September 25, 2026

I ಯೋಗ ಸಾಮ್ರಾಟ್ ಎಸ್. ಗೋಪಾಲಕೃಷ್ಣಗೆ I ‘ಯೋಗ ರತ್ನ’ ಪ್ರಶಸ್ತಿ I

0
ಯೋಗ ಸಾಮ್ರಾಟ್ ಎಸ್. ಗೋಪಾಲಕೃಷ್ಣಗೆ ‘ಯೋಗ ರತ್ನ’ ಪ್ರಶಸ್ತಿ

I ಯೋಗ ಸಾಮ್ರಾಟ್ ಎಸ್. ಗೋಪಾಲಕೃಷ್ಣಗೆ I ‘ಯೋಗ ರತ್ನ’ ಪ್ರಶಸ್ತಿ I

ಶಿವಮೊಗ್ಗ: ಬೆಂಗಳೂರಿನ ಗ್ಲೋಬಲ್ ಯೋಗ ಕಲ್ಯಾಣ್ ಮತ್ತು ಯೋಗ ಯುನಿವರ್ಸಿಟಿ ಆಫ್ ಅಮೇರಿಕನ್ಸ್ ವತಿಯಿಂದ ಗೋಪಿ ವೃತ್ತದ ಶ್ರೀ ರಾಘವೇಂದ್ರ ಯೋಗ ಕೇಂದ್ರ, ಮಕ್ಕಳ ವಿದ್ಯಾ ಸಂಸ್ಥೆಯ ಯೋಗ ತಜ್ಞರಾದ ಯೋಗ ಸಾಮ್ರಾಟ್ ಎಸ್. ಗೋಪಾಲಕೃಷ್ಣ ಅವರಿಗೆ ‘ಯೋಗ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ನಿರಂತರ 35 ವರ್ಷಗಳಿಂದ ಸಾರ್ವಜನಿಕರಿಗೆ ಯೋಗ ತರಬೇತಿ ನೀಡುತ್ತಿರುವ ಗೋಪಾಲಕೃಷ್ಣ ಅವರ ಯೋಗ ಕ್ಷೇತ್ರದ ಸಾಧನೆ ಮತ್ತು ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ಸೆ. 5ರ ಶಿಕ್ಷಕರ ದಿನಾಚರಣೆಯಂದು ಬೆಂಗಳೂರಿನ ಶ್ರೀ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್‌ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು.

ಈ ಪ್ರಶಸ್ತಿಯನ್ನು ಯೂನಿವರ್ಸಿಟಿಯ ಡೀನ್ ಉಪಾಧ್ಯಕ್ಷರಾದ ಡಾ. ಎಸ್.ಎಸ್. ಹಿರೇಮರ್, ಉಪ ಕುಲಪತಿಗಳಾದ ಡಾ.ಯೋಗಿ ದೇವರಾಜ್ ಮತ್ತು ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಹಾಗೂ ಗೌರಿ ಗದ್ದೆ ಆಶ್ರಮದ ವಿನಯ ಗುರೂಜಿ ಅವಧೂತರವರು ಯೋಗ ರತ್ನ ಪ್ರಶಸ್ತಿ ಮತ್ತು ಫಲಕವನ್ನು ನೀಡಿ ಗೌರವಿಸಿದರು.

ಗಣರಾಜ್ಯೋತ್ಸವ ಪ್ರಶಸ್ತಿ, ಯೋಗ ಸಾಮ್ರಾಟ್, ಯೋಗ ಪುರುಷೋತ್ತಮ, ಯೋಗ ಜ್ಞಾನ ಗಂಗಾ, ಯೋಗ ವೈಭವ, ಅಜಿತಶ್ರೀ ಪುರಸ್ಕಾರ, ರೋಟರಿ ವತಿಯಿಂದ ಎಕ್ಸಲೆನ್ಸಿ ಅವಾರ್ಡ್, ಸುವರ್ಣ ಕರ್ನಾಟಕ, ಪತಂಜಲಿ ರತ್ನ ಇನ್ನೂ ಮುಂತಾದ ಪ್ರಶಸ್ತಿ ಪುರಸ್ಕಾರವನ್ನು ಪಡೆದಿರುವ ಇವರಿಗೆ ಕೇಂದ್ರದ ಯೋಗ ಬಂಧುಗಳು, ವಿಪ್ರಟ್ರಸ್ಟ್, ಶ್ರೀ ಅನ್ನಪೂರ್ಣೇಶ್ವರಿ ಟ್ರಸ್ಟ್, ತಾಲ್ಲೂಕು ಬ್ರಾಹ್ಮಣ ಸಂಘ ಶುಭ ಕೋರಿದ್ದಾರೆ ಎಂದು ಯೋಗ ಕೇಂದ್ರದ  ಸಂಸ್ಥಾಪಕ ಎಸ್. ಗೋಪಾಲಕೃಷ್ಣ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!