I ವನ್ನಿಯರ್ ಸಮಾಜದಿಂದ I ಪ್ರತಿಭಾ ಪುರಸ್ಕಾರ I
ಶಿವಮೊಗ್ಗ: ಕರ್ನಾಟಕ ಸ್ಟೇಟ್ ವನ್ನಿಯರ್ ಎಜುಕೇಷನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವನ್ನಿಯರ್ ಗೌಂಡರ್ ಸಮುದಾಯದ ಎಸ್.ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು. ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಪೆಸೆಟ್ ಕಾಲೇಜು ಆಡಳಿತಾಧಿಕಾರಿ ಡಾ.ನಾಗರಾಜ್ ಅವರು ಉದ್ಘಾಟಿಸಿ, ಮಕ್ಕಳು ಶಿಸ್ತಿನ ಗುಣ ಬೆಳೆಸಿಕೊಂಡು ಮುನ್ನಡೆಯಬೇಕೆಂದು ಸಲಹೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷರಾದ ಜಿ.ವಿ.ಗಣೇಶಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಣಿಶೇಖರ್ ಆಗಮಿಸಿದ್ದರು. ವೇದಿಕೆಯಲ್ಲಿ ಕರುನಾಡು ರಾಜ್ಯ ವನ್ನಿಯರ್ ಮಹಾಸಭಾದ ಅಧ್ಯಕ್ಷ ರೊಟ್ಟಿ ಸುಬ್ಬಣ್ಣ, ವನ್ನಿಯರ್ ಮಹಾ ಸಭಾ ಮಹಿಳಾ ಅಯಕ್ಷೆ ರಮಣಿ ಅವರು ಉಪಸ್ಥಿತರಿದ್ದರು.
ಸಮಾಜದ 160 ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು. ಸಂಸದ ಬಿ.ವೈ.ರಾಘವೇಂದ್ರ ಅವರು ತಮ್ಮ ತಾಯಿ ದಿ.ಮೈತ್ರಾದೇವಿ ಅವರ ಸ್ಮರಣಾರ್ಥ ಎಲ್ಲ ಪ್ರತಿಭಾವಂತ ಮಕ್ಕಳಿಗೂ ಧನಸಹಾಯ ನೀಡಿದರು. ಬೇಲೂರು ರವಿ , ಮಣಿ ಶೇಖರ್ ಅವರು ಸಮಾಜದ ಕುರಿತು ಮಾತನಾಡಿದರು. ವಿ.ಮುರುಗೇಶ್, ಚಕ್ರವರ್ತಿ ಕಾರ್ಯಕ್ರಮ ನಡೆಸಿಕೊಟ್ಟರು. ಜೆ.ಮುರುಗನ್, ಎಸ್.ಮನೋಹರ್,ಗಿರೀಶ್ ಕುಮಾರ್, ಜಿ.ಪ್ರಕಾಶ್, ಎಸ್.ರವಿಕುಮಾರ್, ಕಣ್ಣಪ್ಪ, ವಿಜಯಣ್ಣ,ನಾಗರಾಜ್, ಕುಮಾರ್, ಸುಮಂಗಲ, ರಂಗಸ್ವಾಮಿ ಮತ್ತಿತರರು ಹಾಜರಿದ್ದರು.

