Sunday, August 2, 2026
HomeಸಂಪಾದಕೀಯI "ಇತ್ಯಾದಿ" ಮತ್ತು ಈ ಅಭಿವ್ಯಕ್ತಿ I ಬರಹದ ಸಾಲುಗಳೂ...I

I “ಇತ್ಯಾದಿ” ಮತ್ತು ಈ ಅಭಿವ್ಯಕ್ತಿ I ಬರಹದ ಸಾಲುಗಳೂ…I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I “ಇತ್ಯಾದಿ” ಮತ್ತು ಈ ಅಭಿವ್ಯಕ್ತಿ I ಬರಹದ ಸಾಲುಗಳೂ…I

ಇತ್ಯಾದಿ; ಎನ್ನುವ ಒಂದು ಒಂದು ಪದ ಬದುಕಿನ ದಿಕ್ಕನ್ನು ಬದಲಾಯಿಸಿ ಬಿಡುತ್ತದೆ, ಸರಿಯಾದ ಮಾರ್ಗವನ್ನು ದರ್ಶಿಸುತ್ತದೆ, ಸಾಧಿತ ಹಾದಿಯನ್ನು ಸುಗಮಗೊಳಿಸುತ್ತದೆ, ಕಾವಣದಲ್ಲಿ ನೇಸರನ ಉದಯೋನ್ಮುಖಿಯಂತೆ ಭಾವಗಳು ಉದಯಿಸುತ್ತಲೇ ಸಾಗಿಸುತ್ತದೆ, ಕೊನೆಯಿಲ್ಲದ ಅರಿವುಗಳನ್ನು ತನ್ನಂತರಾಳದಲ್ಲಿ ಜಾಗೃತಗೊಳಿಸುತ್ತದೆ, ಸುಪ್ತ ಮನಸನ್ನು ಎಚ್ಚರಿಸುತ್ತದೆ, ಸದಾ ಸ್ಪೂರ್ತಿಯಾಗಿಸುತ್ತದೆ, ಭಾವದ ಬುಗ್ಗೆಗಳ ಲಗ್ಗೆಗಳೆಬ್ಬಿಸಿ ಬರೆಸುತ್ತದೆ, ಏನು ಬಣ್ಣಿಸಲಿ ಯಾವುದಕ್ಕೂ ಕೊನೆಯಲ್ಲಿದ ಹಾದಿಗೆ ಮೈಲಿಗಲ್ಲಾಗಿ ಕಾಣುತ್ತಿದೆ “ಇತ್ಯಾದಿ”

ಬಂಧುಗಳೇ ಇದು ಬರೆಯಬೇಕು ನಿಮ್ಮಗಳ ಮುಂದಡಿ ಬೇಷ್ ಎನ್ನಿಸಿಕೊಳ್ಳಬೇಕು ಎಂದೇನಿಲ್ಲ, ಯಾವ ಪರಮಾವಧಿಗಾಗಿ ಇಲ್ಲಿ ಲಗತ್ತಿಸುತ್ತಿಲ್ಲ, ನನ್ನ ಬದುಕಿನಲ್ಲಿ ಇತ್ಯಾದಿ ಪದ ಹೇಗೆ ಬಂತು, ಅದ್ಯಾಗೆ ತಿರುವುಗಳ ನೀಡಿ ಸದಾ ಉತ್ಸಾಹಿಯನ್ನಾಗಿಸಿತು ಎನ್ನುವುದನ್ನು ಇದೀಗ ವಿಸ್ತೃತಗೊಳಿಸುತ್ತೇನೆ. ಯಾರಿಗೂ ಬೇಡದ, ಚಿತ್ತವರಿಸದ, ಮುಂದುವರೆಸಲಾರದೇ ಇನ್ನೇನು ನಿಲ್ಲಿಸಬೇಕು ಎಂದೆನಿಸಿದಾಗ “ಇತ್ಯಾದಿ”ಪದವನ್ನು ಅಡ್ಡಲಾಗಿಸಲಾಗುತ್ತೆವೆ, ಅಷ್ಠೆ ಅಲ್ಲವೇ..?
