September 24, 2026

I ಕಾಟೇರನ ಕ್ರಾಂತಿ I

0
b6e8c1bd81d652998f4038973148ad68_1735317212580_l_medium

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಕಾಟೇರನ ಕ್ರಾಂತಿ I

ಭಯೋತ್ಪಾದಕತೆ ಮತ್ತು ಭಯ ಉತ್ಪಾದಕರು ದರ್ಶಿಸಲಿಲ್ಲ,
ಸರಣಿ ಕೊಲೆ, ಸುಫಾರಿ ಹತ್ಯಾಕಾಂಡದ ಸೊಲ್ಲೆತ್ತಲಿಲ್ಲ,
ನಾಡಿನ ಅಭದ್ರತೆಗಳು ಏನಾದರೂ ಸರಿಯೇ, ಅದುವೆ ಲೆಕ್ಕಕ್ಕಿಲ್ಲ,
ನಿನ್ನೆಯ ಚೆನ್ನಪಟ್ಟಣದ ಎ.ಕೆ ದೊಡ್ಡಿ ಲಾಕಪ್ ಡೆತ್ ಗೊತ್ತಿಲ್ಲ..!?
ಕಾಟೇರನ ಪಾತ್ರಧಾರಿಗೆ ಮಾತ್ರ ಬಿಟ್ಟರೂ ಬಿಡದೆ ಕುಣಿಕೆ ಕಟ್ಟಬೇಕೆ..?

ಅಭಿವ್ಯಕ್ತಿ ಎಲ್ಲಿದೆ..? ಜಾತಿಯತೆ, ಧರ್ಮಾಂದತೆಯಲ್ಲಿದಿಯಾ..
ಅವನ್ಯಾರೋ ರಾಷ್ಟ್ರೀಯ ಪತ್ರಕರ್ತನಂತೆ, ಪಟ್ಟ ಕಟ್ಟಿ ಬಿಟ್ರೂ..
ದಿಟವಾಯ್ತು, ಪ್ರಾದೇಶಿಕತೆ, ಲೋಕಲ್, ಕಾರ್ಪೋರೆಟ್ ಬಗೆಗಳಿವೆ,
ಪತ್ರಿಕಾಂಗದೊಳು ತೂರಿಕೊಂಡ ಅಪಮೌಲ್ಯ ನಿಷ್ಟರ ವ್ಯಾಖ್ಯಾನಗಳಿವೆ,

ಕಾಂಗ್ರೆಸಿನ ರಮ್ಯಾ, ಬಿಗ್ಬಾಸಿನ ಪ್ರಥಮ, ಇಂದ್ರಜಿತ್, ಇತ್ಯಾದಿಗಳಿಗೆ,
ಟಿಆರ್‍ಪಿ, ಕಾಸಿಗಾಗಿ ಸುದ್ದಿ ಸದ್ದಿನ ಹಪಾಹಪಿ ಮಾಧ್ಯಮಿ ಕಸಾಯಿಗಳಿಗೆ,
ಪೊಲೀಟಿಕಲ್ ಧ್ವೇಷದ ಮೇಜು-ಮೋಜಿನ ಹೈ-ಪ್ರೋಪೈಲ್‌ಗಳಿಗೆ,
ಕಾಟೇರನ ಪಾತ್ರಧಾರಿ ದರ್ಶನ್ ವ್ಯಾಪಕತೆಯ ಭೂಪಟ ಬೇಕಿತ್ತೇ..?

ಸಂವಿಧಾನದ ತಿದ್ದುಪಡಿ, ಪುಟಾಲು ಪ್ರಥಮನಿಗೆ ಅಗತ್ಯವಂತೆ,
ದೊಡ್ಡಬಳ್ಳಾಪುರದಲ್ಲಿ ದಲಿತ ಸಂಘಟಕರು ಮಸಿ ಬಳಿದರಂತೆ,
ಕಾಂಗ್ರೆಸ್ ರಮ್ಯಾಳಿಗೆ ದರ್ಶನ್ ಫ್ಯಾನ್ಸ್ ಮೇಲೆ ಸಿಡುಕೋಪವಂತೆ,
ತನ್ನದೇ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರಿಗೆ ಹೊರದೊಬ್ಬಿದಳಂತೆ,

ಕನ್ನಡದ ಕಲಾ ಸಂಸ್ಕೃತಿಯ ಮ್ಯಾಲೆ ಅರಾಜಕತೆಯ ದಾಳಿಗಳು,
ಚಿತ್ರಮಂದಿರಗಳು ಅಳಿಯುತ್ತಿರಲು, ಕಲಾವಿದರು ಸೊರಗುತ್ತಿರಲು,
ಕಾಟೇರನ ಪಾತ್ರಧಾರಿಯ ಸಾಮಾಜಿಕ ನ್ಯಾಯದ ಕತೆ ಮುಗಿಸೆಂದರೂ…
ಕನ್ನಡವೇ ಸಾಕು, ಪ್ಯಾನ್ ಇಂಡಿಯಾ ನಮಗ್ಯಾಕೆಂದ ನಿಲುವುಗಳು,

ಬೊಬ್ಬಿರಿಯುತ್ತಿದ್ದಾರೆ, ಕಡುಕೋಪಗಳ ಹೆಣೆಯುತ್ತಿದ್ದಾರೆ,
ಆದರಿಲ್ಲಿ ಬದುಕಿದ್ದೇ ಕಾಟೇರ ದೇವನಾಗುತ್ತಿದ್ದಾನೆ,

Spread the love

Leave a Reply

Your email address will not be published. Required fields are marked *

error: Content is protected !!