆಸ್ ಅನೇಕ ಯುವ ಮುಖಂಡರು ಹಾಗೂ ಶರತ್ ಮರಿಯಪ್ಪ, ವಿನಯ್ ತಾಂದಲೆ, ಸೇರಿದಂತೆ ರಾಜ್ಯ ಮುಖಂಡರಾದ ಆಯನೂರು ಮಂಜುನಾಥ್, ಸಹಕಾರಿ ಕ್ಷೇತ್ರದ ಮರಿಯಪ್ಪನವರುಗಳು ಶುಭ ಹಾರೈಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!