Tuesday, September 15, 2026
Homeಸಾಹಿತ್ಯI ನಾನು ಪತ್ರಕರ್ತ I

I ನಾನು ಪತ್ರಕರ್ತ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ನಾನು ಪತ್ರಕರ್ತ I

ನಾನು ಪತ್ರಕರ್ತ ಗೊತ್ತೇ..?!
ಪ್ರಶ್ನಿಸುತ್ತೇನೆ, ಪ್ರಬುದ್ದಿಸುತ್ತೇನೆ,
ನ್ಯಾಯದೀಶರನ್ನು ಮೀರಿಸುತ್ತೇನೆ,
ಸಂವಾದಿಸುತ್ತೇನೆ, ಸಂದರ್ಶಿಸುತ್ತೇನೆ,

ವರ್ಗಿಸುತ್ತೇನೆ, ಅಭಿವ್ಯಕ್ತಿಸುತ್ತೇನೆ,
ನನ್ನ ಪ್ರಶ್ನಿಸುವ ಹಕ್ಕು ನಿಮಗಿಲ್ಲ,
ನಿಮ್ಮನ್ನು ಬರಹದೊಳು ಚಿತ್ರಿಸುತ್ತೇನೆ,
ಬೇಕಿದ್ದರೆ ಮಾನನಷ್ಟಗಳು ಲಗತ್ತಿಸಿ..

ಆಡಳಿತಷಾಹಿ ನನ್ನ ಸೆರೆಯಲ್ಲಿದೆ,
ಸಾಂದರ್ಭಿಕವಾಗಿ ತಿರುಚುತ್ತೇನೆ,
ಖಾಕಿ-ಖಾವಿಗಳಿಗೆ ನಿತ್ಯ ಅನಿವಾರ್ಯ,
ಸುದ್ದಿಗಳು ಇಂತಿವರಿಗೆ ಮೀಸಲು,
ನಾಗರೀಕ ಜ್ವಲಂತತೆ ಅಗತ್ಯಗಳಿಲ್ಲ,

ಬಿಳಿ ಲಕೋಟೆಗಳು ಅದರೊಳು ಕಾಸು,
ಆಗಾಗ್ಗೆ ಗಿಪ್ಟ್, ದುಂಡು ಮೇಜಿನ ಗೋಷ್ಟಿ,
ಬೇಕಿದ್ದವರ ವರ್ಗಾವಣೆಗಳ ಮಿನಿಟ್,
ಇದೆಲ್ಲವೂ ಸಾಂವಿಧಾನಿಕ ಹರಣ,
ವೇದಿಕೆಯೊಳು ಮೌಲ್ಯಗಳ ಮರಣ..!

ಈ ಮೇಲಿನದ್ದು ಬಹುತೇಕದ ಸ್ಥಿತಿ,
ಅಭಿವ್ಯಕ್ತಿ ನೆವದ ಹಪಾಹಪಿತನದ ಮತಿ,
ಎಲ್ಲರಿಗೂ ಪ್ರಚುರದ ಅರೆ ಹುಚ್ಚು,
ಕಾಲಂ‌ ಸುದ್ದಿಗಳಲ್ಲಿ ದರ್ಶಿಸಿಕೊಳ್ಳುವ ಕಿಚ್ಚು,

ಹೊತ್ತಿ ಬುಗಿಲೆದ್ದಿದೆ ಅತಂತ್ರದ ಕಾವು,
ಎದೆ ಜಗಲಿಗಳ ತಣಿಸುವುದು ಯಾರಿಲ್ಲಿ,
ಮರಿಚಿಕೆಯಾದ ಸಾಂವಿಧಾನಿಕ ಮೌಲ್ಯವಿಲ್ಲಿ,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news