ರಚನಾತ್ಮಕತೆಯೇ ಗೊತ್ತಿಲ್ಲದವರ ಮುಂದೆ ಪದಗಳನ್ವೇಷಣೆ ಸಲ್ಲದು, ಇಂತಹ ಸಲ್ಲದವರ ಆತ್ಮರತಿಗೆ ಎಂದಿಗೂ ವಾದಗಳನ್ನು ಮಂಡಿಸದೇ ಅಂತಹವರುಗಳ ಅಸೂಯೇ, ಅಸಹನೀಯತೆಗಳಿಗೆ ನಕ್ಕು “ಇತ್ಯಾದಿ” ಪದದ ಜೊತೆಗೆ ತನ್ನ ಬದುಕಿನ ಸಾಂಗತ್ಯ ಬಲದಿ ಬೆಸೆದುಕೊಂಡಿದ್ದೇನೆ.

ಒಂದಿಷ್ಟು ಆರ್ಥಿಕ ತುಮಲ,, ಮರದ ರೆಂಬೆ-ಕೊಂಬೆಗಳಂತೆ ಹಬ್ಬಿಕೊಂಡಿರುವ ಕವಲಿನ ಹಾದಿಗಳನ್ನು ಹೆದ್ದಾರಿಯತ್ತ ಕೊಂಡೊಯ್ಯುವ ಗಟ್ಟಿತನಗಳ ಯೋಜನೆಗಳಿಂದ ವಿಳಂಭವಾಗಿದೆಯಷ್ಠೆ, ಇನ್ನೂ ಆರಂಭದಲ್ಲಿ “ಇತ್ಯಾದಿ” ಶೀರ್ಪಿಕೆ ಹೊತ್ತು ಸಾಗಿದ್ದವನಿಗೆ ಇದೆಂತಹ ನಾಮಾಂಕಿಗೊಳಿಸುವ ಪರಿ ನಿನ್ನದು, ಸರಿಯಿಲ್ಲ ಬದಲಾಯಿಸಿ ಬಿಡು ಎಂದು ಕೆಲ ವಿಮರ್ಶಾತ್ಮಕರ ಮಾತುಗಳಿಗೂ ಮನ್ನಣೆ ನೀಡದೇ “ಇತ್ಯಾದಿ” ಪದವನ್ನು ಬಲವಾಗಿ ಹಿಡಿದುಕೊಂಡಿದ್ದೇನೆ, ಅದೆಲ್ಲಿಗೆ ಕರೆದುಕೊಂಡು ಹೋಗುತ್ತದೋ ಅಲ್ಲಿಯವರೆಗೆ ಅದರೊಟ್ಟಿಗೆ ಆತ್ಮಸ್ಥರ್ಯದಿ ಮುನ್ನಡೆಯುತ್ತೇನೆ. ಇರಲಿ ಈ ಒಂದಿಷ್ಟು ಸಾಲುಗಳು “ಇತ್ಯಾದಿ”ಯ ಕುರಿತಾಗಿ ತಿಳಿಸೋಣವೆಂದುಕೊಂಡೆ, ಮೂಲ ವಿಸ್ತೃತೆಯತ್ತ ಚಿತ್ತವರಿಸೋಣ, ಸ್ನೇಹಿತರೇ…. ಚುಟುಕು ಪದ್ಯಗಳ ಮೂಲಕ ಕನ್ನಡದ ಸೇವೆಗೆ ಮುಂದಾಗಿದ್ದ ಆ ಅವಸರದಲ್ಲಿ ಈ ದಿನಮಾನದ ಬರಹಗಾರನಾಗಿ ಗುರುತಿಸಿಕೊಳ್ಳುತ್ತೇನೆ ಎನ್ನುವ ಯಾವ ಪರಿವೆಗಳಿಲ್ಲದೆ ಬರೆಯುತ್ತಿದ್ದವನು, ಬರೆದು ಕನ್ನಡ ಸಂಘಟನೆಯ ಕೈಂಕರ್ಯದಲ್ಲಿ ವಾಚಿಸುತ್ತಿದ್ದವನು, ಈ ನಂತರ ಪತ್ರಿಕಾ ರಂಗಕ್ಕೆ ಬಂದೆ, ಮೂಲ ಚುಟುಕುಗಳ ಬರೆಯುವುದರ ಕಡೆ ಗಮನಹರಿಸದೇ ಸುದ್ದಿಮನೆಯಲ್ಲಿ ಕಳೆದು ಹೋಗಿದ್ದೆ. ಮತ್ತೆ ನೆನಪು ಮಾಡಿ ಛಲ ಬಿಡದ ಬೇತಾಳದಂತೆ ಹಿಂದೆ ಬಿದ್ದು ಸುದ್ದಿಯ ಜೊತೆಗೆ ಚುಟುಕುಗಳ ಬರೆಯುವುದಕ್ಕೆ ಶುರು ಮಾಡಿ ಎಂದು ಜ್ಞಾಪಿಸಿ, ಭಾವಗಳ ಅರಳಿಸಿ ಸಾರಸ್ವತಾ ಲೋಕದ ಹೆಬ್ಬಾಗಿಲಿಗೆ ದೂಡಿ ನಿಂದ ಗೆಳತಿಯೊಬ್ಬಳ ನಿಷ್ಕಲ್ಮಶ ಮನಸಿಗೆ ಎದೆನಮನಗಳ ತಿಳಿಸುವೆ.

