I ರಾಜ್ಯದ ಎಲ್ಲಾ ಕೇಬಲ್ ಬಾಕ್ಸ್ಗಳ ಮೂಲಕ I ‘ಸ್ಟಾರ್ ಒನ್ ಕನ್ನಡ’ ತಲುಪಲಿದೆ I ರಾಸಾ ಈಶ್ವರ ಅಭಯ I
I ರಾಜ್ಯದ ಎಲ್ಲಾ ಕೇಬಲ್ ಬಾಕ್ಸ್ಗಳ ಮೂಲಕ I ‘ಸ್ಟಾರ್ ಒನ್ ಕನ್ನಡ’ ತಲುಪಲಿದೆ I ರಾಸಾ ಈಶ್ವರ ಅಭಯ I
ಶಿವಮೊಗ್ಗ : ‘ಸ್ಟಾರ್ ಒನ್ ಕನ್ನಡ’ ಸುದ್ದಿ ವಾಹಿನಿಯು ಸಾತ್ವಿಕ ಸಂಗತಿಗಳನ್ನು ಕಟ್ಟಿಕೊಂಡು ಚಿತ್ತ ಸಮಾಜದ ಮುಂದಡಿ ಚಾಲನೆಗೊಳ್ಳುತ್ತಿದೆ ಎಂದು ಮುಖ್ಯ ಸಂಪಾದಕರಾದ ರಾಸಾ ಈಶ್ವರ ಅಭಯ ಅವರು ತಿಳಿಸಿದರು
ಅವರು ಇಂದು ಶಿವಮೊಗ್ಗ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸಮಾಜದ ತಳಸ್ಪರ್ಶಿ ಮನರಂಜನಾ ವೇದಿಕೆಗಳಿಗೆ ಅವಕಾಶಗಳಿದ್ದು, ರಾಜ್ಯದ ಎಲ್ಲಾ ಕೇಬಲ್ ಬಾಕ್ಸ್ಗಳ ಮೂಲಕ ಜನ ಸಮುದಾಯಕ್ಕೆ ತಲುಪಿಸುವ ಕೈಂಕರ್ಯಕ್ಕೆ ‘ಸ್ಟಾರ್ ಒನ್ ಕನ್ನಡ’ ದ ಟೀಮ್ ಕಟಿಬದ್ದವಾಗಿ ಮುಂದಾಗಿದೆ ಎಂದು ಅವರು ವಿವರಿಸಿದರು.
ಈ ವಾಹಿನಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಮನರಂಜನೆ, ಧಾರಾವಾಹಿಗಳು ಸೇರಿದಂತೆ ನೃತ್ಯ, ಗಾಯನ, ಇತಿಹಾಸ, ಕಲೆ, ಸಂಸ್ಕೃತಿ, ಸಾಹಿತ್ಯ ಮುಂತಾದ ದೇಶಿ ಸೊಗಡಿನ ಹಲವು ಕಾರ್ಯಕ್ರಮಗಳನ್ನು ಈ ಮೂಲಕ ಮೂಡಿ ಬರಲಿದೆ ಎಂದು ಹೇಳಿದರಲ್ಲದೆ ಈಗಾಗಲೇ ಒಂದಿಷ್ಟು ಶೋಗಳ ಆಡಿಷನ್ಸ್ಗಳು ಶೂಟಿಂಗ್ಗಳು ಆರಂಭಗೊಂಡಿದ್ದು ಇದೇ ಡಿ.೨೮ರಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ, ಈ ಸಂದರ್ಭದಲ್ಲಿ ‘ಸ್ಟಾರ್ ಒನ್ ಐಕಾನ್’ ಅವಾರ್ಡ್ ಪ್ರಶಸ್ತಿ, ಸಿನಿಮಾ ಮತ್ತು ಧಾರಾವಾಹಿಯ ಕಲಾವಿದರುಗಳಿಗೆ ಸ್ಟಾರ್ ಒನ್ ಕುಟುಂಬ ಅವಾರ್ಡ್, ಹಾಗೂ ೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿನಲ್ಲಿ ಶೇಕಡ ೭೦% ಕ್ಕೂ ಹೆಚ್ಚು ಅಂಕಗಳ ಪಡೆದು ಉತ್ತೀರ್ಣರಾಗಿರುವ ರಾಜ್ಯದ ೨೫೦ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಪ್ರೋಗ್ರಾಮ್ ಹೆಡ್ ತೇಜಶ್ರೀ ಎಸ್.ಹೆಚ್, ತಂಡಗಳ ನಿರ್ವಾಹಕರಾಗಿ ಕೆ.ಎನ್ ಸುಮ ಹಾಗೂ ಸಂಸ್ಥಾಪಕರು ಹೇಮ ಸೇರಿದಂತೆ ಪತ್ರಕರ್ತರು ಹಾಗೂ ಲೇಖಕರಾದ ಗಾರಾ.ಶ್ರೀನಿವಾಸ್ ಅವರುಗಳು ಉಪಸ್ಥಿತರಿದ್ದರು.