September 22, 2026

I ಈ ಹೊತ್ತಿನ ಶುಭಾಶಯ I

0
WhatsApp Image 2025-10-18 at 6.30.49 PM

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಈ ಹೊತ್ತಿನ ಶುಭಾಶಯ I

ದಿನದ ಬುತ್ತಿಗಳ ಗಂಟು
ಬಿಡಿ, ಬಿಡಿಸಿದ ತುತ್ತಿನ ನಂಟು,
ಬದುಕಿನ ಹೆಜ್ಜೆಗಳಿಗೆ ಸುತ್ತಿಗೆ ಪೆಟ್ಟು
ನಲಿವಿನ ಸೋಗಿನ ನೋವುಗಳ ಕಟ್ಟು,
ಕಾಪಿಟ್ಟು ಕೊಂಡೆ ಓ ದಿಗಂತವೇ..
ಗತಿಸಿದ ಅಧ್ಯಾಯಗಳ ಕಲಿಕೆಯನು,

ಶಿರಬಾಗಿ ನಮಿಸುವೆ ನಿಮಗೆ,
ಈ ಸ್ನೇಹ ಸಾಂಗತ್ಯದ ಚಿಲುಮೆಗೆ,
ಹೊತ್ತಿದ ದಿನಮಾನಗಳ ಹೆಗಲ ಕುಸಿತಕೆ,
ನೇಗಿಲು ನೀಡಿದ ಬಿಕ್ಕುವಿಕೆಯ ಭರವಸೆಗೆ,
ಯುದ್ದವೇ ಉಕ್ಕಿತು ಎದೆಯೊಳಗೆ..
ಧನ್ಯವಾದಗಳು ದಿಗಂತದ ದಿಗ್ಬೇಳಕೆ…

ಬದಲು, ಬದಲಾದ ಚಿತ್ತಗಳು
ಅಗಾಧತೆಯಲಿ ತೇಲಿಸಿದ ಮೌನಗಳು,
ಹೊಸ ಹುರುಪಿನಲಿ ಹೊಸೆದ ಹಗ್ಗದ ಸುತ್ತುಗಳು,
ತುಸು ನಿದುರಿಸುವ ತಲೆಗೆ ಸಿಂಬೆಯಾಗಿದೆ..
ದಿಗಂತಮಾನವೇ.. ಶುಭಾಶಯಗಳು,

ಹೊಸ ದಿನಮಾನದ ಈ ಹೊತ್ತು,
ನಮ್ಮೆಲ್ಲರ ದಿಕ್ಕುಗಳಿಗೆ ದಿಕ್ಸೂಚಿಯಾಗಲಿ,
2026ರ ಸಾಲು ಅಳಿಸಲಾಗದ ಬರಹಗಳಾಗಲಿ,
ನನ್ನ ಬದುಕಿನ ಕೃತಿಯ ನಿಮ್ಮ ಮುನ್ನುಡಿಗೆ
ತಿರುವುಗಳ ಪುಟಗಳು ಮುಗಿಯದಿರಲಿ.

Wish you Happy New year @2026

Leave a Reply

Your email address will not be published. Required fields are marked *

error: Content is protected !!