I ಬಗರ್ ಹುಕುಂ ಅರ್ಜಿಗಳ ವಿಲೇವಾರಿಗಾಗಿ I ಬಗರ್ ಹುಕುಂ ತಂತ್ರಾಂಶ ಜಾರಿ I ಕಂದಾಯ ಸಚಿವ ಕೃಷ್ಣ ಬೈರೇಗೌಡ I
I ಬಗರ್ ಹುಕುಂ ಅರ್ಜಿಗಳ ವಿಲೇವಾರಿಗಾಗಿ I ಬಗರ್ ಹುಕುಂ ತಂತ್ರಾಂಶ ಜಾರಿ I ಕಂದಾಯ ಸಚಿವ ಕೃಷ್ಣ ಬೈರೇಗೌಡ I
ಬೆಂಗಳೂರು, : ಅನಧಿಕೃತ ಸಾಗುವಳಿ ಸಕ್ರಮೀಕರಣ ಕೋರಿ ಸಲ್ಲಿಕೆಯಾಗಿರುವ ಹಾಗೂ ಸಮಿತಿಯಲ್ಲಿ ಬಾಕಿ ಇರುವ ಅರ್ಜಿಗಳನ್ನು ನಿರ್ವಹಿಸಲು ಬಗರ್ ಹುಕುಂ ತಂತ್ರಾಂಶವನ್ನು ಜಾರಿಗೊಳಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಇಂದು ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ನಂಜೇಗೌಡ ಕೆ.ವೈ ಇವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಬಗರ್ ಹುಕುಂ ತಂತ್ರಾಂಶ ಜಾರಿಯಿಂದಾಗಿ ಅರ್ಜಿಗಳನ್ನು ಶೀಘ್ರವಾಗಿ ಹಾಗೂ ಪಾರದರ್ಶಕವಾಗಿ ಪರಿಶೀಲಿಸಿ ಸಮಿತಿಯ ಮುಂದೆ ಮಂಡಿಸಲು ಯಾವುದೇ ಲೋಪವಿಲ್ಲದಂತೆ ಅರ್ಹ ಸಾಗುವಳಿದಾರರಿಗೆ ಸಾಗುವಳಿ ಚೀಡಿ ನೀಡುವುದು ಖಾತೆ ದಾಖಲೀಕರಿಸುವುದು, ಪೋಡಿ ಪ್ರಕ್ರಿಯೆಗೊಳಪಡಿಸಿ ನೋಂದಣಿ ಕಚೇರಿಯಲ್ಲಿ ಫಲಾನುಭವಿಗಳ ಹೆಸರಿಗೆ ನೋಂದಣಿ ಮಾಡಿಸಿ ಮಂಜೂರಿದಾರರಿಗೆ ಪಹಣಿ ವಿತರಣೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ನಮೂನೆ 57ರಡಿ ಮಂಜೂರು ಮಾಡಲು ಒಟ್ಟು 1852 ಅರ್ಜಿಗಳುಬಾಕಿ ಇರುತ್ತವೆ. ಬಾಕಿ ಉಳಿದಿರುವ ಅರ್ಜಿಗಳನ್ನು ಮುಂದಿನ ಆರು ತಿಂಗಳ ಕಾಲಮಿತಿಯೊಳಗಾಗಿ ನಿಯಮಾನುಸಾರ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.