I ಮಾನವೀಯತೆಯ ಮೌಲ್ಯವುಳ್ಳ I ಜೀವಪರ ವೈದ್ಯ I ಜಯರಾಜ್ ಹೆಗಡೆ I
ಗಾರಾ.ಶ್ರೀನಿವಾಸ್ ಬರೆಯುತ್ತಾರೆ
I ಮಾನವೀಯತೆಯ ಮೌಲ್ಯವುಳ್ಳ I ಜೀವಪರ ವೈದ್ಯ I ಜಯರಾಜ್ ಹೆಗಡೆ I
ವಿಶ್ವವ್ಯಾಪಿ ಪಸರಿಸಿದ ‘ಕರೋನಾ ವೈರಸ್” ನಮ್ಮ ಭಾರತಕ್ಕೆ ಬರುವುದಿರಲಿ ಅದು ದೂರದ ಮಾತು ಎಂದಿಕೊಂಡ್ವಿ ಆದರೆ ಅದು ಚೀನಾದಿಂದ ಭಾರತಕ್ಕೆ ಎಂಟ್ರಿಗೆ ರಹದಾರಿ ಮಾಡಿಕೊಂಡು ಬಂದು ಬಿಡ್ತು, ನಂತರ ಕರ್ನಾಟಕ ನಮ್ಮ ರಾಜ್ಯಕ್ಕೆ ಬರುವುದಿಲ್ಲ ಎಂದು ಕೊಂಡ್ವಿ ಇದು ತಪ್ಪಾಯ್ತು, ನಂಬಿಕೆಗಳು ಹುಸಿ ಆದವು, ಕೊನೆಗೆ ನಮ್ಮೂರಿನ ಏರಿಯಾಗಳಲ್ಲಿ, ನೆರೆ-ಹೊರೆಯವರಲ್ಲಿ ಪಾಸಿಟಿವ್ ಎಂದಾಗಲೇ ನಾವುಗಳು “ಮಾಸ್ಕ್’ ಬಳಸುವುದಕ್ಕೆ ಶುರು ಮಾಡಿದ್ವಿ, ಅಂತರಗಳ ಕಾಯ್ದುಕೊಳ್ಳಬೇಕೆಂದು ಪರಸ್ಪರ ಚರ್ಚೆ ಮಾಡಿಕೊಂಡ್ವಿ, ಇಲ್ಲಿಗೆ ದಿನಕ್ಕೆ ಒಂದೆರೆಡು ಇದ್ದ ಕೇಸುಗಳು ನಾನೂರರ ಗಡಿದಾಟಿ ಐನೂರರ ಸಂಖ್ಯೆಯನ್ನು ಮೀರಿಸಿದೆ, ಹೌದು ಇದು ವಾಸ್ತವವಾದರು ವೈರಸ್ ವ್ಯಾದಿಗೆ ಇನ್ನು ಮೆಡಿಸನ್ ಕಂಡು ಹಿಡಿಯಲಾಗಿಲ್ಲ, ಬದಲಿಗೆ ಅಜ್ಜಿ ಹೇಳಿದ ಕಷಾಯ ಕೆಲಸ ಮಾಡುತ್ತಿದೆ,
ಇಂತಿವುಗಳನ್ನು ನಾವುಗಳು ಪರಾಂಭರಿಸಿದಾಗ ನಿಜಕ್ಕೂ “ಕರೋನಾ ವೈರಸ್” ಎನ್ನುವುದು ಇದಿಯಾ ಬಹಳ ಹಿಂದಿನ ಕಾಲಮಾನಗಳಿಂದಲೂ ಈ ವೈರಸ್ ನೆಗಡಿ-ಒಣಕೆಮ್ಮಿನ ರೂಪದಲ್ಲಿತ್ತೇ..? ಇರಲಿ ಇದರ ತರ್ಕಕ್ಕೆ ಇನ್ನೂ ಕಾಲಾವಕಾಶವಿದೆ, ಏನೂ ಅಲ್ಲದ ಕರೋನಾ (ಜೈವಿಕ) ಸುಳ್ಳಿನ ಬುತ್ತಿ ಬಿಚ್ಚಿ ಅತಿರಂಜನೆಗೊಳಿಸಿದರೆ ಈ ಚೈನಾದವರು, ಈ ಕುರಿತಂತೆ WHO ನೇ ಬಹಿರಂಗ ಪಡಿಸಬೇಕಿದೆ.
ಒಟ್ಟಾರೆ ಯುಧ್ದದ ಬೀಕರತೆ ಅನುಭವ ವ್ಯಕ್ತವಾಗುತ್ತದೆ, ಒಂದೆಡೆ ಬದಕು ಇನ್ನೊಂದೆಡೆ ಜೀವ ಇವೆರೆಡನ್ನು ಕಾಪಾಡಿಕೊಳ್ಳುವಲ್ಲಿಯೇ ಎಡವಿ ಹೆದರಿ ಜೀವ ಸಮರ್ಪಿಸಕೊಂಡಿರುವ ಹೆಣಗಳಿಗೆ ಕರೋನಾ ಪಾಸಿಟಿವ್ ಎಂದು ನಾಮಾಂಕಿತಗೊಳಿಸಲಾಗುತ್ತಿದಿಯೇ..?
