I ಕರವೇ ಜನಮನದಿಂದ ಪದಾಧಿಕಾರಿಗಳ I ಪ್ರಮಾಣವಚನ ಸಮಾರಂಭ I
ಶಿವಮೊಗ್ಗ :,ಕನ್ನಡ ರಕ್ಷಣಾ ವೇದಿಕೆ, ಜನ ಮನ, ರಾಜ್ಯ ಸಂಘಟನೆಯ ಪದಾಧಿಕಾರಿಗಳ ಅಧಿಕಾರದ ಪ್ರಮಾಣ ವಚನ ಸಮಾರಂಭವು ಶಿವಮೊಗ್ಗದ ಸರ್ಕ್ಯೂಟ್ ಹೌಸ್, ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಕೆ ಜನಾರ್ಧನ ಸಾಲಿಯಾನ್ ರವರು ಭಾಗವಹಿಸಿ, ಪ್ರಮಾಣ ವಚನ ಭೋದಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಎನ್ ಮಾಲತೇಶ್, ಸಹ ಕಾರ್ಯದರ್ಶಿಯಾಗಿ ಪಿ ಪಾರ್ಥಿಬನ್, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಕೆ ಕಿರಣ್ ಕುಮಾರ್, ರಾಜ್ಯ ಉಪಾಧ್ಯಕ್ಷರಾಗಿ ವೀಣಾ ಹೆಚ್ ಮತ್ತು ಕುಸುಮಾ ಕೆ ಎಸ್ ರವರು ರಾಜ್ಯ ಖಜಾಂಚಿಯಾಗಿ ಸಿದ್ದಣ್ಣಯ್ಯ, ನಿರ್ದೇಶಕರು ಗಳಾದ, ಎಸ್ ಆರ್ ಅಶೋಕ್, ಹಾಗು ಸಂಗೇಶ್ವರ, ಇವರುಗಳು ಅಧಿಕಾರದ ಪ್ರಮಾಣ ವಚನ ಸ್ವೀಕರಿಸಿದರು.
ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಯಿತು, ಮುರುಗನ್, ಪ್ರತಾಪ್, ರಂಜಿತ್ ಗಾಯಕ್ವಾಡ್, ರಾಮು ವಿ,ಮತ್ತಿತರರು ಭಾಗವಹಿಸಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಸಂಘಟನೆಗೆ ಅವಿರತ ಶ್ರಮಿಸಿದ ವೀಣಾ ಹೆಚ್ ರವರನ್ನು ಸನ್ಮಾನಿಸಲಾಯಿತು.


