I ಕುರುಹಿನ ಶೆಟ್ಟಿ ಸಮುದಾಯ ಸಂಘಟನೆ I ಮತ್ತು ಮಕ್ಕಳ ಶಿಕ್ಷಣಕ್ಕೆ ಆದ್ಯತೆ I ರಾಜ್ಯಾಧ್ಯಕ್ಷ ಬಿ.ಲಿಂಗೇಶ್ವರ್ I
I ಕುರುಹಿನ ಶೆಟ್ಟಿ ಸಮುದಾಯ ಸಂಘಟನೆ I ಮತ್ತು ಮಕ್ಕಳ ಶಿಕ್ಷಣಕ್ಕೆ ಆದ್ಯತೆ I ರಾಜ್ಯಾಧ್ಯಕ್ಷ ಬಿ.ಲಿಂಗೇಶ್ವರ್ I
ಬೆಂಗಳೂರು: ಕುರುಹಿನಶೆಟ್ಟಿ ಕೇಂದ್ರ ಸಂಘ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯ ಮತಪತ್ರ ಏಣಿಕೆ ಕಾರ್ಯ ಆರಂಭವಾಯಿತು. ಬೆಂಗಳೂರು, ಮೈಸೂರು, ಬೆಳಗಾಂ ಮತ್ತು ಹಾಸನ ಜಿಲ್ಲೆಗಳಲ್ಲಿ ಮತಕೇಂದ್ರಗಳು ಸ್ಥಾಪಿಸಲಾಗಿತ್ತು. ನಾಲ್ಕು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಬಿ.ಲಿಂಗೇಶ್ವರ್ ಅತ್ಯಧಿಕ ಮತಗಳು ಪಡೆದು ಆಯ್ಕೆಯಾದರು.
ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ ರೂಪಲಿಂಗೇಶ್ವರ್ ರವರು, ಹಿರಿಯ ಮುಖಂಡರಾದ ಸೋಮಶೇಖರ್ ಮತ್ತು ಸಮಾಜದ ಮುಖಂಡರುಗಳು ಬಿ.ಲಿಂಗೇಶ್ವರ್ ರವರಿಗೆ ಶುಭ ಕೋರಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ನೂತನವಾಗಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿ.ಲಿಂಗೇಶ್ವರ್ ರವರು ಮಾತನಾಡಿ ಕುರುಹಿನಶೆಟ್ಟಿ ಸಮುದಾಯ ರಾಜ್ಯದಲ್ಲಿ 20ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದಾರೆ. ಪ್ರಮುಖ ಉದ್ಯಮ ನೇಕಾರಿಕೆಯಾಗಿದೆ.
ಕುರುಹಿನಶೆಟ್ಟಿ ಸಮುದಾಯ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಹಿಂದೆ ಉಳಿದಿದೆ, ಸಮಾಜದ ಮುಖ್ಯವಾಹಿನಿ ತರಲು ನಮ್ಮ ಸಮುದಾಯದ ಸಂಘಟನೆ ಮಾಡುವುದು ಪ್ರಥಮ ಆದ್ಯತೆ.
ಬೆಂಗಳೂರುನಗರ ಸಾಕಮ್ಮ ಭವನವನ್ನು ನವೀಕರಣ ಕಾರ್ಯ ಮತ್ತು ಶೈಕ್ಷಣಿಕವಾಗಿ ಅಭಿವೃದ್ದಿಯಾಗಲು ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಹ, ಸಹಕಾರ ಮತ್ತು ನೇಕಾರಿಕೆ ಮಾಡುವ ನಮ್ಮ ಸಮುದಾಯದವರಿಗೆ ಕೇಂದ್ರ, ರಾಜ್ಯ ಸರ್ಕಾರದಿಂದ ಸಾಲ ಸೌಲಭ್ಯ, ವಸತಿ ಸೌಲಭ್ಯ ವಿವಿಧ ಯೋಜನೆಗಳನ್ನು ತಲುಪುವಂತೆ ಮಾಡುವ ಕಾರ್ಯ ಹಾಗೂ ಸಹಾಯ ನೀಡಲು ಮನವಿ ಮಾಡಲಾಗುವುದು.