ಇಂತಹ ಅಸಲಿ ಸಗಟಿನ ಕಂತೆಯೊಳಗೆ ಮಾರ್ಚ್ -19 ರ ನಂತರ “ಕರೋನಾ ಆತಂಕ ಶುರುವಾಗಿತ್ತು ಎಲ್ಲೆಂದರಲ್ಲಿ ಲಾಕ್ಡೌನ್- ಸೀಲ್ಡೌನ್ ಮಾತುಗಳು ಕೇಳಿ ಬಂದವು ಜನ ಜೀವನ ಅಸ್ತವ್ಯಸ್ತಗೊಂಡಿತ್ತು, ಸಾಕಷ್ಟು ವೈದ್ಯರು ಹೊರರೋಗಿಗಳನ್ನು ತಪಾಸಣೆ ನಡೆಸಲು ಬೆದರಿ ಹೋಗಿದ್ದರು, ಐಎಂಎ ಕೂಡ ಒಂದು ವಾರದ ಮಟ್ಟಿಗೆ ಕ್ಲಿನಿಕ್ ಗಳ ಬಾಗಿಲು ಹಾಕಿ ಎಂದು ಹೇಳಿದ ದಿನಮಾನ, ಈ ಸರಿ ಹೊತ್ತಿನಲ್ಲೂ ತನ್ನದೇ ರೋಗಿಗಳ ಜೊತೆ ಕಳೆದ 20 ವರ್ಷಗಳಿಂದ ಅವಿನಾಭಾವ ಸೇವೆ ಹೊಂದಿದ್ದ ಡಾಕ್ಟರ್ ಜಯರಾಜ್ ಹೆಗಡೆ ತಮ್ಮ :ಜಲಜ” ಕ್ಲಿನಿಕ್ ನಲ್ಲಿ ವಿರಾಜಿಸಿದ್ದರು, ಯಾವುದೇ ಭಯವಿಲ್ಲದೆ ರೋಗಿಗಳಿಗೆ ಔಷದೋಪಚಾರ ನಡೆಸಿದರು, ‘ಸಂಕಟ ಕಾಲದಿ ವೆಂಕಟರಮಣ’ ಎನ್ನುವಂತೆ ಡಾಕ್ಟರ್ ಜಯರಾಜ್ ಹೆಗಡೆಯವರ ಸೇವೆ ಎಂದಿಗೂ ಮರೆಯುವಂತಿಲ್ಲ, ಅದೇ ಸಜ್ಜನಿಕೆ ಹಾಗೂ ಸಹೃದಯಿತನದಿ ತಮ್ಮ ರೋಗಿಗಳನ್ನು ಮಕ್ಕಳಂತೆ ನೋಡಿಕೊಳ್ಳುವ ಡಾಕ್ಟರ್ ಜಯರಾಜ್ ಹೆಗಡೆ ದೈವ ಸ್ವರೋಪಿಯಾಗಿಯೇ ಕಾಣ ಸಿಗುತ್ತಾರೆ,
ಮೆಡಿಸನ್ ಗಳು -ಇಂಜಕ್ಷನ್ ಗಳು ದೇಹದ ರಕ್ತಕಣಗಳಲ್ಲಿ ಸೇರಿಕೊಂಡಾಗ ಮಾತ್ರ ಗುಣವಾಗುತ್ತದೆ ಆದರೆ ಇಲ್ಲೋಂದು ಅಚ್ಚರಿ ಇದೆ ಯಾವುದೇ ಸುಸ್ತು, ವ್ಯಾದಿ-ಬಾಧೆಗಳಿಂದ ಬಂದವರು ಡಾಕ್ಟರ್ ಜಯರಾಜ್ ರವರನ್ನು ಕಂಡೊಡನೆ ಲವಲವಿಕೆಯಲ್ಲಿ ತೊಡಗುತ್ತಾರೆ ಅಷ್ಟೊಂದು ಆತ್ಮದೃಡತೆಗಳನ್ನು ಕಟ್ಟಿ ಕೊಡುತ್ತಾರೆ ಮಲೆನಾಡಿನ ದೈವರೂಪಿ ವೈದ್ಯ ಜಯರಾಜ್ ಹೆಗಡೆ, ಇಂತಹವರು ಕಾಣುವುದಕ್ಕೆ ವಿರಳ ಎನಿಸಿದರು ಮಾನವೀಯತೆಯ ಮೌಲ್ಯವುಳ್ಳ ಜೀವಪರ ವೈದ್ಯ ವೃತ್ತಿಯಲ್ಲಿ ಸಾಗಿರುವ ಜಯರಾಜ್ ಹೆಗಡೆಯವರನ್ನು ಸೂರ್ಯಗಗನ ಪತ್ರಿಕೆ ಶ್ಲಾಘಿಸುತ್ತದೆ.