ಹೀಗೆ ಕವಿತೆಗಳ ರಾಶಿಯಾಗುವ ಹೊತ್ತು ಅದನ್ನು ಹೊತ್ತಿಗೆಯನ್ನಾಗಿಸಬೇಕು ಎಂದುಕೊಂಡೆ ಬರೆದ ಭಾವಗಳಿಗೆ ಜೀವದುಂಬುವ ಕೆಲಸವಾಗಬೇಕು, ಹೊತ್ತಿಗೆಗಳಿಗೆ ಒಂದಿಷ್ಟು ಶೀರ್ಷಿಕೆಗಳನ್ನು ಅಂತಿಮಗೊಳಿಸಿ, ಸಾರಸ್ವತಾ ಲೋಕದ ಅಧ್ಯಯನ ಶುರು ಮಾಡಿದೆ, ಎಲ್ಲೂ ನಿಖರ ನಿರ್ಧಾರಗಳಿಗೆ ಬರುವುದಕ್ಕೆ ಆಗಲಿಲ್ಲ, ಅಂತಿಮಗೊಳಿಸಿರುವ ಶೀರ್ಷಿಕೆಗಳು ಬೇಡವೆನಿಸಿತು ಹಾಗೆಯೇ ಎದೆಯ ಭಾವ ಕೂಡ ಹೇಳುತಿತ್ತು. ಅಲೋಚನೆ, ಚಿಂತನೆ, ಮನಮಂಥನಗಳಿದ್ದ ಸಂದರ್ಭವದು, ಪತ್ರಕರ್ತ ಸ್ನೇಹಿತರು, ಹಿತೈಪಿಗಳು ಹರಟೆ ಹೊಡೆಯುತ್ತಿದ್ದರು ಚಹಾ ವಿರಾಮವದು, ಓರ್ವ ಸ್ನೇಹಿತ ಇನ್ನೋರ್ವನಿಗೆ ಗೇಲಿ ಮಾಡಲು ಶುರು ಮಾಡಿದ, ಆತ ಮುಂದುವರೆಸುವ ಮಾತಿನ ಮಧ್ಯೆ ಬಂದು Exectra ( ಎಕ್ಸೇಟ್ರಾ ) ಎಂದು ಪದೇ, ಪದೇ ಹೇಳುವುದು ನಗುವುದು ಸಿಳ್ಳೆಯೊಡೆದು ಮುಗಳ್ನಗುವ ನೋಡಿ ಎಲ್ಲರು ನಗುತ್ತಿದ್ದರು,

ನನ್ನಲ್ಲೇನೋ ವಿಚಾರ ಬಂದು ಕೂತಿತ್ತು, ಅಲ್ಲಿಗೆ ಈ Exectra ( ಎಕ್ಸೇಟ್ರಾ ) ಬಗ್ಗೆ ಒಂದಿಷ್ಟು ಯೋಚಿಸಿದೆ, ಕೊನೆಯಿಲ್ಲದ ಹಾದಿಗೆ ಅಡ್ಡಲಾಗಿಸುವ ಪದದ ಬಗ್ಗೆ ಇನ್ನಷ್ಟು ಗೊತ್ತು ಮಾಡಿಕೊಂಡೇ, ಅಲ್ಲಿಗೆ ನಾ ತಡಕಾಡುತ್ತಿದ್ದ ಶೀರ್ಷಿಕೆ ಸಿಕ್ಕಿತು ಎಂದು ನಿರ್ಧರಿಸಿ ನಿಂದೆ, ಹಾಗೇ ಇಂದು-ಮುಂದು ಮಾಡದೆ ನಾ ವಿರಚಿಸಿದ ಮೊದಲ ಪದ್ಯ ಸಂಕಲನಕ್ಕೆ “ಇತ್ಯಾದಿ-೧” ಎಂದು ನಾಮಾಂಕಿಗೊಳಿಸಿ ಮುದ್ರಣಕ್ಕೆ ಕಳುಹಿಸಿದೆ. ಕೇಳಿದವರಿಗೆ ಹೇಳಿದೆ ನೋಡಿ ನಾ ಬರೆವ ಭಾವಕ್ಕೆ ಎಂದಿಗೂ ಕೊನೆಯಿಲ್ಲ ಅದು ಮುಂದುವರೆದ ಭಾಗವಾಗಿಯೇ ಇರುತ್ತದೆ, ಹಾಗೆಯೇ ಇತ್ಯಾದಿ ಪದವು ಕೂಡ ಮುಂದುವರೆದ ಭಾಗವೇ ಆಗಿದೆ, ಸಾಕಷ್ಟು ಬರಹಗಾರರು ಬರೆದ ಪುಸ್ತಕಗಳ ಹೆಸರುಗಳನ್ನು ದೊಡ್ಡದೊಂದು ಪಟ್ಟಿಯೇ ಮಾಡಿ ಹೇಳಬೇಕು, ನಾನು ಇತ್ಯಾದಿ ಎಂದಷ್ಟೆ ಹೇಳಿ ಇತ್ಯಾದಿ ಪದ್ಯ ಸಂಚಿಕೆಗಳ ಸಂಖ್ಯೆಯನ್ನು ಜೋಡಿಸುತ್ತೇನೆ.

ಬರೆವ ಭಾವಕ್ಕೂ ಕೊನೆಯಿಲ್ಲ, ಇತ್ಯಾದಿಗೂ ಕೊನೆಯಿಲ್ಲ, ಉದಾಹರಣೆಗೆ ಬಾವಗಳು ಹೇಗೆ, ಬದಲಾಗುತ್ತಲೇ ಕೊನೆಯೇ ಇಲ್ಲದ ಜೀವಸೆಲೆಯಾಗಿಸುತ್ತದೆ ಪ್ರೀತಿಗೊಂದು ಭಾವ, ಸೇಡಿಗೊಂಡು ಭಾವ, ಘಟಿತ ಘಟನೆಗಳಿಗೊಂದು ಭಾವ, ಹೀಗೆ ಎಲ್ಲಾ ಕಾಲಕ್ಕೂ ಚಿತ್ತದ ಭಾವ ಬದಲಾಗುತ್ತಲೇ ಇರುತ್ತದೆ ಇದಕ್ಕೆ ಅಂತಿಮವೇ ಇಲ್ಲ, ಭಾವಗಳು ಮುಂದುವರೆಯುತ್ತಲೇ ಇರುತ್ತದೆ ನಾವು ಎಲ್ಲಿಯವರೆಗೂ ವಿವರಿಸುತ್ತೇವೆಯೋ ಅಲ್ಲಿಯವರಗೆ ವಿವರಿಸಿ ಇತ್ಯಾದಿ.. ಎಂದು ಹೇಳುವ ಸಂದರ್ಭದ ಬುತ್ತಿ ಕಟ್ಟಿಟ್ಟಿರುತ್ತದೆ, ಇನ್ನೂ ಇತ್ಯಾದಿಯ ಆಚೆಗೆ ಏನೋ ಇದೆ ಅಲ್ಲಿ ದಿಟ್ಟಿಸಬೇಕು, ಪರಮಾರ್ಶಿಸಬೇಕು ಎಂದರೂ ಇತ್ಯಾದಿ ಮತ್ತೆ ಎದುರಾಗಿ ಬಿಡುತ್ತದೆ ಅಲ್ಲವೇ, ಹೀಗೆ ಅಂದು ಗೆಳೆಯರು ವ್ಯಂಗ್ಯಗಳಿಗೆ ಬಳಸಿದ ಪದ ನನ್ನ ಭಾವದ ಹೊತ್ತಿಗೆಗಳಿಗೆ ನಾಮಾಂಕಿತವಾಗಿದೆ,

ಇಲ್ಲಿಗೆ ಇತ್ಯಾದಿ-೧ ರಿಂದ೨. ೩. ಇತ್ಯಾದಿ-೪ ಪದ್ಯ ಸಂಕಲನಗಳು ಮುದ್ರಿತಗೊಂಡಿದೆ, ಮೂರು ಹೊತ್ತಿಗೆಗಳನ್ನು ರಾಜ್ಯ ಪುಸ್ತಕ ಮಂಡಳಿ ಆಯ್ಕೆ ಮಾಡಿದೆ ಇದೀಗ ಇತ್ಯಾದಿ-೫.೬.೭.೮” ಸಂಕಲನಗಳನ್ನು ಮುದ್ರಣಕ್ಕೆ ಕಳುಹಿಸಲು ಎಲ್ಲಾ ಅಲೈನ್ಮೆಂಟ್ ಗಳು ಸಿದ್ದಗೊಂಡಿದೆ, ಬರೆಯುವ ಮನಸು ಎಲ್ಲಿವರೆಗೆ ಗಟ್ಟಿತನದಿ ಇರುತ್ತದೋ… ಅಲ್ಲಿಯವರೆಗೆ ಇತ್ಯಾದಿ ಪದ್ಯ ಸಂಕಲನಗಳು ಸಾರಸ್ವತಾ ಲೋಕಕ್ಕೆ ಸಮರ್ಪಿಸುತ್ತೇನೆ, ಸಾಕಷ್ಟು ಓದುಗರರಿಗೆ, ಗೆಳೆಯರಿಗೆ ಸರಿ ಅನಿಸದ ಈ ಪದವನ್ನು ಇದೀಗ ಅರ್ಥೈಸಿಕೊಂಡಿದ್ದಾರೆ ಅದರ ಮಹತ್ವದ ಅರಿವು ಆಗಿದೆ ಈ ಕಾರಣಗಳಿಂದ ಮೆಚ್ಚುಗೆಯು ಹರಿದು ಬಂದಿದೆ. “ಒಂದೇ ಭಾವ, ಹೊತ್ತಿಗೆಗಳಲವು” ಎನ್ನುವಂತೆ ಬರಹದ ಎಲ್ಲಾ ಕಾಲಮಾನಗಳಿಗೆ ಇತ್ಯಾದಿ ನನಗೆ ಕಾವಣವಾಗಿದೆ ನಾನು ಅದರಡಿಯಲ್ಲಿ ಸಾಹಿತ್ಯ ಕೃಷಿ ನಿರಂತರಗೊಳಿಸಿದ್ದೇನೆ, ಇತ್ಯಾದಿ ಪದವನ್ನು ವ್ಯಂಗ್ಯಕ್ಕೆ ಬಳಸುತ್ತಿದ್ದ ನನ್ನ ಗೆಳೆಯರಿಗೂ ಧನ್ಯವಾದ ತಿಳಿಸುತ್ತೇನೆ.

