September 25, 2026

I ನನ್ನ ಕೊಲೆಗೈದು ಬಿಡಿ I

0
FB_IMG_1757096963405

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ನನ್ನ ಕೊಲೆಗೈದು ಬಿಡಿ I

ಬರಹಗಳು ಹೊಗಳಿಕೆಯಾಗಿರಲಿ
ಲಿಟಿಗೇಶನ್ ವಿರುದ್ದ ಅಭಿವ್ಯಕ್ತಿಸದಿರಲಿ,
ಇದಕ್ಯಾವುದು ಧರ್ಮವಿಲ್ಲ, ಜಾತಿಗಳಿಲ್ಲ..!
ಪಂಥಿಯ ತತ್ವಗಳಿಲ್ಲ, ಪ್ರಗತಿಪರತೆಗಳಿಲ್ಲ,

ಕಾಸು, ವ್ಯವಸ್ಥೆಗಳ ಅಡಿ ಆಳುಗಳು,
ಕಾನೂನು ಕಟ್ಟಳೆಗಳ ಮೀರಿ ನಿಂದಿದೆ,
ನೈಜತೆಗಿಲ್ಲಿ ಬೆಲೆ ಇಲ್ಲ, ಕಾಸು ಕಾಸುಗಳೆಲ್ಲ..!
ಇನ್ನೂ ಸಾಕಾಗಿದೆ, ಅಭಿವ್ಯಕ್ತಿಸುವುದಿಲ್ಲ,

ಮಡದಿ-ಮಕ್ಕಳನು ಕುಣಿಕೆಗಳತ್ತ ದೂಡದಿರಿ,
ನಾ ಬರೆವ ಭೂ -ಲಿಟಿಗೇಶನ್ ಪ್ರಕರಣಗಳ ನಿಲ್ಲಿಸುವೆ,
ಪಂಥಿಯ ಮುಖವಾಡಿಗಳ ಕ್ರೂರ ಕ್ರೌರ್ಯ ದರ್ಶಿಸಿದೆ,
ತೀವ್ರಗಾಮಿಗಳ ಪರವಿರುವ ಮಂದಗಾಮಿಗಳಿವರು,
ಯಾರ ಬದುಕುಗಳನು ಬಿಡದೆ ಕೊಲೆಗೈಯುವರು,

ಹೇ ಅಂಬೇಡ್ಕರ ನಿಮ್ಮ ಸಂವಿಧಾನಗಳಿಗೆ ಶರಣು,
ಒಂದೊಮ್ಮೆ ಘನ ಮೌನವಹಿಸಿ ಅವಲೋಕಿಸುವೆ,
ನ್ಯಾಯದ ಪಥ ಎಂದು ಬೊಬ್ಬಿರಿವ ಪ್ರಬುದ್ಧರು
ಅನ್ಯಾಯಗಳ ಬುತ್ತಿ ಆಸ್ವಾದಿಸುವ ಸಮಯ ಸಂದಿಗ್ಧರು,

ಗೊತ್ತು ಮಾಡಿಕೊಂಡೆ, ಕುಟುಂಬದ ಸುಭಿಕ್ಷೆಗಾಗಿ,
ನಾ ಇನ್ನೂ ಲಿಟಿಗೇಶನ್ ಪ್ರಕರಣಗಳ ಅಭಿವ್ಯಕ್ತಿಸುವುದಿಲ್ಲ,
ಬೇಕಿದ್ದರೆ ನನ್ನ ಕೊಲೆಗೈದು ಬಿಡಿ, ತುಂಡು ತುಂಡಾಗಿ ಕತ್ತರಿಸಿ,
ಈ ಕರುಳ ಬಳ್ಳಿಗಳ ಮೇಲೆ ನಿಮ್ಮ ಕ್ರೌರ್ಯ ಬಿತ್ತದಿರಿ,
–@Gara Srinivas

 

 

Spread the love

Leave a Reply

Your email address will not be published. Required fields are marked *

error: Content is protected !!