I ಜನ ಸುರಕ್ಷಾ ಅಭಿಯಾನ ಸಂಪನ್ನI
I ಜನ ಸುರಕ್ಷಾ ಅಭಿಯಾನ ಸಂಪನ್ನI
ಶಿವಮೊಗ್ಗ: ಕೆನರಾ ಬ್ಯಾಂಕ್ ವತಿಯಿಂದ ಕೇಂದ್ರ ಸರ್ಕಾರದ ಜನ ಸುರಕ್ಷಾ ಅಭಿಯಾನ ಇತ್ತೀಚಿಗೆ ಕುಂಸಿ ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು.
ಭಾರತೀಯ ರಿಸರ್ವ್ ಬ್ಯಾಂಕ್ ನ ರೀಜನಲ್ ಡೈರೆಕ್ಟರ್ ಸೋನಾಲಿಸೇನ್ ಗುಪ್ತ ಅವರು ಉದ್ಘಾಟಿಸಿದರು. ಕೆನರಾ ಬ್ಯಾಂಕ್ ನ ಜನರಲ್ ಮ್ಯಾನೇಜರ್ ಸಿ.ಎಚ್. ಕೆ. ಗಂಗಾಧರ್ ಅವರು ಕೆನರಾ ಬ್ಯಾಂಕ್ ನ ಶಿವಮೊಗ್ಗ ಕ್ಷೇತ್ರದ ಕಾರ್ಯಾಲಯದ ಡಿ. ಜಿ.ಎಂ ದೇವರಾಜ್ ಹಾಗೂ ಲೀಡ್ ಬ್ಯಾಂಕ್ ನ ಎಡಿಎಂ ಹನುಮಂತಪ್ಪ, ಹಾಗೂ ಆರ್. ಬಿ. ಎ. ಜೆ. .ಎಂ ಬುಬುಲ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆರ್ಥಿಕ ಸೇರ್ಪಡೆ ಆರ್ಥಿಕ ಸಾಕ್ಷರತೆ ಹಾಗೂ ReKYC, ಪಿಎಂಜೆ ಜೆಬಿವೈಪಿಎಂಎಸ್ ಬಿವೈ ಸೌಲಭ್ಯಗಳ ನೋಂದಣಿ ಮತ್ತು ಇದನ್ನು ಎಲ್ಲರಿಗೂ ಸಮಾಜದ ಎಲ್ಲಾ ವರ್ಗಕ್ಕೂ ತಲುಪುವಂತೆ ಕರೆ ಕೊಡಲಾಯಿತು.