I ರಾಜ್ಯ ಸರ್ಕಾರದಿಂದ ತಾರತಮ್ಯ ನೀತಿ I ಪರಿಶಿಷ್ಟರಿಗೆ ಅನ್ಯಾಯ I ಪ್ರತಿಭಟನೆ ಅನಿವಾರ್ಯ I ಗಿರೀಶ್ ಈ ಭದ್ರಾಪುರ I
I ರಾಜ್ಯ ಸರ್ಕಾರದಿಂದ ತಾರತಮ್ಯ ನೀತಿ I ಪರಿಶಿಷ್ಟರಿಗೆ ಅನ್ಯಾಯ I ಪ್ರತಿಭಟನೆ ಅನಿವಾರ್ಯ I ಗಿರೀಶ್ ಈ ಭದ್ರಾಪುರ I
ಬೆಂಗಳೂರು : ಮಹರ್ಷಿ ವಾಲ್ಮೀಕಿ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿದ್ದು, ಸರ್ಕಾರಿ ಗೌರವಗಳೊಂದಿಗೆ ಜಯಂತಿ ಆಚರಣೆ ಹಾಗೂ ಸರ್ಕಾರಿ ರಜೆ ಘೋಷಣೆ ಮಾಡಿದ್ದು, ೫೧ ಪಂಗಡಗಳಿರುವ ಪರಿಶಿಷ್ಟ ಸಮುದಾಯಕ್ಕೆ ಶೇಕಡಾ ೩% ನಿಂದ ೭% ಗೆ ಏರಿಸಿ ಶೈಕ್ಷಣಿಕ, ಸಮಾಜಿಕ ನ್ಯಾಯ ಬದ್ದತೆಯನ್ನು ತಳೆದಿದ್ದು ಈ ಹಿಂದಿನ ಬಿಜೆಪಿ ಸರ್ಕಾರವಾಗಿದ್ದು ಅದು ಬಿ.ಎಸ್ ಯಡಿಯೂರಪ್ಪನವರ ಮುಖ್ಯಮಂತ್ರಿಯ ಅವಧಿಯ ಕಾಲಾವಧಿಯಲ್ಲಿ ಎನ್ನುವುದು ಇದೀಗ ಗೊತ್ತು ಮಾಡಿಕೊಳ್ಳಬಹುದಾದ ಅತೀ ತುರ್ತು ಆಗಿದೆ ಎಂದು ದಿಶಾ ಸದಸ್ಯರಾದ ಗಿರೀಶ್ ಈ ಭದ್ರಾಪುರ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ,
ಅಚ್ಚರಿ ಎಂದರೇ ಕೊಟ್ಟಿರುವ ಸೌಲಭ್ಯವನ್ನು ಕಸಿದು ಕೊಳ್ಳುವ ಅತೀವ ಆತುರತೆಯಲ್ಲಿ ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಮುಂದಾಗಿರುವುದು ಅತ್ಯಂತ ಸಾಮಾಜಿಕ ಅನ್ಯಾಯದ ನಡೆಯಾಗಿದೆ, ಈಗಾಗಲೇ ಇರುವ ೫೧ ಪರಿಶಿಷ್ಟರ ಪಟ್ಟಿಯಲ್ಲಿ ಅನ್ಯ ಸಮುದಾಯಗಳನ್ನು ಸೇರಿಸುವ ಪ್ರಸ್ತಾವನೆ ಹೊಂದಿದ್ದು ಬಡ-ಮಧ್ಯಮ ವರ್ಗದ ಜನಜೀವನಗಳ ನಡುವೆ ಕಿಚ್ಚು ಹಬ್ಬಿಸಿ ಧ್ವೇಷಪೂರಿತವಾಗಿ ತೀರ್ಮಾನಗಳನ್ನು ಕೈಗೊಂಡಿರುವುದು ಖಂಡನೀಯ ಎಂದು ಗಿರೀಶ್ ಈ ಭದ್ರಾಪುರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಎಲ್ ಜಾರಕಿಹೊಳಿ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೂ ರಾಜಕೀಯ ಹಾಗೂ ಅಧಿಕಾರದ ಹಪಾಹಪಿತನದಿಂದ ಕಾಂಗ್ರೆಸ್ ಸರ್ಕಾರದ ನಡೆಯನ್ನು ಪ್ರಶ್ನಿಸದೆ ಇರುವುದು ದುರಂತದ ಪರಮಾವಧಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ತಾರತಮ್ಯ ನೀತಿ, ಪರಿಶಿಷ್ಟರಿಗೆ ಅನ್ಯಾಯ ಖಂಡಿಸಿ ಶ್ರೀ ವಾಲ್ಮೀಕಿ ಸಂಸ್ಥಾನದ ಗುರುಗಳಾದ ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗುತ್ತೇವೆ ಎಂದು ದಿಶಾ ಸದಸ್ಯರಾದ ಗಿರೀಶ್ ಈ ಭದ್ರಾಪುರ ಹೇಳಿದ್ದಾರೆ.