ಸ್ನೇಹಿತರೇ ಇದು ಮುಂದುವರೆದಂತೆ ಸುದ್ದಿ ಲೋಕದಲ್ಲೂ ವಿಮರ್ಶಾತ್ಮಕವಾದ ಟ್ಯಾಬ್ಲ್ಯಾಡ್ ಪತ್ರಿಕೆಯೊಂದು ಸೂರ್ಯಗಗನ ಕನ್ನಡ ದಿನಪತ್ರಿಕೆಯೊಂದಿಗೆ ಹೊರ ತರಬೇಕೆಂದು ಎಂದುಕೊಂಡ ನನಗೆ “ಇತ್ಯಾದಿ: ಎನ್ನುವ ಶಿರ್ಷಿಕೆಯೇ ಓಡೋಡಿ ಬಂದಿದೆ, ಹದಿನಾರು ಪುಟದ ವಿನ್ಯಾಸಗಳೊಂದಿಗೆ ವಿಶೇಷವಾಗಿ ಇಡೀ ಕರುನಾಡಿನಲ್ಲಿ ಪ್ರಚುರಗೊಳಿಸಬೇಕು ಎಂದಾಗಲೆಲ್ಲಾ ಆರ್ಥಿಕ ಸಂಕಟಗಳು ಎದುರಾಗಿ ಬಿಡುತ್ತಿತ್ತು ಎನ್ನುವ ಕಾರಣಕ್ಕೆ ವಿಳಂಭಿಸಿದ್ದೇನೆಯೇ ಹೊರತು, ಇತ್ಯಾದಿ ನನ್ನನ್ನು ಬಿಟ್ಟಿಲ್ಲ ಪ್ರಶ್ನಾರ್ಥಕನನ್ನಾಗಿಸಿ ದಿಗ್ಬೇಳಕಿನತ್ತ ದಾಪುಗಾಲಿಟ್ಟಿಸಿದೆ, ಈಗಾಗಲೇ ಒಂದಿಷ್ಟು ಗಟ್ಟಿತನದಿ ಹಲವು “ಇತ್ಯಾದಿ” ಸಂಚಿಕೆಗಳು ಬಿಡುಗಡೆಗೊಂಡಿದೆ, ತಾಳಿದವನು ಬಾಳಿಯಾನು, ಎಂದು ಉವಾಚಿಸುವಂತೆ ಕನಸುಗಳಿಗೆ ಇನ್ನಷ್ಠು ಅಮರಿಕೊಂಡು ಅದನ್ನು ಸಾಕಾರಗೊಳಿಸಿಯೇ ಸಮಾಜಮುಖಿಯಾಗಿ ಅಗ್ರನಾಗಿ ಸಲ್ಲದವರ ಚಪ್ಪಾಳೆ ಗಿಟ್ಟಿಸಿಯೇ ನಿಲ್ಲುತ್ತೇನೆ, ಇಂತಹದೊಂದು ಆತ್ಮಧೃಡತೆ ತಂದುಕೊಟ್ಟಿದೆ, ಇತ್ಯಾದಿ ಪದ, ಅಲ್ಲದೆ ಸುಧೀರ್ಘ ವರುಷಗಳ ಇತ್ಯಾದಿ ಪದದೊಂದಿಗಿನ ಅವಿನಾಭಾವತೆ ನನ್ನೊಳಗೆ ಬೇರೂರಿ ಬಿಟ್ಟಿದೆ, ಸಾಕಷ್ಟು ವೇದಿಕೆಗಳನ್ನು ಅದು ಪರಿಚಯಿಸಿದೆ, ಹಿರಿಮೆಯನ್ನು ತಂದುಕೊಟ್ಟಿದೆ, ಇತ್ಯಾದಿ ಎಂದ ಕೂಡಲೇ ಗಾರಾ.ಶ್ರೀನಿವಾಸ ಎನ್ನುವಷ್ಟು ಗುರುತಿಸಿಕೊಟ್ಟಿದೆ, ಪುರಸ್ಕಾರಗಳ ಮೇರೆತ್ತರಕ್ಕೆ ಹತ್ತಿಸುತ್ತಿದೆ, ಸದಾ ಜಾಗೃತಗೊಳಿಸುತ್ತಲೇ ಇರುತ್ತದೆ, ಆಧ್ಯಯನಶೀಲನಾಗಿರಲು ಎದೆಯಂಗಳದಿ ದೂಡುತ್ತದೆ, ಅದಕ್ಕಾಗಿಯೇ ಬಹಳಷ್ಟು ಮೂಖ ಮೌನವಾಗಿಯೇ ಇದ್ದು ಬಿಡುತ್ತೇನೆ. ಇತ್ಯಾದಿ ಕುರಿತಾಗಿ ಇನ್ನಷ್ಟು ಸಂಗತಿಗಳಿವೆ ಸದ್ಯಕ್ಕೆ “ಇತ್ಯಾದಿ” ಪದದೊಂದಿಗಿನ ನನ್ನ ಬದುಕಿನ ತಿರುವುಗಳನ್ನು ತಿಳಿಸಿ “ಇತ್ಯಾದಿ” ಬದುಕಿನ ಭಾವಜೀವ ಎಂದು ಅಂಬೋಣಿಸುಣಿಸುತ್ತೇನೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I